Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಏ.20ಕ್ಕೆ ಸೂರ್ಯಗ್ರಹಣ: ಗ್ರಹಣ ಸಮಯದಲ್ಲಿ ದೇವಾಲಯಗಳ ಬಾಗಿಲು ಮುಚ್ಚುವುದೇಕೆ?
ಏಪ್ರಿಲ್ 20ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದ ವಿಶೇಷವೆಂದರೆ ಇದು ಅಪರೂಪದ ಸೂರ್ಯಗ್ರಹಣವಾಗಿದೆ. ಈ ಸೂರ್ಯಗ್ರಹಣವನ್ನು ಹೈಬ್ರಿಡ್ ನಿಂಗಲೂ ಗ್ರಹಣ ಎಂದು ಕರೆಯಲಾಗುವುದು. ಗ್ರಹಣ ಸಮಯದಲ್ಲಿ ಹಲವಾರು ಧಾರ್ಮಿಕ ನಂಬಿಕೆಗಳನ್ನು ಪಾಲಿಸಲಾಗುವುದು.
ಗ್ರಹಣ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಗ್ರಹಣದ ಸೂತಕ ಮುಗಿಯುವವರೆಗೆ ಬಾಗಿಲು ತೆರೆಯುವುದಿಲ್ಲ. ದೇವಾಲಯಗಳ ಬಾಗಿಲು ಯಾಕೆ ತೆರೆಯುವುದಿಲ್ಲ? ಇದರ ಹಿಂದಿರುವ ಕಾರಣವೇನು ಎಂದು ನೋಡೋಣ ಬನ್ನಿ:

ದೇವಾಲಯಗಳಲ್ಲಿ ದೈವಿಕ ಶಕ್ತಿ ಇರುತ್ತದೆ
ನೀವು ಯಾವುದೇ ದೇವಾಲಯಕ್ಕೆ ಭೇಟಿ ನೀಡಿದರೂ ಮನಸ್ಸಿಗೆ ನೆಮ್ಮದಿ ಅನಿಸುವುದು. ನಿಮ್ಮ ಮನಸ್ಸಿನಲ್ಲಿರುವ ಭಾರವೆಲ್ಲಾ ಕಡಿಮೆಯದಂತೆ ಅನಿಸುವುದು, ಅದಕ್ಕೆ ದೇವಾಲಯದಲ್ಲಿರು ಧನಾತ್ಮಕ ಶಕ್ತಿ ಕಾರಣ. ದೇವಾಲಯದಲ್ಲಿರುವ ದೇವರ ಮೂರ್ತಿಗಳಿಂದ ಧನಾತ್ಮಕ ಶಕ್ತಿ ಆ ಪ್ರದೇಶದಲ್ಲಿ ಹರಡುವುದು. ಆದ್ದರಿಂದ ಮನಸ್ಸಿನ ನೋವುಗಳು, ಒತ್ತಡಗಳು ಎಲ್ಲವೂ ಆ ಪ್ರದೇಶಕ್ಕೆ ಬಂದರೆ ದೂರಾಗುವುದು.
ಗ್ರಹಣದ ಸಮಯದಲ್ಲಿ ಬಾಗಿಲು ಮುಚ್ಚುವುದು ಏಕೆ?
ಸೂರ್ಯ ಹಾಗೂ ಚಂದ್ರ ಭೂಮಿಗೆ ಬೆಳಕು ನೀಡುವ ಗ್ರಹಗಳಾಗಿವೆ. ಗ್ರಹಣವಾದಾಗ ಅವುಗಳ ಬೆಳಕು ಭೂಮಿಗೆ ತಲುಪುವುದಿಲ್ಲ, ಈ ಅವಧಿಯಲ್ಲಿ ನೆಗೆಟಿವ್ ಎನರ್ಜಿ ತುಂಬಾ ಇರುತ್ತದೆ, ಈ ಸಮಯದಲ್ಲಿ ಬಾಗಿಲು ತೆರೆದಿಟ್ಟರೆ ದೇವಾಲಯದಲ್ಲಿರು ದೈವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು, ಈ ಕಾರಣದಿಂದಾಗಿ ದೇವಾಲಯದ ಬಾಗಿಲು ಗ್ರಹಣದ ಸಮಯದಲ್ಲಿ ಮುಚ್ಚಿರಲಾಗುವುದು.
ಗ್ರಹಣದ ದೋಷ ತಟ್ಟದಿರಲು ತುಳಸಿ ಎಲೆ ಹಾಕಲಾಗುವುದು
ದೇವಾಲಯದ ವಿಗ್ರಹಗಳಿಗೆ ಗ್ರಹಣದ ಋಣಾತ್ಮಕ ಶಕ್ತಿ ತಾಗದಿರಲು ತುಳಸಿ ಎಲೆಗಳನ್ನು ಹಾಕಿಡಲಾಗುವುದು, ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ತುಳಸಿಎಲೆಗೆ ಇದೆ, ಹಾಗಾಗಿ ಹೀಗೆ ಮಾಡಲಾಗುವುದು.
ಭಾರತದಲ್ಲಿ ಒಂದೇ ಒಂದು ದೇವಾಲಯದ ಬಾಗಿಲು ತೆರೆದಿರುತ್ತದೆ
ಗ್ರಹಣದ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಆದರೆ ಶ್ರೀ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಾಲಯದ ಬಾಗಿಲು ಮಾತ್ರ ತೆರೆದಿರುತ್ತದೆ. ಇಲ್ಲಿ ರಾಹು-ಕೇತುಗಳಿಗೆ ಪೂಜೆಯನ್ನು ಮಾಡಲಾಗುವುದು ಹಾಗಾಗಿ ಗ್ರಹಣದ ಪ್ರಭಾವ ಈ ದೇವಾಲಯದ ಮೇಲೆ ಬರುವುದಿಲ್ಲ.
ಪಂಚಾಂಗದ ಪ್ರಕಾರ ಗ್ರಹಣ ಉಂಟಾಗಲು ಕಾರಣ ರಾಹು-ಕೇತು. ಈ ದೇವಾಲಯದಲ್ಲಿ ರಾಹು-ಕೇತುವನ್ನು ಪೂಜಿಸುತ್ತಿರುವುದರಿಂದ ಗ್ರಹಣದ ಸಮಯದಲ್ಲೂ ಬಾಗಿಲು ತೆರೆದಿರುತ್ತದೆ.



Click it and Unblock the Notifications

