Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರುಡ ಪುರಾಣ: ಈ ನಾಲ್ಕು ಸಂಗತಿ ಮಾಡಿದವರ ಆಯುಷ್ಯ ಕಡಿಮೆಯಾಗುವುದು
ಗರುಡ ಪುರಾಣವು ಹಿಂದೂ ಧರ್ಮದ ಮುಖ್ಯ ಪಠ್ಯಗಳಲ್ಲಿ ಒಂದು. ಹದಿನೆಂಟು ಮಹಾಪುರಾಣಗಳಲ್ಲಿ ಇದು ಕೂಡ ಒಂದು. ಗರುಡಪುರಾಣದಲ್ಲಿ ಹುಟ್ಟು, ಸಾವು ಮತ್ತು ಮರಣದ ನಂತರದ ಎಲ್ಲಾ ವಿಚಾರಗಳು ಉಲ್ಲೇಖವಾಗಿದೆ.

ಹುಟ್ಟು-ಸಾವನ್ನು ಯಾರಿಂದಲೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ನಾವು ಮಾಡುವ ಕೆಲವೊಂದು ಚಟುವಟಿಕೆಗಳು ನಮ್ಮ ಆಯಸ್ಸನ್ನು ಕಡಿಮೆ ಮಾಡಲಿದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾದರೆ ಗರುಡ ಪುರಾಣದ ಪ್ರಕಾರ ನಾವು ಮಾಡಿದ ಯಾವ ತಪ್ಪುಗಳು ನಮ್ಮ ಜೀವನಾಯುಷ್ಯವನ್ನು ಕಡಿಮೆ ಮಾಡಿಲಿದೆ ಅನ್ನೋದನ್ನ ನೋಡೋಣ.
ಗರುಡ ಪುರಾಣವು ವಿಷ್ಣು ಹಾಗೂ ಗರುಡನ ನಡುವೆ ನಡೆಯುವ ಮಾತುಕತೆಯಾಗಿದೆ. ಒಂದು ಮನೆಯಲ್ಲಿ ಸಾವಾದರೆ ಮುಂದಿನ ಹದಿಮೂರು ದಿನಗಳ ಕಾಲ ಆ ಮನೆಯಲ್ಲಿ ಗರುಡ ಪುರಾಣವನ್ನು ಪಠಿಸಬೇಕು. ನಿಮಗೆಲ್ಲಾ ಗೊತ್ತಿರುವ ಹಾಗೆ ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ನಿಗೂಢ ರಹಸ್ಯಗಳು ಉಲ್ಲೇಖವಾಗಿದೆ. ಇದೇ ಕಾರಣಕ್ಕೆ ಕೆಲವೊಂದು ತಪ್ಪುಗಳನ್ನು ಮಾಡುವಾಗ ಮುಂಜಾಗೃತೆಯಿಂದ ಇರಿ ಎಂದು ಗರುಡ ಪುರಾಣ ಹೇಳುತ್ತದೆ.
1. ಬೆಳಗ್ಗೆ ತಡವಾಗಿ ಎದ್ದೇಳುವುದು ಒಳ್ಳೆಯದಲ್ಲ
ಗರುಡ ಪುರಾಣದ ಪ್ರಕಾರ ಮುಂಜಾನೆ ಬೇಗನೆ ಏಳಬೇಕು. ಸೂರ್ಯ ಉದಯದ ನಂತರ ಎದ್ದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಬೆಳಗ್ಗೆ ತಡವಾಗಿ ಏಳೋದು ಹಾಗೂ ರಾತ್ರಿ ತಡವಾಗಿ ಮಲಗೋದು ಸಾಮಾನ್ಯ ಎಂಬಂತಾಗಿದೆ. ತಡವಾಗಿ ಯಾವ ವ್ಯಕ್ತಿ ಏಳುತ್ತಾನೋ ಅವನಿಗೆ ಬೆಳಗ್ಗಿನ ಶುದ್ಧ ಗಾಳಿಯಾಗಲಿ, ಬೆಳಕಾಗಲಿ ಸಿಗೋದಿಲ್ಲ. ಹೀಗಾಗಿ ಅಂತಹ ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.
2. ಸೂರ್ಯ ಮುಳುಗಿದ ನಂತರ ಮೊಸರನ್ನ ಸೇವಿಸಬೇಡಿ
ಗರುಡ ಪುರಾಣದ ಪ್ರಕಾರ ಸೂರ್ಯ ಮುಳುಗಿದ ನಂತರ ಅಂದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವನೆ ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರುತ್ತದೆ. ಇದರ ಜೊತೆಗೆ ರಾತ್ರಿ ಹಾಲು ಕುಡಿಯುವ ಮೊದಲಾಗಲಿ ಹಾಲು ಕುಡಿದ ನಂತರವಾಗಲಿ ಮೊಸರು ಸೇವಿಸಲೇಬಾರದು.
3. ಮಾಂಸಹಾರಿ ಪದಾರ್ಥಗಳನ್ನು ತಿನ್ನುವಾಗ ಜಾಗರೂಕರಾಗಿರಿ
ಗರುಡ ಪುರಾಣದ ಪ್ರಕಾರ ಹಾಳಾದ ಅಥವಾ ಸರಿಯಾಗಿ ಬೇಯಿಸದ ಮಾಂಸಹಾರಗಳನ್ನು ತಿನ್ನಬೇಡಿ. ಇದು ವಿಷಕ್ಕೆ ಸಮಾನವಂತೆ. ಇಂತಹ ಮಾಂಸಗಳಲ್ಲಿ ಬ್ಯಾಕ್ಟೀರಿಯಾಗಳ ಹೆಚ್ಚಾಗಿದ್ದು, ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು. ಇದು ನಿಮ್ಮ ಜೀವನಾಯುಷ್ಯವನ್ನೇ ಕಡಿಮೆ ಮಾಡುತ್ತದೆ.
4. ಸೂರ್ಯ ಉದಯದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ
ಗರುಡ ಪುರಾಣದ ಪ್ರಕಾರ ಸೂರ್ಯ ಉದಯವಾದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು. ಇದು ನಿಮ್ಮ ದೇಹವನ್ನು ನಿಶಕ್ತಿಗೊಳಿಸುತ್ತದೆ. ಜೊತೆಗೆ ಹಲವಾರು ರೋಗಗಳಿಗೂ ಕಾರಣವಾಗುತ್ತಂತೆ.
ಈ ಮೇಲಿನ ನಾಲ್ಕು ಚಟುವಟಿಕೆಗಳನ್ನು ಮಾಡುವುದರಿಂದ ನಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ನಮ್ಮ ಜೀವನಾಯುಷ್ಯವನ್ನೇ ಕಡಿಮೆ ಮಾಡಬಹುದು. ಹೀಗಾಗಿ ಅಪಾಯವಿದೆ ಎಂದು ಗೊತ್ತಿದ್ದ ಮೇಲೂ ತಪ್ಪು ಮಾಡೋದಕ್ಕೆ ಹೋಗಬೇಡಿ.



Click it and Unblock the Notifications



