Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮ ನವಮಿ: ಅಯೋಧ್ಯೆಯಲ್ಲಿ ಪ್ರಸಾದಕ್ಕೆ 1,11,11ಕೆಜಿ ಲಡ್ಡು, 3 ದಿನಗಳು ವಿಐಪಿ ದರ್ಶನ ಇರಲ್ಲ
ಈ ವರ್ಷ ಜನವರಿ 22ಕ್ಕೆ ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಮಾಡಲಾಯ್ತು. ಅಯೋಧ್ಯೆ ಮಂದಿರ ಓಪನ್ ಆದ ಮೇಲೆ ಇದು ಮೊದಲ ರಾಮ ನವಮಿ.
ರಾಮ ನವಮಿಯನ್ನು ದೇಶದ ಮೂಲೆ ಮೂಲೆಯಲ್ಲಿ ಸಡಗರದಿಂದ ಆಚರಿಸುವಾಗ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯ ಸಂಭ್ರಮ ಹೇಳಬೇಕೆ? ಇಡೀ ಅಯೋಧ್ಯೆ ನವ ವಧುವಿನಂತೆ ಸಿಂಗಾರ ಗೊಂಡಿದೆ. ಅಯೋಧ್ಯೆ ರಾಮ ಮಂದಿರ ರಾಮ ನವಮಿ ಉತ್ಸವವನ್ನು ಲೈವ್‌ನಲ್ಲಿಯೂ ಕಣ್ತುಂಬಿಕೊಳ್ಳಬಹುದು.

ಭಕ್ತರಿಗೆ ನೀಡಲು ಬಂದಿದೆ 1,11,11ಕೆಜಿ ಲಡ್ಡು
ರಾಮ ನವಮಿಯಂದು ಭಕ್ತರಿಗೆ ಪ್ರಸಾದವಾಗಿ ನೀಡಲು 1,11,11ಕೆಜಿ ಲಡ್ಡು ತಯಾರಿಸಲಾಗಿದೆ ಎಂದು ದೇವ್ರಹ ಹನ್ಸ್ ಬಾಬಾ ಟ್ರಸ್ಟ್ ನ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ ಹೇಳಿದ್ದಾರೆ.
ಏಪ್ರಿಲ್ 19ರವರೆಗೆ ವಿಐಪಿ ದರ್ಶನ ಇರುವುದಿಲ್ಲ
ರಾಮನವಮಿ ಕಾರಣ ತುಂಬಾ ರಶ್ ಇರುವುದರಿಂದ ವಿಐಪಿ ದರ್ಶನ ಇರುವುದಿಲ್ಲ ಎಂದು ದೇವಾಲಯದ ಟ್ರಸ್ಟ್ ಹೇಳಿದೆ. ಏಪ್ರಿಲ್ 19ರ ನಂತರ ವಿಐಪಿ ದರ್ಶನ ಇರಲಿದೆ, ಅದರೊಳಗೆ ಯಾರಾದರೂ ಬಂದರೆ ಅವರು ಕ್ಯೂನಲ್ಲಿ ನಿಂತೇ ದೇವರ ದರ್ಶನ ಮಾಡಬೇಕೆಂದು ಟ್ರಸ್ಟ್ ಹೇಳಿದೆ.
ದೇವಾಲಯದ ಬಾಗಿಲು ಬೆಳಗ್ಗೆ 3.30ಕ್ಕೆ ತೆರೆಯಲಿದೆ. ಇಡೀ ದಿನ ತೆರೆದಿರಲಿದೆ, ಆದರೆ ಪ್ರಸಾದ ನೀಡುವಾಗ, ದೇವರ ವಸ್ತ್ರ ಬದಲಾಯಿಸುವಾಗ ಮಾತ್ರ ಸ್ವಲ್ಪ ಹೊತ್ತು ಮುಚ್ಚಿರಲಿದೆ, ಈ ಸಮಯದಲ್ಲಿ ಲೈವ್ ಇರಲ್ಲ, ಉಳಿದ ಸಮಯದಲ್ಲಿ ದೂರದರ್ಶನದಲ್ಲಿ ಲೈವ್ ಇರಲಿದೆ.
ಏಪ್ರಿಲ್ 16 ಹಾಗೂ ಏಪ್ರಿಲ್ 18ರಂದು ರಾತ್ರಿ 11ರವರೆಗೆ ದೇವರ ದರ್ಶನ ಮಾಡಬಹುದು. ಉಳಿದ ಸಮಯದಲ್ಲಿಯೇ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಈ ವಿಶೇಷ ದಿನದಲ್ಲಿ ಭಕ್ತರ ಸಂಖ್ಯೆ ಇನ್ನೂ ಅಧಿಕವಿರಲಿದೆ. ರಾಮ ಮಂದಿರ ಡಿಸೆಂಬರ್‌ರಷ್ಟರಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.
ಪ್ರತಿತಿನಿತ್ಯವೂ ರಾಮ ಮಂದಿರ ಪೂಜೆಯ ಲೈವ್ ವೀಕ್ಷಿಸಬಹುದು
ರಾಮ ನವಮಿಯಂದು ಇಡೀ ದಿನ ಲೈವ್ ಇದೆ. ಉಳಿದ ದಿನಗಳಲ್ಲಿಯೂ ಭಕ್ತರು ಶ್ರೀರಾಮ ಮಂದಿರ ಪೂಜೆಯನ್ನು ಲೈವ್‌ನಲ್ಲಿ ಮಾಡಬಹುದು. ರಾಮಲಲ್ಲಾ ಭಕ್ತರು ಪ್ರತಿದಿನ ಅಯೋಧ್ಯೆಯಿಂದ ನೇರವಾಗಿ ಆರತಿಯ ಮಾಡುವುದನ್ನು ಕಣ್ತುಂಬಿಕೊಳ್ಳಬಹುದು. ದೂರದರ್ಶನ ನ್ಯಾಷನಲ್ ಚಾನಲ್‌ನಲ್ಲಿ ಪ್ರತಿದಿನ ಬೆಳಗ್ಗೆ 6:30ಕ್ಕೆ ರಾಮ ಮಂದಿದಲ್ಲಿ ಆರತಿ ಮಾಡುವುದನ್ನು ನೇರ ಪ್ರಸಾರ ಮಾಡಲಾಗುವುದು. ಏಪ್ರಿಲ್ 16ರಂದು ಇಡೀ ದಿನ ನೇರ ಪ್ರಸಾರದಲ್ಲಿ ಅಯೋಧ್ಯೆಯ ರಾಮ ಮಂದಿರ ಕಣ್ತುಂಬಿಕೊಳ್ಳಬಹುದು.
ಶ್ರೀರಾಮ ಮಂದಿರದಲ್ಲಿ ಕಲಶಾಭಿಷೇಕ ಮಾಡಿಸಲು ಈ ಅರ್ಹತೆ ಇರಬೇಕು?
ಇಲ್ಲಿ ದುಡ್ಡಿದ್ದರೆ ಕಲಶಾಭಿಷೇಕ ಮಾಡಲು ಸಾಧ್ಯವಿಲ್ಲ? ಇಲ್ಲಿ ಕಲಶಾಭಿಷೇಕ ಮಾಡಲು ಕೆಲವು ಮಾನದಂಡಗಳನ್ನು ಟ್ರಸ್ಟ್ ವಿಧಿಸಿದೆ. ಸಮಾಜಸೇವೆ ಮಾಡಿದವರಿಗೆ ಮಾತ್ರ ಕಲಶಾಭಿಷೇಕ ಮಾಡಲು ಅವಕಾಶ ಇದೆ. ಕಲಶಾಭಿಷೇಕ ಮಾಡಬೇಕಾದರೆ ಅವರು ಸಮಾಜಕ್ಕೆ ಏನಾದರೂ ಸೇವೆ ಮಾಡಿರಬೇಕು.
ಸಮಾಜಸೇವೆ ಹೇಗಿರಬೇಕು ಎಂಬುದನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀಥ೯ ಸ್ವಾಮೀಜಿ ವಿವರಿಸಿದ್ದಾರೆ.
ಕಲಶಾಭಿಷೇಕಕ್ಕೆ ಒಂದು ಲಕ್ಷ ರುಪಾಯಿ ಮೊತ್ತ ನೀಡಬೇಕು. ಯಾರು ಈ ಪೂಜೆಯನ್ನು ಮಾಡುತ್ತಾರೋ ಅವರು ಸಮಾಜಕ್ಕೆ 10 ಲಕ್ಷಕ್ಕೂ ಅಧಿಕ ಮೌಲ್ಯದ ಸೇವೆ ಮಾಡಿರಬೇಕು. 2023-24 ನೇ ಸಾಲಿನಲ್ಲಿ ಇಂಥ ಸಾಮಾಜಿಕ ಸೇವಾ ಕಾಯ೯ ಮಾಡಿದ್ದಾಗಿರಬೇಕು.
ಯಾವ ಸಮಾಜಸೇವೆ ಮಾಡಿದ್ದೇವೆ ಎಂದು ಎಂದು ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣ ಪತ್ರ ತರಬೇಕು. ಹೀಗಿದ್ದರೆ ಮಾತ್ರ ಅಂಥವವರಿಗೆ ಶ್ರೀರಾಮನಿಗೆ ಕಲಶಾಭಿಷೇಕ ಮಾಡಲು ಅವಕಾಶ ಸಿಗಲಿದೆ. ಕಸಾಶಾಭಿಷೇಕ ಮಾಡಿಸಿದವರು ಸೇವೆ ಮುಗಿದ ಬಳಿಕ ಕಳಸವನ್ನು ಮನೆಗೆ ಕೊಂಡೊಯ್ದು ಮನೆಯಲ್ಲಿ ಪ್ರಸಾದ ರೂಪದಲ್ಲಿ ಶಾಶ್ವತವಾಗಿ ಕಲಶ ಇಟ್ಟುಕೊಳ್ಳಬಹುದು.
ಯಾರು ಸಮಾಜದಲ್ಲಿ ಜನೋಪಯೋಗಿ ಸೇವೆಗಳನ್ನು ಮಾಡಿರುತ್ತಾರೋ ಯಾರು ಸಮಾಜಸೇವಾ ಮಾಡಿರುತ್ತಾರೋ ಅಂಥ ಜನಸೇವಕರಿಗೆ ಮಾತ್ರ ಶ್ರೀರಾಮನಿಗೆ ಕಲಶಾಭೀಷೇಕಕ್ಕೆ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ರೀತಿಯಲ್ಲಿಯೂ ಹರಕೆ ಅಥವಾ ಇತರ ಸೇವೆಗಳು ಶ್ರೀರಾಮ ದೇವಾಲಯದಲ್ಲಿ ಇಲ್ಲ.
ಈ ಹಣ ಕೂಡ ಸಮಾಜದ ಕಲ್ಯಾಣಕ್ಕೆ ಉಪಯೋಗವಾಗುತ್ತದೆ. ಈ ಹಣದಲ್ಲಿ ಬಡವರಿಗೆ ಮನೆ, ಶಾಲೆ, ಆಸ್ಪತ್ರೆ ನಿರ್ಮಿಸಲಾಗುವುದು. ಗೋವುಗಳನ್ನು ದತ್ತು ಪಡೆದು ಸುಸಜ್ಜಿತತ ಗೋಶಾಲೆ ನಿರ್ಮಿಸಿ ಅವುಗಳ ಆರೈಕೆ ಮಾಡಲಾಗುವುದು.



Click it and Unblock the Notifications