ಸೂರ್ಯಗ್ರಹಣ 2020: ದ್ವಾದಶ ರಾಶಿಗಳ ಮೇಲೆ ಈ ಗ್ರಹಣದ ಪ್ರಭಾವ ಹೇಗಿದೆ?

2020 ಇನ್ನೇನು ಮುಗಿಯುತ್ತಾ ಬಂತು. ಈ ಸಂದರ್ಭದಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 14ರಂದು ಸಂಭವಿಸಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ವರ್ಷವಿಡೀ ಸಂಕಷ್ಟವನ್ನೇ ಎದುರಿಸಿದ ಮನುಷ್ಯ ಸಂಕುಲಕ್ಕೆ ಸೂರ್ಯಗ್ರಹಣದಿಂದ ಏನೇನೂ ಬದಲಾವಣೆ ಆಗಲಿದೆ ಎಂಬುದು ಕಾದನೋಡಬೇಕಾಗಿದೆ.

C:\Anguraj\Boldsky Kannada\12_December\12-12\04

ಸಾಮಾನ್ಯವಾಗಿ ಯಾವುದೇ ಗ್ರಹಣ ಸಂಭವಿಸಿದರೂ ದ್ವಾದಶ ರಾಶಿಗಳ ಮೇಲೆ ವಿಭಿನ್ನ ರೀತಿಯ ಪ್ರಭಾವ ಬೀರುತ್ತವೆ. ಕೆಲ ರಾಶಿಗಳಿಗೆ ಶುಭ ಫಲ, ಕೆಲ ರಾಶಿಗಳಿಗೆ ಅಶುಭ ಫಲ, ಉಳಿದ ರಾಶಿಗಳಿಗೆ ಮಿಶ್ರ ಫಲ ಹೀಗೆ ವಿಭಿನ್ನವಾಗಿರುತ್ತದೆ. ಅದೇ ರೀತಿ ಮುಂಬರುವ ಸೂರ್ಯಗ್ರಹಣ ಯಾವ ರಾಶಿಗಳಿಗೆ ಯಾವ ಫಲ ಹೊತ್ತುತಂದಿದೆ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ:

ಮೇಷ ರಾಶಿ:

ಈ ರಾಶಿಯವರಿಗೆ ಈ ಗ್ರಹಣದ ಶಕ್ತಿಯು ನಿಮ್ಮ ಕನಸುಗಳನ್ನು ಮತ್ತೊಂದು ಶಿಖರಕ್ಕೆ ತಲುಪಿಸಬಹುದು. ನಿಮ್ಮ ಉತ್ಸಾಹವನ್ನು ಹೊಸ ಆಕಾಂಕ್ಷೆಗಳ ಗುಂಪಿಗೆ ಸೇರುವಂತೆ ನಿಮ್ಮನ್ನು ಜಾಗೃತಗೊಳಿಸಬಹುದು. ಈ ಸಂದರ್ಭದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನು ಅಥವಾ ತಿರುವುಗಳನ್ನು ಎದುರಿಸಲು ನೀವು ಸಂಪೂರ್ಣವಾಗಿ ಸಿದ್ಧವಾಗಿರುವಿರಿ. ಮುಂದಿನ ಹೆಜ್ಜೆಯನ್ನಿಡಲು ಸರಿಯಾದ ಸಮಯಕ್ಕಾಗಿ ಕಾಯಬೇಡಿ, ಯಾಕಂದ್ರೆ ಈ ಸರಿ ಅದೃಷ್ಟ ನಿಮ್ಮ ಕಡೆ ಇದೆ. ಯಾವುದೇ ಕಾರ್ಯಕ್ಕಾದರೂ ಮುನ್ನುಗ್ಗಿ.

ವೃಷಭ ರಾಶಿ:

ವೃಷಭ ರಾಶಿ:

ಗ್ರಹಣದಿಂದ ಉಂಟಾಗುವ ಅಲ್ಲೋಲ-ಕಲ್ಲೋಲಗಳನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಗಡಿಗಳನ್ನು ನಿಯಂತ್ರಿಸಿಕೊಳ್ಳಬಹುದು. ಸಂಬಂಧಗಳು, ಕೆಲಸ ಮತ್ತು ಅದಕ್ಕೂ ಮೀರಿದ ನಿಮ್ಮ ವೈಯಕ್ತಿಕ ಮಿತಿಗಳ ಬಗ್ಗೆ ದೃಢವಾಗಿರಲು ಇದೀಗ ಉತ್ತಮ ಸಮಯ. ನಿಮ್ಮ ಸಮಯ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ದೃಢವಾದ ನಿರ್ಧಾರ ಕೈಗೊಳ್ಳಿ. ನಿಮ್ಮ ದುರ್ಬಲತೆಯನ್ನು ಬಹಿರಂಗವಾಗಿ ಅನ್ವೇಷಿಸಲು ಆಧ್ಯಾತ್ಮಿಕಯ ದಾರಿಯನ್ನು ಬಳಸಿಕೊಳ್ಳಿ.

ಮಿಥುನ ರಾಶಿ:

ಮಿಥುನ ರಾಶಿ:

ಈ ರಾಶಿಯವರಿಗೆ ಗ್ರಹಣದ ಪ್ರಭಾವ ತೀವ್ರವಾಗಿರಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಖಂಡಿತವಾಗಿಯೂ ಒತ್ತಡವನ್ನು ಅನುಭವಿಸುತ್ತಿದ್ದೀರಿ. ನಿಮ್ಮ ಸಂಗಾತಿಯ ಕುರಿತು ತಪ್ಪುಗ್ರಹಿಕೆಯನ್ನು ಹೋಗಲಾಡಿಸಲು ನಿಮ್ಮ ಸಂಗಾತಿಯೊಡನೆ ಕೂತು ಸರಿಯಾಗಿ ಮಾತನಾಡಿ ಬಗೆಹರಿಸಿಕೊಳ್ಳುವುದು ಉತ್ತಮ. ಯವುದೋ ವಿಚಾರ ನಿಮಗೆ ಗೊತ್ತೋ ಅಥವಾ ಇಲ್ಲವೋ, ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂಬುದರ ಕುರಿತು ಹಚ್ಚು ಕಲಿಯುತ್ತೀರಿ.

ಕರ್ಕಾಟಕ:

ಕರ್ಕಾಟಕ:

ಈ ರಾಶಿಯವರ ಸಾಮಾನ್ಯ ದಿನಚರಿಗೆ ದೊಡ್ಡ ಅಡೆತಡೆಗಳನ್ನುನಿರೀಕ್ಷಿಸಬಹುದು. ಆದರೆ ಅದನ್ನು ಸೀಕರಿಸಿ ಮುನ್ನಡೆಯಿರಿ. ಕೆಲವು ಹೊಸ ಶಕ್ತಿಯು ನಿಮ್ಮನ್ನು ಹಳೆಯ ಅಭ್ಯಾಸಗಳಿಂದ ದೂರಮಾಡುವಂತಹ ಸಮಯ. ಗ್ರಹಣ ಎಷ್ಟು ತೀವ್ರವಾಗಿ ಪ್ರಭಾವ ಬೀರಿದರೂ, ನಿಮ್ಮ ವೈಯಕ್ತಿಕ ಗುರಿ ಮತ್ತು ಆಕಾಂಕ್ಷೆಗಳನ್ನು ಪೋಷಿಸಲು ನಿಮ್ಮ ದೈನಂದಿನ ವೇಳಾಪಟ್ಟಿಯನ್ನು ಪುನರ್ರಚಿಸಲು ಬದ್ಧರಾಗಿರಿ ಮತ್ತು ಸ್ವ-ಆರೈಕೆಗಾಗಿ ಹೆಚ್ಚಿನ ಸಮಯವನ್ನು ವ್ಯಯ ಮಾಡುವುದು ಬಿಡಿ.

ಸಿಂಹ:

ಸಿಂಹ:

ಯಾವುದೇ ಕಾರ್ಯದಲ್ಲಿ ಸಿಂಹ ರಾಶಿಯವರ ಉತ್ಸಾಹ ಇನ್ನಷ್ಟು ವೃದ್ಧಿಯಾಗಲಿದೆ. ಆದ್ದರಿಂದ ಮತ್ತಷ್ಟು ಸೃಜನಶೀಲ ಕಾರ್ಯಗಳಿಗೆ ಒತ್ತುನೀಡಿ. ಗ್ರಹಣವು ಕೆಲವು ಅನಿರೀಕ್ಷಿತ ಭಾವನೆಗಳನ್ನು ಮೇಲ್ಮೈಗೆ ತಂದರೂ ಸಹ, ನಿಮ್ಮ ಪ್ರತಿಭೆಯನ್ನು ಬೆಳಗಿಸಲು ಅವಕಾಶ ಮಾಡಿಕೊಡುವ ಮೂಲಕ ನೀವು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಬಹುದು.

ಕನ್ಯಾ ರಾಶಿ:

ಕನ್ಯಾ ರಾಶಿ:

ನಿಮ್ಮ ಹಿಂದಿನ ಅಥವಾ ನಿಮ್ಮ ಕುಟುಂಬ ಜೀವನಕ್ಕೆ ಬಂದಾಗ ಗ್ರಹಣವು ಕೆಲವು ಗಂಭೀರವಾದ ಅಲುಗಾಡುವಿಕೆಯನ್ನು ತರಬಹುದು. ಆದ್ದರಿಂದ ನಿಮ್ಮ ಮೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಸಿ. ಇದರಿಂದ ನಿಮ್ಮ ಮನಸ್ಸು ಉಲ್ಲಾಸದಾಯಕವಗಿರುತ್ತದೆ. ಕನ್ಯಾ ರಾಶಿಯವರು ಮುಂದೆ ಎದುರಾಗುವ ಸ್ಥಿತಿಯ ಕುರಿತು ಚಿಂತೆ ಮಾಡುವ ಬದಲು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಿ. ಇದರಿಂದ ನಿಮಗೆ ಸುರಕ್ಷಿತ ಹಾಗೂ ಆರಾಮದಾಯಕ ಎನಿಸಿ, ಮುಂದೆ ಎದುರಾಗುವುದನ್ನು ಸುಲಭವಾಗಿ ಎದುರಿಸಲು ಅಗತ್ಯವಾದ ಭಾವನೆ ಹಾಗೂ ಧೈರ್ಯವನ್ನು ನೀಡುತ್ತದೆ.

 ತುಲಾ:

ತುಲಾ:

ನೀವು ಹೇಳಬೇಕಾದ ವಿಷಯಗಳನ್ನು ಮೊದಲು ಚೆನ್ನಾಗಿ ಯೋಚಿಸಿ. ನೀವು ವಿಷಯಗಳನ್ನು ವಾಸ್ತವಕ್ಕೆ ತಕ್ಕಂತೆ ಹೇಳುವ ಸಾಮರ್ಥ್ಯವನ್ನು ಹೊಂದಿದ್ದೀರಿ. ನೀವು ಸ್ವಾಭಾವಿಕವಾಗಿ ಸಾಮಾಜಿಕ ಮತ್ತು ರಾಜತಾಂತ್ರಿಕರಾಗಿದ್ದೀರಿ. ನಿಮ್ಮ ಅಧಿಕಾರವನ್ನು ಒಳ್ಳೆಯದಕ್ಕಾಗಿ ಬಳಸಲು ಆಯ್ಕೆಮಾಡಿ ಮತ್ತು ನಿಮ್ಮ ಸುತ್ತಲಿನ ಜನರೊಂದಿಗೆ ಅಧಿಕೃತ, ಕುತೂಹಲ ಮತ್ತು ಮುಕ್ತ ಮನಸ್ಸಿನೊಂದಿಗೆ ಸಂಪರ್ಕ ಸಾಧಿಸಿ.

ವೃಶ್ಚಿಕ:

ವೃಶ್ಚಿಕ:

ಈ ಗ್ರಹಣವು ನಿಮ್ಮ ಹಣ ಮತ್ತು ಸಂಪನ್ಮೂಲಗಳ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಈ ರಾಶಿಯವರು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಯಾವುದೇ ಹಠಾತ್ ಅಲುಗಾಡುವಿಕೆ ಅಥವಾ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ. ಬಜೆಟ್ ಮಾಡುವ ಮೂಲಕ ನಿಮ್ಮ ಖರ್ಚುಗಳ ಮೇಲೆ ಹೆಚ್ಚು ಕಣ್ಣಿಡುವ ಮೂಲಕ ನಿಮ್ಮ ಗ್ರಹಣ ಅದೃಷ್ಟವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ. ಹಿಂದಿನ ಹಣಕಾಸಿನ ತಪ್ಪುಗಳನ್ನು ಸರಿಮಾಡಲು ಮತ್ತು ಹಣದ ಬಗ್ಗೆ ಇರುವ ನಂಬಿಕೆಗಳನ್ನು ತಪ್ಪಿಸಲು ಈಗ ಒಂದು ಉತ್ತಮ ಅವಕಾಶ.

 ಧನು ರಾಶಿ:

ಧನು ರಾಶಿ:

ಈ ರಾಶೀಯವರಿಗೆ ಹೊಸ ದಿನಗಳು ಆರಂಭವಾಗಲಿವೆ. ಹೊಸ ವ್ಯಕ್ತಿಯಾಗಿ ಹೊರಜಗತ್ತಿಗೆ ಹೊರಹೊಮ್ಮಲಿದ್ದೀರಿ. ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಸ್ವೀಕರಿಸಿ ಎಲ್ಲದಕ್ಕೂ ಹೊಂದಿಕೊಳ್ಳಿ. ನೀವು ಜನಮನದಲ್ಲಿರುವುದರಿಂದ ಹೊಸತನವನ್ನು ರೂಢಿಮಾಡಿಕೊಳ್ಳಲು ಅವಕಾಶವಿಲ್ಲ ಎಂದರ್ಥವಲ್ಲ. ಜನಸಮೂಹದ ಮುಂದೆ ರೂಪಾಂತರಗೊಳ್ಳಲು ಮತ್ತು ಇತರರನ್ನು ಬೆಳೆಯಲು ಪ್ರೇರೇಪಿಸಿ.

ಮಕರ:

ಮಕರ:

ಈ ರಾಶಿಯವರಿಗೆ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಲು ಇದು ಸೂಕ್ತ ಸಮಯ ಎಂದು ತೋರುತ್ತದೆ. ದಿನದ 24ಗಂಟೆ ದುಡಿಯುವುದು, ಪರಿಪೂರ್ಣತೆಯನ್ನು ಸಾಧಿಸಲು ಅಷ್ಟೊಂದು ಪ್ರಮಾಣದ ಕಾರ್ಯ ಅಗತ್ಯವಿಲ್ಲ. ನಿಮಗಾಗಿ ಸ್ವಲ್ಪ ಬದಲಾಗಿ, ನಿಮ್ಮ ಜೀವನ ಉತ್ತಮವಾಗಿರಲು ವಿಶ್ರಾಂತಿ ಪಡೆದುಕೊಳ್ಳು ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಿಕೊಳ್ಳಿ.

ಕುಂಭ:

ಕುಂಭ:

ನಿಮಗೆ ಮುಂದಿನ ಕ್ರಮ ಅಥವಾ ಹೆಜ್ಜೆಯಿಡುವಲ್ಲಿ ಸಂಶಯಗಳಿದ್ದರೆ ನಿಮ್ಮ ಸುತ್ತಮುತ್ತಲಿರುವ ನಿಮ್ಮ ಸ್ನೇಹಿತರು, ಕುಟುಂಬಸ್ಥರ ನೆರವು ಪಡೆದುಕೊಳ್ಳಿ. ಅಷ್ಟೇ ಅಲ್ಲ, ಸಮುದಾಯ ನಿರ್ಮಾಣಕ್ಕೆ ಕೆಲವು ಹೆಚ್ಚುವರಿ ಶಕ್ತಿ ಮತ್ತು ಗಮನವನ್ನು ನೀಡಿ. ನಿಮ್ಮ ಜೀವನದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಸಂಬAಧಗಳು ಅಥವಾ ಕೆಲಸದ ಸಂಪರ್ಕಗಳು ಇದ್ದರೆ, ಅದನ್ನು ಮತ್ತೊಮ್ಮೆ ಪುನಶ್ಚೇತನಗೊಳಿಸಿ ಅಥವಾ ಅದರಿಂದ ಹೊರಬಂದು ಬಿಡಿ.

ಮೀನ:

ಮೀನ:

ನಿಮ್ಮ ವೃತ್ತಿಪರ ಜೀವನಕ್ಕೆ ಬಂದರೆ ಈ ಗ್ರಹಣದಿಂದ ತುಂಬಾ ಪ್ರಭವ ಎದುರಿಸಬೇಕಾಗಬಹುದು. ನಿಮಗಾಗಿ ಯಾವುದೋ ಒಂದು ಬಾಗಿಲು ಸದಾ ತೆಗೆದಿರುತ್ತದೆ. ಆದರೆ ಕಣ್ಣುಬಿಟ್ಟು ನೀವು ನೋಡಬೇಕಷ್ಟೆ. ಬಂದಿದ್ದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ. ಇದರಿಂದ ನೀವು ಮತ್ತಷ್ಟು ಜೀವನದಲ್ಲಿ ಶೈನ್ ಆಗಬಹುದು. ಬದಲಾವಣೆಯ ಗಾಳಿ ಯಾವ ರೀತಿಯಲ್ಲಿ ಬೀಸುತ್ತಿದೆ ಎಂದು ಅರಿತು ನಿಮ್ಮ ಹಡಗನ್ನು ಹೊಸ ದಿಕ್ಕಿನಲ್ಲಿ ಸಾಗಿಸಲು ಹಿಂಜರಿಯದಿರಿ.

English summary

Solar Eclipse December 2020: Effects On all zodiac signs In Kannada

Here we told about Effects on all zodiac signs Solar Eclipse December 2020 in Kannada, read on.
X
Desktop Bottom Promotion