Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯವರು ಸೀಕ್ರೆಟ್ ಮಾಡೋದ್ರಲ್ಲಿ ಎತ್ತಿದ ಕೈಯಂತೆ!
ಖಾಸಗಿತನ ಮತ್ತು ರಹಸ್ಯತನದ ನಡುವೆ ವ್ಯತ್ಯಾಸವಿದೆ. ಕೆಲವೊಂದು ವಿಷಯಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಆದರೆ ಎಲ್ಲಾ ವಿಚಾರಗಳನ್ನೂ ಮುಚ್ಚಿಟ್ಟುಕೊಳ್ಳುವುದು ರಹಸ್ಯ ಎನಿಸಿಕೊಳ್ಳುತ್ತದೆ.
ಸೀಕ್ರೆಟ್ ಮಾಡುವುದು ನಕಾರಾತ್ಮಕ ವ್ಯಕ್ತಿತ್ವದ ಲಕ್ಷಣವಲ್ಲ, ಆದರೆ ಒಬ್ಬ ವ್ಯಕ್ತಿಯು ಯಾವಾಗ ವಿಷಯಗಳನ್ನು ಖಾಸಗಿಯಾಗಿಡಬೇಕು ಮತ್ತು ಯಾವಾಗ ರಹಸ್ಯವಾಗಿರಿಸಿಕೊಳ್ಳಬೇಕು ಎನ್ನುವುದನ್ನು ಚೆನ್ನಾಗಿ ಗುರುತಿಸುವುದು ಅತ್ಯಗತ್ಯ. ಆದ್ದರಿಂದ, ಜ್ಯೋತಿಷ್ಯದ ಪ್ರಕಾರ ಹೆಚ್ಚು ರಹಸ್ಯವಾಗಿರುವ 3 ರಾಶಿಚಕ್ರ ಚಿಹ್ನೆಗಳ ಬಗ್ಗೆ ಹೇಳಿದ್ದೇವೆ.
ಹೆಚ್ಚು ಸೀಕ್ರೆಟ್ ಮಾಡುವ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೀನ ರಾಶಿ:
ಹೆಚ್ಚಾಗಿ, ಮೀನ ರಾಶಿಯವರು ನಿಮ್ಮಿಂದ ವಿಷಯಗಳನ್ನು ಮರೆಮಾಡುವುದನ್ನು ಗಮನಿಸಬಹುದು. ಅವರು ತಮ್ಮ ಮನಸ್ಸಿನಲ್ಲಿ ಮತ್ತು ತಲೆಯೊಳಗೆ ಏನಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸಿ ಹೇಳುವುದು ಬಹಳ ಅಪರೂಪ. ಈ ರಾಶಿಯವರು ಯಾವಾಗಲೂ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ನಿಯಮವನ್ನು ಪಾಲಿಸುತ್ತಿದ್ದೇವೆ ಎಂದು ನಂಬಿಕೊಂಡಿರುತ್ತಾರೆ. ಅವರು ನಿಮ್ಮ ಬಗ್ಗೆ ಏನು ಭಾವಿಸುತ್ತಾರೆ ಅಥವಾ ಏನು ಯೋಚಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ, ಇದೇ ಕಾರಣಕ್ಕೆ ಅನೇಕ ಬಾರಿ ನಾವು ಅವರನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು, ಮನಸ್ತಾಪಗಳು ಹುಟ್ಟಿಕೊಳ್ಳುವುದು.

ಸಿಂಹ ರಾಶಿ:
ಸಿಂಹ ರಾಶಿಯವರು ಅಗತ್ಯ ಬಂದಾಗ ಅಥವಾ ಯಾವಾಗ ಬೇಕಾದರೂ ರಹಸ್ಯ ಮಾಡುತ್ತಾರೆ. ತಮಗೆ ಅಥವಾ ತಮ್ಮ ಪ್ರೀತಿಪಾತ್ರರಿಗೆ ಹಾನಿ ಮಾಡುವ ಯಾವುದನ್ನೂ ಬಹಿರಂಗಪಡಿಸುವುದಿಲ್ಲ. ಇವರು ಒಳ್ಳೆಯ ಮನಸ್ಸಿನ ಜನರು, ಆದರೆ ಸಂದರ್ಭ ಸರಿಯಿಲ್ಲದಿದ್ದಾಗ, ಯಾವುದೇ ವಿಚಾರವನ್ನೂ ಹೇಳುವುದಿಲ್ಲ, ಒಳ್ಳೆಯ ಕಾರಣಕ್ಕೆ ಸೀಕ್ರೆಟ್ ಮಾಡುವುದಕ್ಕೆ ಹಿಂದೆ-ಮುಂದೆ ಯೋಚಿಸುವುದಿಲ್ಲ, ಅದಕ್ಕಾಗಿಯೇ ಅನೇಕ ಜನರು ಸಿಂಹ ರಾಶಿಯಿಂದ ನಿರಾಶೆಗೊಳ್ಳುತ್ತಾರೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರ ದೊಡ್ಡ ಅನುಕೂಲ ಹಾಗೂ ಅನಾನುಕೂಲವೆಂದರೆ ಇವರು ಅತ್ಯಂತ ರಹಸ್ಯವಾಗಿರುತ್ತಾರೆ. ಅವರು ನಿಖರವಾಗಿ ಏನು ಯೋಚಿಸುತ್ತಿದ್ದಾರೆಂದು ಹೇಳುವುದು ಕಷ್ಟ. ಅವರ ತಲೆಯಲ್ಲಿ ಏನು ನಡೆಯುತ್ತಿದೆ, ಅವರ ಮುಂದಿನ ನಡೆ ಅಥವಾ ನಿರ್ಧಾರವನ್ನು ಊಹಿಸುವುದು ಕಷ್ಟ. ಈ ಗುಣವು ಆಗಾಗ್ಗೆ ಅವರಿಗೆ ಒಳ್ಳೆಯದು ಜೊತೆಗೆ ಕೆಟ್ಟದ್ದನ್ನು ಮಾಡುತ್ತದೆ.



Click it and Unblock the Notifications
