For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ ನಲ್ಲಿ ಜನಿಸಿದವರ ಈ ವಿಶೇಷತೆಗಳ ಬಗ್ಗೆ ಗೊತ್ತೇ?

|

ನೀವು ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರಾ? ಹಾಗಿದ್ದರೆ ನಿಮ್ಮ ಗುಣಸ್ವಭಾವ ಹೇಗಿರುತ್ತದೆ? ಜಾತಕ, ಜ್ಯೋತಿಷ್ಯ, ನಕ್ಷತ್ರ, ದಿನ, ಘಳಿಗೆ, ಜನ್ಮ ತಿಂಗಳಿನ ಆಧಾರದಲ್ಲಿ ನೀವು ಎಂತಹ ಗುಣಗಳನ್ನು ಹೊಂದಿರುತ್ತೀರಿ ಎಂಬುದನ್ನು ಹೇಳುವುದಕ್ಕೆ ಸಾಧ್ಯವಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರ ರಾಶಿಚಕ್ರದ ಚಿಹ್ನೆ ತುಲಾ ಆಗಿರುತ್ತದೆ.

ಇತಿಹಾಸದ ಪ್ರಮುಖ ಗಣ್ಯರ ಜನನ

ಇತಿಹಾಸದ ಪ್ರಮುಖ ಗಣ್ಯರ ಜನನ

ಆದರೆ ತುಲಾ ರಾಶಿಯ ಸೂರ್ಯನ ಚಿಹ್ನೆಯಿಂದ ಪ್ರಭಾವಿತರಾಗಿರುವ ಜನರು ಇತರರಿಗಿಂತ ಸಾಕಷ್ಟು ಭಿನ್ನರಾಗಿರುತ್ತಾರೆ. ಮಹಾತ್ಮ ಗಾಂಧಿ, ಬಿಲ್ ಗೇಟ್ಸ್ ಮತ್ತು ಕ್ರಿಸ್ಟೋಫರ್ ಕೊಲಂಬಸ್ ಸೇರಿದಂತೆ ಹಲವಾರು ಇತಿಹಾಸದ ಲೆಜೆಂಡ್ ಗಳು ಹುಟ್ಟಿರುವುದು ಅಕ್ಟೋಬರ್ ತಿಂಗಳಲ್ಲಿಯೇ ಎಂಬುದು ಗಮನಾರ್ಹವಾಗಿರುವ ವಿಚಾರ. ಇತಿಹಾಸ ಕೂಡ ಕೆಲವು ಪ್ರಮುಖ ಗುಣಲಕ್ಷಣಗಳನ್ನು ಪುಷ್ಠೀಕರಿಸುತ್ತದೆ.

ನಿಮಗೂ ಕುತೂಹಲವಿದೆಯಾ?

ನಿಮಗೂ ಕುತೂಹಲವಿದೆಯಾ?

ನೀವು ಕೂಡ ಅಕ್ಟೋಬರ್ ತಿಂಗಳಲ್ಲಿಯೇ ಹುಟ್ಟಿದವರಾಗಿದ್ದು ನಿಮ್ಮ ಬಗ್ಗೆ ನಿಮಗೇ ಗೊತ್ತಿಲ್ಲದ ಕೆಲವು ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಿದ್ದೀರಾದರೆ ಖಂಡಿತ ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕು. ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳ ಪ್ರಮುಖ 6 ಗುಣಲಕ್ಷಣಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಅಕ್ಟೋಬರ್ ನಲ್ಲಿ ಹುಟ್ಟಿದ ವ್ಯಕ್ತಿಗಳ ಗುಣಸ್ವಭಾವಗಳು ಹೀಗಿದೆ:

1. ಮೋಡಿ ಮಾಡುವ ಸ್ವಭಾವ

1. ಮೋಡಿ ಮಾಡುವ ಸ್ವಭಾವ

ಇದು ಖಂಡಿತ ನಿಮಗೆ ವಿಶೇಷವೆನಿಸಬಹುದು ಆದರೆ ಅಕ್ಟೋಬರ್ ನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗಯೂ ಕೂಡ ಮತ್ತೊಬ್ಬರಿಗೆ ಮೋಡಿ ಮಾಡುವ ಸ್ವಭಾವವಿರುತ್ತದೆ. ಮೋಡಿಯ ಸ್ವಭಾವದೊಂದಿಗೆ ಬದುಕುವ ಇವರು ಅಯಸ್ಕಾಂತೀಯ ಗುಣವನ್ನು ಹೊಂದಿರುತ್ತಾರೆ. ನೀವು ಅವರ ನೋಟ, ತಿಳುವಳಿಕೆಯ ಸಾಮರ್ಥ್ಯ ಅಥವಾ ನೆನಪಿನ ಶಕ್ತಿ ಇತ್ಯಾದಿ ಯಾವುದೇ ವಿಚಾರದಲ್ಲೇ ಆದರೂ ಕೂಡ ಮಂತ್ರಮುಗ್ಧರನ್ನಾಗಿಸುವ ಶಕ್ತಿ ಇವರಿಗೆ ಇರುತ್ತದೆ. ಅಕ್ಟೋಬರ್ ನಲ್ಲಿ ಹುಟ್ಟಿದ ವ್ಯಕ್ತಿಗಳು ಇನ್ನೊಬ್ಬರ ಮೇಲೆ ದೀರ್ಘಕಾಲೀನ ಪ್ರಭಾವ ಬೀರುತ್ತಾರೆ. ಇವರಿಗೆ ಆಂತರಿಕ ಸೌಂದರ್ಯ ಜೊತೆಗೆ ಹೊರಗಿನ ಮೋಹಕ ಶಕ್ತಿಯಿಂದ ಆಶೀವರ್ದಿಸಲ್ಪಟ್ಟಿರುತ್ತಾರೆ.

2. ಶಾಂತಿ ಪ್ರಿಯ ಮತ್ತು ಸಾಮರಸ್ಯ

2. ಶಾಂತಿ ಪ್ರಿಯ ಮತ್ತು ಸಾಮರಸ್ಯ

ಸೌಮ್ಯ ಸ್ವಭಾವದ ಇವರು ಶಾಂತಿಪ್ರಿಯರು. ಇವರು ಪ್ರಕೃತಿದತ್ತವಾಗಿ ಸ್ನೇಹಪ್ರಿಯರಾಗಿರುತ್ತಾರೆ. ತಮ್ಮ ಸುತ್ತಮುತ್ತಲಿನ ವಾತಾವರಣ ಶಾಂತವಾಗಿರಬೇಕು ಮತ್ತು ಸದ್ದಿಲ್ಲದೇ ಇರಬೇಕು ಎಂದು ಇವರು ಬಯಸುತ್ತಾರೆ. ಇವರಿಗೆ ವೈರಿಗಳು ಕಡಿಮೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ಇವರು ಹೆಚ್ಚು ಸಾಮರಸ್ಯದಿಂದ ಎಲ್ಲರೊಡಗೂಡಿ ಬದುಕಲು ಬಯಸುತ್ತಾರೆ.

3. ಆಶಾವಾದಿ

3. ಆಶಾವಾದಿ

ಅಕ್ಟೋಬರ್ ನಲ್ಲಿ ಹುಟ್ಟಿದ ವ್ಯಕ್ತಿಗಳು ಹೆಚ್ಚು ಆಶಾವಾದಿಗಳಾಗಿರುತ್ತಾರೆ. ಅವರು ಯಾವತ್ತೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ ಮತ್ತು ತಮ್ಮ ಗುರಿಯನ್ನು ತಲುಪಲು ಎಷ್ಟೇ ಪ್ರತಿಕೂಲ ವಾತಾವರಣವಿದ್ದರೂ ಕೂಡ ಅದನ್ನು ತಲುಪುದಕ್ಕಾಗಿ ಪ್ರಯತ್ನ ಮಾಡುತ್ತಾರೆ. ಇವರ ಸಾಂಪ್ರದಾಯಿಕವಾಗಿರುವ ಆಕರ್ಷಣಾ ಶಕ್ತಿಯಿಂದಾಗಿ ಇತರರು ಇವರಿಂದ ಪ್ರಭಾವಕ್ಕೆ ಒಳಗಾಗುತ್ತಾರೆ ಮತ್ತು ಅದೇ ಕಾರಣಕ್ಕೆ ಉತ್ತಮ ನಾಯಕತ್ವದ ಗುಣಗಳು ಇವರಲ್ಲಿರುತ್ತದೆ.

4. ಹಗಲಲ್ಲೂ ಕನಸು ಕಾಣುವ ವ್ಯಕ್ತಿಗಳು

4. ಹಗಲಲ್ಲೂ ಕನಸು ಕಾಣುವ ವ್ಯಕ್ತಿಗಳು

ನೀವು ಎಂದೂ ಭೇಟಿ ಮಾಡದಂತ ಅಧ್ಬುತ ಹಗಲುಗನಸು ಕಾಣುವ ವ್ಯಕ್ತಿಗಳೆಂದರೆ ಅಕ್ಟೋಬರ್ ನಲ್ಲಿ ಹುಟ್ಟಿದವರು. ಹೌದು ಅವರು ತಮ್ಮ ಕನಸಿನ ಲೋಕದಲ್ಲಿ ಬದಕಲು ಇಚ್ಛಿಸುತ್ತಾರೆ ಮತ್ತು ಆಗಾಗ್ಗೆ ಅವರು ವಾಸ್ತವವನ್ನು ನಿರಾಕರಿಸುತ್ತಾರೆ. ಅಕ್ಟೋಬರ್ ನಲ್ಲಿ ಜನಿಸಿದವರು ತಮಗೆ ತಾವೇ ಸಾಮರ್ಥ್ಯ ಹೊಂದಿರುವವರಾಗಿರುವುದರಿಂದಾಗಿ ತಮ್ಮ ಸುತ್ತಲೂ ಹೆಚ್ಚು ಜನರ ಅಗತ್ಯತೆ ಅವರಿಗೆ ಇರುವುದಿಲ್ಲ. ಇವರು ಆಳವಾಗಿ ಯೋಚಿಸುವವರು ಮತ್ತು ಕೆಲವೊಮ್ಮೆ ಅವರ ವಿಪರೀತವಾಗಿರುವ ಕಲ್ಪನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ಕಷ್ಟವಾಗುತ್ತದೆ.

5. ಸಾಧನೆ ಆಧಾರಿತವಾಗಿರುವವರು

5. ಸಾಧನೆ ಆಧಾರಿತವಾಗಿರುವವರು

ಅಕ್ಟೋಬರ್ ನಲ್ಲಿ ಹುಟ್ಟಿದವರನ್ನು ಸಾಧನೆ ಆಧಾರಿತವಾಗಿರುವವರು ಎಂದು ಪರಿಗಣಿಸಲಾಗುತ್ತದೆ.ಅವರು ತಮ್ಮ ಕೆಲಸದ ಬಗ್ಗೆ ಬಹಳ ಉತ್ಸಾಹ ಹೊಂದಿರುತ್ತಾರೆ ಮತ್ತು ಏನೇ ಕೆಲಸ ಮಾಡಿದರೂ ಕೂಡ ಅವರಿಗೆ ಬಹಳ ಆಸಕ್ತಿ ಮತ್ತು ಉತ್ಸಾಹವಿರುತ್ತದೆ.ಯಾವುದೇ ಕೆಲಸವನ್ನು ಅರ್ಧದಲ್ಲಿ ಕೈಬಿಡುವ ಪ್ರಶ್ನೆಯೇ ಇಲ್ಲ.ಒಂದು ಕೆಲಸ ಪ್ರಾರಂಭಿಸಿದರೆ ಅದನ್ನು ಪೂರ್ಣಗೊಳಿಸುವವರೆಗೂ ಇವರು ಅದನ್ನು ಬಿಡುವುದೇ ಇಲ್ಲ.

6. ನೈಸರ್ಗಿಕವಾಗಿಯೇ ಇವರು ಜನರನ್ನು ಆಕರ್ಷಿಸುವ ಸಾಮರ್ಥ್ಯ

6. ನೈಸರ್ಗಿಕವಾಗಿಯೇ ಇವರು ಜನರನ್ನು ಆಕರ್ಷಿಸುವ ಸಾಮರ್ಥ್ಯ

ಅಕ್ಟೋಬರ್ ನಲ್ಲಿ ಹುಟ್ಟಿದವರು ಸ್ವಾಭಾವಿಕವಾಗಿ ಸ್ಪರ್ಧಾತ್ಮಕವಾಗಿರುತ್ತಾರೆ. ಇವರು ಸವಾಲುಗಳನ್ನು ಸ್ವೀಕರಿಸಲು ಮತ್ತು ಇತರರಿಗೆ ಸವಾಲು ಹಾಕುವುದಕ್ಕೆ ಹೆಚ್ಚು ಇಷ್ಟ ಪಡುತ್ತಾರೆ. ಓಟವನ್ನು ಗೆಲ್ಲುವುದಕ್ಕಾಗಿ ಇವರು ಏನು ಮಾಡುವುದಕ್ಕೂ ಕೂಡ ಸಿದ್ಧರಿರುತ್ತಾರೆ. ದೈನಂದಿನ ಜೀವನದ ಸಣ್ಣಪುಟ್ಟ ಕೆಲಸಗಳಲ್ಲೂ ಕೂಡ ಇವರು ಈ ಸ್ವಭಾವವನ್ನು ಹೊಂದಿರುತ್ತಾರೆ. ಇವರು ತಮ್ಮ ದೈನಂದಿನ ಪ್ರತಿ ಕೆಲಸವನ್ನು ಕೂಡ ಜೀವನ ಮತ್ತು ಸಾವಿನ ಪ್ರಶ್ನೆ ಎಂಬಂತೆ ಸ್ವೀಕರಿಸುತ್ತಾರೆ.

7. ಸಿಡುಕುವ ಹಾಗೂ ಸಮಾಧಾನಿಸುವ ಗುಣ

7. ಸಿಡುಕುವ ಹಾಗೂ ಸಮಾಧಾನಿಸುವ ಗುಣ

ನೀವು ಅಕ್ಟೋಬರ್ ನಲ್ಲಿ ಹುಟ್ಟಿದವರನ್ನು ಅಲ್ಪ ಸ್ವಭಾವದವರು ಎಂದು ಕರೆಯಬಹುದು. ಜನರನ್ನು ಆಗಾಗ ಇವರು ನೋಯಿಸಬಹುದು ಆದರೆ ಅದನ್ನು ಸುಲಭವಾಗಿ ಚೇತರಿಸಿಕೊಳ್ಳುವುದಕ್ಕೂ ಕೂಡ ಅವಕಾಶ ಮಾಡಿಕೊಡುತ್ತಾರೆ. ಒಂದು ರೀತಿ ನೀವಿವರನ್ನು ಶಾರ್ಟ್ ಟೆಂಪರ್ ಸ್ವಭಾವದವರು ಎಂದು ಕರೆಯಬಹುದು. ಎಷ್ಟೇ ಸಿಡುಕಿನ ಸ್ವಭಾವದವರೇ ಆಗಿದ್ದರೂ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನೇ ಸಾಧಿಸುವ ಸ್ವಭಾವ ಇವರಿಗೆ ಇರುವುದಿಲ್ಲ. ಕೋಪ ಬಂದ ಕೆಲವೇ ಕ್ಷಣಗಳಲ್ಲಿ ಪುನಃ ತಣ್ಣಗಾಗಿ ಬಿಡುತ್ತಾರೆ.

8. ರೊಮ್ಯಾಂಟಿಕ್

8. ರೊಮ್ಯಾಂಟಿಕ್

ಅಕ್ಟೋಬರ್ ನಲ್ಲಿ ಹುಟ್ಟಿದವರು ರೊಮ್ಯಾಂಟಿಕ್ ಮತ್ತು ಪ್ರೇಮದ ಸ್ವಭಾವ ಹೊಂದಿರುತ್ತಾರೆ. ಪ್ರೀತಿಯ ಮಾತುಗಳಿಂದ ಯಾರನ್ನು ಬೇಕಿದ್ದರೂ ಗೆಲ್ಲುವ ಶಕ್ತಿ ಇವರಿಗೆ ಇರುತ್ತದೆ. ಹಾಗಾಗಿ ವಿರುದ್ಧ ಲಿಂಗದ ವ್ಯಕ್ತಿಗಳನ್ನು ಇವರು ತಮ್ಮ ಮಾತಿನ ಮೋಡಿಯಿಂದ ಆಕರ್ಷಿಸಿ ಬಿಡುತ್ತಾರೆ. ಒಂದು ವೇಳೆ ಇವರು ಯಾವುದನ್ನಾದರೂ ಪ್ರೀತಿಸಿದರೆ ಅಥವಾ ಯಾರನ್ನಾದರೂ ಪ್ರೀತಿಸಿದರೆ ತಮ್ಮ ಪ್ರೀತಿಯನ್ನು ಪ್ರಕಟಿಸುವುದಕ್ಕಾಗಿ ಆಕಾಶ ಭೂಮಿಯನ್ನು ಬೇಕಿದ್ದರೂ ಒಂದು ಮಾಡಿಯಾರು. ಹೌದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಾಗಿ ಯಾವ ಹಂತಕ್ಕೆ ಬೇಕಿದ್ದರೂ ತಲುಪುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ಅಕ್ಟೋಬರ್ ನಲ್ಲಿ ಹುಟ್ಟಿದವರಾಗಿದ್ದಲ್ಲಿ ಖಂಡಿತ ನೀವು ಅದೃಷ್ಟವಂತರು. ಯಾಕೆಂದರೆ ಅವರು ನಿಮ್ಮನ್ನ ಬಹಳ ಪ್ರೀತಿಸುತ್ತಾರೆ. ಆದ್ದರಿಂದ ಇವರನ್ನು ಪ್ರೀತಿಸಿದವರು ಇವರಿಂದ ದೂರಾಗುವ, ಇವರನ್ನು ತ್ಯಜಿಸುವ ಪ್ರಯತ್ನ ಮಾಡಬೇಡಿ, ಎಚ್ಚರವಾಗಿರಿ.

English summary

Special Traits About The People Who Born In October

People born in October – The month of October is ruled by the zodiac sign Libra, though each individual is having different traits depending on their birth month, star positions. But people those are influenced by the sun sign of Libra are quite different than others. It has been said that individuals are born in October, if you look back to the history you will find this fact true, as the legends like ‘Mahatma Gandhi’, ‘Bill Gates’ and ‘Christopher Columbus’ were born in the month of October.
X
Desktop Bottom Promotion