Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಬೆಚ್ಚಿಬಿದ್ದ ಕೆನಡಾ ಪ್ರಜೆ! 1.75 ಲಕ್ಷ ಬಾಡಿಗೆ, 19 ಲಕ್ಷ ಡೆಪಾಸಿಟ್.. ಬೆಂಗಳೂರು ಇಷ್ಟು ಕಾಸ್ಟ್ಲಿನಾ?
ಬೆಂಗಳೂರಿನಲ್ಲಿ ಮನೆ ಬೇಕಾ? 1.75 ಲಕ್ಷ ಬಾಡಿಗೆ, 19 ಲಕ್ಷ ಡೆಪಾಸಿಟ್! ಇದು ನಂಬಲು ಆಗದ ಬೆಂಗಳೂರು ರಿಯಾಲಿಟಿ. ಬೆಂಗಳೂರಿನ ಬಾಡಿಗೆ ದರ (Rent) ಕೇಳಿ ಕೆನಡಾ ಪ್ರಜೆಯೂ ಕಕ್ಕಾಬಿಕ್ಕಿ. ಅಬ್ಬಬ್ಬಾ ದೊಮ್ಮಲೂರು ಇಷ್ಟು ಕಾಸ್ಟ್ಲಿನಾ? ಹೌದು, ಬೆಂದಕಾಳೂರು (Bengaluru) ಬದುಕು ಅಂದುಕೊಂಡಷ್ಟು ಸುಲಭವಲ್ಲ! ಅಭಿವೃದ್ಧಿಯತ್ತ ಸಾಗುತ್ತಿರುವ ಬೆಂಗಳೂರು 'ದುಬಾರಿ ಸಿಟಿ' ಆಗಿದೆ. ಸಾಧಾರಣ ಮನೆಗೆ ದುಬಾರಿ ಬಾಡಿಗೆ. ಎಲ್ಲೆಲ್ಲೂ ಬೆಂಗಳೂರು ಮನೆ ಬಾಡಿಗೆ ಸದ್ದು ಮಾಡುತ್ತಿದೆ. ಕೆನಡಾ ಪ್ರಜೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಮನೆ ಬಾಡಿಗೆ ಮತ್ತು ಭದ್ರತಾ ಠೇವಣಿ (Security Deposit) ದರಗಳು ಗಗನಕ್ಕೇರುತ್ತಿದೆ. ಹೊಸದಾಗಿ ಬೆಂಗಳೂರಿಗೆ ಬರುವವರು ಪಿಜಿಗಳನ್ನು ಹೊರತುಪಡಿಸಿ, ಬಾಡಿಗೆ ಮನೆಗಳನ್ನು ಹುಡುಕುವುದು ಕಷ್ಟಕರ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಬಾಡಿಗೆ ಮತ್ತು ಡೆಪಾಸಿಟ್ ದರಗಳು ಕೈಗೆಟುಕದಂತಿವೆ. ಇತ್ತೀಚೆಗೆ ಕೆನಡಾ ಪ್ರಜೆಯೊಬ್ಬರು ಲಕ್ಷಾಂತರ ರೂಪಾಯಿ ಬೆಲೆಯ ಫ್ಲ್ಯಾಟ್‌ನ ಬಾಡಿಗೆ ಮತ್ತು ಡೆಪಾಸಿಟ್ ದರ ಕೇಳಿ ಬೆಚ್ಚಿಬಿದ್ದಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ಇದೇನಾ ಬ್ರಾಂಡ್ ಬೆಂಗಳೂರು ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಬಾಡಿಗೆ 1.75 ಲಕ್ಷ, ಡೆಪಾಸಿಟ್ 19.25 ಲಕ್ಷ
ಕೆನಡಾದ ಪ್ರಜೆಯಾದ ಕೇಲೆಬ್ ಅವರು ತಮ್ಮ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇವರು ಬೆಂಗಳೂರಿನ ದೊಮ್ಮಲೂರಿನ ಡೈಮಂಡ್ ಡಿಸ್ಟ್ರಿಕ್ಟ್‌ನಲ್ಲಿರುವ ಮೂರು ಬೆಡ್ ರೂಂಗಳ ಫ್ಲ್ಯಾಟ್‌ನ ಬಾಡಿಗೆ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅದರಂತೆ, ತಿಂಗಳ ಬಾಡಿಗೆ 1.75 ಲಕ್ಷ ರೂ. ಆಗಿದೆ. ಡೆಪಾಸಿಟ್ ದರ 19.25 ಲಕ್ಷ ರೂ. ಎಂದು ನಮೂದಿಸಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಹಲವರು ಗಂಭೀರವಾಗಿ ಕಮೆಂಟ್ ಹರಿಬಿಟ್ಟಿದ್ದಾರೆ.
ಹೊಸ ಥಾರ್ ಕಾರನ್ನೇ ಖರೀದಿಸಬಹುದಲ್ಲವೇ?
ಕೇಲೆಬ್ ಫ್ರೀಸೆನ್ ಅವರು ಮನೆ ಹುಡುಕುವ ಅನುಭವವನ್ನು ಹಂಚಿಕೊಂಡಿದ್ದಾರೆ. 'ಇತ್ತೀಚಿನ ದಿನಗಳಲ್ಲಿ ಮನೆ ಮಾಲೀಕರು 19 ಲಕ್ಷ ರೂ. ಭದ್ರತಾ ಠೇವಣಿ ಕೇಳುತ್ತಿದ್ದಾರೆ. ಇದು ತುಂಬಾ ಜಾಸ್ತಿ ಎನಿಸುತ್ತದೆ. ಇಷ್ಟು ಹಣದಲ್ಲಿ ಹೊಸ 'ಮಹೀಂದ್ರಾ ಥಾರ್' ಕಾರನ್ನು ಖರೀದಿಸಬಹುದು. ಇಂದಿರಾನಗರದ ಹತ್ತಿರ 80,000 ದಿಂದ 1 ಲಕ್ಷದವರೆಗೆ ಬಾಡಿಗೆ ಇರುವ, 2 ರಿಂದ 3 ತಿಂಗಳ ಠೇವಣಿ ಕೇಳುವ ಮನೆಗಳು ಬೇಕಾಗಿವೆ' ಎಂದು ಕೇಲೆಬ್ ಫ್ರೀಸೆನ್ ಬರೆದುಕೊಂಡಿದ್ದಾರೆ.
43,000ಕ್ಕೂ ಹೆಚ್ಚು ವೀವ್
ಕೇಲೆಬ್ ಫ್ರೀಸೆನ್ ಅವರು ಹಂಚಿಕೊಂಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 43,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಬಾಡಿಗೆ ದರಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಅನೇಕ ಜನರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಬಾಡಿಗೆ ದರ ಗಗನಕ್ಕೇರುತ್ತಿರುವುದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವಂತಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಅನೇಕ ಜನರು ಈ ಪೋಸ್ಟ್‌ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ತಮಾಷೆ ಮಾಡುತ್ತಾ, 'ಥಾರ್ ಬೇಡ. ಅದು ವಿಶೇಷ ವ್ಯಕ್ತಿಗಳಿಗೆ ಮಾತ್ರ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಬಾಡಿಗೆಯಲ್ಲಿ ಚೌಕಾಸಿ ಮಾಡಬಹುದು, ಆದರೆ ಠೇವಣಿ ಮೊತ್ತದಲ್ಲಿ ಸಾಧ್ಯವಿಲ್ಲ! ಇದು ಬೆಂಗಳೂರಿನ ಕ್ಲಾಸಿಕ್' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ನಾನೂ ಅದೇ ಅಪಾರ್ಟ್‌ಮೆಂಟ್‌ನಲ್ಲಿ 1 ಲಕ್ಷ ಬಾಡಿಗೆ, 5 ಲಕ್ಷ ಠೇವಣಿಯಲ್ಲಿ ತೆಗೆದುಕೊಂಡಿದ್ದೆ, ಬಹುಶಃ ಈಗ ಠೇವಣಿ ಹಣ ಡಬಲ್ ಮಾಡಿರಬಹುದು' ಎಂದು ಹೇಳಿದ್ದಾರೆ.
ನನ್ನ ಸಂಬಳಕ್ಕಿಂತ ಹೆಚ್ಚಿನ ಡೆಪಾಸಿಟ್
ಮತ್ತೊಬ್ಬ ಬಳಕೆದಾರರು, 'ನಾನು ಚೆನ್ನೈ ಬಿಟ್ಟ ನಂತರ ಬೆಂಗಳೂರಿಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಬೆಂಗಳೂರಿನಲ್ಲಿರುವ ಕಚೇರಿಯೊಂದಿಗಿನ ಮೊದಲ ಸುತ್ತಿನ ಸಂದರ್ಶನದ ನಂತರ, ಸುತ್ತಮುತ್ತಲಿನ ಆಸ್ತಿಗಳನ್ನು ಪರಿಶೀಲಿಸಿದೆ. ಎಲ್ಲರೂ ನನ್ನ ಸಂಬಳಕ್ಕಿಂತ ಹೆಚ್ಚಿನ ಭದ್ರತಾ ಠೇವಣಿ ಕೇಳುತ್ತಿದ್ದಾರೆ. ಹಾಗಾಗಿ, ಬೆಂಗಳೂರಿಗೆ ಹೋಗುವ ಆಲೋಚನೆಯನ್ನು ಕೈಬಿಟ್ಟೆ' ಎಂದು ಹಂಚಿಕೊಂಡಿದ್ದಾರೆ. 'ಅಬ್ಬಾ..! ಇದು ತುಂಬಾ ದೊಡ್ಡ ಮೊತ್ತ' ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ನನಗೆ ಒಬ್ಬ ರೂಮ್‌ಮೇಟ್ ಬೇಕು!
ಇನ್ನು ಕೆಲವರು, 'ನನ್ನ 2 ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ಒಬ್ಬ ರೂಮ್‌ಮೇಟ್ ಬೇಕು. ಯಾವುದೇ ಠೇವಣಿ ಇಲ್ಲ. ನಮ್ಮ ಸ್ಟಾರ್ಟಪ್ ಅನ್ನು ನಿಮ್ಮ ವಿಡಿಯೋಗಳಲ್ಲಿ ತೋರಿಸಿ ಸಾಕು' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಆ ಬೆಲೆಯಲ್ಲಿ ನೀವು ಕೋಲ್ಕತ್ತಾದಲ್ಲಿ ಒಂದು ಫ್ಲ್ಯಾಟ್ ಖರೀದಿಸಬಹುದು' ಎಂದು ಹೇಳಿದ್ದಾರೆ. ಇದಕ್ಕೆ ಕೇಲೆಬ್ ಫ್ರೀಸೆನ್ ಅವರು, 'ಹೌದು, ನಾನು ಪ್ರಸ್ತುತ ವಾಸಿಸುತ್ತಿರುವ ಐಜ್ವಾಲ್‌ನಲ್ಲೂ ಅದೇ ರೀತಿ ಇದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ, ಕೇಲೆಬ್ ಫ್ರೀಸೆನ್ ಅವರ ಪೋಸ್ಟ್ ಬೆಂಗಳೂರಿನಲ್ಲಿನ ಬಾಡಿಗೆ ಮತ್ತು ಡೆಪಾಸಿಟ್ ಬಗ್ಗೆ ಭಾರೀ ಚರ್ಚೆ ಹುಟ್ಟುಹಾಕಿದೆ. ಇದು ದುಬಾರಿ ಬಾಡಿಗೆ ಮತ್ತು ಡೆಪಾಸಿಟ್‌ನಿಂದ ಜನರು ಹೇಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಘಟನೆ ಬೆಂಗಳೂರಿನ ರಿಯಲ್ ಎಸ್ಟೇಟ್ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತಿದೆ. ಈ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.



Click it and Unblock the Notifications











