Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರಾಶಿಯವರು ತುಂಬಾ ಕ್ರಿಯೇಟಿವ್ ಆಗಿರುತ್ತಾ
ಕೆಲವರಿರುತ್ತಾರೆ, ಎಲ್ಲರೂ ತುಳಿದ ಹಾದಿಯನ್ನೇ ತುಳೀತಾ "ತಮ್ಮಿಂದಾಗೋದು ಇಷ್ಟೇ" ಅಂತಾ ಅವೇ ಒಂದಿಷ್ಟು ಚಟುವಟಿಕೆಗಳಿಗೆ ಜೋತು ಬಿದ್ದುಕೊಂಡು "ಗುಂಪಿನಲ್ಲಿ ಗೋವಿಂದ" ಆಗಿಹೋಗೋರು. ಇಂತಹವರು ಅದೇ ಹಳೆಯ, ಸಾಂಪ್ರದಾಯಿಕ ವಿಧಾನಗಳನ್ನ ಪಾಲನೆ ಮಾಡೋರು, ಅರ್ಥಾತ್ "ಅಪ್ಪ ನೆಟ್ಟ ಆಲದ ಮರಕ್ಕೆ ನೇಣು" ಹಾಕ್ಕೋಳ್ಳೋರು. ಗಾಡಿ ಎಳೆಯೋ ಕುದುರೆ ಅತ್ತಿತ್ತ ದೃಷ್ಟಿ ಹಾಯಿಸಬಾರದೂಂತಾ ಅದರ ಕಣ್ಣುಗಳ ಬದಿಗಳಿಗೆ ಪಟ್ಟಿ ಕಟ್ಟಿಬಿಡ್ತಾರೆ ನೋಡಿ.... ಆಗ ಅವು ಸಾಗಿ ಹೋಗಬೇಕಾದ ನೇರ ದಾರಿಯನ್ನಷ್ಟೇ ಹೊರತುಪಡಿಸಿ ಇನ್ನೆಲ್ಲೂ ಆ ಕಡೆ ಈ ಕಡೆ ನೋಡೋದೇ ಇಲ್ಲ. ಹಾಗಿದ್ದು ಬಿಡೋರು ಇಂತಹ ಮಂದಿ.
ಇನ್ನೂ ಕೆಲವರಿರುತ್ತಾರೆ. ಇವರು ಮೇಲೆ ವಿವರಿಸಿರೋ ಗುಂಪಿಗೆ ಸೇರ್ದೋರಲ್ಲ. ಎಲ್ಲರೂ ತುಳಿದ ಹಾದಿಯಲ್ಲೇ ಸಾಗೋ ಬದಲು, "ಯಾರೂ ತುಳಿಯದ ದಾರಿಯಲ್ಲಿ ಸಾಗೋದು" ಇವರ ಜಾಯಮಾನ. ಇಂತಹವರು ಯಾವಾಗಲೂ ಸೃಜನಶೀಲರಾಗಿರೋರು, ಏನಾದರೊಂದು ಹೊಸತನ್ನ ಸೃಷ್ಟಿಸೋರು. ಇವರ ಯೋಚನಾ ಶೈಲಿನೇ ಬೇರೆ ರೀತಿ. ಇಂಗ್ಲೀಷ್ ನಲ್ಲಿ "ಥಿಂಕಿಂಗ್ ಔಟ್ ಆಫ಼್ ದ ಬಾಕ್ಸ್" ಅಥವಾ ಕನ್ನಡದಲ್ಲಿ "ರವಿ ಕಾಣದ್ದನ್ನ ಕವಿ ಕಂಡ" ಅಂತಾರಲ್ಲ, ಆ ರೀತಿ ಇರುತ್ತೆ ಇವರು ಯೋಚಿಸೋ ರೀತಿ. ನಿಜ ಹೇಳಬೇಕೆಂದರೆ ಈ ಸೃಜನಶೀಲ ಯೋಚನೆ ಒಂದು ವರ ಇದ್ದ ಹಾಗೆ. ಆದ್ರಿಂದ್ಲೇ ಇಂತಹವರು "ಹತ್ತರ ಕೂಡಿ ಹನ್ನೊಂದರಂತಾಗದೇ" ವಿಶೇಷರೆಸಿಕೊಳ್ಳುತ್ತಾರೆ. ಸೃಜನಶೀಲ ವ್ಯಕ್ತಿಗಳು ಹೊಸತೇನನ್ನೋ ಅರಸುವುದರಿಂದ, ಸಮಸ್ಯೆಗಳಿಗೂ ಅವರಲ್ಲಿ ವಿಭಿನ್ನ ರೀತಿಯ, ಅನನ್ಯವಾದ, ತಾಜಾ ಪರಿಹಾರ ಇದ್ದೇ ಇರುತ್ತದೆ.
ವ್ಯಕ್ತಿಯೋರ್ವರ ಗುಣಸ್ವಭಾವಗಳು, ಅವರ ಆಲೋಚನಾ ಧಾಟಿ ಆಯಾ ವ್ಯಕ್ತಿಯ ರಾಶಿಚಕ್ರವನ್ನ ಬಹುವಾಗಿ ಅವಲಂಬಿಸಿರುತ್ತೆ. ಸರ್ವೇಸಾಮಾನ್ಯವಾಗಿ ಎಲ್ಲರಲ್ಲೂ ಅಷ್ಟೋ ಇಷ್ಟೋ ಸೃಜನಶೀಲ ಸಾಮರ್ಥ್ಯ ಇರುತ್ತೆ. ಆದರೆ, ಕೆಲವರಲ್ಲಂತೂ ಇದು ತುಸು ಹೆಚ್ಚೇ ಆಗಿದ್ದು, ವಿಶೇಷವಾದದ್ದೇ ಆಗಿರುತ್ತದೆ. ನಾವಿಲ್ಲಿ ಪಟ್ಟಿಮಾಡಿರೋ 5 ರಾಶಿಚಕ್ರಗಳಲ್ಲಿ ಹುಟ್ಟಿರೋ ವ್ಯಕ್ತಿಗಳಲ್ಲಿ ಇಂತಹ ವಿಶೇಷ ಸೃಜನಶೀಲತೆ ಕಂಡುಬರುತ್ತದೆ. ಹಾಗಾದ್ರೆ ಆ 5 ರಾಶಿಗಳು ಯಾವ್ಯಾವುದು ? ನೋಡೋಣ ಬನ್ನಿ......

ವೃಷಭ
ವೃಷಭ ರಾಶಿಯಲ್ಲಿ ಜನಿಸಿರುವವರು ತೀವ್ರವಾಗಿ ಮತ್ತು ಗಾಢವಾಗಿ ಯೋಚಿಸಬಲ್ಲವರು. ವಿಭಿನ್ನ ರೀತಿಯಲ್ಲಿ ಯೋಚಿಸುವುದೆಂದರೆ ವೃಷಭ ರಾಶಿಗರಿಗೆ ಏನೋ ಖುಷಿ. ಹಾಗೇನೇ ತಮ್ಮ ಭಾವನೆಗಳನ್ನ, ಆಲೋಚನೆಗಳನ್ನ ವಿಭಿನ್ನವಾದ ವಿಶಿಷ್ಟವಾದ ರೀತಿಯಲ್ಲಿ ಹೇಗೆ ವ್ಯಕ್ತಪಡಿಸಬೇಕು ಅನ್ನೋದೂ ಈ ವೃಷಭ ರಾಶಿಗರಿಗೆ ಚೆನ್ನಾಗಿ ತಿಳಿದಿರುತ್ತೆ.

ಸಿಂಹ
ಸಿಂಹರಾಶಿಗರು ಕುಶಾಗ್ರಮತಿಗಳು ಮತ್ತು ತಮ್ಮದೇ ಆದ ರೀತಿಯ ಚಿಂತನಾಲಹರಿಯುಳ್ಳವರು. ಕಸದಿಂದ ರಸವನ್ನ ಸೃಷ್ಟಿಸಬಲ್ಲ ಮಾಂತ್ರಿಕರು ಯಾರಾದರೂ ಇದ್ದರೆ ಅದು ಸಿಂಹ ರಾಶಿಯವರು. ಅಂಜಿಕೆಯೆಂದರೇನೆಂದೇ ಅರಿಯದ ಪ್ರಚಂಡ ಧೀರರು ಇವರು.

ತುಲಾ
ಇವರು ಸಿಕ್ಕಾಪಟ್ಟೆ ಬುದ್ಧಿವಂತರು ಮತ್ತು ಬಲು ನಾಜೂಕಾದ ರಸಿಕತೆಯುಳ್ಳವರು. ಸಹಜ ಬುದ್ಧಿವಂತರಾದ ಇವರಿಗೆ ಹೊಸ ಹೊಸ ಸವಾಲುಗಳಿಗೆ ಒಡ್ಡಿಕೊಳ್ಳೋದ್ರಿಂದ ಒಂಥರಾ ಕಿಕ್ ಸಿಗತ್ತೆ. ಹಾಗೆ ಕೈಗೆತ್ತಿಕೊಂಡ ಸವಾಲುಗಳನ್ನ ವಿಭಿನ್ನವಾದ ಮತ್ತು ಅನಿರೀಕ್ಷಿತವಾದ ರೀತಿಯಲ್ಲಿ ಬಗೆಹರಿಸೋ ಸ್ವಭಾವದವರು ಇವರು.

ಧನು
ತಮ್ಮ ಯೋಚನೆಗಳಲ್ಲಿ ಸ್ವತಂತ್ರಶೀಲರಾಗಿರುವುದರಲ್ಲಿ ಮತ್ತು ಸಾಹಸಿಗಳಾಗಿರುವುದರಲ್ಲಿ ನಂಬಿಕೆಯುಳ್ಳವರೆಂದರೆ ಅವರು ಧನು ರಾಶಿಗರು. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನದವರು ಎಂದೂ ಅಲ್ಲ ಈ ಧನು ರಾಶಿಗರು. ಎಂದೆಂದಿಗೂ ನವನವೀನ, ಸೃಜನಾತ್ಮಕ ರೀತಿಯಲ್ಲಿ ಯೋಚಿಸುವವರು ಈ ಧನು ರಾಶಿಗರು.

ಮೀನ
ಊರ ಜನರು ಹಾದುಹೋದ ದಾರಿಯ ಬಗ್ಗೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳದ ಜನರೆಂದರೆ ಮೀನ ರಾಶಿಗರು. ಹಾಗಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಇವರ ರೀತೀನೂ ಯಾವಾಗಲೂ ವಿಶಿಷ್ಟ, ವಿಭಿನ್ನ. ತಮ್ಮದೇ ಆದ ಕಾಲ್ಪನಿಕ ಲೋಕದಲ್ಲಿ ಬಾಳೋರು ಈ ಮೀನ ರಾಶಿಯವರು ಹಾಗೂ ಬಹುತೇಕ ಸನ್ನಿವೇಶಗಳಲ್ಲಿ ತಮ್ಮ ಆತ್ಮಸಾಕ್ಷಿ ನುಡಿದಂತೆ ನಡೆದುಕೊಳ್ಳೋ ಮಂದಿ ಇವರು.



Click it and Unblock the Notifications
