ಪ್ರತಿಯೊಂದು ರಾಶಿಯ ಕುರಿತ ಅಚ್ಚರಿಯ ಸಂಗತಿಗಳಿವು

ಜ್ಯೋತಿಷ್ಯ ಶಾಸ್ತದ ಪ್ರಕಾರ 12 ರಾಶಿಚಕ್ರ ಚಿಹ್ನೆಗಳು ಇವೆ. ಅದೇ ಮೇಷದಿಂದ ಹಿಡಿದು ಮೀನ ರಾಶಿವರೆಗೆ ಇರುವ ದ್ವಾದಶ ರಾಶಿಚಕ್ರ ಚಿಹ್ನೆಗಳು. ಇವುಗಳನ್ನು 12 ತಿಂಗಳಂತೆ ವಿಂಗಡಿಸಲಾಗಿದೆ. ಪ್ರತಿಯೊಬ್ಬರ ಜನ್ಮದಿನ ಹಾಗೂ ಘಳಿಗೆಯ ಪ್ರಕಾರ ನಿರ್ದಿಷ್ಟ ರಾಶಿಚಕ್ರ ಇರುತ್ತದೆ. ಈ ರಾಶಿಚಕ್ರದಲ್ಲಿ ಪ್ರತಿದಿನ ಏನೆಲ್ಲಾ ಬದಲಾವಣೆ ಆಗುತ್ತವೆ ಎಂಬುದನ್ನು ಸಾಮಾನ್ಯವಾಗಿ ತಿಳಿದಿರುತ್ತೇವೆ.

Unknown and Surprising Facts of Each Zodiac Sign In Kannada

ಯಾವ ರಾಶಿಗೆ, ಯಾವ ದಿನ ಉತ್ತಮವಾಗಿರುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತçದ ಪ್ರಕಾರ ನಾವು ತಿಳಿದುಕೊಳ್ಳಬಹುದು. ಆದರೆ ಈ ಎಲ್ಲದರ ಹೊರತಾಗಿ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಕೆಲವು ಅಪರಿಚಿತ ಮತ್ತು ಆಶ್ಚರ್ಯಕರ ಸಂಗತಿಗಳಿವೆ. ಹಾಗಾದ್ರೆ ಬನ್ನಿ, ಎಲ್ಲಾ ನಕ್ಷತ್ರ ಚಿಹ್ನೆಗಳ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳು ಇಲ್ಲಿವೆ ನೋಡ್ಕೋಂಡು ಬರೋಣ.

ಜ್ಯೋತಿಷ್ಯದಲ್ಲಿ 12 ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿದಿಲ್ಲದ ಸಂಗತಿಗಳು:

ಮೇಷ ರಾಶಿ:

ಮೇಷ ರಾಶಿ:

ಮೇಷ ರಾಶಿಯ ಜನರು ಅಪಘಾತಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದ್ದರಿಂದ, ಅವರು ಯಾವಾಗಲೂ ಸುರಕ್ಷಿತವಾಗಿ ಮತ್ತು ಜಾಗರೂಕರಾಗಿರಬೇಕು. ವಾಹನಗಳಲ್ಲಿ ಓಡಾಡುವಾಗ ಅಥವಾ ವಾಹನ ಚಲಾಯಿಸುವಾಗ ಆದಷ್ಟು ಸುರಕ್ಷಿತವಾಗಿರಬೇಕು. ಅಷ್ಟೇ ಅಲ್ಲ, ಈ ಹಿಂದೆ ಅಥವಾ ಇನ್ಮುಂದೆ ನೀವು ಯಾವುದಾದರೂ ಗಾಯಗೊಂಡಿರುವ ವ್ಯಕ್ತಿಗಳನ್ನು ನೋಡಿದರೆ ಅವರೂ ಮೇಷ ರಾಶಿಗೆ ಸೇರಿದರಾಗಿರುತ್ತಾರೆ.

ವೃಷಭ ರಾಶಿ:

ವೃಷಭ ರಾಶಿ:

ದಬ್ಬಾಳಿಕೆಯಲ್ಲಿ ವಿಶ್ವಪ್ರಸಿದ್ದಿಯಾದ ಹೆಚ್ಚಿನವರು ಈ ವೃಷಭ ರಾಶಿಗೆ ಸೇರಿದವರು. ಅಂದ್ರೆ ಸದ್ದಾಂ ಹುಸೇನ್, ಅಡಾಲ್ಫ್ ಹಿಟ್ಲರ್ ಇವರೆಲ್ಲರ ರಾಶಿ ಚಕ್ರ ಚಿಹ್ನೆ ವೃಷಭ. ಇದರರ್ಥ ಈ ರಾಶಿ ಚಿಹ್ನೆಗೆ ಸೇರಿದವರು ಜಗತ್ತಿಗೆ ವಿನಾಶವನ್ನು ಉಂಟುಮಾಡಬಹುದು ಅನ್ನೋದು. ಹಾಗಾದ್ರೆ ವೃಷಭ ರಾಶಿಗೆ ಸೇರಿದವರ ಮೇಲೆ ಒಂದು ಕಣ್ಣು ಇಡೋದು ಒಳ್ಳೆದು ಅನ್ನಿಸುತ್ತೆ ಅಲ್ವಾ?

ಮಿಥುನ ರಾಶಿ:

ಮಿಥುನ ರಾಶಿ:

ಅಮೆರಿಕಾದ ಅಧ್ಯಕ್ಷರಲ್ಲಿ ಇಬ್ಬರು ಈ ಮಿಥುನ ರಾಶಿ ಎಂಬ ಸ್ಟಾರ್ ಚಿಹ್ನೆಯಿಂದ ಬಂದವರು. ಅದ್ರಲ್ಲಿ ಒಬ್ಬರು ಜಾನ್ ಎಫ್. ಕೆನಡಿ ಮತ್ತು ಇನ್ನೊಬ್ಬರು ಡೊನಾಲ್ಡ್ ಟ್ರಂಪ್. ಅಂದ್ರೆ ಈ ರಾಶಿಯವರ ಅದೃಷ್ಠ ತುಂಬಾ ಚೆನ್ನಾಗಿದೆ ಎಂದರ್ಥ. ಮುಂದೊಂದು ದಿನ ಒಳ್ಳೆಯ ಸ್ಥಾನಕ್ಕೆ ಹೋಗುವಂತಹ ಎಲ್ಲಾ ಲಕ್ಷಣವಿದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ದಾಖಲೆಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ಅರೆಸ್ಟ್ ಅಥವಾ ಬಂಧನವಾದ ಅಪರಾಧಿಗಳಲ್ಲಿ ಅತೀ ಹೆಚ್ಚಿನವರು ಈ ಕರ್ಕಾಟಕ ರಾಶಿಗೆ ಸೇರಿದವರಂತೆ. ಅರೇ ಕರ್ಕಾಟಕ ರಾಶಿಯವರನ್ನೇ ಹುಡುಕ್ಕೊಂಡು ಹೋಗಿ ಅರೆಸ್ಟ್ ಮಾಡಿದಾರೆನೋ ಅಥವಾ ಕೇವಲ ಈ ರಾಶಿಯವರಷ್ಟೇ ತಪ್ಪು ಮಾಡೋದು ಅನ್ಕೋಬೇಡಿ. ಬೇರೆ ರಾಶಿಗಳಿಗೆ ಹೋಲಿಕೆ ಮಾಡಿದ್ರೆ ಈ ರಾಶಿಯವರ ಪ್ರಮಾಣ ಸ್ವಲ್ಪ ಜಾಸ್ತಿ. ಇದಕ್ಕೆ ಅವರಿಗೆ ಗ್ರಹಗತಿಯಿಂದ ಉಂಟಾದ ಮಾನಸಿಕ ಅಸ್ಥಿರತೆಯು ಕಾರಣವಾಗಿರಬಹುದು.

ಸಿಂಹ ರಾಶಿ:

ಸಿಂಹ ರಾಶಿ:

ಈ ರಾಶಿಯವರು ಹೆಚ್ಚಾಗಿ ಜಗತ್ತಿನ ಶ್ರೇಷ್ಠ ನಾಯಕರಾಗಿದ್ದಾರೆ. ಆದರೆ ಪ್ರಪಂಚದಾದ್ಯಂತದ ಹೆಚ್ಚಿನ ಮಹಿಳಾ ಕ್ರೀಡಾಪಟುಗಳು ಈ ರಾಶಿಚಕ್ರ ಚಿಹ್ನೆಗೆ ಸೇರಿದವರಾಗಿದ್ದಾರೆ. ಈ ರಾಶಿಯ ಹೊಂದಿರುವ ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಾರೆ. ಅವರಲ್ಲಿ ಸ್ಪರ್ಧಾಮನೋಭಾವ, ಅದಕ್ಕನುಗುಣವಾದ ಸಾಮರ್ಥ್ಯ ಸಾಕಷ್ಟಿರುತ್ತದೆ. ಅದೇ ಕಾರಣಕ್ಕೆ ಹೆಚ್ಚು ಮಹಿಳಾ ಕ್ರೀಡಾಪಟುಗಳು ಕಾಣಸಿಗೋದು.

ಕನ್ಯಾರಾಶಿ:

ಕನ್ಯಾರಾಶಿ:

ಈ ರಾಶಿಯವರು ತಮ್ಮ ಮೇಲೆ ಸಾಕಷ್ಟು ಒತ್ತಡವನ್ನು ಹಾಕಿಕೊಳ್ಳುತ್ತಾರೆ. ಇದು ಅವರ ಅನಾರೋಗ್ಯಕ್ಕೆ ಕಾರಣವಾಗಬಹುದು. ಮುಖ್ಯವಾಗಿ, ಕನ್ಯಾ ರಾಶಿಯವರು ಹೈಪೋಕಾಂಡ್ರಿಯಕ್ಕೆ ಗುರಿಯಾಗುತ್ತಾರೆ. ಅಂದ್ರೆ ನಿಮಗೇನೂ ಬಹಳ ಗಂಭೀರವಾದ ಕಾಯಿಲೆ ಬಂದಿದೆ ಎಂದು ಚಿಂತೆಗೀಡಾಗುತ್ತೀರಾ. ಆದರೆ ಅಲ್ಲಿ ನೀವು ಚಿಂತೆ ಮಾಡುವಷ್ಟು ಮಟ್ಟದ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಗಳು ಇರುವುದೇ ಇಲ್ಲ. ಇದು ಈ ರಾಶಿಯವರಿಗಿರುವ ಮನಸ್ಥಿತಿ.

ತುಲಾ ರಾಶಿ:

ತುಲಾ ರಾಶಿ:

ತುಲಾ ರಾಶಿಯವರು ಬಹಳ ಪ್ರಾಮಾಣಿಕ ಹಾಗೂ ನಿಷ್ಟಾವಂತ ವ್ಯಕ್ತಿಗಳಾಗಿರುತ್ತಾರೆ. ಪ್ರೀತಿ, ಪ್ರೇಮ ಹಾಗೂ ಪ್ರಣಯದ ವಿಚಾರದಲ್ಲೂ ತಮ್ಮ ಸಂಗಾತಿಗೆ ಯಾವಾಗಲೂ ನಿಷ್ಟಾವಂತರಾಗಿರುತ್ತಾರೆ. ಯಾವ ವಿಚಾರದಲ್ಲೂ ಮೋಸ ಮಾಡಲು ಹೋಗುವುದಿಲ್ಲ. ಇವರ ಈ ಪ್ರಾಮಾಣಿಕ ಗುಣ ಜನರಿಗೆ ಇಷ್ಟವಾಗಿ, ಇವರ ಕಂಪನಿಯನ್ನು ಎಲ್ಲರೂ ಬಯಸುತ್ತಾರೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಪ್ರಪಂಚದಾದ್ಯಂತದ ಶೇಕಡಾ 9.6 ನಾಯಕರು ಈ ರಾಶಿಗೆ ಸೇರಿದವರು. ಅವರು ರಕ್ಷಣಾತ್ಮಕ, ನಿಷ್ಠಾವಂತ ಮತ್ತು ಧೈರ್ಯಶಾಲಿಯಾಗಿರುತ್ತಾರೆ. ಅದಕ್ಕಾಗಿಯೇ ನಾಯಕನ ಪಟ್ಟಕ್ಕೆ ಏರಿರುತ್ತಾರೆ. ತಮ್ಮ ಈ ಗುಣಗಳಿಂದ ಸಮಸ್ಯೆಗಳನ್ನು ನಿವಾರಿಸಿ ತನ್ನ ಪ್ರಜೆಗಳಿಗೆ ಅಥವಾ ತನ್ನ ನಂಬಿದವರಿಗೆ ನೆರಳಾಗಿರುತ್ತಾರೆ. ಆದರೆ ತಮ್ಮ ಪ್ರೀತಿಪಾತ್ರರು ಮತ್ತು ವಸ್ತುಗಳ ಬಗ್ಗೆ ಬಹಳ ರಹಸ್ಯ ಮತ್ತು ಸ್ವಾಮ್ಯ ಹೊಂದಿದ್ದಾರೆ.

ಧನು ರಾಶಿ:

ಧನು ರಾಶಿ:

ಈ ಜನರು ತಮ್ಮ ಸಂಬಂಧದಲ್ಲಿ ನಿಷ್ಠಾವಂತರಾಗಿರುವುದಿಲ್ಲ. ಆದ್ದರಿಂದ, ಡೇಟಿಂಗ್ ಹೋಗುವ ಮೊದಲು ಇವರ ಉದ್ದೇಶವನ್ನು ಅವರ ಸಂಗಾತಿಗೆ ತಿಳಿದಿರಬೇಕು. ಇಲ್ಲದಿದ್ದಲ್ಲಿ ಆಮೇಲೆ ಸಮಸ್ಯೆಗಳನ್ನು ಎದುರಿಸಬೇಕಾದೀತು. ಆದರೆ ಅದೇ ಸಮಯದಲ್ಲಿ, ಈ ರಾಶಿಯವರು ಬಹಳ ಧೈರ್ಯಶಾಲಿ ಮತ್ತು ಅಪಾಯಗಳನ್ನು ಮತ್ತು ಸವಾಲುಗಳನ್ನು ತೆಗೆದುಕೊಳ್ಳಲು ಇಷ್ಟಪಡುವ ಪ್ರವೃತ್ತಿಯುಳ್ಳವರಾಗಿದ್ದಾರೆ.

ಮಕರ ರಾಶಿ:

ಮಕರ ರಾಶಿ:

ಈ ರಾಶೀಯವರು ಕ್ಯಾಸನೋವಾ ಪ್ರಕಾರವೆಂಬುದು ನೀವು ತಿಳಿದರೆ ಆಶ್ಚರ್ಯವಾಗುತ್ತದೆ. ಅವರು ಬಹುಪತ್ನಿತ್ವವನ್ನು ನಂಬುತ್ತಾರೆ. ಅಂದ್ರೆ ವಿಭಿನ್ನ ಸಂಗಾತಿಗಳಿಂದ ಪ್ರೀತಿಯನ್ನು ಪಡೆಯಲು ಬಯಸುತ್ತಾರೆ. ಕೇವಲ ಒಬ್ಬರ ಪ್ರೀತಿ ಅವರನ್ನು ಸಂತೃಪ್ತಿಗೊಳಿಸುವುದಿಲ್ಲ. ಅದಕ್ಕೆ ಇರಬೇಕು ಬಹುಪತ್ನಿತ್ವದ ಮೇಲೆ ನಂಬಿಕೆ ಇಟ್ಟಿರೋದು.

ಕುಂಭ ರಾಶಿ:

ಕುಂಭ ರಾಶಿ:

ಶೇಕಡಾ 12.5 ಕೋಟ್ಯಾಧಿಪತಿಗಳು ಕುಂಭ ರಾಶಿಯಿಂದ ಬಂದವರು. ಅವರು ಒಳನೋಟವುಳ್ಳ ಹಾಗೂ ದೂರದೃಷ್ಠಿಯನ್ನು ಹೊಂದಿರುವ ಜನರು. ಸಾಕಷ್ಟು ಕೌಶಲ್ಯಗಳನ್ನು ತುಂಬಿಕೊಂಡು ಏನೋ ಸಾಧಿಸಬೇಕು ಎಂದು ಸದಾ ಹಂಬಲಿಸುವವರು. ತಮ್ಮೆಲ್ಲಾ ಕೆಲಸಗಳನ್ನು ದೂರದೃಷ್ಠಿ ಇಟ್ಟುಕೊಂಡೇ ಮಾಡುವ ಇವರು ಅದೃಷ್ಠವಂತರು.

ಮೀನ ರಾಶಿ:

ಮೀನ ರಾಶಿ:

ಮೀನ ರಾಶಿಯವರು ಸಾಮಾನ್ಯವಾಗಿ ಅತ್ಯಂತ ಗೊಂದಲಮಯ ಜನರು. ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅವರು ತಮ್ಮ ಬುದ್ಧಿ ಅಥವಾ ಮನಸ್ಸನ್ನು ಕೇಳಬೇಕೇ ಎಂಬುದು ಅವರಿಗೆ ಸ್ಪಷ್ಟವಿಲ್ಲ. ಇದೇ ಕಾರಣದಿಂದ ಯಾವಾಗಲೂ ಗೊಂದಲದ ಗೂಡಾಗಿರುತ್ತಾರೆ. ಯಾವ ವಿಚಾರಕ್ಕೆ ಮನಸ್ಸಿನ ಮಾತು ಕೇಳಬೇಕು, ಯಾವ ವಿಷಯಕ್ಕೆ ಬುದ್ಧಿ ಅಂದ್ರೆ ಮೆದುಳಿನ ಮಾತು ಕೇಳಬೇಕು ಎಂಬುದರ ಅರಿವಿರುವುದಿಲ್ಲ.

English summary

Unknown and Surprising Facts of Each Zodiac Sign In Kannada

Here we told about Unknown and Surprising Facts of Each Zodiac Sign in Kannada, Read on...
Story first published: Saturday, December 19, 2020, 17:45 [IST]
X
Desktop Bottom Promotion