Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಮೂತ್ರ ಕುಡಿದು, ಮೈತುಂಬ ಸಗಣಿ ಹಚ್ಚಿಕೊಂಡ ಪುನೀತ್ ಸೂಪರ್‌ಸ್ಟಾರ್..! ರೀಲ್ಸ್‌ಗಾಗಿ ಏನೆಲ್ಲಾ ಮಾಡ್ತಾರೆ..?
ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಬೇಕು, ತಮ್ಮ ವಿಡಿಯೋಗಳಿಗೆ ಹೆಚ್ಚು ಹೆಚ್ಚು ಲೈಕ್ಸ್ ಹೆಚ್ಚು ಹೆಚ್ಚು ವೀಕ್ಷಣೆ ಬರಬೇಕು ಎಂದು ಯುವ ಸಮುದಾಯ ಎಂತಹ ಹುಚ್ಚಾಟಕ್ಕೆ ಬೇಕಾದರು ಇಳಿಯುತ್ತಾರೆ ಎಂಬುದನ್ನು ನಾವು ಮೊದಲೇ ನೋಡಿದ್ದೇವೆ. ಕೆಲವರು ಜೀವದ ಹಂಗು ತೊರೆದು ಅಪಾಯಕಾರಿ ವಿಡಿಯೋಗಳ ಮಾಡುವುದನ್ನು ನಾವು ನೋಡಿದ್ದೇವೆ.
ಹಾಗೆ ಈ ರೀತಿ ಚಿತ್ರ ವಿಚಿತ್ರ ಹುಚ್ಚಾಟದಿಂದ ಫೇಮಸ್ ಆಗಿರುವ ಮಂದಿಗೇಣು ಕಡಿಮೆ ಇಲ್ಲ. ಇತ್ತ ಈ ರೀತಿ ಹುಚ್ಚುತನದ ವಿಡಿಯೋ ಮಾಡಿ ಹಿಂದಿ ಬಿಗ್‌ಬಾಸ್‌ಗೂ ಕಾಲಿಟ್ಟಿದ್ದ ಪುನಿತ್ ಸೂಪರ್ ಸ್ಟಾರ್ ಎಂಬಾತನ ಬಗ್ಗೆ ನಿಮಗೆ ತಿಳಿದಿರಬಹುದು. ಆತ ಬಿಗ್ ಬಾಸ್ ಹಿಂದಿಯಲ್ಲಿ ಹಂಗಾಮ ಮಾಡಿ ಅರ್ಧಕ್ಕೆ ವಾಪಾಸು ಬಂದಿದ್ದ.

ಬಿಗ್‌ಬಾಸ್ ಮನೆಯಲ್ಲಿ ಗಲಾಟೆ ಮಾಡಿ ಅರ್ಧದಲ್ಲೇ ಆತ ಮನೆಯಿಂದ ಆಚೆ ಬಂದಿದ್ದ, ಈ ರೀತಿಯ ವ್ಯಕ್ತಿ ಆತ ಈಗ ಮತ್ತೆ ವೈರಲ್ ಆಗಿದ್ದಾನೆ, ಚಿತ್ರ ವಿಚಿತ್ರ ವಿಡಿಯೋ ಮಾಡಿ ಫೇಮಸ್ ಆಗಿದ್ದ ಆದ್ರೆ ಈಗ ಗೋಮೂತ್ರ ಕುಡಿದು ಸಗಣಿ ಮೈಗೆಲ್ಲ ಹಚ್ಚಿಕೊಂಡು ರಂಪಾಟ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಅಹಸ್ಯ ಹುಟ್ಟಿಸುತ್ತಿದೆ.
ಲಾರ್ಡ್ ಪುನೀತ್ ಎಂದು ಕರೆಯಲ್ಪಡುವ ಆತ ಹಲವು ಟ್ರೋಲ್ ವಿಡಿಯೋಗಳಗಲ್ಲಿ ಫೇಮಸ್, ಆದ್ರೆ ಈಗ ಕೊಟ್ಟಿಗೆಯೊಂದರಲ್ಲಿ ಪ್ರಾಣಿಯ ಮೂತ್ರ ಸೇವಿಸುವುದು ಸಗಣಿಯನ್ನು ಮುಖಕ್ಕೆ ಹಚ್ಚಿಕೊಂಡು ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಆತ ಲೈಕ್ಸ್ ಹಾಗೂ ವಿಡಿಯೋ ವೈರಲ್ ಆಗುವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ ಎಂಬುದಂತು ಖಚಿತವಾಗುತ್ತಿದೆ.
ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋಗಳನ್ನು ಆತ ಹಂಚಿಕೊಂಡಿದ್ದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಆದರೆ ಬಹುತೇಕ ಮಂದಿ ಈ ವಿಡಿಯೋಗಳ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಹಲವರ ಪ್ರಕಾರ ಆತನಿಗೆ ಮಾನಸಿಕ ಆರೋಗ್ಯ ಸಂಬಂಧಿ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.
ಆತ ವಿಡಿಯೋಗಳಿಗೆ ಹೆಚ್ಚು ವೀವ್ಸ್ ಬರಲು ಈ ರೀತಿ ಮಾಡುತ್ತಿದ್ದಾನೆ. ಇದೊಂದು ಗೀಳಾಗಿ ಆತನಿಗೆ ಪರಿಣಮಿಸಿದೆ. ಇದರಿಂದ ಬೇರೆಯವರಿಗೂ ಹಾನಿಯಾಗಲಿದೆ. ಆತನಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಪುನೀತ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ OTT ಸೀಸನ್ 2ರಲ್ಲಿ ಕಾಣಿಸಿಕೊಂಡಿದ್ದರು ಅಲ್ಲಿಂದಲೇ ಅವರು ಫೇಮಸ್ ಸಹ ಆಗಿದ್ದರು. ಆದ್ರೆ ಬರೀ 24 ಗಂಟೆಯಲ್ಲಿ ಅವರನ್ನು ಶೋದಿಂದ ಹೊರಹಾಕಲಾಗಿತ್ತು, ಬಿಗ್ ಬಾಸ್ ಮನೆಯಲ್ಲಿದ್ದ ಶಾಂಪೂ, ಹಾರ್ಪಿಕ್ ಸೇರಿ ಎಲ್ಲಾ ವಸ್ತುಗಳನ್ನು ಮೈ ಮೇಲೆ ಸುರಿದುಕೊಂಡು ಕೂಗಾಡಿದ್ದರು. ಅಲ್ಲದೆ ಬಿಗ್‌ಬಾಸ್‌ಗೆ ಚಾಲೆಂಜ್ ಮಾಡಿದ್ದರು. ಇದರಿಂದ ಶೋ ಆರಂಭಗೊಂಡ 24 ಗಂಟೆಯಲ್ಲಿ ಅವರನ್ನ ಮನೆಯಿಂದಲೇ ಹೊರಹಾಕಲಾಗಿತ್ತು.
ಆದ್ರೆ ಇದಕ್ಕೂ ಮೊದಲು ಅವರು ಕೆಲವೊಂದು ಸಮಾಜಮುಖಿ ಕಾರ್ಯಗಳ ಮಾಡಿಯೂ ಹೆಸರಾಗಿದ್ದರು. ರಸ್ತೆ ಬದಿಯಲ್ಲಿರುವ ಮಂದಿಗೆ ಆಹಾರ ನೀಡುವುದು, ತಮ್ಮ ಹುಟ್ಟು ಹಬ್ಬದ ದಿನ ಒಂದಿಷ್ಟು ಜನರಿಗೆ ಆಹಾರ ಹಂಚುವುದು, ಪ್ರಾಣಿಗಳಿಗೆ ಹಣ್ಣು ನೀಡುವುದು ಇಂತಹ ಕಾರ್ಯಗಳಿಂದ ಸುದ್ದಿಯಾಗಿದ್ದರು. ಆದರೆ ಬರು ಬರುತ್ತಾ ಅವರ ವಿಡಿಯೋಗಳು ಈ ರೀತಿ ವಿಚಿತ್ರವಾಗಿರುತ್ತಿದ್ದವು.
ಆದ್ರೆ ಈಗ ಹಾಕಿರುವ ವಿಡಿಯೋ ನೋಡಿ ಜನರೇ ಅಸಹ್ಯ ಪಡುವಂತಾಗಿದೆ. ಲೈಕ್ಸ್, ಫಾಲೋವರ್ಸ್‌ಗಾಗಿ ಅವರು ಯಾರು ಮಾಡಿರದಂತಹ ಹುಚ್ಚುತನಕ್ಕೆ ಕೈ ಹಾಕಿ ಜನರ ಆಕ್ರೋಶಕ್ಕೂ ಕಾರಣರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉತ್ತಮ ದಾರಿಯ ಆಯ್ಕೆ ಮಾಡಿಕೊಂಡು ಇಂದಿಗೂ ಒಳ್ಳೆಯ ಕಂಟೆಂಟ್ ನೀಡುವ ಸಾವಿರಾರು ಮಂದಿ ಇದ್ದಾರೆ. ಆದ್ರೆ ಈ ರೀತಿ ಹುಚ್ಚುತನ ಮೆರೆದವರು ಬಹುಬೇಗ ಫೇಮಸ್ ಆಗಿಬಿಡುವುದು ದುರಂತ.



Click it and Unblock the Notifications
