Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಣರಾಜ್ಯೋತ್ಸವ ಪರೇಡ್: ಪುರುಷರ ಸಿಆರ್‌ಪಿಎಫ್ ತುಕಡಿ ಮುನ್ನಡೆಸಲಿದ್ದಾರೆ 26ರ ಯುವತಿ!
ಪ್ರತಿ ವರ್ಷ ಜನವರಿ 26ಕ್ಕೆ ನಾವು ರಾಷ್ಟ್ರೀಯ ಹಬ್ಬವಾಗಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ಸಮಯದಲ್ಲಿ ದೇಶಭಕ್ತಿಯ ಸಾರುವ ಹಾಗೆ ಕರ್ತವ್ಯ ಪಥದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಹಾಗೆ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ದೇಶವನ್ನು ಉದ್ದೇಶಿಸಿ ರಾಜಕೀಯ ನಾಯಕರು ಭಾಷಣ ಮಾಡುವುದು ಈ ಎಲ್ಲಾ ಪ್ರಕ್ರಿಯೆಗಳು ನಡೆಯುವುದು ವರ್ಷದಿಂದಲೂ ನೋಡುತ್ತಾ ಬಂದಿದ್ದೇವೆ.
ಈ ಬಾರಿ 77ನೇ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ಬಾರಿಯ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಅದ್ರಲ್ಲೂ ಕರ್ತವ್ಯ ಪಥದಲ್ಲಿನ ಮೆರವಣಿಗೆ ಹಲವು ರೀತಿ ವಿಶೇಷಗಳಿಂದ ತುಂಬಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಲಿವೆ.

ಈ ವರ್ಷ, ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಅದರ ಜೊತೆಗೆ ಇದೇ ಮೊದಲ ಬಾರಿಗೆ ಅವಳಿ ಡುಬ್ಬ ಹೊಂದಿರುವ ಒಂಟೆಗಳು, ಜನ್ಸ್ಕರ್ ಕುದುರೆಗಳು, ಹದ್ದು/ಗಿಡುಗ, ನಾಯಿಗಳು ಸೇರಿದಂತೆ ವಿಶೇಷ ರೀತಿಯ ಪಥ ಸಂಚಲನ ನೋಡಬಹುದು.
ಆದ್ರೆ ಇದೆಲ್ಲದಕ್ಕಿಂತ ವಿಶೇಷ ಎನ್ನುವಂತೆ ಈ ಬಾರಿಯ ಸಿಆರ್‌ಪಿಎಫ್ ತುಕಡಿಯನ್ನು 26 ವರ್ಷದ ಯುವತಿಯೊಬ್ಬರು ಮುನ್ನಡೆಸಲಿದ್ದಾರೆ. ಹೌದು ಜಮ್ಮು ಮತ್ತು ಕಾಶ್ಮೀರದ ಕೇವಲ 26 ವರ್ಷದ ಈ ಯುವತಿ ಈ ಭಾರಿಯ ಗಣರಾಜ್ಯೋತ್ಸವದ ಕೇಂದ್ರ ಬಿಂದು ಎನ್ನಬಹುದು. ಜಮ್ಮು ಮತ್ತು ಕಾಶ್ಮೀರದ 26 ವರ್ಷದ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಿಮ್ರನ್ ಬಾಲಾ ದೆಹಲಿಯ ಕರ್ತವ್ಯ ಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಿಳಾ ಅಧಿಕಾರಿಗಳು ವಿವಿಧ ಗಣರಾಜ್ಯೋತ್ಸವದ ತುಕಡಿಗಳಿಗೆ ಕಮಾಂಡ್ ಮಾಡಿದ ನಿದರ್ಶನಗಳಿವೆ, ಆದರೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅದ್ರಲ್ಲೂ 140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಯ ತಂಡಕ್ಕೆ ಮಹಿಳಾ ಅಧಿಕಾರಿಯೊಬ್ಬರು ಕಮಾಂಡ್ ಮಾಡುವುದು ಇದೇ ಮೊದಲಾಗಿದೆ.
ಯಾರು ಈ ಸಿಮ್ರನ್ ಬಾಲಾ?
ಸಿಮ್ರನ್ ಬಾಲಾ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯವರಾಗಿದ್ದು, ದೇಶದ ಅತಿದೊಡ್ಡ ಅರೆಸೈನಿಕ ಪಡೆಗೆ ಅಧಿಕಾರಿ ಶ್ರೇಣಿಯ ಹುದ್ದೆಯಲ್ಲಿರುವ ಮೊದಲ ಮಹಿಳೆಯಾಗಿದ್ದಾರೆ. ಜಮ್ಮುವಿನ ಗಾಂಧಿನಗರದಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಪದವೀಧರೆ ಆಗಿದ್ದಾರೆ. 2025ರಲ್ಲಿ ಅವರನ್ನು ಛತ್ತೀಸ್‌ಗಢದ ಬಸ್ತಾರಿಯಾ ಬೆಟಾಲಿಯನ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿಯೂ ಅವರು ಭಾಗಿಯಾಗಿದ್ದರು. ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳನ್ನು ಸವಾರಿ ಮಾಡುವ CRPF ಮತ್ತು ಸಶಸ್ತ್ರ ಸೀಮಾ ಬಲ್ (SSB) ಯ ಮಹಿಳಾ 'ಡೇರ್ ಡೆವಿಲ್ಸ್' ಜಂಟಿ ತಂಡವು ಸಹ ಮೆರವಣಿಗೆಯ ಭಾಗವಾಗಿರುತ್ತದೆ.
ಯುಪಿಎಸ್‌ಸಿ ನಡೆಸಿದ ಸಿಎಪಿಎಫ್ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಗುರುಗ್ರಾಮ್‌ನ ಸಿಆರ್‌ಪಿಎಫ್ ಅಕಾಡೆಮಿಯಲ್ಲಿ ಅವರ ಕೌಶಲ್ಯ ತರಬೇತಿಯ ಸಮಯದಲ್ಲಿ ತರಬೇತಿ ಮತ್ತು ಸಾರ್ವಜನಿಕ ಭಾಷಣ ವಿಷಯಗಳಲ್ಲಿ ಅತ್ಯುತ್ತಮ ಅಧಿಕಾರಿಗಾಗಿ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.
3.25 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಿಆರ್‌ಪಿಎಫ್ ದೇಶದ ಅತ್ಯುನ್ನತ ಆಂತರಿಕ ಭದ್ರತಾ ಪಡೆಯಾಗಿದ್ದು, ಅದರ ಮೂರು ಪ್ರಮುಖ ಯುದ್ಧ ಕ್ಷೇತ್ರಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ದಾಳಿಗಳು ಮತ್ತು ಈಶಾನ್ಯದಲ್ಲಿ ದಂಗೆ ನಿಗ್ರಹ ಕರ್ತವ್ಯಗಳಾಗಿವೆ. ಸದ್ಯ ಈಗ 26 ವರ್ಷದ ಈ ಯುವತಿ ಗಣರಾಜ್ಯೋತ್ಸವ ಪರೇಡ್‌ನ ಕೇಂದ್ರಬಿಂದುವಾಗಿದ್ದಾರೆ.



Click it and Unblock the Notifications
