Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇವುಗಳೇ, ದೀರ್ಘಕಾಲದವರೆಗೂ ಸ್ನೇಹ ಕಾಪಾಡಿಕೊಳ್ಳುವ ರಾಶಿಚಕ್ರಗಳು, ನೀವು ಇದೀರಾ ನೋಡಿಕೊಳ್ಳಿ
ಸ್ನೇಹ ಎಂಬುದು ಒಂದು ಸುಂದರವಾದ ಪಯಣ. ಎಲ್ಲೋ-ಹುಟ್ಟಿ, ಎಲ್ಲೋ ಬೆಳೆದು ಒಟ್ಟಿಗೆ ಸೇರುವ ಮಧುರವಾದ ಬಂಧನ. ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬೇಕೆಂಬುದು ನಿಮಗೆ ತಿಳಿದಿದೆಯೋ ಇಲ್ಲವೋ, ಆದರೆ ಸ್ನೇಹ ತನ್ನಿಂದ ತಾನಾಗಿಯೇ ಹುಟ್ಟಿಕೊಳ್ಳಬೇಕು. ಹೆಚ್ಚಿನ ಜನರು ತಮ್ಮ ಸ್ನೇಹಿತರ ಮಹತ್ವವನ್ನು ತಿಳಿದಿದ್ದರೂ ಸಹ ಎಲ್ಲರೂ ದೀರ್ಘಕಾಲದ ಸ್ನೇಹವನ್ನು ಕಾಪಾಡಿಕೊಳ್ಳುವುದಿಲ್ಲ. ಸಮಯ ಕಳೆದ ಹಾಗೇ ತಮ್ಮ -ತಮ್ಮ ಜೀವನದಲ್ಲಿ ಮಗ್ನರಾಗಿ ಬಿಡುತ್ತಾರೆ. ಯಾವ ರಾಶಿಚಕ್ರ ಚಿಹ್ನೆಗಳು ದೀರ್ಘಕಾಲದ ಸ್ನೇಹವನ್ನು ಮತ್ತು ಇತರರನ್ನು ಹೇಗೆ ಆಕರ್ಷಿತಗೊಳಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನವನ್ನು ತಯಾರಿಸಿದ್ದೇವೆ.
ದೀರ್ಘಕಾಲದವರೆಗೂ ಸ್ನೇಹ ಕಾಪಾಡಿಕೊಳ್ಳುವ ರಾಶಿಚಕ್ರಗಳು ಯಾವುವು ಎಂಬುದನ್ನು ಹೇಳಲಾಗಿದೆ:

ಮೇಷ:
ಮೇಷ ರಾಶಿಯವರು ಸ್ನೇಹಕ್ಕಾಗಿ ಹೆಚ್ಚಿನ ಶಕ್ತಿಯನ್ನು ಹಾಕುತ್ತಾರೆ. ಅವರು ಸಾಕಷ್ಟು ಕಾರ್ಯನಿರತ ಜೀವನಶೈಲಿಯನ್ನು ಹೊಂದಿದ್ದರೂ ಯಾವಾಗಲೂ ತಮ್ಮ ಸ್ನೇಹಿತರಿಗಾಗಿ ಸಮಯವನ್ನು ನೀಡುತ್ತಾರೆ. ಇವರು ದೊಡ್ಡ ಸಾಮಾಜಿಕ ವಲಯವನ್ನು ಹೊಂದಿರುತ್ತಾರೆ ಆದರೆ ಅದರಲ್ಲಿ ಬಹಳಷ್ಟು ಜನರು ದೀರ್ಘಕಾಲದಿಂದ ಇರುವ ಸ್ನೇಹಿತರೇ ಆಗಿರುತ್ತಾರೆ. ತಮ್ಮ ಜೀವನದ ಇತರ ಪ್ರಮುಖ ಅಂಶಗಳ ಬಗ್ಗೆ ಹೆಚ್ಚು ಆಸಕ್ತಿ ಇರುವ ಕಾರಣ ಸ್ನೇಹಕ್ಕಾಗಿ ಅವರು ತುಂಬಾ ಆಸಕ್ತಿ ಹೊಂದಿರುತ್ತಾರೆ.

ಸಿಂಹ:
ಸಿಂಹ ರಾಶಿಯವರು ತುಂಬಾ ಅದ್ಬುತವಾಗಿ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಜನರು ಇದನ್ನು ಸಾಮಾನ್ಯವಾಗಿ ಗ್ರಹಿಸುತ್ತಾರೆ ಏಕೆಂದರೆ ಅವರು ಸಿಂಹ ರಾಶಿಯವರನ್ನು ಯಾವಾಗಲು ಗಮನಿಸುತ್ತಲೇ ಇರುತ್ತಾರೆ, ಇವರ ಜೀವನದಲ್ಲಿ ನಾವು ಇರಬೇಕೆಂದು ಬಯಸುತ್ತಾರೆ. ಅವರು ಯಾವಾಗಲೂ ಆಜೀವ ಸ್ನೇಹಿತರನ್ನು ಹೊಂದಿರುತ್ತಾರೆ. ಈ ರಾಶಿಯವರು ತಮ್ಮ ಸ್ನೇಹಿತರ ನಡುವೆ ಉತ್ತಮ ಭಾಂದವ್ಯವನ್ನು ಹೊಂದಿರುತ್ತಾರೆ.

ತುಲಾ:
ಈ ರಾಶಿಯವರು ಬಹಳ ಸಾಮಾಜಿಕವಾಗಿರುತ್ತವೆ ಮತ್ತು ಅನೇಕ ಸ್ನೇಹಿತರನ್ನು ಕಾಪಾಡಿಕೊಳ್ಳಲು ಒಲವು ತೋರುತ್ತವೆ. ಇವರು ದೀರ್ಘಕಾಲದ ಸ್ನೇಹಿತರ ಇಡೀ ಗುಂಪನ್ನು ಸಹ ಹೊಂದಿದ್ದಾರೆ. ಜೀವನದುದ್ದಕ್ಕೂ ಹೊಸ ಸ್ನೇಹಿತರನ್ನು ಇವರು ಮಾಡಿಕೊಳ್ಳಬಹುದು ಆದರೆ ಹಿಂದಿದ್ದ ಸ್ನೇಹಿತರನ್ನು ಬಿಡಲಾರರು. ತುಲಾ ರಾಶಿಯವರು ಮತ್ತು ಅವರ ಸ್ನೇಹಿತರು ಯಾವುದೇ ತೀರ್ಪು ಇಲ್ಲದೆ ಪರಸ್ಪರರ ಅಭಿಪ್ರಾಯಗಳನ್ನು ಸ್ವೀಕರಿಸುತ್ತಾರೆ.

ವೃಷಭ:
ಈ ರಾಶಿಯವರು ಉತ್ತಮ ಸ್ನೇಹವನ್ನು ರೂಪಿಸಿಕೊಳ್ಳುವವರಾಗಿದ್ದಾರೆ. ಮತ್ತು ಎಲ್ಲಾ ಸಮಯದಲ್ಲೂ ತಮ್ಮ ಸ್ನೇಹಿತರಿಗಾಗಿ ಗಮನ ನೀಡುವವರಾಗಿರುತ್ತಾರೆ. ಅಗತ್ಯವಿದ್ದರೆ ತಮ್ಮ ಸ್ನೇಹಿತರಿಗಾಗಿ ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಲು ಅವರು ಎಂದಿಗೂ ಹೆದರುವುದಿಲ್ಲ. ಅವರು ನಂಬಲರ್ಹರು, ತಾಳ್ಮೆಯಿಂದಿರುತ್ತಾರೆ ಮತ್ತು ಅವರ ಸ್ನೇಹಿತರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ತಯಾರಿರುತ್ತಾರೆ. ಜೀವನ ಕಠಿಣವಾದಾಗ ಅವರು ತಮ್ಮ ಸ್ನೇಹಿತರನ್ನು ತ್ಯಜಿಸುವುದಿಲ್ಲ.

ಮಿಥುನ:
ಒಮ್ಮೆ ನೀವು ಮಿಥುನ ರಾಶಿಯವರನ್ನು ಸ್ನೇಹಿತನನ್ನಾಗಿ ಮಾಡಿಕೊಂಡರೆ, ಅವರು ನಿಮ್ಮನ್ನು ಎಂದಿಗೂ ದೂರಾಗಲು ಬಿಡುವುದಿಲ್ಲ. ಜೀವನ ಸಲಹೆಗಳನ್ನು ನೀಡುವಲ್ಲಿ ಅವರು ಉತ್ತಮರು. ಈ ರಾಶಿಯವರೊಂದಿಗೆ ನೀವು ಸಂಪೂರ್ಣವಾಗಿ ದುರ್ಬಲರಾಗಬಹುದು. ಅವರು ತಮ್ಮ ಸ್ನೇಹಿತರನ್ನು ಮನರಂಜನೆಗಾಗಿ ಇರಿಸಿಕೊಳ್ಳಬಹುದು ಆದರೆ ಯಾವಾಗಲೂ ತಮ್ಮ ಸ್ನೇಹಿತರಿಗೆ ಉತ್ತಮ ಸಮಯವನ್ನು ನೀಡುವುದನ್ನು ಮರೆಯಯಾರರು.

ಮಕರ:
ಈ ರಾಶಿಚಕ್ರದವರು ತನ್ನ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡುತ್ತಾರೆ. ತನ್ನ ಸ್ನೇಹಿತರ ಬಳಗ ತುಂಬಾ ಜನರಿಂದ ಕೂಡಿರಲಿ ಅಥವಾ ಕೆಲವೇ ಕೆಲವು ಜನರನ್ನು ಹೊಂದಿರಲಿ ಸಂಖ್ಯೆ ಅವರಿಗೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ತನ್ನ ಸ್ನೇಹಿತರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಅವರು ಸಾಕಷ್ಟು ಬೆಂಬಲ, ತಾಳ್ಮೆ ಮತ್ತು ವಿಶ್ವಾಸಾರ್ಹರು. ಮಕರ ರಾಶಿಯವರು ತನ್ನ ಸ್ನೇಹಿತರ ಭರವಸೆಗಳನ್ನು ಉಳಿಸಿಕೊಳ್ಳುತ್ತಾರೆ.



Click it and Unblock the Notifications











