Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Vrushabha Rashi Ugadi Bhavishya 2022 : ಯುಗಾದಿ ಪಂಚಾಂಗ: ವೃಷಭ ರಾಶಿಯವರಿಗೆ ಹೊಸ ಸಂವತ್ಸರ ಹೇಗಿರಲಿದೆ?
ಹಿಂದೂಗಳಿಗೆ ಹೊಸ ವರ್ಷವೆಂದರೆ ಅದು ಯುಗಾದಿ, ಈ ದಿನದಿಂದ ಹೊಸ ಸಂವತ್ಸರ ಪ್ರಾರಂಭವಾಗುವುದು, ಹೊಸ ಸಂವತ್ಸರವನ್ನು ಬೇವು-ಬೆಲ್ಲ ಸವಿಯುತ್ತಾ ಸಡಗರ-ಸಂಭ್ರಮದಿಂದ ಸ್ವಾಗತಿಸುವುದೇ ಯುಗಾದಿ. ಈ ವರ್ಷ ಶ್ರೀ ಶುಭಕೃತ ನಾಮ ಸಂವತ್ಸರ.

ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿಈ ಶುಭಕೃತ ನಾಮ ಸಂವತ್ಸರದಲ್ಲಿ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:
ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. ಯುಗಾದಿ ಪಂಚಾಂಗ ಪ್ರಕಾರ ನಿಮಗೆ ಆದಾಯ 8 ಇದ್ದರೆ ವ್ಯಯ ಕೂಡ 8 ಇರುತ್ತದೆ, ಅಂದರೆ ಗಳಿಸಿದ್ದು ಹಾಗೆಯೇ ಖರ್ಚಾಗುವುದು, ಇನ್ನು ಯೋಗ 6 ಇದ್ದರೆ ಅವಮಾನ 6 ಇದೆ.
ವೃಷಭ ರಾಶಿಯಲ್ಲಿ ಕೃತಿಕಾ ನಕ್ಷತ್ರ 2, 3, 4ನೇ ಪಾದ, ರೋಹಿಣಿ ನಕ್ಷತ್ರ 4 ಪಾದ, ಮೃಗಶಿರ ನಕ್ಷತ್ರ 1 ಮತ್ತು 2ನೇ ಪಾದದಲ್ಲಿದೆ.
ಈ ವರ್ಷ ಆದಾಯ ಚೆನ್ನಾಗಿರುತ್ತದೆ, ಹಣ ಲಾಭ ಪಡೆಯುವಿರಿ, ವೃತ್ತಿಯಲ್ಲಿ ಪ್ರಗತಿ ಪಡೆಯುವಿರಿ. ಗುರು 11ನೇ ಮನೆಯಲ್ಲಿ ಇರುವುದರಿಂದ ಉದ್ಯೋಗಸ್ಥರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಕಳೆದ ವರ್ಷಕ್ಕಿಂತ ಚೆನ್ನಾಗಿ ಆದಾಯ ಗಳಿಸಲು ಸಾಧ್ಯವಾಗುವುದು. ಅಲ್ಲದೆ 9ನೇ ಮನೆಯಲ್ಲಿ ಶನಿ ಸಾಗುವುದರಿಂದ ನಿಮಗೇ ತುಂಬಾನೇ ಒಳ್ಳೆಯದು ಆಗಲಿದೆ.
ವಿದೇಶದಲ್ಲಿ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವುದು. ಸ್ಪರ್ಧಾತ್ಮಾಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದರೆ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಣ್ಣು ಮಕ್ಕಳು ಉನ್ನತಿಯನ್ನು ಕಾಣುವಿರಿ, ಹೂಡಿಕೆ ಮಾಡುವವರಿಗೂ ಒಳ್ಳೆಯದಾಗಲಿದೆ. ಲಾಭದ ಸ್ಥಾನದಲ್ಲಿ ಗುರು ಇರುವುದರಿಂದ ಒಳ್ಳೆಯದಾಗಲಿದೆ.
ಈ ವರ್ಷ ಮಧ್ಯದಲ್ಲಿ ಗುರುವಿನ ಸ್ಥಾನ ಬದಲಾವಣೆಯನ್ನು ಆಸ್ತಿ ಖರೀದಿಸುವ ಸಾಧ್ಯತೆ ಇದೆ ಅಥವಾ ಹಿರಿಯರ ಪಾಲು ದೊರೆಯಬಹುದು. ಪಿತೃಕರ್ಮ ತಪ್ಪದೆ ಮಾಡಿ. ರಾಹು ಹನ್ನೆರಡನೇಯ ಮನೆಯಲ್ಲಿರುವುದರಿಂದ ಒಳ್ಳೆಯದು, ಆದರೆ ಕೇತು 6 ನೇ ಮನೆಯಲ್ಲಿ ಇರುವುದರಿಂದ ಶತ್ರುವಿನ ಭಾದೆ ಇರಬಹುದು. ಅವರ ಬಗ್ಗೆ ಜಾಗ್ರತೆ.
ಮನೆಯಲ್ಲಿ ಶುಭ ಕಾರ್ಯಗಳಿಗೆ ಖರ್ಚು ಮಾಡುವಿರಿ. ಸೆಪ್ಟೆಂಬರ್‌ನಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲವಾಗುವುದು. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ. ಮದುವೆ ವಯಸ್ಸಿನಲ್ಲಿ ಇರುವವರಿಗೆ ಕಂಕಣ ಬಲ ಕೂಡಿ ಬರಲಿದೆ.
ಆರೋಗ್ಯದ ಬಗ್ಗೆ ಹೇಳುವುದಾದರೆ ಈ ವರ್ಷ ಅಂಥ ಯಾವುದೇ ದೊಡ್ಡ ತೊಂದರೆಯಿಲ್ಲ, ಆರೋಗ್ಯಕರ ಆಹಾರ ಸೇವನೆ ಒಳ್ಳೆಯದು.
ಅದೃಷ್ಟದ ಬಣ್ಣ: ಬಿಳಿ
ಪರಿಹಾರ:
ಗುರುವಾರ ಗುರುವಿನ ಆರಾಧನೆ, ಶನಿವಾರ ಶನೇಶ್ವರನ ಆರಾಧನೆ ಮಾಡಿ
7 ಮಂಗಳವಾರ ದುರ್ಗೆಯನ್ನು ಪೂಜಿಸಿ.



Click it and Unblock the Notifications
