Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಯುಗಾದಿ ರಾಶಿಫಲ 2023 ರ ಪ್ರಕಾರ ಹೊಸ ಸಂವತ್ಸರ ಕನ್ಯಾ ರಾಶಿಯವರಿಗೆ ಹೇಗಿರಲಿದೆ?
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಈ ಯುಗಾದಿ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ನೆಮ್ಮದಿ ನೀಡಲಿ. ನಾವಿಲ್ಲಿ ಯುಗಾದಿ 2023 ಕನ್ಯಾ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:


ಕನ್ಯಾ ರಾಶಿಯವರ ಮೇಲೆ ಗ್ರಹಗತಿಗಳ ಪ್ರಭಾವ
ಕನ್ಯಾ ರಾಶಿಯವರಲ್ಲಿ ನಾಲ್ಕು ಪ್ರಮುಖ ಗ್ರಹಗಳ ಸ್ಥಾನ ನೋಡುವುದಾದರೆ ಗುರು ಮತ್ತು ರಾಹು ನಿಮ್ಮ 8ನೇ ಮನೆಯಲ್ಲಿ ಇರಲಿದೆ. ಏಪ್ರಿಲ್ 22ಕ್ಕೆ ಗುರು ನಿಮ್ಮ ರಾಶಿಯ 8ನೇ ಮನೆಗೆ ಬಂದರೆ ಅಕ್ಟೋಬರ್ 29ರವರೆಗೆ ರಾಹು ನಿಮ್ಮ ರಾಶಿಯ 8ನೇ ಮನೆಯಲ್ಲಿ ಇರಲಿದೆ. ಕುಂಭ ರಾಶಿಗೆ ಶನಿ ಸಂಚರಿಸಿರುವುದರಿಂದ ನಿಮ್ಮ ರಾಶಿಯಲ್ಲಿ ಹಾಗೂ ಕೇತು 3ನೇ ಮನೆಯಲ್ಲಿ ಇರಲಿದೆ.
ಈ ಗ್ರಹಗಳ ಸ್ಥಾನ ಮಿಶ್ರಫಲ ನೀಡಲಿದೆ.
ಈ ನಾಲ್ಕು ಗ್ರಹಗಳ ಸ್ಥಾನಗಲ್ಲಿ ರಾಹು-ಗುರು ನಿಮಗೆ ತುಂಬಾ ಅನುಕೂಲಕರವಲ್ಲ, ಆದ್ದರಿಂದ ಈ ಅವಧಿಯಲ್ಲಿ ಮಿಶ್ರಫಲ ಅನುಭವಿಸುತ್ತೀರಿ. ಈ ಅವಧಿ ನಿಮಗೆ ಮಿಶ್ರಫಲ. ರಾಹು-ಗುರು ಅಶುಭ ಫಲ ನೀಡಲಿದೆ, ಶನಿ ಶುಭ ಫಲ ನೀಡಿದೆ.

ಉದ್ಯೋಗ
ಶನಿಯು ಕರ್ಮದ ಗ್ರಹವಾಗಿರುವುದರಿಂದ ಶನಿಯ ಈ ಸ್ಥಾನ ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ನೀಡಲಿದೆ. ಈ ಯುಗಾದಿ ಬಳಿಕ ನೀವು ಕೆಲಸದಲ್ಲಿ ಬದಲಾವಣೆ ಬಯಸುವುದಾದರೆ ಒಳ್ಳೆಯ ಗೌರವ ಪಡೆಯುತ್ತೀರಿ. ನೀವು ನಿಮ್ಮ ಪ್ರತಿಭೆ ತಕ್ಕ ಅವಕಾಶ ಪಡೆಯುವಿರಿ. ನಿಮ್ಮ ಕೆಲಸವು ಗುರುತಿಸಿಕೊಳ್ಳುತ್ತದೆ. ನೀವು ಪಂಚಮ ಶನಿಇಂದ ಬಿಡುಗಡೆಯಾಗಿರುವುದರಿಂದ ನಿಮಗೆ ನೆಮ್ಮದಿ ಇರಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲ ಸಿಗಲಿದೆ.

ಗುರು ಚಂಡಾಲ ಯೋಗದ ಪ್ರಭಾವ
ಕನ್ಯಾ ರಾಶಿಯವರಲ್ಲಿ ಅಷ್ಟಮದಲ್ಲಿ ಗುರು ಚಂಡಾಲ ಯೋಗವಿದೆ. ಈ ಕಾರಣದಿಂದ ಸಂಸಾರದಲ್ಲಿ, ಕುಟಂಬಸ್ಥರ ನಡುವೆ ಭಿನ್ನಾಭಿಪ್ರಾಯ. ಸತಿ-ಪತಿಯಲ್ಲಿ ಭಿನ್ನಾಭಿಪ್ರಾಯ ಹೆಚ್ಚಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ ಮೋಸ ಹೋಗಬಹುದು, ಈ ವರ್ಷ ಹಣದಲ್ಲಿ ಮೋಸ ಹೋಗುವ ಸಾಧ್ಯತೆ ತುಂಬಾ ಇದೆ. ಆದ್ದರಿಂದ ನೀವು ಏನಾದರೂ ಹೂಡಿಕೆ ಮಾಡುವುದಾದರೆ ತುಂಬಾನೇ ಎಚ್ಚರವಹಿಸಬೇಕು.
ಎಷ್ಟೇ ಆಪ್ತರಿರಲಿ ನೀವು ಸಾಲ ಕೊಟ್ಟರೆ ಆ ಹಣ ಮರಳಿ ಬರುವುದಿಲ್ಲ. ಅಲ್ಲದೆ ಬೇರೆಯವರ ಸಾಲಕ್ಕೆ ಶ್ಯೂರಿಟಿ ಕೂಡ ನಿಲ್ಲಬೇಡಿ, ಇಲ್ಲದಿದ್ದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುವುದು. ನಿಮ್ಮ ಅಮೂಲ್ಯ ವಸ್ತುಗಳನ್ನು ಜಾಗ್ರತೆಯಿಂದಿಡಬೇಕು.

ಆರೋಗ್ಯ
ಯಗಾದಿ ರಾಶಿ ಭವಿಷ್ಯ 2023ರ ಕನ್ಯಾ ರಾಶಿಯವರಿಗೆ ಈ ವರ್ಷ ಆರೋಗ್ಯ ಸಮಸ್ಯೆ ಎದುರಾಗಬಹುದು. ನೀವು ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ. ಆರೋಗ್ಯಕರ ಆಹಾರ ಶೈಲಿ ಹಾಗೂ ಜೀವನಶೈಲಿಯಿಂದ ಆರೋಗ್ಯ ಕಾಪಾಡಬಹುದು
ಗುರುವಿಗೆ ಪರಿಹಾರ ಮಾಡಿ
* ಗುರು ಚಂಡಾಲ ಯೋಗ ಇರುವುದರಿಂದ ಅದು ನೀಡುವ ಕಷ್ಟಗಳು, ಸಮಸ್ಯೆಗಖ ನಿವಾರಣೆ ಗುರು ಬೀಜ ಮಂತ್ರ ಪಠಿಸಿ
*ಪ್ರತಿನಿತ್ಯ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications