Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಇತರರ ಯಶಸ್ಸು ಈ ರಾಶಿಯವರಿಗೆ ಬೇಗ ಕಣ್ಣುಕುಕ್ಕುವುದಂತೆ!
ಕೆಲವರಿಗೆ ತಾವೇ ಗ್ರೇಟ್, ಯಾವಾಗಲೂ ನಾವೇ ಮೇಲಿರಬೇಕು ಎಂಬ ಭಾವನೆ ಇರುತ್ತದೆ. ಅದಕ್ಕಾಗಿಯೇ ಸದಾ ಹೋರಾಡುತ್ತಿರುತ್ತಾರೆ. ಅಪ್ಪಿತಪ್ಪಿ ಯಾರಾದರೂ ತಮ್ಮ ಜೊತೆಯಿರುವವರು ತಮಗಿಂತ ಹೆಚ್ಚು ಯಶಸ್ವಿಯಾದರೆ ಸಾಕು, ಅಸೂಯೆ ಹೊಟ್ಟೆಕಿಚ್ಚು ಎಲ್ಲವೂ ಹುಟ್ಟಿಕೊಳ್ಳುವುದು. ಅವರು ಎಷ್ಟೇ ಆಪ್ತರಾಗಿದ್ದರೂ ಸರಿ, ಅವರ ಯಶಸ್ಸು, ಸಾಧನೆ ಇವರ ತಲೆಕೆಡಿಸುತ್ತದೆ. ವಿಶೇಷವಾಗಿ ಅವರು ಅದೇ ಪ್ರಮಾಣದ ಖ್ಯಾತಿ, ಸಂಪತ್ತು ಅಥವಾ ಯಶಸ್ಸನ್ನು ಪಡೆಯದಿದ್ದಾಗ. ಇವರು ತುಂಬಾ ನಕಾರಾತ್ಮಕ ಶಕ್ತಿಯನ್ನು ಹೊಂದಿದ್ದು, ಇವರ ಬಗ್ಗೆ ಬಹಳ ಎಚ್ಚರದಿಂದಿರಬೇಕು. ಹಾಗಾದರೆ, ಇತರರ ಯಶಸ್ಸಿನ ಬಗ್ಗೆ ತುಂಬಾ ಅಸೂಯೆಪಡುವ ಟಾಪ್ 4 ರಾಶಿಚಕ್ರಗಳು ಯಾವುವು ಎಂಬುದು ಇಲ್ಲಿದೆ ನೋಡಿ.
ಇತರರ ಯಶಸ್ಸಿಗೆ ಹೊಟ್ಟೆಕಿಚ್ಚು ಪಡುವ ರಾಶಿಚಕ್ರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಹೊಟ್ಟೆ ಕಿಚ್ಚು ಉಂಟಾದಾಗ ಅವರು ಶಾಂತ, ನಿಗೂಢ ಮತ್ತು ಪ್ರಕ್ಷುಬ್ಧರಾಗುತ್ತಾರೆ. ಇತರರು ತಮಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನೋಡಿದಾಗ ಅವರು ಅಸಹಾಯಕರಾಗುತ್ತಾರೆ. ವೃಶ್ಚಿಕ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವುದಿಲ್ಲ ಆದರೆ ಅವರು ನಿರಂತರವಾಗಿ ಬಕೆಟ್ ಹಿಡಿಯುವುದನ್ನು ಮುಂದುವರಿಸುತ್ತಾರೆ.

ಮೇಷ ರಾಶಿ:
ಈ ರಾಶಿಚಕ್ರ ಚಿಹ್ನೆಗೆ ಸೇರಿದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ. ಇತರರು ಉತ್ತಮ ಜೀವನ ನಡೆಸುತ್ತಿರುವುದನ್ನು ಅಥವಾ ತಮಗಿಂತ ಹೆಚ್ಚು ಹಣ ಮತ್ತು ಪ್ರಶಂಸೆಯನ್ನು ಗಳಿಸುವುದನ್ನು ಕಂಡಾಗ ತುಂಬಾ ಅಸೂಯೆಪಡುತ್ತಾರೆ. ಆ ಸಮಯದಲ್ಲಿ ತಕ್ಷಣವೇ ನಕಾರಾತ್ಮಕ ಟೀಕೆಗಳು ಅಥವಾ ಕೆಲಸದಿಂದ ಅಂತಹ ಜನರನ್ನು ಕೆಳಕ್ಕೆ ಎಳೆಯುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಕುಂಭ ರಾಶಿ:
ಇವರು ಅತ್ಯಂತ ಅಂತರ್ಮುಖಿ ಚಿಹ್ನೆಗಳಲ್ಲಿ ಒಬ್ಬರು, ಆದರೆ ಇತರರು ಯಶಸ್ವಿಯಾಗುತ್ತಿರುವ ಸುದ್ದಿ ಅವರ ಕಿವಿಗಳನ್ನು ತಲುಪಿದಾಗ, ತುಂಬಾ ಕಿರಿಕಿರಿ ಮತ್ತು ಅಸೂಯೆ ಪಡುತ್ತಾರೆ. ಇದರಿಂದ ತಮ್ಮ ಸ್ವಂತ ಕೆಲಸದ ಬಗ್ಗೆ ಅಸುರಕ್ಷಿತ ಭಾವನೆಯನ್ನು ಕಾಣುತ್ತಾರೆ. ಜೊತೆಗೆ ತಮ್ಮನ್ನು ಇತರ ಜನರೊಂದಿಗೆ ಹೋಲಿಸಿಕೊಳ್ಳಲು ಪ್ರಾರಂಭಿಸುತ್ತಾರೆ.

ಕನ್ಯಾ ರಾಶಿ:
ಇತರರ ಯಶಸ್ಸಿನ ಬಗ್ಗೆ ತುಂಬಾ ತಲೆಕೆಡಿಸುವ ಜನರಲ್ಲಿ ಇವರು ಒಬ್ಬರು. ಏಕೆಂದರೆ ಇವರು ಯಾವಾಗಲೂ ಏಣಿಯ ಮೇಲ್ಭಾಗದಲ್ಲಿರಲು ಬಯಸುತ್ತಾರೆ. ಈ ರಾಶಿಯವರು ತಮ್ಮ ಕೆಲಸವನ್ನು ಕುಶಲತೆಯಿಂದ ನಿರ್ವಹಿಸಿ, ಅತ್ಯುನ್ನತ ಸ್ಥಾನವನ್ನು ಗಳಿಸುತ್ತಾರೆ. ಅವರು ಅಷ್ಟು ಬುದ್ಧಿವಂತರು, ಆದರೆ ಇನ್ನೊಬ್ಬರ ಯಶಸ್ಸನ್ನ ಕಂಡು ಸಂತೋಷವಾಗಿರಲು ಇವರಿಗೆ ಎಂದಿಗೂ ಸಾಧ್ಯವಿಲ್ಲ.



Click it and Unblock the Notifications