Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಳೆ ರಾಮಮಂದಿರ ಧ್ವಜಾರೋಹಣ; ಸಂಪೂರ್ಣ ಕಾರ್ಯಕ್ರಮದ ವಿಶೇಷತೆ ಇಲ್ಲಿವೆ!
ಅಯೋಧ್ಯೆ ರಾಮ ಮಂದಿರ ಈಗ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಬದಲಾಗಿದೆ. ಕಳೆದ ವರ್ಷ ಜನವರಿ 22ರಂದು ದೇವಾಲಯವನ್ನು ಉದ್ಘಾಟಿಸಲಾಗಿತ್ತು. ಇದಾದ ಬಳಿಕ ಲಕ್ಷಾಂತರ ಮಂದಿ ನಿತ್ಯವೂ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಆಗಮಿಸಿದ್ದಾರೆ. ಹಾಗೆ ದೇವಾಲಯದಲ್ಲಿ ಹಲವು ಪ್ರಮುಖ ಆಚರಣೆಗಳನ್ನು ಸಹ ನೋಡಿದ್ದೇವೆ.
ಆದ್ರೆ ದೇವಾಲಯ ಆ ಸಮಯಕ್ಕೆ ಸಂಪೂರ್ಣ ನಿರ್ಮಾಣವಾಗಿರಲಿಲ್ಲ. ಉದ್ಘಾಟನೆಗೊಂಡು ವರ್ಷದ ಬಳಿಕ ಈಗ ಸಂಪೂರ್ಣವಾಗಿ ಕಾಮಗಾರಿ ಮುಗಿದಿದೆ. ಹಾಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಮಾರಂಭಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ.

ರಾಮಲಲ್ಲಾ ಗರ್ಭಗುಡಿಗೆ ಮರುದಿನ 16 ಗಂಟೆಗಳಿಗೂ ಹೆಚ್ಚು ಕಾಲ ಪ್ರವೇಶವಿರುತ್ತದೆ. 'ರಾಮ ಭಾರಾತ' ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೊಸದಾಗಿ ನಿರ್ಮಿಸಲಾದ ದೇವಾಲಯದ 191 ಅಡಿ ಎತ್ತರದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ.
'ರಾಮ್ ಬಾರಾತ್' ಮೆರವಣಿಗೆ ಮತ್ತು ಸಂಬಂಧಿತ ಕಾರ್ಯಕ್ರಮಗಳು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಭಕ್ತರಿಗೆ ತೊಂದರೆಯಿಲ್ಲದ ದರ್ಶನಕ್ಕೆ ಅವಕಾಶ ಕಲ್ಪಿಸಲು ದರ್ಶನದ ಸಮಯವನ್ನು 16 ಗಂಟೆಗೆ ಹೆಚ್ಚಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಸಂಕೀರ್ಣದಲ್ಲಿರುವ ಏಳು ದೇವಾಲಯಗಳಲ್ಲಿನ ಧ್ವಜಗಳು ತ್ರಿಕೋನಾಕಾರದಲ್ಲಿರುತ್ತವೆ, ಓಂ ಚಿಹ್ನೆಯನ್ನು ಮಾತ್ರ ಹೊಂದಿರುತ್ತವೆ ಮತ್ತು ಮುಖ್ಯ ದೇವಾಲಯದ ಧ್ವಜಕ್ಕಿಂತ ಚಿಕ್ಕದಾಗಿರುತ್ತವೆ. ಹಾಗೆ ಧ್ವಜಾರೋಹಣದ ಎರಡು ಪ್ರಾಯೋಗಿಕ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿವೆ. ಎಲ್ಲಾ ದೇವಾಲಯದ ಶಿಖರಗಳ ಮೇಲಿನ ಧ್ವಜಗಳು ಶಾಶ್ವತವಾಗಿ ಅಲ್ಲಿಯೇ ಉಳಿಯುತ್ತವೆ ಮತ್ತು ಅವುಗಳನ್ನು ಬದಲಿಸುವ ದೃಷ್ಟಿಯಿಂದ ಮಾತ್ರವೇ ಕೆಳಗಿಳಿಸಲಾಗುತ್ತದೆ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಬದಲಾಯಿಸಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ.
ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ
ಧ್ವಜಾರೋಹಣ ಬಳಿಕ ದೇವಾಲಯದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಈ ವಿಶೇಷ ಸಂದರ್ಭದಲ್ಲಿ ಶ್ರೀರಾಮನಿಗೆ ಆರತಿ, ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಲಿದೆ. ಶ್ರೀರಾಮ ಮತ್ತು ಸೀತೆಯ ವಿವಾಹ ಸಮಾರಂಭದ ವಾರ್ಷಿಕೋತ್ಸವವಾದ್ದರಿಂದ ಅಯೋಧ್ಯೆಗೆ ಅತ್ಯಂತ ಪವಿತ್ರ ದಿನ. ಅಯೋಧ್ಯೆಯಲ್ಲಿ ವಿವಾಹ ಪಂಚಮಿ ಎಂದು ಆಚರಿಸಲಾಗುತ್ತದೆ. ಬೆಳಿಗ್ಗೆ 11:58 ರಿಂದ ಮಧ್ಯಾಹ್ನ 1 ರ ವರೆಗೆ ಶುಭ ಸಮಯವೆಂದರೆ ಅದು ಕುಂಭ ಲಗ್ನ. ಈ ಸಮಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ದೇವಾಲಯದ ಆವರಣದಲ್ಲಿರುವ ಎಲ್ಲಾ ದೇವಾಲಯಗಳಲ್ಲೂ ಈ ದಿನ ಪೂಜೆ ಇರಲಿದೆ.
ಕೇಸರಿ ಧ್ವಜದ ವಿಶೇಷತೆ ಏನು?
ರಾಮ ಮಂದಿರ ಸೇರಿ ಅಲ್ಲಿರುವ ಎಲ್ಲಾ 7 ದೇವಾಲಯದ ಮೇಲೆ ಹಾರಾಡುವ ಕೇಸರಿ ಧ್ವಜ ಶಾಶ್ವತವಾಗಿ ಇರಲಿದೆ. ಈ ಧ್ವಜ ನಿರ್ಮಾಣಕ್ಕೆ 25 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ. ಹಾಗೆ ಮೂರು ಪದರದ ಬಟ್ಟೆಗಳ ಬಳಸಿ ಇದನ್ನು ಮಾಡಲಾಗಿದೆ. ಹಾಗೆ ಎಲ್ಲಾ ವಸ್ತುವನ್ನು ಸ್ಥಳೀಯರಿಂದಲೇ ಖರೀದಿಸಲಾಗಿದೆ. ರೇಷ್ಮೆ ಅಂಚುಗಳು, ಹಾಗೆ ಮಧ್ಯದಲ್ಲಿ ಓಂ ಅನ್ನು ಕೈಯಿಂದ ಬಿಡಿಸಲಾಗಿದೆ. ಈ ಓಂ ಅಕ್ಷರ ಬರೆಯಲು 7ರಿಂದ 8 ದಿನಗಳ ಸಮಯ ತೆಗೆದುಕೊಳ್ಳಲಾಗಿದೆ. ಅಲ್ಲಿನ ಸ್ಥಳೀಯ ಕಲಾವಿದರಾದ ಕಶ್ಯಪ್ ಮೇವಾಡ ಈ ಧ್ವಜವನ್ನು ನಿರ್ಮಿಸಿ ದೇವಾಲಯಕ್ಕೆ ನೀಡಿದ್ದಾರೆ.
ಸದ್ಯ ನಾಳೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನಡೆಸಲಿದ್ದಾರೆ. ಹಾಗೆ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗುತ್ತಿದ್ದಾರೆ.



Click it and Unblock the Notifications