Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಿಜ ಜೀವನದಲ್ಲಿ ಸ್ಪೈಡರ್ ಮ್ಯಾನ್ ನೋಡಿದ್ದೀರಾ..? ಇಲ್ಲಿದ್ದಾನೆ ನೋಡಿ..!
ನೀವು ಹಾಲಿವುಡ್‌ನ ಸೂಪರ್ ಹಿಟ್ ಮೂವಿ ಸ್ಪೈಡರ್ ಮ್ಯಾನ್ ನೋಡಿರಬಹುದು. ಈಗಂತು ಈ ಸ್ಪೈಡರ್ ಮ್ಯಾನ್ ಸಿನಿಮಾದ ಮುಂದುವರೆದ ಭಾಗಗಳು ಸಹ ಬಂದಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಪೈಡರ್ ಮ್ಯಾನ್ ಸಿನಿಮಾ ನೋಡಿ ಆನಂದಿಸಿರುತ್ತಾರೆ.
ಸಿನಿಮಾದಲ್ಲಿ ದೊಡ್ಡ ಕಥೆ ಏನು ಇಲ್ಲದಿದ್ದರೂ ಕಷ್ಟದಲ್ಲಿರುವ ಜನರನ್ನು ಆ ಸಂಕಷ್ಟಗಳಿಂದ ಪಾರು ಮಾಡುವುದೇ ಈ ಸ್ಪೈಡರ್ ಮ್ಯಾನ್‌ನ ಕೆಲಸವಾಗಿರುತ್ತದೆ. ಹೀಗಾಗಿ ಇದೊಂದಿ ಸೂಪರ್ ಹೀರೋ ಸಿನಿಮಾ ಆಗಿತ್ತು. ಆರಂಭದಲ್ಲಿ ಇದೊಂದು ಕಾಮಿಕ್ ಬುಕ್ ರೀತಿ ಕಥೆಗಳಾಗಿ ಬರಲು ಆರಂಭಿಸಿದ್ದು, ಅದರ ಇತಿಹಾಸವೆಲ್ಲ ನಿಮಗೆ ಗೊತ್ತಿರಬಹುದು.

ಆದ್ರೆ ನಿಜ ಜೀವನದಲ್ಲಿ ಸ್ಪೈಡರ್ ಮ್ಯಾನ್ ಅನ್ನು ನೀವು ಎಲ್ಲಾದ್ರು ನೋಡಿದ್ದೀರಾ? ಕಷ್ಟದಲ್ಲಿರುವ ವ್ಯಕ್ತಿಯನ್ನ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಜೀವ ಉಳಿಸಿದ ನಿಜ ಜೀವನದ ಸ್ಪೈಡರ್ ಮ್ಯಾನ ಕಥೆ ಇದು. ಹೌದು ಕೇರಳದಲ್ಲಿ ಕಂಡಕ್ಟರ್ ಒಬ್ಬ ತನ್ನ ಕಾರ್ಯದಿಂದಾಗಿ ಈಗ ಭಾರತದ ದೇಸಿ ಸ್ಪೈಡರ್ ಮ್ಯಾನ್ ಎಂಬ ಬಿರುದು ಪಡೆದಿದ್ದಾನೆ.
ಬಸ್‌ನಲ್ಲಿ ಪ್ರಯಾಣಿಕನೊಬ್ಬ ಬಸ್‌ನಿಂದ ಕೆಳಗೆ ಬೀಳುವಾಗ ಒಂದೇ ಕೈನಲ್ಲಿ ಆತನ ಜೀವ ಉಳಿಸಿದ ಆತನ ವಿಡಿಯೋ ವೈರಲ್ ಆಗಿದ್ದು, ಎಲ್ಲರು ಆತನ ಕಾರ್ಯ ಕಂಡು ಈತ ನಿಜವಾದ ಸ್ಪೈಡರ್ ಮ್ಯಾನ್ ಎನ್ನುತ್ತಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಸಹ ಆಗಿದ್ದು ಎಲ್ಲರು ಇದು ಸಾಧ್ಯವಾಗಿದ್ದು ಹೇಗೆ ಎಂಬ ಅಚ್ಚರಿಗೆ ಒಳಗಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಟಿಕೆಟ್ ನೀಡುತ್ತಿದ್ದರೆ ಆತನ ಪಕ್ಕದಲ್ಲೇ ಒಬ್ಬ ಪ್ರಯಾಣಿಕ ನಿಂತಿರುವುದನ್ನು ನಾವು ನೋಡಬಹುದು. ಆದರೆ ಬಸ್ ವೇಗವಾಗಿ ಹೋಗುವಾಗ ಆತ ಆಯತಪ್ಪಿ ಇನ್ನೇನು ಕೇಳಗೆ ಬೀಳುತ್ತಾನೆ ಎನ್ನುವಷ್ಟರಲ್ಲಿ ಕಂಡಕ್ಟರ್ ಒಂದೇ ಕೈನಲ್ಲಿ ಆತನ ಹಿಡಿದುಕೊಳ್ಳುತ್ತಾನೆ. ಇದರಿಂದ ಆತ ಬಸ್‌ನಿಂದ ರೋಡಿಗೆ ಬೀಳುವುದರಿಂದ ಕ್ಷಣದಲ್ಲಿ ಪಾರಾಗುತ್ತಾನೆ. ಇದೆಲ್ಲವು ಕಣ್ಣು ಮಿಟುಕಿಸಿ ಬಿಡುವ ನಡುವೆ ನಡೆದು ಹೋಗುತ್ತದೆ.
ಕಂಡಕ್ಟರ್ ಆತನ ಮೇಲೆ ಎತ್ತಿ ಬಸ್ ಒಳಗೆ ಎಳೆದುಕೊಳ್ಳುತ್ತಾನೆ. ಬಳಿಕ ಬಸ್‌ನೊಳಗೆ ಇದ್ದ ಮಂದಿ ಬಸ್‌ನ ಡೋರ್ ಹಾಕಿಕೊಳ್ಳುತ್ತಾರೆ. ಈ ಘಟನೆ ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರು ಥ್ರಿಲ್‌ಗೆ ಒಳಗಾಗಿದ್ದಾರೆ. ಏಕೆಂದರೆ ಕಂಡಕ್ಟರ್‌ನ ಸಮಯ ಪ್ರಜ್ಞೆಯಿಂದಾಗಿ ಒಂದು ಜೀವ ಉಳಿದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುವ ಜೊತೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಸಾವಿರಾರು ಮಂದಿ ಕಂಡಕ್ಟರ್ ಕಾರ್ಯ ಕಂಡು ಬೆರಗಾಗಿದ್ದಾರೆ. ಅಲ್ಲದೆ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ.
"ಆ ವ್ಯಕ್ತಿ ನಿಜವಾಗಿಯೂ ರಜನಿಕಾಂತ್ ಅವರ ಪುನರ್ಜನ್ಮ" ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ 'ಆತ ಹಣ ನೀಡದೆ ಬಸ್ ಇಳಿಯಲು ಮುಂದಾದಾಗ ಕಂಡಕ್ಟರ್ ಕಷ್ಟ ಪಟ್ಟು ಹಿಡಿದಿದ್ಧಾನೆ' ಎಂದು ಹೇಳಿದ್ದಾರೆ.
ಆದ್ರೆ ಹಲವರು ಈತ ಭಾರತದ ನಿಜವಾದ ಸ್ಪೈಡರ್ ಮ್ಯಾನ್ ಎಂದಿದ್ದಾರೆ. ಪ್ರಯಾಣಿಕನಿಗೆ ಮರು ಜೀವ ನೀಡಿದ ಕಂಡಕ್ಟರ್‌ಗೆ ನಮ್ಮದೊಂದು ಸೆಲ್ಯೂಟ್ ಎಂದಿದ್ದಾರೆ. ಮತ್ತೆ ಕೆಲವರು ಬಸ್‌ನಲ್ಲಿ ಓಡಾಡುವಾಗ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಒಂದು ಕ್ಷಣ ಮೈಮರೆತು ಇಂತಹ ದುರಂತಕ್ಕೆ ಬಲಿಯಾದರೆ ನಿಮ್ಮ ಕುಟುಂಬ ಬೀದಿಗೆ ಬರಲಿದೆ ಎಂದು ಬಳಕೆದಾರರೊಬ್ಬರು ಜಾಗೃತಿಯ ಮಾತುಗಳ ಆಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.



Click it and Unblock the Notifications
