Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಮ್ಮ ಸೈನಿಕರನ್ನು ಭಯೋತ್ಪಾದಕರಿಗೆ ಹೋಲಿಸಿದ ಸಾಯಿ ಪಲ್ಲವಿ, ಸೀತೆಯಾಗಿ ನಮಗೆ ಬೇಡ ಅಂತಿದ್ದಾರೆ ಸಿನಿ ಪ್ರಿಯರು
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂದು ಎಂಬ ಗಾದೆ ಮಾತು ಕೇಳಿರಬಹುದು, ಈಗ ಸಿನಿಮಾ ತಾರೆ ತಾನಾಡಿದ ಮಾತಿನಿಂದಾಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಶ್ ಕೆಜಿಎಫ್ ಬಳಿಕ ಯಾವ ಸಿನಿಮಾ ಬರುತ್ತೆ ಎಂದು ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಎದುರು ನೋಡುತ್ತಿತ್ತು, ಈಗ ಯಶ್ ಅವರು ರಾವಣ ಚಿತ್ರ ಮಾಡುತ್ತಿದ್ದಾರೆ ಅದರಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡುತ್ತಿದ್ದಾರೆ ಎಂಬ ಹೊರ ಬರುತ್ತಿದ್ದಂತೆ 2022ರಲ್ಲಿ ಸಾಯಿಪಲ್ಲವಿ ಮಾತನಾಡಿದ ವೀಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ವ್ಯಾಪಾಕ ಖಂಡನೆ ವ್ಯಕ್ತವಾಗುತ್ತಿದೆ. ಸೀತೆಯಾಗಿ ಸಾಯಿ ಪಲ್ಲವಿ ಬೇಡ ಎಂದು ಹೇಳುತ್ತಿದ್ದಾರೆ.

ಸಾಯಿ ಪಲ್ಲವಿ ಏನು ಹೇಳಿದ್ದರು?
2022ರ ಜನವರಿಯಲ್ಲಿ ಹಿಂಸೆ ಬಗ್ಗೆಮಾತನಾಡುವಾಗ ಹಿಂಸೆ ಎಂಬುವುದು ನಾವು ಯಾವ ದೇಶದವರು ಅದರ ಮೇಲೆ ನಮ್ಮ ದೃಷ್ಟಿಕೋನ ಭಿನ್ನವಾಗಿರುತ್ತದೆ ' ಪಾಕಿಸ್ತಾನ ಜನರು ನಮ್ಮ ಸೈನಿಕರು ಭಯೋತ್ಪಾದಕರು ಎಂದು ಭಾವಿಸುತ್ತಾರೆ ಆದರೆ ನಮ್ಮ ದೃಷ್ಟಿಯಲ್ಲಿ ಅವರು ಭಯೋತ್ಪಾದಕರು, ಹೀಗೆ ದೃಷ್ಟಿಕೋನ ಬದಲಾಗುತ್ತದೆ, ಹಾಗಾಗಿ ಈ ಹಿಂಸೆ ಎಂಬುವುದು ಅರ್ಥ ಆಗಲ್ಲ ಎಂಬುವುದಾಗಿ ಹೇಳಿದ್ದರು.
ಭಾರತೀಯ ಸೈನಿಕರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದಕ್ಕೆ ತೀವ್ರ ಖಂಡನೆ
ಸಾಯಿ ಪಲ್ಲವಿ ಭಾರತೀಯ ಸೈನಿಕರು ಭಯೋತ್ಪಾದಕರು ಎಂದು ಹೇಳಿಲ್ಲ, ಪಾಕಿಸ್ತಾನದವರಿಗೆ ಹಾಗೆ ಕಾಣಿಸುತ್ತಾರೆ ಎಂದು ಹೇಳಿದ್ದು, ಪಾಕಿಸ್ತಾನದವರಿಗೆ ನಾವು ಶತ್ರುಗಳು, ನಮಗೆ ಅವರು ಶತ್ರುಗಳು ಇದನ್ನು ಹೇಳಬಹುದಿತ್ತು, ಬದಲಿಗೆ ನಮ್ಮ ಸೈನಿಕರ ಬಗ್ಗೆ ಪಾಕಿಸ್ತಾನಿಯರು ಏನು ಯೋಚಿಸುತ್ತಾರೆ ಎಂದು ಹೇಳುವ ಅಗ್ಯತ ಇರಲಿಲ್ಲ, ಅವರು ಹೇಳಬೇಕಾಗಿರುವ ವಿಷಯವನ್ನು ಸರಿಯಾಗಿ ಹೇಳಲಿಲ್ಲ, ಹೀಗಾಗಿ ಇವರ ಮಾತಿಗೆ ವ್ಯಾಪಾಕ ಖಂಡನೆ ವ್ಯಕ್ತವಾಗುತ್ತಿದೆ.
ನಮ್ಮ ಸೈನಿಕರು ನಮ್ಮ ಹೆಮ್ಮೆ
ನಮ್ಮ ದೇಶಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ನಮ್ಮನ್ನು ಕಾಪಾಡುತ್ತಿರುವವರು ನಮ್ಮ ಸೈನಿಕರು, ನಮ್ಮ ಪಾಲಿನ ದೇವರುಗಳು. ನಮ್ಮಂತೆಯೇ ನಾನು, ನನ್ನ ಕುಟುಂಬ ಅಂತ ಯೋಚಿಸದೆ ನನ್ನ ದೇಶ ಮೊದಲು ನಂತರ ನನ್ನ ಕುಟುಂಬ ನನಗೆ ಎಂದು ಬದುಕುತ್ತಿರುವವರು, ಅವರ ಬಗ್ಗೆ ಸಾಯಿ ಪಲ್ಲವಿ ಈ ಮಾತು ಹೇಳಬಾರದಿತ್ತು ಎಂದು ಹೇಳುತ್ತಿದ್ದಾರೆ.
ಈ ಹಿಂದೆ ಕೂಡ ಕಾಶ್ಮೀರಿ ಹಿಂದುಗಳನ್ನು ಗೋ ಕಳ್ಳ ಸಾಗಣೆ ಮಾಡುವವರಿಗೆ ಹೋಲಿಸಿ ತುಂಬಾ ಖಂಡನೆಗೆ ಒಳಗಾಗಿದ್ದರು. ಹೀಗಾಗಿ ಚಿತ್ರರಸಿಕರು ರಾವಣದಂಥ ಚಿತ್ರಕ್ಕೆ ಅದರಲ್ಲಿಯೂ ಸೀತಾ ಪಾತ್ರಕ್ಕೆ ಸಾಯಿ ಪಲ್ಲವಿ ಬೇಡೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
For many, this CREATURE was "National Crush"!
— BhikuMhatre (@MumbaichaDon) October 25, 2024
Now find reasons to support this shameless "Crush" who is glorifying Terr0ri$ts sympathizers Pakistanis while demeaning Bharatiya Army.#SaiPallavi pic.twitter.com/xbPokHPm42
ಭಾರತೀಯ ಸೈನಿಕರನ್ನು ಪಾಕಿಸ್ತಾನ ಸೈನಿಕರನ್ನು ಒಂದೇ ರೀತಿ ಕಾಣುವ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಬೇಡ ಅಂತಿರುವ ಜನ
ನಮಗೆ ನಮ್ಮ ಸೈನಿಕರು ವೀರರು ಅವರನ್ನು ಕಂಡಂತೆ ಇತರ ದೇಶದವರನ್ನು ಕಾಣಲು ಸಾಧ್ಯವೇ? ಸಾಯಿ ಪಲ್ಲವಿಗೆ ನಮ್ಮ ಸೈನಿಕರು ಪಾಕಿಸ್ತಾನದ ಸೈನಿಕರು ಒಂದೇ ಆದರೆ ಅವರು ಸೀತೆಯಲ್ಲಿ ಅಭಿನಯಿಸಿರುವ ರಾಮಾಯಣ ನಮಗೆ ಬೇಕಾಗಿಲ್ಲ ಅಂತಿದ್ದಾರೆ.
ಅಪಾರ ಜನಪ್ರಿಯತೆ ಗಳಿಸಿರುವ ನಟಿ ತಮ್ಮ ಮಾತಿನಿಂದಾಗ ಬದುಕಿನಲ್ಲಿ ಎಡವಿದರು
ಸಾಯಿ ಪಲ್ಲವಿಯನ್ನು ಎಲ್ಲಾ ಭಾಗದ ಜನರು ಇಷ್ಟಪಟ್ಟರು. ಸಾಯಿ ಪಲ್ಲವಿಯಂಥ ನಟಿ ಸಿನಿಮಾದಲ್ಲಿ ಇದೆ ಎಂದಾದರೆ ಆ ಸಿನಿಮಾ ಹಿಟ್ ಅಂತ ಹೇಳಲಾಗುತ್ತಿತ್ತು, ಆದರೆ ಯಶಸ್ಸು ತಲೆಗೇರಿತ್ತೋ ಅಥವಾ ಮಾತನಾಡಲು ಗೊತ್ತಿಲ್ಲದೆ ಹೇಳಿದರೋ ಗೊತ್ತಿಲ್ಲ ಈಗ ತಾವಾಡಿದ ಮಾತಿನಿಂದ ಜನರ ಟೀಕೆ ಎದುರಿಸುವಂತಾಗಿದೆ, ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಇದು ಎಲ್ಲರಿಗೂ ಒಂದು ಪಾಠ, ಹೇಗೆ ಮಾತನಾಡಬೇಕು ಎಂದು ತಿಳಿಯದೆ ಹೋದಾಗ ಇಷ್ಟೆಲ್ಲಾ ಸಮಸ್ಯೆಯಾಗುವುದು ನೋಡಿ...



Click it and Unblock the Notifications