Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್‌ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
ಇತ್ತೀಚಿಗೆ ಆಹಾರಗಳ ಸೇವಿಸಿದ ಬಳಿಕ ಅಸ್ವಸ್ಥರಾಗುವುದು, ಜೀವ ಕಳೆದುಕೊಳ್ಳುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಒಂದು ತಿಂಗಳ ಹಿಂದೆಯೂ ಇಂತಹದೊಂದು ಘಟನೆ ನಡೆದಿತ್ತು. ಹುಟ್ಟುಹಬ್ಬಕ್ಕೆ ಬೇಕರಿಯಿಂದ ಕೇಕ್ ತರಿಸಿ ತಿಂದಿದ್ದ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದ್ದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.
ಹುಟ್ಟುಹಬ್ಬದಂದು ಆಕೆ ಸಂತಸದಿಂದ ಸೇವಿಸಿದ್ದ ಚಾಕೊಲೆಟ್ ಕೇಕ್ ಆಕೆಯ ಜೀವನ ತೆಗೆದಿತ್ತು. 10 ವರ್ಷದ ಬಾಲಕಿ ಮಾನ್ವಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಮೃತಪಟ್ಟಿದ್ದಳು, ಆದರೆ ಈಗ ಈ ಕೇಕ್‌ನಲ್ಲಿ ಯಾವ ಅಂಶ ಆಕೆಯ ಸಾವಿಗೆ ಕಾರಣವಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದ್ದ ಘಟನೆಗೆ ಕೇಕ್‌ನಲ್ಲಿದ್ದ ಅಂಶವೇ ಕಾರಣ ಎಂದು ವರದಿ ಹೇಳಿದೆ. ಆಕೆ ಸೇವಿಸಿದ್ದ ಕೇಕ್‌ನಲ್ಲಿ ಕೃತಕ ಸಿಹಿ ಪತ್ತೆಯಾಗಿದೆ ಎಂದು ಲ್ಯಾಬ್ ವರದಿ ತಿಳಿಸಿದೆ. ಮಾರ್ಚ್ 24 ರಂದು ಬಾಲಕಿಯ ಹುಟ್ಟುಹಬ್ಬಕ್ಕೆ ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಚಾಕೊಲೇಟ್ ಕೇಕ್ ಅನ್ನು ಮನೆಯವರು ಎಲ್ಲರು ಸೇವಿಸಿದ್ದರು.
ಈ ರೀತಿ ಕೇಕ್ ಸೇವಿಸಿದ್ದ ಬಳಿಕ ಎಲ್ಲರು ಅಸ್ವಸ್ಥರಾಗಿದ್ದಾರೆ. ಆದರೆ ಹುಟ್ಟುಹಬ್ಬವೆಂದು ತುಸು ಹೆಚ್ಚು ಕೇಕ್ ತಿಂದಿದ್ದ ಮಾನ್ವಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಗೆ ತಲುಪಿದ್ದಳು. ಆದರೆ ಆಕೆ ಮೃತಪಟ್ಟಿದ್ದಳು.
ಬಳಿಕ ಈ ಪ್ರಕರಣ ಸದ್ದು ಮಾಡಿತ್ತು. ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಈ ವರದಿ ಬಂದಿದ್ದು, ವರದಿಯಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಕೃತಕ ಸಿಹಿಯಾಗಿ ಬಳಸಿರುವುದು ದೃಢಪಟ್ಟಿದೆ. ಈ ಸಾಕ್ರರಿನ್ ಎಲ್ಲಾ ಬೇಕರಿ ಪದಾರ್ಥಗಳಲ್ಲೂ ಬಳಸುತ್ತಾರೆ, ಆದರೆ ಸಣ್ಣ ಪ್ರಮಾಣದ ಸಾಕ್ರರಿನ್ ನಿಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ವೇಗವಾಗಿ ಹೆಚ್ಚಿಸಬಹುದು. ಇದು ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಅಲ್ಲದೆ ಸಕ್ಕರೆಗಿಂತ ಕಡಿಮೆ ಪ್ರಮಾಣದಲ್ಲಿ ಬಳಸಿದರೆ ಸಾಕಾಗುತ್ತದೆ. ಹೀಗಾಗಿ ಬೇಕರಿಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ಸಿಹಿಗಾಗಿ ಸಕ್ಕರೆಯ ಬದಲು ಈ ಸಾಕ್ರರಿನ್ ಬಳಸಲಾಗುತ್ತದೆ.
ಸದ್ಯದಲ್ಲೇ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಕರಿ ಮಾಲೀಕರ ವಿರುದ್ಧ ಈಗಾಗಲೇ ಎಫ್‌ಐಆರ್ ಸಹ ದಾಖಲಾಗಿದೆ. ಈ ಮೊದಲು ಆಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲಿ ಕೇಕ್ ಕತ್ತರಿಸಿ ಸಿಹಿಯಾದ ಕೇಕ್ ಸೇವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಸಂಭ್ರಮ ಮುಗಿದ ಕೆಲವೇ ನಿಮಿಷಗಳಲ್ಲಿ ಮನೆಯವರು ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದರು. ಅದರಲ್ಲೂ ಮೃತಪಟ್ಟ ಮಾನ್ವಿ ಹೊಟ್ಟೆ ನೋವಿನ ಕಾರಣ ರೂಮು ಸೇರಿ ಮಲಗಿದ್ದಳು. ಆದರೆ ಆಕೆ ಎಚ್ಚರಗೊಳ್ಳದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು.
ಏನಿದು ಸಾಕ್ರರಿನ್?
ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣಕ್ಕೆ ಈ ರಾಸಾಯನಿಕಯುಕ್ತ ಕೃತಕ ಸಿಹಿ ಬಳಕೆಯಲ್ಲಿದೆ. ಇದು ಸಕ್ಕರೆಗೆ ಪರ್ಯಾಯ ಸಿಹಿಯಾಗಿದೆ. ಇದೊಂದೆ ಅಲ್ಲ ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಸಿಯಂ, ಸುಕ್ರಲೋಸ್, ನಿಯೋಟೇಮ್ ಮತ್ತು ಅಡ್ವಾಂಟೇಮ್ ಸಂಯೋಜಕ ಸಕ್ಕರೆಗೆ ಬದಲಿ ಕೃತಕ ಸಿಹಿಕಾರಕಗಳಾಗಿವೆ. ಇವು ನಾವು ಬಳಸುವ ಪ್ರತಿಯೊಂದು ಬೇಕರಿ ಉತ್ಪನ್ನಗಳು, ಸಿಹಿ ತಿಂಡಿಗಳು, ಕೇಕ್ ಸೇರಿದಂತೆ ಎಲ್ಲಾ ಸಿಹಿ ಉತ್ಪನ್ನದಲ್ಲಿ ಸೇರಿರಬಹುದು. ಕೆಲವು ಕಡೆ ಈ ಕೃತಕ ಸಿಹಿ ಬಳಸದೆಯೂ ಆರೋಗ್ಯಯುತವಾದ ತಿಂಡಿ ತಿನಿಸು ಸಿಗುತ್ತದೆ. ಆದರೆ ಬಹುಪಾಲು ಮಂದಿ ಕಡಿಮೆ ಕ್ಯಾಲೋರಿ ಹಾಗೂ ಸಕ್ಕರೆಗೆ ಹೋಲಿಸಿದರೆ ಕಡಿಮೆ ದರದಲ್ಲಿ ಹೆಚ್ಚು ಸಿಹಿ ನೀಡುವ ಕೃತಕ ಸಿಹಿಯನ್ನೇ ಬಳಸುತ್ತಾರೆ.



Click it and Unblock the Notifications
