Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಈ 3 ರಾಶಿಯವರಿಗೆ ಜೀವನದಲ್ಲಿ 'ರಾಜಯೋಗ' ಇದೆಯಂತೆ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಜಯೋಗವನ್ನು ಮಂಗಳಕರ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಈ ಯೋಗವಿದೆಯೋ ಅವರು ರಾಜರಂತೆ ಜೀವನ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಯಾರ ಜಾತಕದಲ್ಲಿ ಎಲ್ಲಾ ಗ್ರಹಗಳು ಎರಡು, ಮೂರನೇ, ಆರನೇ, ಎಂಟನೇ ಮತ್ತು ಹನ್ನೆರಡನೇ ಮನೆಯಲ್ಲಿದ್ದವೋ ಅಂತಹ ವ್ಯಕ್ತಿಯನ್ನು ರಾಜಯೋಗದೊಂದಿಗೆ ಜನಿಸಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಇವರಿಗೆ ಜೀವನದಲ್ಲಿ ಸಂಪತ್ತು, ಗೌರವ ಮತ್ತು ಗೌರವಕ್ಕೆ ಕೊರತೆಯಾಗುವುದಿಲ್ಲ. ಹಾಗಾದರೆ, ಇಂತಹ ರಾಜಯೋಗವಿರುವ ರಾಶಿಗಳಾವುವು ನೋಡೋಣ.
ಮೇಷದಿಂದ ಮೀನದವರೆಗೆ ಯಾವ 3 ರಾಶಿಯವರಿಗೆ ಜೀವನದಲ್ಲಿ 'ರಾಜಯೋಗ'ವಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ವೃಷಭ ರಾಶಿ:
ಈ ರಾಶಿಯ ಜನರು ಸಂಪತ್ತಿನ ಅಂಶವಾದ ಶುಕ್ರ ಗ್ರಹದಿಂದ ಪ್ರಭಾವಿತರಾಗಿರುತ್ತಾರೆ. ಶುಕ್ರನ ಕಾರಣದಿಂದಾಗಿ, ಈ ಜನರು ಜೀವನದಲ್ಲಿ ಸಾಕಷ್ಟು ಸಂಪತ್ತನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಜೊತೆಗೆ ಎಲ್ಲಾ ಭೌತಿಕ ಸುಖಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಐಷಾರಾಮಿ ಜೀವನವನ್ನು ಇಷ್ಟಪಡುವ ಇವರಿಗೆ ಅಂತಹ ಜೀವನವೇ ಸಿಗುವುದು. ಇವರ ಅದೃಷ್ಟ ತುಂಬಾ ಚೆನ್ನಾಗಿದ್ದು, ಇದರಿಂದಾಗಿ ಜೀವನದಲ್ಲಿ ಎಲ್ಲವನ್ನೂ ಪಡೆಯುತ್ತಾರೆ. ಹಾಗೂ ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಗಳನ್ನು ಸಹ ಬಹಳ ಬೇಗನೇ ಸಾಧಿಸುತ್ತಾರೆ.

ಕರ್ಕಾಟಕ ರಾಶಿ:
ಈ ರಾಶಿಯ ಜನರು ತುಂಬಾ ಬುದ್ಧಿವಂತರು ಮತ್ತು ಕಷ್ಟಪಟ್ಟು ದುಡಿಯುವವರು. ಈ ಎರಡೂ ಗುಣಗಳು ಯಶಸ್ವಿಯಾಗಲು ಅವಶ್ಯಕವಾಗಿರುವುದರಿಂದ ಯಶಸ್ಸನ್ನು ಬೇಗನೇ ಗಳಿಸುತ್ತಾರೆ. ಜತೆಗೆ ಅವರ ಜೀವನದಲ್ಲಿ ರಾಜಯೋಗವಿರುವುದರಿಂದ ಇವರಿಗೆ ಅದೃಷ್ಟ ಕೂಡ ಕೈ ಹಿಡಿಯುತ್ತದೆ. ಇವರ ಜೀವನದಲ್ಲಿ ಸೌಕರ್ಯಗಳಿಗೆ ಕೊರತೆಯಾಗುವುದಿಲ್ಲ. ಈ ರಾಶಿಯವರು ಮಾಡಲು ನಿರ್ಧರಿಸಿದ ಕೆಲಸದಲ್ಲಿ ಯಶಸ್ಸನ್ನು ಪಡೆದ ನಂತರವೇ ಸುಮ್ಮನೆ ಕೂರುವುದು. ಅಲ್ಲಿಯವರೆಗೆ ಪ್ರಯತ್ನ ಪಡುತ್ತಲೇ ಇರುತ್ತಾರೆ. ಈ ರಾಶಿಚಕ್ರದ ಹೆಚ್ಚಿನ ಜನರು ಕಠಿಣ ಪರಿಶ್ರಮದಿಂದ ಶ್ರೀಮಂತರಾಗುತ್ತಾರೆ.

ವೃಶ್ಚಿಕ ರಾಶಿ:
ಈ ರಾಶಿಯ ಜನರು ಬುದ್ಧಿವಂತರು, ಶ್ರಮಜೀವಿಗಳು ಮತ್ತು ಹಠವಾದಿಗಳು. ಅಲ್ಲದೆ, ಅವರ ಅದೃಷ್ಟ ಕೂಡ ತುಂಬಾ ಚೆನ್ನಾಗಿದೆ. ಇದರಿಂದಾಗಿ ಅವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ದೃಢಸಂಕಲ್ಪವಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ ಈ ರಾಶಿಯವರು. ಅವರೊಳಗೆ ಯಾವಾಗಲೂ ವಿಭಿನ್ನ ಶಕ್ತಿ ಇರುತ್ತದೆ. ಇದೇ ಕಾರಣದಿಂದ ಯಾವುದೇ ಕೆಲಸದಲ್ಲೂ ಬೇಗನೆ ಆಯಾಸವನ್ನು ಅನುಭವಿಸುವುದಿಲ್ಲ. ಅವರು ಹಲವಾರು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಬಹುದು. ಇವರ ಜೀವನದಲ್ಲಿಯೂ ರಾಜಯೋಗವಿದೆ.



Click it and Unblock the Notifications