Latest Updates
-
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ರಾಘವೇಂದ್ರ ಸ್ವಾಮಿ ಪವಾಡ: ವ್ಹೀಲ್‌ಚೇರ್‌ನಲ್ಲಿ ದೇವಾಲಯಕ್ಕೆ ಬಂದ ಯುವತಿ ಎದ್ದು ಪ್ರದಕ್ಷಿಣೆ ಹಾಕಿದಳು
ಏನೇ ಕಷ್ಟವಿರಲಿ ಗುರು ರಾಯರ ನೆನೆದರೆ ಸಾಕು ನಮ್ಮೆಲ್ಲಾ ಕಷ್ಟಗಳು ದೂರಾಗುವುದು ಎಂದು ರಾಘವೇಂದ್ರಸ್ವಾಮಿಯನ್ನು ಆರಾಧಿಸುವ ಪ್ರತಿಯೊಬ್ಬ ಭಕ್ತರ ಬಲವಾದ ನಂಬಿಕೆ. ರಾಯರ ಸನ್ನಿಧಾನದಲ್ಲಿ ಹಲವಾರು ಪವಾಡುಗಳು ನಡೆದಿರುವ ಬಗ್ಗೆ ಕೇಳಿದ್ದೇವೆ, ಇದೀಗ ಒಬ್ಬ ಯುವತಿಯ ಬದುಕಿನಲ್ಲಿ ಪವಾಡ ಸಂಭವಿಸಿದ್ದು ಈ ವಿಷಯ ತಿಳಿದವರು ಎಲ್ಲಾ ಆ ರಾಯರ ಮಹಿಮೆ ಎಂದು ಕೊಂಡಾಡುತ್ತಿದ್ದಾರೆ.

ಆ ಹುಡುಗಿಯ ಕಾಲುಗಳಿಗೆ ಸ್ವಾಧೀವಿರಲಿಲ್ಲ, ಓಡಾಟಕ್ಕೆ ವ್ಹೀಲ್‌ಚೇರ್ ಸಹಾಯಬೇಕಿತ್ತು. ಅವಳಿಗೆ ಹುಟ್ಟಿದಾಗಿನಿಂದ ಈ ಸಮಸ್ಯೆ ಇರಲಿಲ್ಲ, ಆರು ತಿಂಗಳ ಹಿಂದೆ ರಕ್ತನಾಳದ ಸಮಸ್ಯೆಯಿಂದಾಗಿ ಕಾಲು ಸ್ವಾಧೀನ ಕಳೆದುಕೊಂಡಿತ್ತು. ಈ ಯುವತಿಗೆ 19 ವರ್ಷ, ಹುಟ್ಟಿದಾಗಿನಿಂದ ಹೃದಯದ ಸಮಸ್ಯೆ ಇತ್ತು, ಆದರೆ ನಡೆದಾಡುತ್ತಿದ್ದಳು, ಕಳೆದ ಮೂರು ವರ್ಷದಿಂದ ಋತುಚಕ್ರದಲ್ಲಿ ತುಂಬಾನೇ ಸಮಸ್ಯೆ ಕಂಡು ಬಂದಿತ್ತು, ಕಳೆದ ಆರು ತಿಂಗಳಿನಿಂದ ಆರೋಗ್ಯದ ಪರಿಸ್ಥಿತಿ ತುಂಬಾ ದುರ್ಬಲವಾಗಿ ಕಾಲುಗಳು ಕೂಡ ಸ್ವಾದೀನ ಕಳೆದುಕೊಂಡಿತು. ಈ ಯುವತಿಯ ಹೆಸರು ತೇಜಸ್ವಿನಿ.
ಬೆಂಗಳೂರಿನ ಯಲಹಂಕದಲ್ಲಿ ವಾಸಿಸುತ್ತಿರುವ ಶ್ರೀಕಾಂತ್ - ಅರುಣಾ ದಂಒತಿಗೆ ಇಬ್ಬರು ಮಕ್ಕಳು ಮಗಳು ತೇಜಸ್ವಿನಿ, ಪುತ್ರ ಸಾಗರ್, ಮಗ ಕೂಡ ವಿಶೇಷ ಚೇತನ, ಮಗಳಿಗೂ ಆರೋಗ್ಯ ಸಮಸ್ಯೆ. ಆದರೆ ಈ ದಂಪತಿ ದೇವರು ನಮ್ಮ ಕಷ್ಟವೆಲ್ಲಾ ಪರಿಹಾರ ಮಾಡುತ್ತಾನೆ ಎಂದು ನಂಬಿದ್ದರು.
ದೀಪಾವಳಿ ಸಮಯದಲ್ಲಿ ದಂಪತಿ ಮಗಳನ್ನು ಕರೆದುಕೊಂಡು ಚಿತ್ರದುರ್ಗದ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರು, ವ್ಹೀಲ್ ಚೇರ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಆವಾಗ ಅಲ್ಲಿಯ ಸ್ವಾಮೀಜಿ 45 ದಿನಗಳ ಒಳಗಾಗಿ ನಿಮಗೆ ಶುಭ ಸುದ್ದಿ ದೊರೆಯಲಿದೆ ಎಂದು ಹೇಳಿದ್ದರು. ಆಕೆಗೆ ಶಿವಮೊಗ್ಗದಲ್ಲಿ ಆಯುರ್ವೇದ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಪಡೆದು ಬೆಂಗಳೂರಿಗೆ ಬರುವಾಗ ಈ ದೇವಾಲಯಕ್ಕೆ ಭೇಟಿ ನೀಡಿದಾಗ ಅಚ್ಚರಿ ಎಂಬಂತೆ ಆ ಹುಡುಗಿ ಎದ್ದು ಮೆಲ್ಲನೆ ನಡೆಯಲಾರಂಭಿಸುತ್ತಾಳೆ, ನಡೆದುಕೊಂಡು ಹೋಗಿ ದೇವಿಗೆ ನಮಸ್ಕಾರ ಹಾಕಿದ್ದಾಳೆ. ಈ ಪವಾಡವನ್ನು ಕಣ್ಣಾರೆ ಕಂಡ ಅವಳ ಪೋಷಕರು ಹಾಗೂ ಅಲ್ಲಿ ನೆರೆದಿರುವವರು ಎಲ್ಲವೂ ರಾಯರ ಪವಾಡ ಎಂದು ಹೇಳುತ್ತಿದ್ದಾರೆ.
ಮಗಳು ನಡೆದಾಡಿರುವುದನ್ನು ನೋಡಿ ಹಲವು ತಿಂಗಳಾಗಿತ್ತು, ದೇವಾಲಯಕ್ಕೆ ಬಂದಾಗ ವ್ಹೀಲ್ ಚೇರ್‌ನಿಂದ ತೇಜಸ್ವಿನಿ 3 ಹೆಜ್ಜೆ ಹಾಕುತ್ತಾಳೆ, ಅದನ್ನು ನೋಡಿ ಅಲ್ಲಿದ್ದವರಿಗೆ ತುಂಬಾನೇ ಅಚ್ಚರಿ ಆಗುತ್ತೆ, ನಂತರ ತಾಯಿಯ ಬಳಿ ಹೋಗಿ ದೇವಾಲಯ ಸುತ್ತ ಪ್ರದಕ್ಷಣೆ ಹಾಕುವುದಕ್ಕೆ ಅನುಮತಿ ಕೇಳಿದಾಗ ತಾಯಿ ಕೂಡ ದೇವರ ಮೇಲೆ ಭರವಸೆಯಿಂದ ಒಪ್ಪುತ್ತಾಳೆ, ಆಕೆ ದೇವಾಲಯಕ್ಕೆ ಪ್ರದಕ್ಷಣೆ ಹಾಕಿದಾಗ ಅಲ್ಲಿ ನೆರೆದಿರುವವರು ತುಂಬಾನೇ ಖುಷಿ ಪಟ್ಟಿದ್ದಾರೆ, ರಾಯರ ಸತ್ಯವನ್ನು ಕಣ್ಣಾರೆ ಕಂಡು ಸಂಭ್ರಮಿಸಿದ್ದಾರೆ.
ಗುರುರಾಘವೇಂದ್ರ ಸ್ವಾಮಿ ಪೂಜೆಗೆ ವಿಶೇಷ ದಿನ
ಗುರುರಾಘವೇಂದ್ರ ಸ್ವಾಮಿ ಪೂಜೆಗೆ ಗುರುವಾರ ತುಂಬಾ ವಿಶೇಷವಾದ ದಿನವೆಂದು ಹೇಳಲಾಗುವುದು. ಎಲ್ಲಾ ಸಂಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ದೇವರು ನೀಡುತ್ತಾನೆ ಎಂದು ಹೇಳಲಾಗುವುದು.
ರಾಘವೇಂದ್ರಸ್ವಾಮಿಯ ಮಂತ್ರಗಳು
"ಓಂ ಶ್ರೀ ರಾಘವೇಂದ್ರಾಯ ನಮಃ"
ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರ
ಓಂ ವೆಂಕಟನಾಥಯ ವಿದ್ಮಹೆ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್"
ಓಂ ವೆಂಕಟನಾಥಯ ವಿದ್ಮಹೆ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್"



Click it and Unblock the Notifications
