Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಕರಾವಳಿಯ ಕಿಂಗ್ ಕೋರಿ ರೊಟ್ಟಿ ಇದರ ವಿಶೇಷತೆ ಏನು ಗೊತ್ತೆ?
ಕೋರಿ ರೊಟ್ಟಿ ಇದು ಕರಾವಳಿಯ ಜನರ ಬಹು ಪ್ರೀಯವಾದ ಖಾದ್ಯ. ಕೋರಿ ಎಂದರೆ ಕೋಳಿ, ರೊಟ್ಟಿ ಎಂದರೆ ಅಕ್ಕಿಯಿಂದ ಮಾಡಿದ ತುಂಬಾ ತೆಳುವಾದ ರೊಟ್ಟಿ. ಕೋರಿ ರೊಟ್ಟಿ ಕರಾವಳಿಗರಿಗೆ ಬರೀ ಖಾದ್ಯವಾಗಿ ಉಳಿದಿಲ್ಲ ಇದು ಅವರ ಭಾವನೆಯ ಜೊತೆಗೆ ಬೆರೆತು ಹೋಗಿದೆ.

ಮಂಗಳೂರಿಗರಿಗೆ ಕೋರಿ ರೊಟ್ಟಿಯ ಜೊತೆಗೆ ಇರುವ ನಂಟು ಎಂತಹದ್ದು? ಯಾವೆಲ್ಲಾ ಸಮಾರಂಭಗಳಲ್ಲಿ ಜನ ಕೋರಿ ರೊಟ್ಟಿಯನ್ನ ಸೇವಿಸ್ತಾರೆ? ಕೋರಿ ರೊಟ್ಟಿಯ ಬಗೆಗೆ ಇರುವ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ತಿಳಿಸ್ತೀವಿ.

ಕಾರ್ಯಕ್ರಮಗಳಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಈ ಕೋರಿ ರೊಟ್ಟಿ
ಕಾಂತಾರ ಸಿನಿಮಾದ ನಂತರ ಕರಾವಳಿಯ ಜನರು ಅನಾದಿ ಕಾಲದಿಂದಲೂ ಆರಾಧಿಸುತ್ತಿರುವ ಭೂತಾರಾಧನೆ ಬಗ್ಗೆ ಇಡೀ ವಿಶ್ವಕ್ಕೆ ಪರಿಚಯವಾಯಿತು. ಇದರ ಜೊತೆಗೆ ಯಕ್ಷಗಾನ, ಕಂಬಳವು ಇಲ್ಲಿನ ಸಂಸ್ಕೃತಿಯ ಒಂದು ಭಾಗ. ಕರ್ನಾಟದ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಹಾರವನ್ನು ಸೇವಿಸ್ತಾರೆ. ಅದೇ ರೀತಿ ಮಂಗಳೂರು ಕೂಡ ತರಾವರಿ ಖಾದ್ಯಗಳಿಗೆ ತುಂಬಾನೇ ಪ್ರಸಿದ್ಧಿ. ನೀರು ದೋಸೆ, ಶಾವಿಗೆ, ಕಡುಬು, ಗೋಲಿಬಜೆ, ಗಟ್ಟಿ, ಗುಂಡ, ಬನ್ಸ್, ಬಸಳೆ-ಕಪ್ಪೆಚಿಪ್ಪು ಹೀಗೆ ಹೇಳುತ್ತಾ ಹೋದರೆ ಅನೇಕ ಖಾದ್ಯಗಳಿದೆ. ಆದ್ರೆ ಅದಕ್ಕೆಲ್ಲ ಕಿಂಗ್, ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಕೋರಿ ರೊಟ್ಟಿ.
ನೀವು ಹಾಗೆ ಸುಮ್ಮನೆ ಕರಾವಳಿಯವರನ್ನು ಮಾತನಾಡಿಸುತ್ತಾ ಅವರಿಗೆ ಇಷ್ಟವಾದ ಖಾದ್ಯ ಯಾವುದು ಅನ್ನೋದನ್ನ ಕೇಳಿ ತಕ್ಷಣ ಅವರ ಬಾಯಿಂದ ಬರುವ ಉತ್ತರ ಕೋರಿ ರೊಟ್ಟಿ. ಮದುವೆ, ಸೀಮಂತದಿಂದ ಹಿಡಿದು ನಾನ್‌ವೆಜ್ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲೂ ಕೋರಿ ರೊಟ್ಟಿ ಇರಲೇಬೇಕು. ಅದೆಷ್ಟೇ ಬಗೆಬಗೆಯ ಖಾದ್ಯಗಳು ಇದ್ದರೂ ಕೂಡ ಅಲ್ಲಿನ ಜನ ಇಷ್ಟಪಟ್ಟು ತಿನ್ನೋದು ಕೋರಿ ರೊಟ್ಟಿ ಒಂದನ್ನು ಮಾತ್ರ. ಕರಾವಳಿಗರ ನಾನ್‌ವೆಜ್ ಮೆನುವಿನಲ್ಲಿ ಯಾವ ಐಟಂ ಬೇಕಾದ್ರು ಮಿಸ್ ಆಗ್ಬಹುದು ಆದ್ರೆ ಕೋರಿ ರೊಟ್ಟಿ ಮಿಸ್ ಆಗೋದಕ್ಕೆ ಚಾನ್ಸೇ ಇಲ್ಲ.

ತೆಳು ಸಾಂಬಾರ್‌ಗೆ ಸೂಪರ್ ಕಾಂಬಿನೇಷನ್ ಕೋರಿ ರೊಟ್ಟಿ
ಸಾಮಾನ್ಯವಾಗಿ ಕೋರಿ ರೊಟ್ಟಿಯನ್ನು ಮನೆಯಲ್ಲಿ ತಯಾರು ಮಾಡುವುದಿಲ್ಲ. ಅದಕ್ಕಾಗಿಯೇ ಮಂಗಳೂರಿನ ಸಣ್ಣ ಕೈಗಾರಿಕೆಗಳಿದ್ದು ಅವರು ಅದನ್ನು ತಯಾರಿಸಿ ಅಂಗಡಿಗೆ ಮಾರಾಟ ಮಾಡುತ್ತಾರೆ. ಇನ್ನೂ ಕೋರಿ ರೊಟ್ಟಿಗೆ ದಪ್ಪ ಸಾಂಬಾರ್ ತಯಾರಿಸಿದರೆ ತಿನ್ನಲು ಆಗುವುದಿಲ್ಲ. ಕರಾವಳಿಯಲ್ಲಿ ಕೋರಿ ರೊಟ್ಟಿಗಾಗಿ ಸ್ಪೆಷಲ್ ಸಾಂಬಾರ್ ತಯಾರು ಮಾಡ್ತಾರೆ. ಅದು ಒಳ್ಳೆ ನೀರಿನಂತೆ ತೇಲುತ್ತಿರುತ್ತದೆ. ಸಾಂಬಾರ್ ರೊಟ್ಟಿಗೆ ಬಿದ್ದ ತಕ್ಷಣ ಚಿಕನ್ ಅಲ್ಲಲ್ಲಿ ಓಡಾಡುತ್ತದೆ. ಅಷ್ಟೊಂದು ತೆಳುವಾಗಿರುತ್ತದೆ ಚಿಕನ್ ಸಾಂಬಾರ್.

ತಿನ್ನುವ ವಿಧಾನ
ಮಂಗಳೂರಿನ ಪ್ರಿಯವಾದ ಖಾದ್ಯವಾಗಿರುವ ಕೋರಿ ರೊಟ್ಟಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಿನ್ನುತ್ತಾರೆ. ಕೆಲವರು ರೊಟ್ಟಿಯ ಮೇಲೆ ಸಿಕ್ಕಾಪಟ್ಟೆ ಸಾಂಬಾರ್ ಹಾಕಿ ರೊಟ್ಟಿಯನ್ನು ಸಾಂಬಾರ್‌ನಲ್ಲಿ ತೇಲಿಸಿ ಬಿಡುತ್ತಾರೆ. ಇನ್ನೂ ಕೆಲವರು ಸ್ವಲ್ಪವೇ ಸ್ವಲ್ಪ ಸಾಂಬಾರ್ ಹಾಕಿ ಅದರಲ್ಲೇ ಅಡ್ಜಸ್ಟ್ ಮಾಡಿಕೊಳ್ತಾರೆ. ಕೆಲವರಿಗೆ ಸಾಂಬಾರ್ ಜೊತೆಗೆ ರೊಟ್ಟಿ ಕರುಕುರು ಅಂತ ಸೌಂಡ್ ಮಾಡುತ್ತಾ ತಿನ್ನುವವರು ಇದ್ದಾರೆ. ವಯಸ್ಸಾದವರು, ಹಲ್ಲು ಇಲ್ಲದವರು ಪೂರ್ತಿ ಚಿಕನ್ ಸಾರ್‌ನಲ್ಲಿ ರೊಟ್ಟಿಯನ್ನು ಮುಳುಗಿಸಿ ತಿಂದರೆ ಒಳ್ಳೆಯದು.
ಸಾಮಾನ್ಯವಾಗಿ ಮನೆಯಲ್ಲಿ ಕುರುಕಲು ತಿಂಡಿಗಳನ್ನು ತಿನ್ನಲು ತಂದಿಟ್ಟಿರುತ್ತೇವೆ. ಆದರೆ ನೀವು ಕರಾವಳಿಗರ ಮನೆಗೆ ಹೋದರೆ ಕೋರಿ ರೊಟ್ಟಿ ಇದ್ದೇ ಇರುತ್ತದೆ. ಆಗಾಗೇ ಕೋಳಿ ಸಾರು ಮಾಡುವುದರಿಂದ ಯಾವಾಗ ಬೇಕಾದರೂ ರೊಟ್ಟಿಯ ಜೊತೆಗೆ ಸವಿಯಬಹುದು ಎಂಬ ಉದ್ದೇಶದಿಂದಲೇ ರೊಟ್ಟಿಯನ್ನ ಮನೆಯಲ್ಲಿ ಶೇಖರಿಸಿ ಇಡುತ್ತಾರೆ. ಮನೆಯಲ್ಲಿ ಕೋಳಿ ಸಾರು ಮಾಡಿದಾಗ ಅನ್ನ ಇರದಿದ್ದರೂ ತೊಂದರೆ ಇಲ್ಲ ಆದರೆ ರೊಟ್ಟಿ ಮಾತ್ರಬೇಕೆ ಬೇಕೆ.

ಮೀನು ಸಾರಿಗೂ ಕೋರಿ ರೊಟ್ಟಿ ಸೂಪರ್ ಕಾಂಬಿನೇಷನ್
ರೊಟ್ಟಿಗೆ ಚಿಕನ್ ಸಾರು ಚಂದ. ಒಂದು ವೇಳೆ ಚಿಕನ್ ಸಾರ್ ಇಲ್ಲದಾಗ ಮೀನು ಸಾರ್ ಕೂಡ ರೊಟ್ಟಿಗೆ ಸೂಪರ್ ಕಾಂಬಿನೇಷನ್. ಕೆಲವೊಂದು ಸಮಯದಲ್ಲಿ ಮೀನು, ಕೋಳಿ ಸಾರ್ ಇಲ್ಲದಾಗ ತರಕಾರಿ ಸಾಂಬಾರ್ ಆದರೂ ತೊಂದರೆ ಇಲ್ಲ ಅಂತ ತರಕಾರಿಯ ಸಾಂಬಾರ್ ಜೊತೆಗೆ ರೊಟ್ಟಿ ತಿನ್ನುತ್ತಾರೆ. ಅಷ್ಟರ ಮಟ್ಟಿಗೆ ಮಂಗಳೂರಿಗರು ಕೋರಿ ರೊಟ್ಟಿ ಪ್ರೀಯರು.
ಇನ್ನೂ ಕರಾವಳಿಗರು ದೇಶದ ಮೂಲೆ ಮೂಲೆಯಲ್ಲಿ ನೆಲೆಸಿದ್ದು, ಕೋರಿ ರೊಟ್ಟಿ ತಿನ್ನಬೇಕು ಅಂದುಕೊಂಡಾಗ ಅವರ ಮೊದಲ ಆದ್ಯತೆ ಕರಾವಳಿ ಮೂಲದ ಹೋಟೆಲ್ ಆಗಿರುತ್ತದೆ. ಅಲ್ಲಿಗೆ ಹೋದ ನಂತರ ಮೊದಲು ಆರ್ಡರ್ ಮಾಡೋದೆ ಕೋರಿ ರೊಟ್ಟಿ. ಮನೆ ಬಿಟ್ಟು ಬಂದು ಎಷ್ಟೋ ದಿನಗಳ ನಂತರ ನಮ್ಮ ಇಷ್ಟದ ಖಾದ್ಯ ಸೇವಿಸುವ ಖಷಿಯೇ ಬೇರೆ ಅಲ್ವಾ? ಅದನ್ನು ನೆನೆದರೆ ಖಂಡಿತ ಬಾಯಿಯಲ್ಲಿ ನೀರು ಬರುತ್ತೆ.
ಒಟ್ಟಿನಲ್ಲಿ ಕರಾವಳಿಗರಿಗೂ ಕೋರಿ ರೊಟ್ಟಿಗೂ ಅದೇನೋ ಒಂಥರ ಬಿಡಿಸಲಾರದ ಬಂಧ. ಇದರ ಜೊತೆಗೆ ಕೋರಿ ರೊಟ್ಟಿ ಟೇಸ್ಟಿ ಹಾಗೂ ಆರೋಗ್ಯಕರವೂ ಹೌದು. ಕರಾವಳಿಗೆ ಭೇಟಿ ಕೊಟ್ಟಾಗ ಕೋರಿ ರೊಟ್ಟಿ ಸವಿಯೋದನ್ನ ಮಾತ್ರ ಮರೀಬೇಡಿ.



Click it and Unblock the Notifications