86ನೇ ವಸಂತಕ್ಕೆ ಕಾಲಿಟ್ಟ ರತನ್ ಟಾಟಾ..! ಟಾಟಾ ಬಗೆಗಿನ ಅಚ್ಚರಿಯ ವಿಚಾರಗಳಿವು..!

ರತನ್ ನೇವಲ್ ಟಾಟಾ, ಸಾಮಾನ್ಯವಾಗಿ ರತನ್ ಟಾಟಾ ಎಂದು ಕರೆಯಲ್ಪಡುವ ಇವರು ಹೆಸರನ್ನು ಕೇಳಿಲ್ಲ ಎನ್ನುವವರೇ ಇಲ್ಲ. ಭಾರತದ ಹಿರಿತ ಉದ್ಯಮಿ, ಟಾಟಾ ಸಂಸ್ಥೆ ಮುಖ್ಯಸ್ಥ ಇಂದಿಗೆ ತಮ್ಮ 86ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಣ್ಣ ಉದ್ಯಮವಾಗಿ ಆರಂಭಗೊಂಡಿದ್ದ ಟಾಟಾ ಈಗ ವಿಶ್ವದಲ್ಲೇ ಅತ್ಯಂತ ಬಲಶಾಲಿ ವಾಣಿಜ್ಯೋದ್ಯಮವಾಗಿ ಬೆಳೆದು ನಿಂತಿದೆ. ಟಾಟಾ ಎಲ್ಲಾ ಕ್ಷೇತ್ರದಲ್ಲೂ ಅಜಾನುಬಾಹುವಿನಂತೆ ಹರಡಿಕೊಂಡಿದೆ.

ರತನ್ ಟಾಟಾ ಕೇವಲ ಉದ್ಯಮಿಯಾಗಿ ಗುರುತಿಸಿಕೊಂಡವರಲ್ಲ. ಬದಲಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರು ಲೋಕೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ನವೆಂಬರ್ 28, 1937 ರಂದು ಜನಿಸಿದ ಅವರು ತಮ್ಮ ಅಜ್ಜಿ ನವಜಬಾಯಿ ಟಾಟಾ ಅವರೊಂದಿಗೆ ಬೆಳೆದರು.

Ratan Tata

ರತನ್ ಟಾಟಾ ಅವರಿಗೆ ಭಾರತದ ಎರಡು ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ. 2008ರಲ್ಲಿ ಪದ್ಮವಿಭೂಷಣ ಮತ್ತು 2000ದಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಅವರು ತಮ್ಮ ಸಂಪಾದನೆಯ ಬಹುಪಾಲನ್ನು ಸಾಮಾಜಿಕ ಕಾರ್ಯಗಳಿಗಾಗಿ ಮೀಸಲಿಡುತ್ತಾರೆ. ಈ ಉದ್ಯಮಿಯ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

1. ರತನ್ ನೇವಲ್ ಟಾಟಾ ಅವರು ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ಜಮ್ಸೆಟ್ಜಿ ಟಾಟಾ ಅವರ ಮರಿ ಮೊಮ್ಮಗ. ಅವರು ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ನೇವಲ್ ಟಾಟಾ ಮತ್ತು ಸೂನಿ ಟಾಟಾ ದಂಪತಿಗೆ ಜನಿಸಿದರು.

2. 1948ರಲ್ಲಿ ರತನ್ ಟಾಟಾ ಅವರ ಪೋಷಕರು ಬೇರ್ಪಟ್ಟ ನಂತರ ಅವರ ಅಜ್ಜಿ ನವಾಜಬಾಯಿ ಟಾಟಾ ರತನ್ ಟಾಟಾ ಅವರನ್ನು ಬೆಳೆಸಿದರು.

3. ನಾಲ್ಕು ಸಂದರ್ಭಗಳಲ್ಲಿ ಮದುವೆಯ ಮಾತುಕತೆ ಮುಗಿದು ಮದುವೆಗೆ ಹತ್ತಿರ ಬಂದರೂ ರತನ್ ಟಾಟಾ ಇನ್ನೂ ಮದುವೆಯಾಗಿಲ್ಲ.

4. ಲಾಸ್ ಏಂಜಲೀಸ್‌ನಲ್ಲಿ ಕೆಲಸ ಮಾಡುವಾಗ ತಾನು ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ಅವರು ಒಮ್ಮೆ ಒಪ್ಪಿಕೊಂಡರು. ಆದರೆ 1962 ಇಂಡೋ-ಚೀನಾ ಯುದ್ಧದ ಕಾರಣ, ಹುಡುಗಿಯ ಪೋಷಕರು ಭಾರತಕ್ಕೆ ತೆರಳಲು ನಿರಾಕರಿಸಿದರು ಎಂದು ಅವರೇ ಹೇಳಿದ್ದರು.

5. 1961ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರತನ್ ಟಾಟಾ ಅವರು ಟಾಟಾ ಸ್ಟೀಲ್‌ನ ಮೊದಲ ಮಳಿಗೆ ಆರಂಭಿಸಿದ್ದರು. ಇದಾದ ಬಳಿಕ ಟಾಟಾ ಸ್ಟೀಲ್ ಹೆಸರುವಾಸಿಯಾಯಿತು.

6. ಭಾರತೀಯ ಆರ್ಥಿಕತೆಯ ಉದಾರೀಕರಣವು ನಡೆಯುತ್ತಿರುವ ಸಮಯದಲ್ಲಿ ಅವರು ಟಾಟಾ ಸಮೂಹವನ್ನು ಪುನರ್ ರಚಿಸಲು ಪ್ರಾರಂಭಿಸಿದರು. ಟಾಟಾ ನ್ಯಾನೋ ಮತ್ತು ಟಾಟಾ ಇಂಡಿಕಾ ಸೇರಿದಂತೆ ಜನಪ್ರಿಯ ಕಾರುಗಳ ವ್ಯಾಪಾರ ವಿಸ್ತರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

7. ಅವರು ಟೆಟ್ಲಿಯನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಟೀಯನ್ನು ಪಡೆದರು, ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಮೋಟಾರ್ಸ್ ಮತ್ತು 2004 ರಲ್ಲಿ ಕೋರಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಸ್ಟೀಲ್ ಹುಟ್ಟುಹಾಕಿದ್ರು.

8. 2009 ರಲ್ಲಿ, ರತನ್ ವಿಶ್ವದ ಅತ್ಯಂತ ಅಗ್ಗದ ಕಾರನ್ನು ಮಧ್ಯಮ ವರ್ಗದವರಿಗೆ ನೀಡುವ ಭರವಸೆಯನ್ನು ಈಡೇರಿಸಿದರು. ₹ 1 ಲಕ್ಷ ಬೆಲೆಯ ಟಾಟಾ ನ್ಯಾನೋ ಹೊರತಂದು ಗಮನಸೆಳೆದರು.

9. 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರ ಪ್ರಕಾರ, ಎಕ್ಸ್‌ (ಟ್ವಿಟರ್)ನಲ್ಲಿ 12 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ರತನ್ ಟಾಟಾ ಅವರು ದೇಶದಲ್ಲಿ 'ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಉದ್ಯಮಿ' ಆಗಿದ್ದಾರೆ.

10. ಜಮ್ಸೆಟ್ಜಿ ಟಾಟಾ ಅವರ ಕಾಲದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತಾ, ರತನ್ ಟಾಟಾ ಅವರು ಟಾಟಾ ಸಮೂಹದ ಪ್ರಧಾನ ಕಚೇರಿಯಾದ ಬಾಂಬೆ ಹೌಸ್ ಬೀದಿನಾಯಿಗಳ ಸ್ವರ್ಗವಾಗಿ ಉಳಿಯುವಂತೆ ಮಾಡಿದರು. ಈ ಬೃಹತ್ ಕಟ್ಟಡವು ಬೀದಿನಾಯಿಗಳಿಗೆಂದೆ ಕೊಠಡಿ ಹೊಂದಿದ್ದು, ಈಗಲೂ ಈ ಕಚೇರಿಗಳು ನಾಯಿಗಳು ಕಂಡುಬರುತ್ತವೆ.

English summary

Ratan Tata Turns 86: Interesting Facts On India's Biggest Industrialist

Ratan Tata, one of India's most respected businessmen, turned 86 today. The Tata Sons Chairman is known not just for his contributions to the business world, Intriguing and lesser-known facts about Ratan Tata
Story first published: Thursday, December 28, 2023, 15:00 [IST]
X
Desktop Bottom Promotion