Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಹುಡುಗಿಯರು ಗೂಗಲ್‌ನಲ್ಲಿ ಹೆಚ್ಚಾಗಿ ಇವುಗಳನ್ನುಹುಡುಕುತ್ತಾರಂತೆ!
ಇಂದಿನ ಯುವ ಜನಾಂಗ ಅರ್ಧದಷ್ಟು ಸಮಯವನ್ನು ಇಂಟರ್‌ನೆಟ್‌ನಲ್ಲಿ ಕಳೆಯುತ್ತಿದ್ದಾರೆ. ಯಾವುದೇ ಮಾಹಿತಿಗಾಗಿ ಮೊದಲು ಮಾಡೋದು ಗೂಗಲ್. ಅದೇ ರೀತಿ ಹುಡುಗಿಯರು ಕೂಡ ತಮಗೇನೇ ಬೇಕೆನಿಸಿದರೂ, ಅದಕ್ಕೆ ಗೂಗಲ್ ಮೊರೆ ಹೋಗುತ್ತಾರೆ. ಹೃದಯದಲ್ಲಿ ಪ್ರೀತಿಯ ಭಾವನೆ ಇದ್ದರೆ, ಪ್ರೇಮ ಕವನವನ್ನು ಓದಲು ಅಥವಾ ಅದನ್ನು ತಮ್ಮ ಸಂಗಾತಿಗೆ ಕಳುಹಿಸಲು ಗೂಗಲ್ ಬಳಸುತ್ತಾರೆ. ಇದಲ್ಲದೇ ಹುಡುಗಿಯರು ಬೊಜ್ಜು ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. ಹಾಗಾದರೆ ಹುಡುಗಿಯರು ಗೂಗಲ್‌ನಲ್ಲಿ ಇನ್ನೇನು ಹುಡುಕುತ್ತಾರೆ ಎಂಬುದನ್ನು ಇಲ್ಲಿ ತಿಳಿಯೋಣ.
ವರದಿ ಏನು ಹೇಳುತ್ತೆ?:
ವರದಿಗಳ ಪ್ರಕಾರ, ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಸುಮಾರು 20 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿ ತಮ್ಮ ದೈನಂದಿನ ಜೀವನವನ್ನು ಸುಧಾರಿಸಲು ಇಂಟರ್ನೆಟ್ ಅನ್ನು ಬಳಸುತ್ತಾರೆ. ಇದರಲ್ಲಿ ಶೇ.75ರಷ್ಟು ಮಹಿಳೆಯರು 15-34ರ ವಯೋಮಾನದವರು. ವರದಿಯ ಪ್ರಕಾರ, 31 ಪ್ರತಿಶತ ಹದಿಹರೆಯದವರು ಡಯೆಟಿಂಗ್ ಮತ್ತು ಫಿಟ್ ಆಗಿರಲು ಮಾರ್ಗಗಳ ಬಗ್ಗೆ ಇಂಟರ್ನೆಟ್ ನಲ್ಲಿ ಹುಡುಕುತ್ತಾರೆ. ಇದಲ್ಲದೇ ಶೇ.17 ರಷ್ಟು ಜನರು ಸೆಕ್ಸ್, ಡಿಪ್ರೆಶನ್ ಡ್ರಗ್ಸ್ ಇತ್ಯಾದಿಗಳ ಬಗ್ಗೆ ಹೆಚ್ಚು ಹುಡುಕುತ್ತಾರೆ. ಇದನ್ನು ಹೊರತುಪಡಿಸಿ, ಇನ್ನೂ ಕೆಲವಾರು ಕುತೂಹಲಕಾರಿ ಸಂಗತಿಗಳನ್ನು ಇಂಟರ್ನೆಟ್‌ನಲ್ಲಿ ಹುಡುಕುತ್ತಾರಂತೆ. ಅವುಗಳೇನು ಎಂಬುದು ಈ ಕೆಳಗಿದೆ.

ಹುಡುಗಿಯರು ಹಗಲು ರಾತ್ರಿ ಗೂಗಲ್‌ನಲ್ಲಿ ಹುಡುಕುವ ವಿಷಯಗಳು ಈ ಕೆಳಗಿನಂತಿದೆ:
ವೃತ್ತಿಜೀವನದ ಬಗ್ಗೆ:
ಬಾಲ್ಯದಿಂದಲೂ ತಮ್ಮ ವೃತ್ತಿಜೀವನದ ಮಹತ್ವಾಕಾಂಕ್ಷೆ ಹೊಂದಿರುವ ಹುಡುಗಿಯರು, ಇಂಟರ್ನೆಟ್ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಾರೆ. ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಯಾವ ದಿಕ್ಕಿನಲ್ಲಿ ಹೋಗಬೇಕು, ಯಾವ ವೃತ್ತಿಯನ್ನು ಮಾಡಬೇಕು ಅಥವಾ ಅವರು ಯಾವ ಕೋರ್ಸ್ ಮಾಡಬೇಕು ಎಂಬಿತ್ಯಾದಿ ವಿವರಗಳ ಬಗ್ಗೆ ದಿನವಿಡೀ ಹುಡುಕುತ್ತಾ, ಮಾಹಿತಿ ಕಲೆ ಹಾಕುತ್ತಾರೆ.

ಸೌಂದರ್ಯ ವೃದ್ಧಿಯ ಬಗ್ಗೆ:
ಇದಲ್ಲದೇ, ತಮ್ಮ ಸೌಂದರ್ಯಕ್ಕಾಗಿ ಹೊಸ ಸಲಹೆಗಳನ್ನು ಅಳವಡಿಸಿಕೊಳ್ಳುವ ಅನೇಕ ಮಹಿಳೆಯರು ತಮ್ಮನ್ನು ತಾವು ಸುಂದರವಾಗಿರಿಸಿಕೊಳ್ಳಲು ಇಂಟರ್ನೆಟ್‌ನಲ್ಲಿ ಎಲ್ಲಾ ರೀತಿಯ ಸಂಶೋಧನೆಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಇರುವ ಮಾರ್ಗಗಳೇನು? ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಬಗ್ಗೆ ಹಾಗೂ ಅನೇಕ ಮನೆಮದ್ದುಗಳ ಬಗ್ಗೆ ಹುಡುಕುತ್ತಾರೆ.

ಫಿಟ್‌ನೆಸ್ ಬಗ್ಗೆ:
ಅನೇಕ ಹುಡುಗಿಯರು ತಮ್ಮ ಬೊಜ್ಜಿನಿಂದ ಕೂಡ ತೊಂದರೆಗೊಳಗಾಗುತ್ತಾರೆ. ಅಂತಹವರು ಹೆಚ್ಚಾಗಿ ತನ್ನ ಬೊಜ್ಜು ಕಡಿಮೆ ಮಾಡಲು ಸಲಹೆಗಳನ್ನು ಹುಡುಕುತ್ತಾರೆ. ಜೊತೆಗೆ ಫಿಟ್ ಆಗಿರಲು ಏನು ಮಾಡಬೇಕು, ಸುಲಭವಾಗಿ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಅದಕ್ಕಿರುವ ದಾರಿಗಳು, ಉತ್ತಮ ಫಿಟ್‌ನೆಸ್ ತರಬೇತಿಗಳ ಬಗ್ಗೆ ಸರ್ಚ್ ಮಾಡುತ್ತಾರೆ.

ಕೂದಲಿನ ಸ್ಟೈಲಿಂಗ್ ಬಗ್ಗೆ:
ಹುಡುಗಿಯರು ಕೂಡ ಕೂದಲಿನ ಬಗ್ಗೆ ತುಂಬಾ ಪೊಸೆಸಿವ್ ಆಗಿರುತ್ತಾರೆ. ಆದ್ದರಿಂದ ಅವರು ತಮ್ಮ ಕೂದಲನ್ನು ಹೇಗೆ ಕತ್ತರಿಸಬೇಕು? ಯಾವ ಸ್ಟೈಲ್ ತನಗೆ ಹೊಂದಿಕೆಯಾಗುವುದು, ಯಾವ ಕಲರ್ ಸರಿಹೊಂದುತ್ತೆ? ತನ್ನ ಮುಖಕ್ಕೆ ಸೂಕ್ತವಾಗುವ ಹೇರ್ ಕಟ್ಟಿಂಗ್ ಯಾವುದು ಎಂಬುದರ ಕುರಿತು ಅರಿತುಕೊಳ್ಳಲು ಆಗಾಗ ಗೂಗಲ್ ಮಾಡುತ್ತಾಳೆ. ಇದರಿಂದ ಅವಳು ತನ್ನ ಕೂದಲನ್ನು ಅವಳಿಗೆ ಅನುಗುಣವಾಗಿ ಪಡೆಯಬಹುದು.

ಲೈಂಗಿಕ ಜೀವನದ ಬಗ್ಗೆ:
ಇನ್ನೂ ಕೆಲವರು ಲೈಂಗಿಕ ಜೀವನ, ಖಿನ್ನತೆಯ ವಿಚಾರಗಳು, ಕೆಲವೊಮ್ಮೆ ಡ್ರಗ್ಸ್‌ಗಳ ಬಗ್ಗೆಯೂ ಹುಡುಕುತ್ತಾರೆ. ಅವುಗಳಿಗೆ ಸಂಬಂಧಿಸಿದ ಗೊಂದಲಗಳಿಗೆ ಗೂಗಲ್ ಮಾಡಿ, ಪರಿಹಾರ ಕಂಡುಕೊಳ್ಳುತ್ತಾರೆ.



Click it and Unblock the Notifications