Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
Kanya Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ಕನ್ಯಾ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಕನ್ಯಾ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ಕನ್ಯಾ ರಾಶಿಯವರ ಅಧಿಪತಿ ಬುಧ. ಇವರಿಗೆ ಆದಾಯ 11 ವ್ಯಯ 5 ಇದೆ. ಆದ್ದರಿಂದ ಈ ವರ್ಷ ನಿಮಗೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಯೋಗ 4 ಹಾಗೂ ಅವಮಾನ 5 ಇದೆ.
ಯುಗಾದಿ ಪಂಚಾಂಗ ಪ್ರಕಾರ ಈ ವರ್ಷ ಕನ್ಯಾ ರಾಶಿಯವರಿಗೆ ಉತ್ತಮವಾಗಿರುತ್ತದೆ. ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ವರ್ಷವಿಡೀ ಸಣ್ಣ ಪುಟ್ಟ ಅಡೆತಡಗಳು ಎದುರಾಗಲಿದ್ದರೂ, ಅವುಗಳೆಲ್ಲವನ್ನೂ ಸಂಪೂರ್ಣವಾಗಿ ತೊಡೆದುಹಾಕುತ್ತಾರೆ. ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಜೊತೆಗೆ ಪ್ರತಿಯೊಂದು ಹೆಜ್ಜೆಯನ್ನು ಬುದ್ದಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಮಾತ್ರವೇ ಮುನ್ನೆಡೆಯಲು ಸಾಧ್ಯವಾಗುತ್ತದೆ.
ಶಿಕ್ಷಣ ಜೀವನವನ್ನು ಗಮನಿಸುವುದಾದರೆ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ಈ ವರ್ಷ ಆರಂಭದ ಉತ್ತಮವಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೂ ಈ ವರ್ಷ ಅನುಕೂಲಕರವಾಗಿದೆ. ಜೊತೆಗೆ ವೃತ್ತಿಪರ ಕೋರ್ಸು ಮಾಡುವವರಿಗೂ ಈ ವರ್ಷ ತುಂಬಾ ಉತ್ತಮವಾಗಿದೆ.
ಆರ್ಥಿಕ ವಿಷಯಗಳಲ್ಲಿ ನಿಮ್ಮ ಕುಟುಂಬ ಮತ್ತ ಸ್ನೇಹಿತರಿಂದ ಸಂಪೂರ್ಣ ಸಹಕಾರ ಪಡೆಯುತ್ತೀರಿ. ಈ ಸಮಯದಲ್ಲಿ ವೆಚ್ಚವೂ ಕಡಿಮೆಯಾಗುವ ಸಾಧ್ಯತೆಯಿದೆ. ಆದಾಯದ ಹೊಸ ಮಾರ್ಗವೂ ತೆರೆದುಕೊಳ್ಳಲಿದೆ. ಹಣಕಾಸು ವಹಿವಾಟು ಮಾಡುವಾಗ ಸ್ವಲ್ಪ ಜಾಗರೂಕರಾಗಿರಿ. ಆರೋಗ್ಯದ ಮೇಲೂ ಹಣ ಖರ್ಚು ಮಾಡುವ ಸಾಧ್ಯತೆ ಬರಬಹುದು. ನೀವು ಅಪೇಕ್ಷಿತ ಉಳಿತಾಯ ಮಾಡಬಹುದು, ಸಾಲ ತೀರಿಸುತ್ತೀರಿ, ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆಯಾಗುವುದು.
ಇನ್ನೂ ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ, ಇದರಲ್ಲಿ ಮಿಶ್ರ ಫಲಿತಾಂಶ ಪಡೆಯುತ್ತಿರಿ. ಕೆಲವು ಕೌಟುಂಬಿಕ ವಿವಾದಗಳನ್ನು ಎದುರಿಸಬೇಕಾಗಬಹುದು. ಈ ಪ್ರತಿಕೂಲ ಪರಿಣಾಮ ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಬೀರಬಹುದು. ವರ್ಷದ ಅಂತ್ಯದಲ್ಲಿ ಉತ್ತಮವಾಗಿರುತ್ತದೆ. ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದರೆ, ಕಂಕಣಬಲ ಕೂಡಿಬರುತ್ತದೆ.
ವಿವಾಹ ಜೀವನದಲ್ಲಿ ಮಿಶ್ರ ಫಲಿತಾಂಶವಿದೆ. ವರ್ಷದ ಆರಂಭದಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾದರೂ, ವರ್ಷದ ಮಧ್ಯಭಾಗವನ್ನು ಉತ್ತಮವಾಗಿ ಕಳೆಯುತ್ತೀರಿ. ಜೀವನ ಸಂಗಾತಿಯ ಸಹಾಯದಿಂದ ಉತ್ತಮ ಜೀವನ ಪಡೆಯುವುದಲ್ಲದೇ, ದಾಂಪತ್ಯ ಜೀವನ ಸುಖಕರವಾಗಿರುವುದು. ವರ್ಷದ ಅಂತ್ಯದಲ್ಲಿ ಪ್ರವಾಸ ಕೈಗೊಳ್ಳಬಹುದು.
ವ್ಪಾಪಾರಸ್ಥರಿಗೆ ಉತ್ತಮ ಕಾಲ, ಆರಂಭದಲ್ಲಿ ಕಠಿಣ ಶ್ರಮ ಪಡಬೇಕಾಗುತ್ತದೆ. ನಂತರದ ಸಮಯ ಲಾಭದಾಯಕವಾಗಿರುತ್ತದೆ. ಹೊಸ ವ್ಯಾಪಾರ ಆರಂಭಿಸಬೇಕೆನ್ನುವವರಿಗೂ ಈ ವರ್ಷ ಉತ್ತಮವಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶ ಪಡೆಯುತ್ತೀರಿ, ಇದರಿಂದ ಉತ್ತಮ ಲಾಭ ಲಭಿಸುತ್ತದೆ.
ಆರೋಗ್ಯ ಚೆನ್ನಾಗಿರುವುದು, ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಅದೃಷ್ಟ ಸಂಖ್ಯೆ -6
ಪರಿಹಾರ:
ಕಾಳಭೈರವ ಚಾಲಿಸಾವನ್ನು ಪಠಣೆ ಮಾಡಿ.



Click it and Unblock the Notifications