Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
Vrischika Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ವೃಶ್ಚಿಕ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ವೃಶ್ಚಿಕ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ವೃಶ್ಚಿಕ ರಾಶಿಯವರ ಅಧಿಪತಿ ಚಂದ್ರ. ಇವರಿಗೆ ಆದಾಯ 14 ವ್ಯಯ 14 ಇದೆ. ಯೋಗ 3 ಹಾಗೂ ಅವಮಾನ 1 ಇದೆ. ಆದ್ದರಿಂದ ಈ ವರ್ಷ ನಿಮಗೆ ತುಂಬಾ ಒಳ್ಳೆಯ ಫಲಗಳು ಕಾದಿವೆ.
ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ನಿಮ್ಮ ಕಠಿಣ ಪರಿಶ್ರಮದಿಂದ, ಯಶಸ್ಸನ್ನು ಪಡೆಯುತ್ತೀರಿ. ಇಷ್ಟು ಸಮಯದ ಕಷ್ಟಗಳೆಲ್ಲವೂ ನಿವಾರಣೆಯಾಗುವುದು. ಶತ್ರುಗಳ ಕಾಟದಿಂದ ಸಮಸ್ಯೆಗಳು ಎದುರಾಗಬಹುದು, ಜಾಗರೂಕರಾಗಿರಿ. ಕಾರ್ಪೋರೇಟ್ ವಲಯದ ಉದ್ಯೋಗಿಗಳು ಉತ್ತಮ ಜೀವನ ನಡೆಸುತ್ತೀರಿ. ಪ್ರಮೋಷನ್, ಕೆಲಸದ ಬದಲಾವಣೆ ಬಯಸುವವರಿಗೆ ಉತ್ತಮ ಆಫರ್ ಬರಬಹುದು.
ಶಿಕ್ಷಣ ಜೀವನವನ್ನು ಗಮನಿಸುವುದಾದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗ ಬಯಸುವವರು ತುಂಬಾ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಉನ್ನತ ಶಿಕ್ಷಣ ಬಯಸುವವರಿಗೆ ಉತ್ತಮ ಸಂಸ್ಥೆಯಲ್ಲಿ ಸೀಟ್ ಸಿಗಬಹುದು, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೂ ಉತ್ತಮವಾಗಿದೆ.
ಆರ್ಥಿಕ ವಿಷಯಗಳ ಬಗ್ಗೆ ನೋಡುವುದಾದರೆ, ಹಿಂದೆ ತೆಗೆದುಕೊಂಡ ಸಾಲಗಳು ಮರುಪಾವತಿ ಮಾಡುತ್ತೀರಿ. ಆರ್ಥಕತೆಯ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಹೊಸ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ವರ್ಷದ ಆರು ತಿಂಗಳು ಯಾವುದೇ ಹೊಸ ಹೂಡಿಕೆ ಬೇಡ. ಮನೆಯಲ್ಲಿ ಶುಭಸಮಾರಂಭಗಳು ನಡೆಯುವುದರಿಂದ, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.
ಕುಟುಂಬ ಜೀವನದಲ್ಲಿ ಸಂಬಂಧದ ಬಗ್ಗೆ ಹೆಚ್ಚು ಗಮನ ಕೊಡಿ. ಪೋಷಕರಿಗೆ ಭಾವನಾತ್ಮಕ ಬೆಂಬಲ ನೀಡಿ. ಆದರೆ ಹೆಚ್ಚು ಭಾವುಕರಾಗಬೇಡಿ. ಕುಟುಂಬ ಸದಸ್ಯರ ಸಮಸ್ಯೆಗಳಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಇದು. ಮಕ್ಕಳ ಜೀವನ ನೊಡುವುದಾದರೆ, ತಮ್ಮ ಪ್ರಯತ್ನದ ಮೂಲಕ ಉನ್ನತ ಯಶಸ್ಸು ಪಡೆಯಬಹುದು. ಮಕ್ಕಳು ಮದುವೆಗೆ ಸಿದ್ಧರಾಗಿದ್ದರೆ, ವರ್ಷದ ಅಂತ್ಯದಲ್ಲಿ ಮದುವೆಯಾಗಬಹುದು.
ಮದುವೆಯ ವಯಸ್ಸಾದವರಿಗೆ ಕಂಕಣಬಲ ಕೂಡಿಬರಬಹುದು. ವಿವಾಹ ಜೀವನದಲ್ಲಿ ಉತ್ತಮ ಫಲಿತಾಂಶವಿದೆ. ಜೀವನ ಸಂಗಾತಿ ಉತ್ತಮ ಸಮಯ ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ನೆಲೆಸಿರುವುದು.
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಜಾಗರೂಕರಾಗಿರಿ. ಹೊಸ ವ್ಯಾಪಾರ ಆರಂಭ ಬೇಡ. ಏಕಮಾಲೀಕತ್ವ ವ್ಯಾಪಾರ ಉತ್ತಮ ಲಾಭ ಪಡೆಯಬಹುದು. ಆಸ್ತಿ ಖರೀದಿಸುವುದಾದರೆ ಯಶಸ್ಸು ಸಿಗುವುದು. ಹಣದಲ್ಲಿ ನಿರಂತರ ಹೆಚ್ಚಳವಾಗುವುದು, ಇದರಿಂದ ವಾಹನ, ಆಸ್ತಿ ಖರೀದಿಸುವ ಯೋಗವೂ ಇದೆ. ಒಟ್ಟಾರೆ ಇವರಿಗೆ ಈ ವರ್ಷ ತುಂಬಾ ಉತ್ತಮ.
ಸಣ್ಣ-ಪುಟ್ಟ ದೈಹಿಕ ಸಮಸ್ಯೆಗಳಾಬಹುದು, ಸಂಗಾತಿಯ ಆರೋಗ್ಯ ಹದಗೆಡಬಹುದು. ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡಿ.
ಅದೃಷ್ಟ ಸಂಖ್ಯೆ - 6
ಪರಿಹಾರ:
ಸೋಮವಾರದಂದು, ಶಿವಲಿಂಗಕ್ಕೆ ಅಕ್ಷತೆ ಅರ್ಪಿಸಿ.



Click it and Unblock the Notifications
