Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷ ಎಷ್ಟನೇ ಗಣರಾಜ್ಯೋತ್ಸವ? 77 ಅಥವಾ 78? ಇಲ್ಲಿದೆ ಉತ್ತರ!
ಜನವರಿ 26ರಲ್ಲಿ ರಾಷ್ಟ್ರೀಯ ಹಬ್ಬವಾಗಿ ನಾವು ಗಣರಾಜ್ಯೋತ್ಸ ಆಚರಿಸುತ್ತೇವೆ. ಪ್ರತಿ ವರ್ಷ ಜನವರಿ 26 ಬಂತೆಂದರೆ ದೇಶಭಕ್ತಿಯ ಈ ಆಚರಣೆ ನೋಡಬಹುದು. ಆದ್ರೆ ಪ್ರತಿ ವರ್ಷ ಈ ಹಬ್ಬಗಳು ಬಂದಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು ಎಷ್ಟನೇ ವರ್ಷದ ಆಚರಣೆ ಎಂಬುದು. ಹೌದು ಈ ಬಾರಿ ಕೂಡ ಎಷ್ಟನೇ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂಬುದು ಮತ್ತೆ ಗೊಂದಲಕ್ಕೆ ಕಾರಣವಾಗುತ್ತಿದೆ.
ಇಡೀ ದೇಶ ಈ ರಾಷ್ಟ್ರೀಯ ಹಬ್ಬದಂದು ಭವ್ಯ ಮೆರವಣಿಗೆಗಳು, ದೇಶಭಕ್ತಿ ಸಾರುವ ಹಲವು ಕಾರ್ಯಕ್ರಮಗಳ ನೋಡಬಹುದು. ಆದ್ರೆ ಭಾರತ ಈ ವರ್ಷ ಎಷ್ಟನೇ ಗಣರಾಜ್ಯೋತ್ಸವ ಆಚರಿಸುತ್ತಿದೆ ಎಂಬುದು ಗೊಂದಲದ ಪ್ರಶ್ನೆಯಾಗಿ ಕಾಡುತ್ತಿದೆ. ಈ ವರ್ಷ ಭಾರತವು ತನ್ನ 77ನೇ ಅಥವಾ 78ನೇ ಗಣರಾಜ್ಯೋಸವವನ್ನು ಆಚರಿಸುತ್ತಿದೆಯೇ? ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ.

ಭಾರತವು 1950 ನೇ ವರ್ಷವನ್ನು ಮೊದಲ ಗಣರಾಜ್ಯೋತ್ಸವವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿ ವರ್ಷವನ್ನು ಅನುಕ್ರಮವಾಗಿ ಸೇರಿಸುವುದರಿಂದ 2026ರಲ್ಲಿ ನಾವು 77ನೇ ಗಣರಾಜ್ಯೋತ್ಸವ ಆಚರಿಸುತ್ತೇವೆ. ಸಾಮಾನ್ಯವಾಗಿ ಸಂವಿಧಾನ ಜಾರಿಗೆ ಬಂದ ವರ್ಷದಿಂದ ಲೆಕ್ಕ ಹಾಕುವುದು ಹಾಗೆ ಆಚರಣೆ ಆರಂಭಗೊಂಡು ಎಷ್ಟು ವರ್ಷವಾಗಿದೆ ಎಂಬ ಎರಡು ಮಾದರಿಯಲ್ಲಿ ಲೆಕ್ಕ ಹಾಕುವುದು ಈ ಗೊಂದಲಗಳಿಗೆ ಪ್ರಮುಖ ಕಾರಣವಾಗುತ್ತದೆ.
ಗಣರಾಜ್ಯೋತ್ಸವ ಆಚರಣೆಯ ಬಗ್ಗೆ ಗೊಂದಲ ಮೂಡುವುದೇಕೆ?
ಅನೇಕ ಜನರು ತಪ್ಪಾಗಿ 1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ವರ್ಷದಿಂದ ಗಣರಾಜ್ಯೋತ್ಸವವನ್ನು ಎಣಿಸಲು ಪ್ರಾರಂಭಿಸುತ್ತಾರೆ. ಹಾಗೆ ಸಂವಿಧಾನ ಒಪ್ಪಿಕೊಂಡ ದಿನ ಹಾಗೆ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಿದ ದಿನದಿಂದ ಎಣಿಕೆ ಮಾಡಬೇಕಾಗುತ್ತದೆ. 1950 ರಲ್ಲಿ ಮೊದಲ ಗಣರಾಜ್ಯೋತ್ಸವದೊಂದಿಗೆ ಆರಂಭವಾಗುತ್ತದೆ. ಅದರ ನಂತರ ವಾರ್ಷಿಕವಾಗಿ ಒಂದು ಸಂಖ್ಯೆಯನ್ನು ಸೇರಿಸಲಾಗುತ್ತದೆ. ಹೀಗಾಗಿ ನಾವು ಈ ವರ್ಷ 77ನೇ ಗಣರಾಜ್ಯೋತ್ಸವ ಆಚರಿಸಲಿದ್ದೇವೆ.
ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವು ಭಾರತದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ನ 150 ವರ್ಷಗಳ ಪರಂಪರೆಯನ್ನು ಎತ್ತಿ ತೋರಿಸುತ್ತದೆ ಮತ್ತು ದೇಶದ ಮಿಲಿಟರಿ ಸಾಮರ್ಥ್ಯಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲು ಸಿದ್ಧತೆಗಳು ನಡೆದಿದೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು 2026 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹಾಗೆ ಈ ವರ್ಷದ ಥೀಮ್ ಆಗಿ '150 ವರ್ಷಗಳ ವಂದೇ ಮಾತರಂ' ಆಗಿರುತ್ತದೆ. 1923 ರಲ್ಲಿ ರಚಿಸಲಾದ ವಂದೇ ಮಾತರಂನ ಗೀತೆ ವಿವರಿಸುವ ವರ್ಣಚಿತ್ರಗಳನ್ನು ಕರ್ತವ್ಯ ಮಾರ್ಗದಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇದೇ ಥೀಮ್ ಮೇಲೆ ನಿರ್ಧರಿತವಾಗಿವೆ. ಹಾಗೆ ಈ ವರ್ಷ ಮೊದಲ ಬಾರಿಗೆ ಭಾರತೀಯ ಸೇನೆಯು ಮೆರವಣಿಗೆಯ ಸಮಯದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸಂಪನ್ಮೂಲಗಳ ಕಾರ್ಯತಂತ್ರದ, ಸಂಘಟಿತ ರಚನೆಯನ್ನು ಪ್ರದರ್ಶಿಸಲಿವೆ. ಇದರಲ್ಲಿ ತುಕಡಿಗಳು, ಯಾಂತ್ರಿಕೃತ ಕಾಲಮ್‌ಗಳು, ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಡ್ರೋನ್‌ಗಳು, ಟ್ಯಾಂಕ್‌ಗಳು ಮತ್ತು ಕ್ಷಿಪಣಿ ಸೇರಿ ಹಲವು ರೀತಿಯ ವಸ್ತುಗಳ ನೀವು ನೋಡಬಹುದು.
ಭಾರತೀಯ ವಾಯುಪಡೆಯ ವಿಶೇಷ ನಿವೃತ್ತರ ಟ್ಯಾಬ್ಲೋ ಕೂಡ ಮೆರವಣಿಗೆಯ ಭಾಗವಾಗಿರುತ್ತದೆ, ಇದು ಮಾಜಿ ಸೇವಾ ಸಿಬ್ಬಂದಿಯ ಕೊಡುಗೆಯನ್ನು ಗೌರವಿಸುತ್ತದೆ ಹಾಗೆ ಪ್ರದರ್ಶಿಸಲಿದೆ. ಈ ಮೆರವಣಿಗೆಯಲ್ಲಿ ಸುಮಾರು 10 ಸಾವಿರ ವಿಶೇಷ ಅತಿಥಿಗಳು ಭಾಗಿಯಾಗಲಿದ್ದಾರೆ. ಅದ್ರಲ್ಲೂ ರೈತರು, ವಿಜ್ಞಾನಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ಮಹಿಳಾ ಸಾಧಕರು, ಸ್ವಸಹಾಯ ಗುಂಪಿನ ಸದಸ್ಯರು, ಕುಶಕರ್ಮಿಗಳು, ಸರ್ಕಾರಿ ಯೋಜನೆ ಫಲಾನುಭವಿಗಳು ಭಾಗಿಯಾಲಿದ್ದಾರೆ.



Click it and Unblock the Notifications











