Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
Ramayana Movie: ರಾಮಾಯಣದಲ್ಲಿ ಯಶ್ ರಾವಣ ಆಗಿದ್ದೇಕೆ? ಸದ್ಗುರು ಪ್ರಶ್ನೆ!
ರಾಕಿಂಗ್ ಸ್ಟಾರ್ ಯಶ್ ಈf ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಬಳಿಕ ಯಶ್ ಅದೃಷ್ಟ ಬದಲಾಗಿದೆ. ಕನ್ನಡದ ಮೊದಲ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ ಕೆಜಿಎಫ್ ಆಗಿತ್ತು. ಇದಾದ ಬಳಿಕ ಯಶ್ ಈಗ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಸಾವಿರ ಕೋಟಿ ಕ್ಲಬ್ ಸೇರಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರವಾಗಿದೆ.
ಟಾಕ್ಸಿಕ್ ಸಿನಿಮಾ ಬಳಿಕ ಅವರು ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ರಾಮಾಯಣದಲ್ಲಿ ನಟಿಸಲಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿದ್ದು ಇದು ಕೂಡ ಭಾರೀ ಕುತೂಹಲ ಮೂಡಿಸುತ್ತಿರುವ ಪ್ರಾಜೆಕ್ಟ್ ಆಗಿದೆ. ಆದ್ರೆ ರಾವಣ ಪಾತ್ರ ಒಪ್ಪಿಕೊಂಡ ಯಶ್ ಕುರಿತಾದ ಅಸಮಾಧಾನಗಳು ಮುಂದುವರೆದಿದೆ.

ನಾಯಕನಾಗಿ ಕಾಣಿಸಿಕೊಂಡ ಯಶ್ ಈಗ ರಾವಣನಾಗಿ ನಟಿಸಲು ಮುಂದಾಗುತ್ತಿರುವುದು ಹಲವರಲ್ಲಿ ಅಸಮಾಧಾನ ತರಿಸಿತ್ತು. ಹಾಗೆ ಈಗ ಸದ್ಗುರು ಸಹ ಯಶ್ ರಾವಣ ಪಾತ್ರ ಮಾಡುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಆಧ್ಯಾತ್ಮಿಕ ಚಿಂತಕ ಸದ್ಗುರು ಜಗ್ಗಿ ವಾಸುದೇವ್ ಅವರು ನಟ ಯಶ್ ರಾವಣ ಪಾತ್ರ ಮಾಡುತ್ತಿರುವುದಕ್ಕೆ ಅಚ್ಚರಿ ಹೊರಹಾಕಿದ್ದಾರೆ.
ಸದ್ಗುರು ಮತ್ತು ನಮಿತ್, ಸದ್ಗುರು ಮತ್ತು ವರ್ಲ್ಡ್ ಆಫ್ ರಾಮಾಯಣದ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಸಂಭಾಷಣೆಯ ಸಮಯದಲ್ಲಿ ರಾವಣನ ಕುರಿತು ಚರ್ಚಿಸುವಾಗ ಈ ಕುರಿತು ಅಭಿಪ್ರಾಯ ಹೊರಹಾಕಿದ್ದಾರೆ. ನಾವು ಈ ಇಡೀ ಬ್ರಹ್ಮಾಂಡದ ಸ್ಥಾಪನೆಯ ಮೂಲಕ ಹೋಗುತ್ತಿರುವಾಗ, ಅದು ಪಾತ್ರವರ್ಗದ ವಿಷಯದಲ್ಲಿ ಬಹಳ ಮುಖ್ಯವಾದ ಭಾಗವೆಂದು ಭಾವಿಸಿದೆ. ವಾಸ್ತವವಾಗಿ ಆದರ್ಶ ರಾವಣ ಯಾರು ಎಂದು ನಾನು ಹುಡುಕುತ್ತಿದ್ದೆ ಎಂದು ಸದ್ಗುರು ಹೇಳಿದ್ದಾರೆ.
ಆದ್ರೆ ಯಶ್ ಹೇಗೆ ರಾವಣನಾದನು ಎಂದು ನನಗೆ ತಿಳಿದಿಲ್ಲ. ಖಳನಾಯಕ ಎಂದರೆ ಆತ ಮೊಂಡಾದ ಮೂಗು, ದೊಡ್ಡ ನಿಲುವು, ಆದ್ರೆ ಯಶ್ ಒಬ್ಬ ಸುಂದರ ವ್ಯಕ್ತಿ ಎಂದು ಸದ್ಗುರು ಹೇಳಿದರು.
ಈ ಅಚ್ಚರಿಯ ಮಾತು ಕೇಳಿದ ನಮಿತ್ ಪ್ರತಿಕ್ರಿಯಿಸುತ್ತಾ, ' ಆ ಪಾತ್ರವನ್ನು ನಿರ್ವಹಿಸಲು ನಾವು ಸೂಪರ್‌ಸ್ಟಾರ್ ಮಟ್ಟದ ವ್ಯಕ್ತಿಯನ್ನು ಹುಡುಕುತ್ತಿದ್ದ ಕಾರಣ ಇದು. ಅವರು ತುಂಬಾ ಸುಂದರ ಮತ್ತು ದೇಶದ ಅತ್ಯಂತ ಪ್ರತಿಭಾನ್ವಿತ ನಟ, ಮತ್ತು ಸಿನಿಮಾವನ್ನು ನಂಬಲಾಗದಷ್ಟು ಪ್ರೀತಿಸುತ್ತಿದ್ದರು. ಅವರು ಈ ಪಾತ್ರಕ್ಕೆ ಸೂಕ್ತ ಎನಿಸಿದ್ದರು ಹೀಗಾಗಿ ಆಯ್ಕೆ ಮಾಡಿಕೊಂಡೆವು ಎಂದು ನಿರ್ಮಾಪಕರು ಹೇಳಿದರು.
ರಾಮನ ಪಾತ್ರದ ಬಗ್ಗೆ ಸದ್ಗುರು ಹೇಳಿದ್ದೇನು?
ಇದೇ ಸಿನಿಮಾದಲ್ಲಿ ರಾಮನ ಪಾತ್ರವನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ನಿರ್ವಹಿಸುತ್ತಿದ್ದಾರೆ. ಅವರು ಹಿಂದೆ ಯಾವುದೋ ರೀತಿಯಲ್ಲಿ ನಟಿಸಿದ್ದಾರೆ ಎಂಬ ಕಾರಣಕ್ಕೆ ಇದು ನ್ಯಾಯಯುತ ತೀರ್ಪು ಅಲ್ಲ. ನಾಳೆ ಇನ್ನೊಂದು ಚಿತ್ರದಲ್ಲಿ ಅವರು ರಾವಣನಾಗಿ ನಟಿಸಬಹುದು. ಅದು ವೃತ್ತಿಪರತೆ. ಆದರೆ ಅದೇ ಸಮಯದಲ್ಲಿ ನಿಮ್ಮ ಚಿತ್ರವು ನಟರು ಅಥವಾ ನಿರ್ದೇಶಕರಿಂದಲ್ಲ ಬದಲಾಗಿ ಜನರ ಕಾರಣದಿಂದಾಗಿ ಓಡುತ್ತದೆ. ಹೀಗಾಗಿ ರಾಮಾಯಣ ಸಿನಿಮಾ ಮಾಡುವ ಮಂದಿ ಸ್ವಲ್ಪವಾದರು ರಾಮನನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ನಟ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ವಿವೇಕ್ ಒಬೆರಾಯ್, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ರವಿ ದುಬೆ, ಕುನಾಲ್ ಕಪೂರ್, ಅರುಣ್ ಗೋವಿಲ್ ಸೇರಿ ಹಲವರು ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾ ಭರದಿಂದ ಶೂಟಿಂಗ್ ನಡೆಯುತ್ತಿದೆ. ಮುಂದಿನ ವರ್ಷ ನವೆಂಬರ್‌ನಲ್ಲಿ ತೆರೆ ಮೇಲೆ ಬರಲು ಸಿದ್ದತೆ ನಡೆಸಿದೆ.



Click it and Unblock the Notifications