Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಯಾವ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಬೇಡಿ, ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆ ಮಾತಿಗೆ ಅಪಾರ ಮೆಚ್ಚುಗೆ
ಮಗುವಿನ ಮೆಲೆ ಅತ್ಯಾಚಾರ, ವೃದ್ಧೆಯ ಮೇಲೆ ಅತ್ಯಾಚಾರ, ಕೆಲಸಕ್ಕೆ, ಓದಲು ಅಂತ ಹೋಗಿರುವ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ತಾನು ಕೆಲಸ ಮಾಡುತ್ತಿರುವ ಜಾಗದಲ್ಲಿಯೇ ಅತ್ಯಾಚಾರ ಇಂಥ ಸುದ್ದಿಯನ್ನು ಪ್ರತಿನಿತ್ಯ ಕೇಳುತ್ತಿರುತ್ತೇವೆ. 2022ರ ವರದಿ ಪ್ರಕಾರ ಪ್ರತಿದಿನ 92 ಹಾಗೂ ಅದಕ್ಕಿಂತ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಪೊಲೀಸ್ ಋಆಣೆಯಲ್ಲಿ ದಾಖಲಾಗುತ್ತಿವೆ, ಕೆಲವು ಪ್ರಕರಣಗಳು ಹೊರಬರುವುದೇ ಇಲ್ಲ. ಹಾಗಾದರೆ ಈ ಹೆಣ್ಣಿಗೆ ನಿಜವಾದ ಸ್ವಾತಂತ್ರ್ಯ ಸಿಗುವುದು.

ವಿಶ್ವದ ಗಮನ ಸೆಳೆದ ಕೋಲ್ಕತ್ತಾ ಪ್ರಕರಣ
ಕೋಲ್ಕತ್ತಾ ಆಸ್ಪತ್ರೆಯಲ್ಲಿಯೇ ಟ್ರೈನಿ ಡಾಕ್ಟರ್ ಮೇಲಾದ ಅತ್ಯಾಚಾರ ಹಾಗೂ ಕೊಲೆ ಭಾರತವನ್ನು ಬೇರೆ ದೇಶದ ಮುಂದೆ ಮುಜುಗರಕ್ಕೀಡಾಗುವಂತೆ ಮಾಡಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ವೈದ್ಯರುಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡಿದರು. ಈ ಘಟನೆಯನ್ನು ಪ್ರತಿಯೊಬ್ಬರು ಖಂಡಿಸುತ್ತಿದ್ದಾರೆ, ಮನುಷ್ಯತ್ವ ಮರೆತು ರಾಕ್ಷಸ ಕೃತ್ಯ ಮಾಡಿರುವ ಯಾರೇ ಅಗಿರಲಿ ಮುಂದೆ ಇಂಥ ಘಟನೆ ತಡೆಗಟ್ಟಲು ಭಯಪಡುವಂಥ ಶಿಕ್ಷೆ ಈ ಕೇಸ್‌ನಲ್ಲಿ ಅಗಬೇಕಾಗಿದೆ.
ನೆಟ್ಟಿಗರ ಮನಗೆದ್ದ ರೆಡ್‌ಲೈಟ್ ಏರಿಯಾದ ಮಹಿಳೆ ಹೇಳಿದ ಮಾತುಗಳು
ದೇಶದ ಉದ್ದಗಲಕ್ಕೂ ಅತ್ಯಾಚಾರಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಕೂಗುಬ ಬಲವಾಗಿದೆ. ಯಾವ ಹೆಣ್ಣಿಗೂ ಆ ವೈದ್ಯೆಗೆ ಅದ ಗತಿ ಬರಬಾರದು, ಹೆಣ್ಮಕ್ಕಳು ಓದಲು-ಕೆಲಸಕ್ಕೆ ಅಂತ ಹೊರಗಡೆ ಹೋದರೆ ಭಯಪಟ್ಟು ಕೂರುವಂಥ ಪರಿಸ್ಥಿತಿ ಇರಬಾರದು, ಅತ್ಯಾಚಾರದ ಬಗ್ಗೆ ಯೋಚಿಸಲೇ ಭಯವಂಥ ಶಿಕ್ಷೆ ಆಗಲೇಬೇಕಾಗಿದೆ.
ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಜನ ಸಾಮಾನ್ಯರ ಅಭಿಪ್ರಾಯವನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಸಂಗ್ರಹಿಸುತ್ತಿದ್ದರು. ಆವಾಗ ಮಹಿಳೆಯೊಬ್ಬರು ಹೇಳಿದ ಮಾತುಗಳು ನೆಟ್ಟಿಗರ ಮನಗೆದ್ದಿದೆ, ಆಕೆ ದೇಹ ಮಾರಿ ಬದುಕುವ ಮಹಿಳೆಯಾದರೂ ಆಕೆಯ ಮೇಲೆ ಗೌರವ ಹೆಚ್ಚಾಗಿದೆ.
ಆಕೆ ಹೇಳಿದ್ದು ಹೀಗೆ ನೀವ್ಯಾಕೆ ಅತ್ಯಾಚಾರ ಮಾಡುತ್ತಿದ್ದೀರಿ, ನಾವು ಇಷ್ಟೊಂದು ಜನ ರೆಡ್‌ಲೈಟ್ ಏರಿಯಾದಲ್ಲಿ ಇದ್ದೀವಿ, ಇಲ್ಲಿಗೆ ಬನ್ನಿ, ಹೆಣ್ಣಕ್ಕಳು ಭಯವಿಲ್ಲದೆ ಹೋಗಲಿ, ಹುಡುಗಿಯರು ಕೆಲಸಕ್ಕೆ ಹೋಗಲಿ, ವೈದ್ಯರು ಅವರ ಕೆಲಸ ಮಾಡಲು ಹೋಗಲಿ, ನೀವು ಇಲ್ಲಿಗೆ ಬನ್ನಿ 50, 100 ರುಪಾಯಿಗೆ ನಿಮ್ಮ ಕೆಲಸಕ್ಕೆ ನಾವು ಸಿದ್ಧರಾಗಿದ್ದೇವೆ, ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾರೆ. ಇವರು ಹೇಳಿರುವ ಮಾತುಗಳು ಎಷ್ಟೊಮದು ಅರ್ಥಪೂರ್ಣವಾಗಿದೆ, ದೇಹ ಮಾರಿ ಮಾರುವ ಅವರು ನೀವು ಯಾವ ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ಅವರ ಭವಿಷ್ಯ ಹಾಳು ಮಾಡಬೇಡಿ, ಇಲ್ಲಿಗೆ ಬನ್ನಿ ನಿಮ್ಮ ಕೆಲಸ ತೀರಿಸಿಕೊಳ್ಳಿ, ಹೊರಗಡೆ ಸಮಾಜದಲ್ಲಿ ಹೆಣ್ಮಕ್ಕಳು ಭಯವಿಲ್ಲದೆ ಓಡಾಡುವಂತಾಗಲಿ ಎಂದು ಹೇಳಿದ್ದಾರೆ.
https://www.facebook.com/reel/1488676738679767
ಅತ್ಯಾಚಾರಿಗೆ ಆಗಲೇಬೇಕಾಗಿದೆ ಕಠಿಣ ಶಿಕ್ಷೆ
ಇಷ್ಟೊಂದು ಅತ್ಯಾಚಾರ ಪ್ರಕರಣಗಳು ಏಕೆ ದಾಖಲಾಗುತ್ತಿದೆ? ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲದಿರುವುದು. ಒಂದು ವೇಳೆ ನಾವು ಸಿಕ್ಕಿ ಬಿದ್ದರೂ ಕೆಲವೊಂದು ವರ್ಷ ಜೈಲಿನಲ್ಲಿದ್ದು ನಂತರ ಆರಾಮವಾಗಿ ಹೊರಬಹುದು ಅಥವಾ ಜೈಲಿನಲ್ಲಿ ಉಂಡು-ತಿಂದು ಇರಬಹುದು ಎಂಬ ಆಲೋಚನೆಯಿಂದಾಗಿ ಅತ್ಯಾಚಾರ ಮಾಡಲು ಭಯಪಡುತ್ತಿಲ್ಲ. ಅತ್ಯಾಚಾರಿ ಸಿಕ್ಕಿದ ಕೂಡಲೇ ಅವನು ಆ ಕೃತ್ಯ ಎಸಗಿದ್ದಾನೆ ಎಂದು ಶೇ. 100ರಷ್ಟು ಸಾಬೀತಾದರೆ ಒಂದಿಷ್ಟು ಸಮಯ ವ್ಯರ್ಥ ಮಾಡದೆ ಆ ಕ್ರೂರಿಯನ್ನು ಗಲ್ಲಿಗೇರಿಸುವ ಕಾನೂನು ಬಂದರೆ ಮಾತ್ರ ನಮ್ಮ ಭಾರತದಲ್ಲಿ ಹೆಣ್ಮಕ್ಕಳಿಗೆ ಸ್ವಲ್ಪವಾದರೂ ಸುರಕ್ಷತೆ ಅನಿಸುವುದು.
ಭೇಟಿ ಪಡೆವೋ ಭೇಟಿ ಬಚಾವೋ ಅಂತ ಘೋಷಣೆ ಕೂಗಿದರೆ ಸಾಲದು ಅತ್ಯಾಚಾರಿಗಳ ನಿರ್ಮೂಲನೆ ಮಾಡಿ ಎಂಬ ಕಾನೂನು ಶೀಘ್ರವೇ ಜಾರಿಯಾಗಬೇಕಾಗಿದೆ.



Click it and Unblock the Notifications