Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ರಾಶಿಯವರಿಗೆ ಫ್ಯಾಷನ್ ಸೆನ್ಸ್ ಸ್ವಲ್ಪ ಹೆಚ್ಚು ಇರುತ್ತಂತೆ!
ನಮ್ಮ ರಾಶಿ-ನಕ್ಷತ್ರಗಳು ನಿಜಕ್ಕೂ ನಮ್ಮ ಜೀವನಶೈಲಿಯ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತವೆ. ನಾವು ಮಾಡುವ ಪ್ರತಿ ಕಾರ್ಯ ಯಾವುದೋ ಒಂದು ಮೂಲೆಯಲ್ಲಾದರೂ ನಮ್ಮ ಜಾತಕಗಳಿಗೆ ಹೊಂದಿಕೊಂಡೇ ಇರುತ್ತದೆ ಎಂಬುದು ಜ್ಯೋತಿಷ್ಯ ವರ್ಗದ ನಂಬಿಕೆಯಾಗಿದೆ. ಇದಕ್ಕೆ ಫ್ಯಾಷನ್ ಅಥವಾ ಉಡುಗೆ-ತೊಡುಗೆಗಳು ಹೊರತಾಗಿಲ್ಲ.
ನಿಮಗೆ ಬೇಕಾದ ಸ್ಟೈಲ್ ನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗಿದೆ. ಆದರೆ ಕೆಲವು ರಾಶಿಯವರಿಗೆ ಹುಟ್ಟಿನಿಂದಲೇ ಫ್ಯಾಷನ್ ಸೆನ್ಸ್ ಎನ್ನುವುದು ಇರುತ್ತದೆ. ಇಂತಹವರು ತಮ್ಮ ನೋಟದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗಾದರೆ ಆ ರಾಶಿಗಳಾವುವು ಎಂಬುದನ್ನು ನೋಡೋಣ.
ಫ್ಯಾಷನ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ರಾಶಿಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಮೀನ :
ಈ ರಾಶಿಯವರು ಹೆಚ್ಚು ಫ್ಯಾಷನ್ ಪ್ರಿಯರಾಗಿದ್ದು, ಯಾವಾಗಲೂ ಹವಾಮಾನದ ಮೇಲೆ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಗೆ ಹೆಚ್ಚಾಗಿ ಸ್ಕರ್ಟ್ಗಳೆಂದರೆ ಇಷ್ಟ, ಅದನ್ನೇ ಹೆಚ್ಚಾಗಿ ತೊಡುತ್ತಾರೆ. ಜೊತೆಗೆ ಸ್ವಲ್ಪ ಮೈ ಕಾಣಿಸಿದರೂ ಅದಕ್ಕೆ ಅಂಜಿಕೊಳ್ಳುವುದಿಲ್ಲ. ಇವರು ಸ್ಲಿಪ್ಪರ್ ಗಳ ಗೀಳನ್ನು ಹೊಂದಿದ್ದು, ರಾಂಪ್ ವಾಕ್ ಮಾಡುವುದರಲ್ಲಿ ಎತ್ತಿದ ಕೈ. ಅವರ ವಾರ್ಡ್ರೋಬ್ ಹವಳ ಬಣ್ಣದ್ದಾಗಿರುತ್ತದೆ.

2. ಸಿಂಹ:
ಈ ರಾಶಿಯವರು ತಮ್ಮ ವಿಚಿತ್ರ ಫ್ಯಾಷನ್ ನಿಂದಲೇ ಎಲ್ಲರ ನಡುವೆ ಎದ್ದು ಕಾಣುತ್ತಾರೆ. ಇದಕ್ಕಾಗಿ ಇವರು ಅತಿಯಾದ ಆಭರಣಗಳು, ಎದ್ದುಕಾಣುವ ಡ್ರೆಸ್ ಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳ ಚಿತ್ರವಿರುವ ಬಟ್ಟೆಗಳೆಂದರೆ ಇವರಿಗೆ ಅಚ್ಚುಮೆಚ್ಚು. ಕಪ್ಪು ಹಾಗೂ ಬಿಳುಪಿನ ಬಟ್ಟೆಯನ್ನು ಇಷ್ಟಪಡುವ ಇವರು, ಅದರಲ್ಲೇ ಹೊಳಪು ಮೂಡಿಸುತ್ತಾರೆ. ಇವರ ವಾರ್ಡ್ರೋಬ್ ನಲ್ಲಿ ನೇರಳೆ ಬಣ್ಣವೇ ರಾರಾಜಿಸುತ್ತವೆ.

3. ಮೇಷ:
ಈ ರಾಶಿಯವರಿಗೆ ಕೂದಲಿಗೆ ಸಂಬಂಧಿಸಿದ ಸ್ಟೈಲ್ ಮಾಡುವುದೆಂದರೆ ತುಂಬಾ ಇಷ್ಟ. ಇದಕ್ಕಾಗಿ ಡಿಫರೆಂಟ್ ಟೋಪಿಗಳು ಮತ್ತು ಹೆಡ್‌ಬ್ಯಾಂಡ್‌ಗಳಂತಹ ಕೂದಲಿನ ಬಿಡಿಭಾಗಗಳನ್ನು ಅಲಂಕರಿಸಲು ಆಶಿಸುತ್ತಾರೆ. ಅಷ್ಟೇ ಅಲ್ಲ, ಕೂದಲಿಗೆ ಸರಿಹೊಂದುವಂತಹ ಡ್ರೆಸ್ ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅತ್ಯಂತ ಫ್ಯಾಷನ್ ಪ್ರಿಯರಾದ ಇವರ ವಾರ್ಡ್ರೋಬ್ ನಲ್ಲಿ ಕೆಂಪು ಬಣ್ಣದ ಬಟ್ಟೆಗಳೇ ಹೆಚ್ಚಿರುತ್ತವೆ.

4.ವೃಷಭ:
ಈ ರಾಶಿಯವರು ಸದ್ಯ ಯಾವ ಟ್ರೆಂಡ್ ಇದೆ ಅದಕ್ಕೆ ತಕ್ಕಂತೆ ಹೊಂದಿಕೊಂಡು, ತಮ್ಮ ಉಡುಗೆ-ತೊಡುಗೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಇವರು ಬಟ್ಟೆಗಳನ್ನು ಶಾಪಿಂಗ್ ಮಾಡುವಾಗ ಮತ್ತು ಸ್ಟೈಲಿಂಗ್ ಮಾಡುವಾಗ ಉನ್ನತ ಬ್ರ್ಯಾಂಡ್‌ಗಳತ್ತ ಹೋಗುವ ಸಾಧ್ಯತೆ ಹೆಚ್ಚು. ಏನೇ ಕೊಂಡರೂ ಬ್ರಾಂಡೆಂಡ್ ಇರಬೇಕೆಂದು ಆಶಿಸುವವರು ಇವರ ವಾರ್ಡ್ರೋಬ್ ನಲ್ಲಿ ಹಸಿರು ಬಣ್ಣದ ಡ್ರೆಸ್ ಹೆಚ್ಚಾಗಿರುವುದು.

5.ಮಿಥುನ:
ಈ ರಾಶಿಯವರು ಮೋಜಿನ, ತಾರುಣ್ಯವತಿಯಾಗಿ ಕಾಣುವ ಮತ್ತು ಮುಕ್ತ ಮನೋಭಾವದ ಉಡುಪಿನ ಶೈಲಿಗಳನ್ನು ಸ್ವೀಕರಿಸುತ್ತಾರೆ. ಎಲ್ಲಾ ಸೀಸನ್ ಗೆ ಹೊಂದಿಕೊಳ್ಳುವಂತೆ, ತಮಗೆ ಯಾವುದು ಚೆನ್ನಾಗಿ ಕಾಣುತ್ತದೆಯೋ ಅದನ್ನೇ ಫಾಲೋ ಮಾಡುವವರು ಇವರು. ಎಲ್ಲಾ ಫ್ಯಾಷನ್ ಶೈಲಿಗೂ ಹೊಂದಿಕೊಳ್ಳಬಲ್ಲರು. ಇವರ ವಾರ್ಡ್ರೋಬ್ ಬಣ್ಣವು ನೀಲಿ ಅಥವಾ ಹಳದಿ ಬಣ್ಣದ್ದಾಗಿದೆ.

6. ತುಲಾ:
ಈ ರಾಶಿಯವರು ಆಕರ್ಷಣೆಗೆ ಹೆಸರುವಾಸಿಯಾಗಿದ್ದು, ಗ್ರಾಂಡ್ ಡ್ರೆಸ್ ಗಳನ್ನು ಇಷ್ಟ ಪಡುತ್ತಾರೆ. ಇವರಬಟ್ಟೆಗಳನ್ನು ಸಾಮಾನ್ಯವಾಗಿ ಡಿಸೈನರ್ ಕಡೆಯಿಂದ ಮಾಡಿಸಲಾಗುವುದು. ಇವರು ಮೋಹಕ ಸೌಂದರ್ಯದೊಂದಿಗೆ ಕ್ಲಾಸಿ ಫ್ಯಾಶನ್ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರ ಫ್ಯಾಷನ್ ಶೈಲಿಯು ರೋಮ್ಯಾಂಟಿಕ್ ಮತ್ತು ಆಡಂಬರದಾಗಿದ್ದು, ವಾರ್ಡ್ರೋಬ್ ಗುಲಾಬಿ ಬಣ್ಣದ ಬಟ್ಟೆಗಳಿಂದ ಕೂಡಿರುವುದು.



Click it and Unblock the Notifications
