ಅಕ್ಟೋಬರ್ 30ಕ್ಕೆ ರಾಹು ಸಂಚಾರ: 12 ರಾಶಿಗಳ ಮೇಲೆ ದೀರ್ಘ ಸಮಯ ಇರಲಿದೆ ಈ ಪ್ರಭಾವ

ನವಗ್ರಹಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹವೆಂದರೆ ಶನಿ, ಅದಾದ ಬಳಿಕ ರಾಹು-ಕೇತು. ರಾಹುವಿನ ಫಲ ಕೂಡ ಶನಿ ಕೂಡ ತುಂಬಾ ತೀವ್ರವಾಗಿರುತ್ತದೆ. ರಾಹು ಹಿಮ್ಮುಖ ಚಲನೆ ಮಾಡುವ ಗ್ರಹವಾಗಿದ್ದು ಇದೀಗ ಮೇಷ ರಾಶಿಯಲ್ಲಿರುವ ರಾಹು ಅಕ್ಟೋಬರ್‌ 30ಕ್ಕೆ ಮೀನ ರಾಶಿಗೆ ಪ್ರವೇಶ ಮಾಡಲಿದೆ.

ರಾಹುವಿನ ಪ್ರಭಾವ ಅದು ಶುಭವಾಗಲಿ, ಅಶುಭವಾಗಲಿ ಇದರ ಫಲ ದೀರ್ಘವಾಗಿರುತ್ತದೆ. ರಾಹು ಮೀನ ರಾಶಿಗೆ ಸಂಚರಿಸಿದಾಗ ಅದರ ಪ್ರಭಾವಗಳು ದೀರ್ಘ ಸಮಯ ಇರಲಿದೆ. ರಾಹು ಮೀನ ರಾಶಿಯಲ್ಲಿರುವಾಗ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

Rahu Gochar On Octobe 30

ಮೇಷ ರಾಶಿ
ರಾಹು ಮೀನ ರಾಶಿಗೆ ಪ್ರವೇಶ ಮಾಡಿದಾಗ ಮೇಷ ರಾಶಿಯಲ್ಲಿ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮಗೆ ವಿದೇಶ ಪ್ರಯಾಣದ ಯೋಗವಿದೆ. ಈ ಅವಧಿಯಲ್ಲಿ ಖರ್ಚುಗಳು ಹೆಚ್ಚಿರಲಿದೆ, ಆದರೆ ಆ ಖರ್ಚುಗಳು ನಿಮಗೆ ಉತ್ತಮ ಫಲ ನೀಡುವುದು, ನೀವು ಬಯಸಿದ್ದನ್ನು ಸಾಧಿಸಲು ಸಾಧ್ಯವಾಗುವುದು. ರಾಹು ನಿಮ್ಮ ರಾಶಿಯಲ್ಲಿದ್ದಾಗ ಹಲವು ಅಡಚಣೆಗಳನ್ನು ಎದುರಿಸಬೇಕಾಗುತ್ತು, ಅದು ಈ ಅವಧಿಯಲ್ಲಿ ಕೊನೆಯಾಗಲಿದೆ.
ಪರಿಹಾರ: ನೀವು ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು.

ವೃಷಭ ರಾಶಿ
ಅಕ್ಟೋಬರ್ 30ರಿಂದ ರಾಹು ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ರಾಹು ನಿಮಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ಮಹತ್ವಾಕಾಂಕ್ಷೆಗಳು ಈಡೇರಲಿದೆ. ನಿಮ್ಮ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ. ನೀವು ರಾಜಕೀಯ ಕ್ಷೇತ್ರದಲ್ಲಿದ್ದರೆ ಯಶಸ್ಸು ಪಡೆಯುತ್ತೀರಿ.
ಪರಿಹಾರ: ರಾಹು ಗ್ರಹದ ಅನುಗ್ರಹವನ್ನು ಪಡೆಯಲು ನೀವು ರಾಹು ಮಂತ್ರಗಳನ್ನು ಜಪಿಸಬೇಕು.

ಮಿಥುನ ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ ಹತ್ತನೇ ಮನೆಯಲ್ಲಿ ಇರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳ ಸಾಧ್ಯತೆಗಳಿವೆ ಆದರೆ ನಿಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ನೀವು ಯಶಸ್ಸು ಪಡೆಯಲು ಸಾಧ್ಯವಾಗುವುದು. ನಿಮ್ಮ ಕೆಲಸವು ಗುರುತಿಸಲ್ಪಡುವುದು. ಆದರೆ ಕೌಟುಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು ಅದರ ಕಡೆಗೆ ಗಮನಹರಿಸಬೇಕು. ಕೆಲಸದ ಜೊತೆ ಕುಟುಂಬದ ಕಡೆಗೂ ಗಮನಹರಿಸಿ, ಇಲ್ಲದಿದ್ದರೆ ಸಮಸ್ಯೆಯಾಗಬಹುದು.
ಪರಿಹಾರ: ಬುಧವಾರದಂದು ಹಸುವಿಗೆ ಹಸಿರು ಮೇವು ನೀಡಿದರೆ ಒಳ್ಳೆಯದಿದ್ದರೆ ಇಲ್ಲದಿದ್ದರೆ ರಾಹು ಮಂತ್ರ ಪಠಿಸಿ.

ಕರ್ಕ ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ 9ನೇ ಮನೆಗೆ ಬರಲಿದೆ. ಈ ಅವಧಿಯಲ್ಲಿ ದೂರ ಪ್ರಯಾಣದ ಸಾದ್ಯತೆ ಇದೆ. ವಿದೇಶ ಹೋಗಲು ಬಯಸಿದರೆ ಆ ದಿಕ್ಕಿನಲ್ಲಿ ಪ್ರಯತ್ನ ಮಾಡಿದರೆ ಖಂಡಿತ ಫಲ ಸಿಗಲಿದೆ. ಈ ಅವಧಿಯಲ್ಲಿ ತಂದೆಯೊಂದಿಗೆ ಸಂಬಂಧ ಹಾಳಾಗಬಹುದು, ಆದ್ದರಿಂದ ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಪರಿಹಾರ: ಬೀದಿ ನಾಯಿಗಳಿಗೆ ಹಾಲು, ಬಿಸ್ಕೆಟ್ ನೀಡಿ.

ಸಿಂಹ ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತಾನೆ. ಈ ಸಮಯವು ನಿಮ್ಮ ಆರೋಗ್ಯ ಮತ್ತು ನಿಮ್ಮ ಕೆಲಸದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನಹರಿಸಿ. ಬೇರೆಯವರ ವಾಹನ ಓಡಿಸಬೇಡಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಎಲ್ಲಾದರೂ ಹಣ ಹೂಡಿಕೆ ಮಾಡುವ ಮುನ್ನ ತುಂಬಾನೇ ಆಲೋಚಿಸಿ ಮಾಡಬೇಕು. ಏಕೆಂದರೆ ಈ ಅವಧಿಯಲ್ಲಿ ಹಣ ನಷ್ಟವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಹಣವನ್ನು ಯಾರಿಗೂ ಸಾಲವಾಗಿ ನೀಡಿ, ನೀಡಿದರೆ ಹಿಂತಿರುಗಿ ಬರುವ ಸಾಧ್ಯತೆ ಕಡಿಮೆ.
ಪರಿಹಾರ: ನಿಮ್ಮ ಜೀವನದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಭಾನುವಾರದಂದು ರುದ್ರಾಭಿಷೇಕ ಮಾಡಿಸಿ.

ಕನ್ಯಾ ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ ಏಳನೇ ಮನೆಗೆ ಪ್ರವೇಶಿಸು. ರಾಹು 7ನೇ ಮನೆಯಲ್ಲಿ ಇರುವಾಗ ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಹಾಗೂ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಂಗಾತಿಯ ನಡುವೆ ಭಿನ್ನಾಭಿಪ್ರಾಯವಾದರೆ ಮುಕ್ತ ಮಾತನಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದು.
ಪರಿಹಾರ: ನೀವು ಬುಧ ಬೀಜಮಂತ್ರ ಪಠಿಸಿ.

ತುಲಾ ರಾಶಿ
ರಾಹು ಮೀನ ರಾಶಿಯಲ್ಲಿರುವಾಗ ನಿಮ್ಮ ರಾಶಿಯಲ್ಲಿ 6ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಸಸ್ಸು ಪಡೆಯುತ್ತೀರಿ. ನಿಮ್ಮ ವಿರೋಧಿಗಳ ಮೇಲೆ ನೀವು ಮೇಲುಗೈ ಸಾಧಿಸುವಿರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಿದ್ದರೆ ನೀವು ಯಶಸ್ಸನ್ನು ಪಡೆಯುತ್ತೀರಿ.
ಪರಿಹಾರ: ಶುಕ್ರವಾರದಂದು ದೇವರಿಗೆ ಸೌಂದರ್ಯವರ್ಧಕ ಅರ್ಪಿಸಿ ಚಿಕ್ಕ ಹೆಣ್ಣು ಮಕ್ಕಳಿಗೆ ಅದನ್ನು ನೀಡಿ.

ವೃಶ್ಚಿಕ ರಾಶಿ
ಅಕ್ಟೋಬರ್ 30 ರಂದು ನಿಮ್ಮ ಐದನೇ ಮನೆಯಲ್ಲಿ ರಾಹು ಸಂಕ್ರಮಿಸಿದಾಗ, ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಉತ್ತಮ ಫಲ ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಮಕ್ಕಳ ಕಡೆ ಹೆಚ್ಚಿನ ಗಮನಹರಿಸಿ. ಪ್ರೇಮಿಗಳಿಗೆ ಈ ಸಮಯ ಒಳ್ಳೆಯದಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೆ ಸವಾಲಿನ ಸಮಯ.
ಪರಿಹಾರ: ಶ್ರೀ ದುರ್ಗಾ ಚಾಲೀಸಾವನ್ನು ನಿಯಮಿತವಾಗಿ ಪಠಿಸಿ.

ಧನು ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ ನಾಲ್ಕನೇ ಮನೆಗೆ ಸಾಗಲಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಒತ್ತಡದ ಪರಿಸ್ಥಿತಿ ಇರಬಹುದು. ಕೆಲಸ ಕಾರ್ಯಗಳಲ್ಲಿ ಈ ಅವಧಿ ನಿಮಗೆ ಉತ್ತಮವಾಗಿದೆ.
ಪರಿಹಾರ: ಹಕ್ಕಿಗಳಿಗೆ ನವಧಾನ್ಯಗಳನ್ನು ಹಾಕಿ.

ಮಕರ ರಾಶಿ
ಅಕ್ಟೋಬರ್ 30 ರ ನಂತರ, ರಾಹು ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾನೆ. ವೃತ್ತಿ ಜೀವನದಲ್ಲಿ ರಿಸ್ಕ್ ತೆಗೆದುಕೊಂಡರೂ ಅದರಿಂದ ಯಶಸ್ಸು ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮೂರನೇ ಮನೆಯಲ್ಲಿ ರಾಹುವಿನ ಈ ಸಂಚಾರವು ನಿಮಗೆ ಉತ್ತಮ ಯಶಸ್ಸನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವನ್ನು ಬಲಪಡಿಸುತ್ತದೆ.
ಪರಿಹಾರ: ನೀವು ಶನಿವಾರದಂದು ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ದಾನ ಮಾಡಬೇಕು.

ಕುಂಭ ರಾಶ
ಅಕ್ಟೋಬರ್ 30 ರ ನಂತರ, ರಾಹು ನಿಮ್ಮ ಎರಡನೇ ಮನೆಯಲ್ಲಿ ಇರಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಒಳ್ಳೆಯದಿದೆ. ಆದರೆ ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳು ಇರಬಹುದು. ಆದರೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಲು ಪ್ರಯತ್ನಿಸಿ.
ಪರಿಹಾರ: ಪ್ರತಿದಿನ ರಾಹುಮಂತ್ರ ಪಠಿಸಿ.

ಮೀನ ರಾಶಿ
ಅಕ್ಟೋಬರ್ 30 ರಂದು ರಾಹು ನಿಮ್ಮ ಲಗ್ನ ಮನೆಗೆ ಪ್ರವೇಶಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ತುಂಬಾ ಚೆನ್ನಾಗಿರಲಿದೆ, ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಉತ್ತಮ ಫಲ ನೀಡಲಿದೆ. ಮುಂಬರುವ ರಾಹು ಸಂಚಾರವು ನಿಮಗೆ ಎಲ್ಲವನ್ನೂ ಒದಗಿಸುತ್ತದೆ.
ಪರಿಹಾರ: ಬುಧವಾರ ಸಂಜೆ ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ದಾನ ಮಾಡಿ.

English summary

Rahu Gochar Phal October 2023: Affects On 12 Zodiac Signs In Kannada

Rahu Gochar On Octobe 30: Affects on 12 zodiac signs, read on....
X
Desktop Bottom Promotion