Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಡೊನಾಲ್ಡ್ ಟ್ರಂಪ್ ಬದುಕುಳಿದಿದ್ದು ಜಗನ್ನಾಥನ ಕೃಪೆಯಿಂದ..! ಇದಕ್ಕೆ 48 ವರ್ಷದ ನಂಟಿದೆ!
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಹತ್ಯೆ ಯತ್ನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ದಾಳಿಗೆ ಮುಂದಾಗಿದ್ದ ಯುವಕವನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಟ್ರಂಪ್ ಆಸ್ಪತ್ರೆ ಸೇರಿ ಸಣ್ಣದಾಗಿ ಉಂಟಾಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದಾರೆ.
ಒಂದು ಸೆಕೆಂಡ್‌ನಲ್ಲಿ ಅವರ ಜೀವ ಉಳಿದಿದ್ದು, ಬಲ ಕಿವಿಯ ಮೇಲೆ ಸಣ್ಣ ಗಾಯವಾಗಿದೆ. ಘಟನೆ ಸಂಬಂಧ ಇದೊಂದು ಭದ್ರತಾ ನಿರ್ಲಕ್ಷ ಎಂಬ ಆರೋಪ ಈಗ ಕೇಳಿಬಂದಿದೆ. ಸ್ಪೈಪರ್ ಶೂಟರ್‌ಗಳು, ಹತ್ತಾರು ಮಂದಿ ಗನ್ ಮ್ಯಾನ್‌ಗಳು ಇದ್ದಂತೆಯೇ ಯುವಕ ಗನ್ ಬಳಸಿ ಕೆಲವೇ ಮೀಟರ್ ದೂರದಿಂದ ಶೂಟ್ ಮಾಡಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಇದರ ಜೊತೆ ಡೊನಾಲ್ಡ್ ಟ್ರಂಪ್ ಜೀವ ಉಳಿಯಲು ಒರಿಸ್ಸಾದ ಪುರಿ ಜಗನ್ನಾಥನೇ ಕಾರಣ ಎಂಬ ಹೊಸ ವಾದವೊಂದು ಭಾರೀ ಚರ್ಚೆಯಾಗುತ್ತಿದೆ. ನಿಮಗೂ ಇದನ್ನು ಕೇಳಿ ಅಚ್ಚರಿಯಾಗಬಹುದು. ಒಡಿಶಾದ ಪುರಿ ಜಗನ್ನಾಥನಿಗೂ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ಗೂ ಹೇಗೆ ಸಂಬಂಧ ಎಂಬ ಪ್ರಶ್ನೆ ನಿಮಗೆ ಮೂಡಬಹುದು.
ಆದರೆ ನಾವಿಂದು ಈ ಕುರಿತ ಅಚ್ಚರಿಯ ಮಾಹಿತಿ ಹೇಳುತ್ತೇವೆ ಕೇಳಿ. ಭಾರತದ ಜಗನ್ನಾಥನಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೂ ಒಂದು ಸಂಬಂಧವಿದೆ. ಇಂದಿನಿಂದ ಬರೋಬ್ಬರಿ 48 ವರ್ಷದ ಹಿಂದೆ ಅಂದರೆ 1976ರಲ್ಲಿ ಅಮೆರಿದಲ್ಲಿ ಇಸ್ಕಾನ್ ಭಕ್ತರು ಮೊಟ್ಟ ಮೊದಲ ಬಾರಿಗೆ ಜಗನ್ನಾಥನ ರಥಯಾತ್ರೆ ಆರಂಭಿಸಿದ್ದರು. ಆದರೆ ರಥಯಾತ್ರೆಗೆ ನೂರಾರು ಅಡ್ಡಿಗಳು ಎದುರಾಗಿದ್ದವು.
ಜುಲೈ 1976 ರಲ್ಲಿ, ಇಸ್ಕಾನ್ ಭಕ್ತರು ತಮ್ಮ ಮೊದಲ ರಥಯಾತ್ರೆಯನ್ನು ಫಿಫ್ತ್ ಅವೆನ್ಯೂದಲ್ಲಿ ಆಯೋಜಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರು. ರಥಯಾತ್ರೆಗೆ ಅನುಮತಿ ಪಡೆಯುವಲ್ಲಿ ಮತ್ತು ಬೃಹತ್ ಮರದಿಂದ ರಥವನ್ನು ನಿರ್ಮಿಸಲು ಸೂಕ್ತವಾದ ಸ್ಥಳವನ್ನು ಹುಡುಕುವಲ್ಲಿನ ಸವಾಲುಗಳು ಎದುರಾದವು. ಎಲ್ಲಾ ಪ್ರಯತ್ನಗಳು ಮುಗಿದು ಭಕ್ತರು ಕೈ ಕಟ್ಟಿ ಕುಳಿತ್ತಿದ್ದರು.
ನೆರವಿಗೆ ಬಂದಿದ್ದು ಡೊನಾಲ್ಡ್ ಟ್ರಂಪ್
ಆ ಸಮಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಡೊನಾಲ್ಡ್ ಟ್ರಂಪ್ ಆಗಿನ್ನು 30 ವರ್ಷದವರಾಗಿದ್ದರು, ರಥ ನಿರ್ಮಾಣಕ್ಕೆ ಅಗತ್ಯವಿದ್ದ ಜಾಗ ಇತ್ತೀಚಿಗೆ ಅವರು ಖರೀದಿಸಿದ್ದರಂತೆ. ಈ ವಿಚಾರ ತಿಳಿದ ಭಕ್ತರು ಅವರನ್ನು ಸಂಪರ್ಕಿಸಿದ್ದರು. ಆದರೆ ಟ್ರಂಪ್ ಕಾರ್ಯದರ್ಶಿ ಈ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಭಕ್ತರನ್ನು ವಾಪಾಸು ಕಳುಹಿಸಿದ್ದ. ಇದಾದ ಮೂರು ದಿನಗಳ ಬಳಿಕ ಟ್ರಂಪ್ ಕಾರ್ಯದರ್ಶಿ ಕರೆ ಮೂಲಕ ಅವರು ಒಪ್ಪಿಗೆ ನೀಡಿರುವುದನ್ನು ಖಚಿತಪಡಿಸಿದರು. ಹಾಗೂ ಟ್ರಂಪ್ ಒಪ್ಪಿರುವ ಪತ್ರವೂ ಭಕ್ತರ ಕೈ ಸೇರಿತು.
ಟ್ರಂಪ್ ಈ ಜಗನ್ನಾಥನ ರಥಯಾತ್ರೆಯನ್ನು ಭಕ್ತಿಯಿಂದ ಕಂಡಿದ್ದರಂತೆ. ಈ ಕೆಲಸ ನಾನೇಕೆ ಮಾಡಬಾರದು ಎಂದು ಭಕ್ತರು ಕಳುಹಿಸಿದ್ದ ಪ್ರಸಾದ ಸ್ವೀಕರಿಸಿ ಪತ್ರಕ್ಕೆ ಸಹಿಹಾಕಿದ್ದರಂತೆ.
ಇದಾಗಿ ಸರಿಯಾಗಿ 48 ವರ್ಷದ ಬಳಿಕ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ನಡೆದಿದ್ದ ಸಂಚು ವಿಫಲವಾಗಿತ್ತು. ಅಲ್ಲದೆ ಇಂದು ಪುರಿ ಜಗನ್ನಾಥ ಮಂದಿರದ ಖಜಾನೆ ಬಾಗಿಲು ಸಹ ತೆಗೆಯಲಾಗಿದ್ದು ಬರೋಬ್ಬರಿ 46 ವರ್ಷದ ಬಳಿಕ ಈ ಕೊಠಡಿ ಬಾಗಿಲು ತೆಗೆಯಲಾಗಿತ್ತು. ಹೀಗಾಗಿ ಈ ಘಟನೆಗೂ ಡೊನಾಲ್ಡ್ ಟ್ರಂಪ್ ಅಪಾಯದಿಂದ ಪಾರಾಗಿದ್ದು ಜಗನ್ನಾಥನ ಆಶೀರ್ವಾದದಿಂದ ಎಂದು ಹೇಳಲಾಗುತ್ತಿದೆ.
ಸದ್ಯ ಈಗ ಟ್ರಂಪ್ ಈಗ ಚೇತರಿಸಿಕೊಂಡಿದ್ದು, ಘಟನೆ ಸಂಬಂಧ ತನಿಖೆಗೆ ಆಗ್ರಹಿಸಲಾಗಿದೆ. ಆದರೆ ಚುನಾವಣೆ ಘೋಷಣೆಯಾದ ಮೇಲೆ ಈ ರೀತಿ ಘಟನೆ ನಡೆದಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಅಲ್ಲದೆ ಟ್ರಂಪ್ ಮೇಲೆ ಈ ರೀತಿ ದಾಳಿಯ ಪ್ರಯತ್ನ ಮುಂದುವರೆದಿರುವುದು ಅವರ ಪ್ರಾಣಕ್ಕೆ ಅಪಾಯವಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.



Click it and Unblock the Notifications
