Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
Ugadi 2023 Horoscope : ವೃಶ್ಚಿಕ ರಾಶಿ ಯುಗಾದಿ ರಾಶಿಫಲ 2023: ಹೊಸ ಸಂವತ್ಸರ ಹೇಗಿರಲಿದೆ?
ಮಾರ್ಚ್ 22ಕ್ಕೆ ಹಳೆ ಸಂವತ್ಸರ ಕಳೆದು ಹೊಸ ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ. ಯುಗಾದಿಯ ವಿಶೇಷ ಎಂದರೆ ಬೇವು ಬೆಲ್ಲ. ಬೇವು ಬೆಲ್ಲ ಸವಿಯುವ ಮೂಲಕ ನಾವು ಯುಗಾದಿ ಆಚರಿಸುತ್ತೇವೆ, ಬದುಕಿನಲ್ಲಿ ಒಳ್ಳೆಯದು-ಕೆಟ್ಟದ್ದು ಎರಡೂ ಇರುತ್ತದೆ, ಎರಡನ್ನೂ ಸಮಾನಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಹಬ್ಬ ನೀಡುತ್ತದೆ.

ನಾವಿಲ್ಲಿ ಈ ಯುಗಾದಿ ಹೊಸ ವರ್ಷ ವೃಶ್ಚಿಕ ರಾಶಿಯವರಿಗೆ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ವೃಶ್ಚಿಕ ರಾಶಿಯವರಲ್ಲಿ ಗ್ರಹಗಳ ಸ್ಥಾನ
ವೃಶ್ಚಿಕ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನಿಮ್ಮ ಶನಿಯಲ್ಲಿ ಶನಿ ಮತ್ತು ಗುರು 6ನೇ ಮನೆಯಲ್ಲಿ ಇರಲಿದೆ. ಏಪ್ರಿಲ್ 22ಕ್ಕೆ ಗುರು ನಿಮ್ಮ ರಾಶಿಯನ್ನು ಪ್ರವೇಶಿಸಿದರೆ ರಾಹು ನವೆಂಬರ್ 29ರವರೆಗೆ ನಿಮ್ಮ ರಾಶಿಯಲ್ಲಿಯೇ ಇರಲಿದೆ. ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿ ಕೇತು ನಿಮ್ಮ ಲಗ್ನ ಮನೆಯಲ್ಲಿ ಅಂದರೆ ಮೊದಲನೇ ಮನೆಯಲ್ಲಿ ಇರಲಿದೆ.

ವೃತ್ತಿ ಜೀವನ
ಶನಿಯು 4ನೇ ಮನೆಯಲ್ಲಿರುವುದರಿಂದ ನಿಮ್ಮ ಕೆಲಸದ ಮೇಲೆ ಇದರ ಪ್ರಭಾವ ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ನೀವು ಬಯಸಿದ ಪ್ರಗತಿ ಕಾಣದೇ ಇರಬಹುದು, ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದನಿಸಲಾರಂಭಿಸುವುದು, ಅಲ್ಲದೆ ಕೆಲಸದಲ್ಲಿ ಅಭದ್ರತೆ ಉಂಟಾಗುವುದು. ಈ ವರ್ಷ ಕೆಲಸದ ಒತ್ತಡ ಅಧಿಕವಾಗಲಿದೆ. ನೀವು ಕೆಲಸವನ್ನು ಬದಲಾಯಿಸುವುದರಿಂದ ಪರಿಸ್ಥಿತಿ ಬದಲಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನೀವು ಮಾಡುತ್ತಿರುವ ಕೆಲಸದ ಕಡೆ ಅಧಿಕ ಗಮನಹರಿಸಿ, ತಪ್ಪುಗಳಾಗದಂತೆ ಎಚ್ಚರವಹಿಸಿ. ಒಂದು ಕೆಲಸ ಸಿಕ್ಕಿದ ಬಳಿಕವಷ್ಟೇ ಕೆಲಸ ಬದಲಾಯಿಸಿ, ಇಲ್ಲದಿದ್ದರೆ ತೊಂದರೆಯಾಗಬಹುದು.

ಆರ್ಥಿಕ ಸ್ಥಿತಿ
ಗುರು 6ನೇ ಮನೆಯಲ್ಲಿದ್ದಾನೆ. ಇದು ವ್ಯಯದ ಮನೆ, ಈ ಅವಧಿಯಲ್ಲಿ ನೀವು ನಿಮ್ಮ ಬಜೆಟ್‌ಗಿಂತ ಅಧಿಕ ಸಾಲ ಮಾಡುತ್ತೀರಿ. ಆದರೆ ನೀವು ಸಾಲವನ್ನು ಎಷ್ಟು ಕಡಿಮೆ ಮಾಡುತ್ತೀರೋ ಅಷ್ಟೇ ಒಳ್ಳೆಯದು. ಈ ವರ್ಷ ನಿಮ್ಮ ಉಳಿತಾಯದ ಹಣವನ್ನು ಮನೆ, ಆಸ್ತಿ ಅಥವಾ ಗಾಡಿ ಖರೀದಿಸಲು ಬಳಸಬಹುದು. ನೀವು ಈ ವರ್ಷ ತುಂಬಾ ಸಾಲ ಮಾಡಲು ಹೋಗಬೇಡಿ. ಅಲ್ಲದೆ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಡಿ.

ವೈಯಕ್ತಿಕ ಜೀವನ
ಒಂದು ಕಡೆ ಕೆಲಸದ ಒತ್ತಡ, ಮತ್ತೊಂದೆಡೆ ಮನೆಯಲ್ಲಿ ಒತ್ತಡ ಇವೆಲ್ಲಾ ನಿಮ್ಮ ಮನಸ್ಸಿನ ಮೇಲೆ ತುಂಬಾ ಗಂಭೀರ ಪ್ರಭಾವ ಬೀರುವುದು. ಕೆಲಸದ ಒತ್ತಡ ಕುಟುಂಬ ಜೀವನದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ.
ಆರೋಗ್ಯ
ಈ ವರ್ಷ ಆರೋಗ್ಯ ಸಮಸ್ಯೆಗಳಿರುತ್ತದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ಆರೋಗ್ಯಕರ ಜೀವಶೈಲಿ ಕಡೆ ಗಮನ ಹರಿಸುವುದು ಒಳ್ಳೆಯದು'
ಪರಿಹಾರ
ಶನಿ ದೋಷದಿಂದ ಪಾರಾಗಲು ಪ್ರತಿ ಶನಿವಾರ ನೀವು ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಹಾಗೂ ಕಪ್ಪು ಎಳ್ಳು ಅರ್ಪಿಸಿ
* ಶನಿವಾರ ಬಡವರಿಗೆ ಆಹಾರ ದಾನ ಮಾಡಿ. ಕಪ್ಪು ಹೊದಿಕೆಯನ್ನು ನೀಡಿ
* ಮಂಗಳವಾರ, ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಅರ್ಪಿಸಿ.



Click it and Unblock the Notifications
