Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್‌ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಅಮೆರಿಕದಲ್ಲೂ ಆರ್‌ಸಿಬಿ ಹವಾ..! ವೇದಿಕೆ ಮೇಲೆ ಜೆರ್ಸಿ ಹಾರಾಡಿದ ಬಾವುಟ..!
ಭಾರತದಲ್ಲಿ ಈಗ ಲೋಕಸಭೆ ಚುನಾವಣೆ ಕಾವಿನ ಜೊತೆ ಐಪಿಎಲ್ ಜ್ವರವೂ ಇದೆ. ಯುವ ಜನರ ನಿದ್ದೆಗೆಡಿಸಿರುವ ಈ ಲೀಗ್‌ನಲ್ಲಿ ಭರ್ಜರಿ ಆಟಕ್ಕೆ ಕ್ರೀಡಾ ಪ್ರೇಮಿಗಳು ಫಿದಾ ಆಗಿದ್ದಾರೆ. ಇನ್ನು ನೀವೇನಾದ್ರು ಆರ್‌ಸಿಪಿ ತಂಡದ ಅಭಿಮಾನಿಯಾಗಿದ್ದರೆ ಈ ವರ್ಷದ ಲೀಗ್ ನಿಮಗೆ ಮತ್ತಷ್ಟು ಕ್ರೇಜ್ ಹುಟ್ಟಿಸಿರುತ್ತೆ.
ಅದರಲ್ಲೂ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದರೆ ಅದು ಅರ್‌ಸಿಬಿ ತಂಡಕ್ಕೆ ಮಾತ್ರ. ಬೆಂಗಳೂರು ತಂಡಕ್ಕೆ ಚಿಕ್ಕ ಮಕ್ಕಳು ಸೇರಿದಂತೆ ಹಿರಿಯರು ಸಹ ಅಭಿಮಾನಿಗಳೇ. ವಿರಾಟ್ ಕೊಹ್ಲಿ ಆಟಕ್ಕೆ ಮನಸೋಲದವರೆ ಇಲ್ಲ. ಹೀಗಿರುವಾಗ ಇತ್ತೀಚಿನ ಎಲ್ಲಾ ಪಂದ್ಯಗಳ ಗೆಲ್ಲುತ್ತಿರುವ ಆರ್‌ಸಿಬಿ ಈ ವರ್ಷದ ಲೀಗ್‌ನಲ್ಲಿ ಮತ್ತೆ ಮರುಜೀವ ಪಡೆದಿದೆ.

ನಾವು ಮೊದಲೇ ಹೇಳಿದಂತೆ ಆರ್‌ಸಿಬಿಗೆ ವಿಶ್ವದ ಮೂಲೆ ಮೂಲೆಯಲ್ಲಿ ಫ್ಯಾನ್ಸ್ ಇದ್ದಾರೆ. ಈಗ ದೂರದ ಅಮೆರಿಕದಲ್ಲಿ ಆರ್‌ಸಿಬಿ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಈ ವಿಡಿಯೋವೊಂದು ವಿವರಿಸುತ್ತಿದೆ. ಕಾಲೇಜೊಂದರ ಪದವಿ ಪ್ರದಾನ ಸಮಾರಂಭದಲ್ಲಿ ಆರ್‌ಸಿಬಿಗೆ ಜೈಕಾರ ಕೇಳಿಬಂದಿದೆ.
ಭಾರತೀಯ ಮೂಲದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಪದವಿ ಪಡೆಯುವಾಗ ಆರ್‌ಸಿಬಿಗೆ ಜೈಕಾರ ಕೂಗಿದ್ದಾರೆ. ಅಮೆರಿಕದ ಯುನಿವರ್ಟಿಸಿಯಲ್ಲಿ ಪದವಿ ಪ್ರದಾನ ಮಾಡುವಾಗ ವಿದ್ಯಾರ್ಥಿಗಳು ಆರ್‌ಸಿಬಿಯ ಬಾವುಟ ಹಿಡಿದು ಜೈಕಾರ ಹಾಕಿರುವ ವಿಡಿಯೋ ಇದಾಗಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿಯ ನಿಷ್ಠಾವಂತ ಅಭಿಮಾನಿ, ಸುಗ್ಗಲಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸ್ ಫ್ಯಾನ್ ಆಗಿ ಆರ್ಸಿಬಿಯ ಜೆರ್ಸಿ ಪ್ರದರ್ಶಿಸಿದರು. ಈ ವಿಡಿಯೋ ಸಾಮಾಝಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಿಚಿಗನ್-ಡಿಯರ್ಬಾರ್ನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಮತ್ತು ಮಾಹಿತಿ ವಿಜ್ಞಾನದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಗಳಿಸಿದ ಸುಗ್ಗಲಾ, ತನ್ನ ಸ್ನಾತಕೋತ್ತರ ಪ್ರಮಾಣಪತ್ರವನ್ನು ಸ್ವೀಕರಿಸುವಾಗ ವೇದಿಕೆ ಮೇಲೆ ಆರ್‌ಸಿಬಿ ಜೆರ್ಸಿ ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಸುಗ್ಗಲಾ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನಗೆ ಧನ್ಯವಾದ ಹೇಳಿ, ಆರ್‌ಸಿಬಿಯನ್ಸ್ ನಾನು ನಿಮ್ಮನ್ನು ಯುಎಸ್ ವರೆಗೂ ಕರೆದೊಯ್ದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ 2 ಮಿಲಿಯನ್ ವೀಕ್ಷಣೆ ಬಂದಿದೆ. ಅಲ್ಲದೆ ಹಲವು ಕಡೆಗಳಲ್ಲಿ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ ಆರ್‌ಸಿಬಿ ಫ್ಯಾನ್ಸ್ ಜೈಕಾರ
ಈ ವಿಡಿಯೋ ವೈರಲ್ ಆದ ಬಳಿಕ ಆರ್‌ಸಿಬಿ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲೂ ಸಣ್ಣ ಫ್ರಾಂಚೈಸಿಯ ಪ್ರಸಿದ್ಧಿ ಕಂಡು ಅಭಿಮಾನಿಗಳು ಮತ್ತಷ್ಟು ಕ್ರೇಜ್‌ಗೆ ಒಳಗಾಗಿದ್ದಾರೆ. ಅದರಲ್ಲೂ ಸಾವಿರಾರು ಜನರ ಮುಂದೆ ವೇದಿಕೆ ಮೇಲೆ ಆರ್‌ಸಿವಿ ಭಾವುಟ ಹಾಗೂ ಜೆರ್ಸಿ ಪ್ರದರ್ಶಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಕೇಳಿಬಂದಿದೆ.
ಆರ್‌ಸಿಬಿ ಅಭಿಮಾನಿಗಳು ಇಡೀ ವಿಶ್ವದ ಮೂಲೆಯಲ್ಲೂ ಇದ್ದಾರೆ, ಇದು ಆರ್‌ಸಿಬಿಯ ತಾಕತ್ತು ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ರೀತಿ ಅಭಿಮಾನಿಗಳು ಆರ್‌ಸಿಬಿಗೆ ಬಿಟ್ಟು ಬೇರೆ ಯಾವ ತಂಡಕ್ಕೂ ಇಲ್ಲ. ನೀವು ಎಲ್ಲಿಯೇ ಹೋದರು ಅಲ್ಲೊಬ್ಬರು ಆರ್‌ಸಿಬಿ ಅಭಿಮಾನಿಯಾಗಿರುತ್ತಾರೆ ಎಂದು ನೆಟ್ಟಿಗರ ಅಭಿಪ್ರಾಯವಾಗಿದೆ.
ಈ ಬಾರಿಯ ಟೂರ್ಮಿಯಲ್ಲಿ ಆರ್‌ಸಿಬಿ ತಂಡ ಆರಂಭದಲ್ಲಿ ಸೋಲು ಕಂಡಿದ್ದರು, ಸತತವಾಗಿ ಮೂರು ಪಂದ್ಯಗಳ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ಪ್ಲೇ ಆಫ್ ತಲುಪುವುದು ಕಷ್ಟವಿದ್ದರೂ ತಂಡದ ಪ್ರದರ್ಶನ ಕಂಡು ಅಭಿಮಾನಿಗಳಂತು ಕುಣಿದಾಡುತ್ತಿದ್ದಾರೆ. ಇನ್ನುಳಿದ ಪಂದ್ಯದಲ್ಲಿ ಗೆಲುವು ಕಾಣಲು ಮುಂದಾಗಿರುವ ಆರ್‌ಸಿಬಿ ಈ ಬಾರಿ ಪ್ಲೇಆಫ್ ತಲುಪಲಿದ್ಯಾ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ದಾರಿ ಮಾತ್ರ ಕಠಿಣವಾಗಿದೆ.



Click it and Unblock the Notifications
