Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
Tula Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ತುಲಾ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ತುಲಾ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ತುಲಾ ರಾಶಿಯವರ ಅಧಿಪತಿ ಶುಕ್ರ. ಇವರಿಗೆ ಆದಾಯ 8 ವ್ಯಯ 8 ಇದೆ. ಆದ್ದರಿಂದ ಈ ವರ್ಷ ನಿಮಗೆ ಆರ್ಥಿಕವಾಗಿ ಮಿಶ್ರವಾಗಿರುತ್ತದೆ. ಯೋಗ 7 ಹಾಗೂ ಅವಮಾನ 5 ಇದೆ.
ಯುಗಾದಿ ಪಂಚಾಂಗ ಪ್ರಕಾರ ಈ ವರ್ಷ ತುಲಾ ರಾಶಿಯವರಿಗೆ ಮಿಶ್ರವಾಗಿರುತ್ತದೆ. ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ಪ್ರಾರಂಭದ ತಿಂಗಳುಗಳಲ್ಲಿ ಬಡ್ತಿ ಪಡೆಯುವ ಸಾಧ್ಯತೆಯಿದೆ. ಜೊತೆಗೆ ದ್ವಿತೀಯಾರ್ಧದಲ್ಲಿ ಉದ್ಯೋಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಬಹುದು. ಆದ್ದರಿಂದ ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ. ಉದ್ಯೋಗ ಬದಲಾವಣೆಯ ಯೋಚನೆಯಿದ್ದರೆ, ಸರಿಯಾಗಿ ವಿಶ್ಲೇಷಣೆ ಮಾಡಿ ನಿರ್ಧರಿಸಿ.
ಶಿಕ್ಷಣ ಜೀವನವನ್ನು ಗಮನಿಸುವುದಾದರೆ, ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಭವಾಗಿರುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ಶುಭಸುದ್ದಿ ದೊರೆಯಲಿದೆ.
ಆರ್ಥಿಕ ವಿಷಯಗಳಲ್ಲಿ, ಸ್ಥಿರತೆ ಕಾಣಬಹುದು, ಆದರೂ ಜಾಗರೂಕರಾಗಿರಿ. ಏಕೆಂದರೆ, ವರ್ಷದ ದ್ವಿತೀಯಾರ್ಧದಲ್ಲಿ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ. ದೊಡ್ಡ ಹೂಡಿಕೆ ಬೇಡ. ಕೌಟುಂಬಿಕ ವಿಷಯದಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ, ಇದರಿಂದ ಉಳಿತಾಯ ಸಾಧ್ಯವಾಗುವುದಿಲ್ಲ. ಏಪ್ರಿಲ್ ತಿಂಗಳು ಅನುಕೂಲಕರವಾಗಿರುವುದು.
ಇನ್ನೂ ಕುಟುಂಬ ಜೀವನ ಉತ್ತಮವಾಗಿರುತ್ತದೆ. ತಮ್ಮ ಮನೆಯನ್ನು ಸಂತೋಷವಾಗಿಡಲು ಕೆಲವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಮಕ್ಕಳು ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಆದರೆ, ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.
ಮದುವೆಯ ವಯಸ್ಸಾದವರಿಗೆ ವರ್ಷದ ದ್ವಿತೀಯಾರ್ಧದಲ್ಲಿ ಕಂಕಣಬಲ ಕೂಡಿಬರಬಹುದು.
ವಿವಾಹ ಜೀವನದಲ್ಲಿ ಮಿಶ್ರ ಫಲಿತಾಂಶವಿದೆ. ಕೆಲ ಅಡೆತಡೆಗಳು ಉಂಟಾಗಬಹುದು, ತಮ್ಮ ಬಾಳಸಂಗಾತಿಯ ಜೊತೆಗೆ ಮನಸ್ತಾಪಗಳಾಗುವ ಸಾಧ್ಯತೆಗಳಿವೆ. ವರ್ಷದ ಮಧ್ಯಭಾಗದಲ್ಲಿ ಜಾಗರೂಕರಾಗಿರಿ. ಆದರೆ, ವರ್ಷದ ಅಂತ್ಯದಲ್ಲಿ ಎಲ್ಲವೂ ಸರಿಹೋಗುವುದು.
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಜಾಗರೂಕರಾಗಿರಿ. ಹೊಸ ವ್ಯಾಪಾರ ಆರಂಭಿಸಬೇಕೆನ್ನುವವರೂ ಎಚ್ಚರವಾಗಿರಿ. ಆಸ್ತಿ ಖರೀದಿಸುವುದಾದರೆ ಯಶಸ್ಸು ಸಿಗುವುದು. ಆದರೆ, ಪಿತ್ರಾರ್ಜಿತ ಆಸ್ತಿಯ ಮಾರಾಟ ಬೇಡ, ನಷ್ಟವಾಗುವ ಸಾಧ್ಯತೆ ಇದೆ. ಭೂಮಿ, ಕಟ್ಟಡ, ವಾಹನ ಖರೀದಿಸುವ ಸಾಧ್ಯತೆ ಇದೆ.
ಆರೋಗ್ಯ ಚೆನ್ನಾಗಿರುವುದು, ಆದರೆ, ಜೀರ್ಣಕ್ರಿಯೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಅದಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡಿ.
ಅದೃಷ್ಟ ಸಂಖ್ಯೆ -7
ಪರಿಹಾರ:
ಶನಿವಾರದಂದು, ಶನಿದೇವನ ದರ್ಶನ ಮಾಡಿ, ಅಗತ್ಯವಿರುವವರಿಗೆ ಆಹಾರ ದಾನ ಮಾಡಿ.



Click it and Unblock the Notifications