ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು

ಶನಿಯನ್ನು ನ್ಯಾಯದ ದೇವತೆ ಎಂದು ಕರೆಯಲಾಗುವುದು. ನಮ್ಮ ಕರ್ಮಕ್ಕೆ ತಕ್ಕಂತೆ ಶನಿಯು ಫಲ ನೀಡುತ್ತಾನೆ ಎಂದು ಹೇಳಲಾಗುವುದು, ಅದರ ಜೊತೆಗೆ ಶನಿಯು ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವವು ಪ್ರತಿಯೊಂದು ರಾಶಿಯ ಮೇಲಿರುತ್ತದೆ ಅಲ್ಲದೆ ಈ ಪ್ರಭಾವ ದೀರ್ಘ ಕಾಲ ಇರಲಿದೆ. ಏಕೆಂದರೆ ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ.

Shani Asta 2023

ಈ ವರ್ಷ ಜನವರಿ 17ಕ್ಕೆ ಶನಿಯು ಕುಂಭ ರಾಶಿಗೆ ಸಂಚಾರ ಮಾಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಶನಿ ಅಸ್ತವಾಗಿದೆ. ಜನವರಿ 30ಕ್ಕೆ ಶನಿಯು ಅಸ್ತವಾಗಿದೆ. ಯಾವುದೇ ಗ್ರಹ ಸೂರ್ಯನ ಸಮೀಪ ಬಂದಾಗ ಅಸ್ತಂಗತವಾಗುವುದು ಎಂದು ಹೇಳಲಾಗುವುದು, ಇದೀಗ ಶನಿಯು ಅಸ್ತಂಗತವಾಗಿದೆ. ಶನಿಯು ಅಸ್ತಂಗತವಾಗಿರುವುದರಿಂದ ಒಳ್ಳೆಯ ಪ್ರಭಾವ ಬೀರುವುದಿಲ್ಲ, ದ್ವಾದಶ ರಾಶಿಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವ ಬೀರಲಿದೆ.

ಆದರೆ ಕೆಲವು ರಾಶಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕೆಟ್ಟ ಪ್ರಭಾವ ಬೀರಲಿದೆ. ಆದ್ದರಿಂದ ಈ ರಾಶಿಯವರು 35 ದಿನಗಳವರೆಗೆ ತುಂಬಾನೇ ಜಾಗರೂಕರಾಗಿರಬೇಕು. ಯಾವ ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು ಎಂದು ನೋಡೋಣ ಬನ್ನಿ:

ಮಿಥುನ ರಾಶಿ

ಮಿಥುನ ರಾಶಿ

ಶನಿ ಅಸ್ತಂಗತವಾಗಿರುವುದು ಮಿಥುನ ರಾಶಿಯವರಿಗೆ ಪ್ರತಿಕೂಲವಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಶನಿದೇವನು ವಯಸ್ಸು ಮತ್ತು ಅದೃಷ್ಟದ ಅಧಿಪತಿಯಾಗಿ ನೆಲೆಸಿದ್ದಾನೆ. ಅದಕ್ಕಾಗಿಯೇ ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಅಪರೂಪವಾಗಿ ಪಡೆಯುತ್ತೀರಿ. ಇದರೊಂದಿಗೆ, ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ಆರೋಗ್ಯದ ಬಗ್ಗೆ ಯಾವುದೇ ನಿರ್ಲಕ್ಷ್ಯವನ್ನು ಮಾಡಬೇಡಿ. ಮತ್ತೊಂದೆಡೆ, ನೀವು ಉದ್ಯಮಿಯಾಗಿದ್ದರೆ, ಈ ಅವಧಿಯಲ್ಲಿ ನಿಮ್ಮ ವ್ಯವಹಾರವು ನಿಧಾನಗೊಳ್ಳುತ್ತದೆ, ಇದರಿಂದ ನಿನಗೆ ನಿರಾಸೆ ಉಂಟಾಗಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಚಲಾಯಿಸುವಾಗ ತುಂಬಾನೇ ಜಾಗ್ರತೆವಹಿಸಬೇಕು.

ಪರಿಹಾರ: ಹನುಮಾನ್ ಚಾಲೀಸ ಪ್ರತಿದಿನ ಪಠಿಸಿ.

 ಕರ್ಕ ರಾಶಿ

ಕರ್ಕ ರಾಶಿ

ಶನಿದೇವ ಅಸ್ತಂಗತವಾಗಿರುವ ಈ ಅವಧಿಯಲ್ಲಿ ತುಂಬಾನೇ ಜಾಗೃತಿವಹಿಸಬೇಕು. ಏಕೆಂದರೆ ಶನಿದೇವನು ನಿಮ್ಮ ಮರಣಸ್ಥಾನದಲ್ಲಿ ನೆಲೆಸಲಿದ್ದಾನೆ. ಅದಕ್ಕಾಗಿಯೇ ಈ ಸಮಯದಲ್ಲಿ ಕುಟುಂಬದಲ್ಲಿ ಯಾರಾದರೂ ಸಾವಿನ ನೋವು ಅನುಭವಿಸಬಹುದು. ಇದರೊಂದಿಗೆ ನಿಮ್ಮ ಆರೋಗ್ಯವೂ ಹದಗೆಡಬಹುದು. ಹಿಂದಿನ ಕಾಯಿಲೆ ಮರಳಿ ಬರುವ ಸಾಧ್ಯತೆ ಇದೆ. ಅಲ್ಲದೆ, ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ, ಯಾವುದೇ ಹೊಸ ವ್ಯಾಪಾರ ಮಾಡುವುದು ಅಥವಾ ವ್ಯಾಪಾರ ವಿಸ್ತರಣೆಗೆ ಯೋಜನೆ ರೂಪಿಸುವುದು ಮಾಡಬೇಡಿ. ಹೊಸ ಹೂಡಿಕೆಯನ್ನು ಸಹ ತಪ್ಪಿಸಬೇಕು. ಅದೇ ಸಮಯದಲ್ಲಿ, ಜನವರಿ 17 ರಿಂದ ನಿಮ್ಮ ಮೇಲೆ ಶನಿಯ ಕಾಟವೂ ಪ್ರಾರಂಭವಾಗಿದೆ, ಆದ್ದರಿಂದ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು.

ಪರಿಹಾರ: ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಸೂರ್ಯ ಮಂತ್ರಗಳನ್ನು

* ಶನಿವಾರ ಶನಿದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ.

ಸಿಂಹ ರಾಶಿ

ಸಿಂಹ ರಾಶಿ

ಶನಿಯು ಅಸ್ತಮದಿಂದ ಶನಿ ಉದಯವಾಗುವಾವರೆಗೆ ಸಿಂಹ ರಾಶಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಈ ಸಮಯವು ಸಿಂಹ ರಾಶಿಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಹಾರಕ್ರಮದ ಕಡೆ ಗಮನ ನೀಡಿ. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು, ಮಾತಿಗೆ ಮಾತು ಬೆಳೆಯದ ರೀತಿಯಲ್ಲಿ ಎಚ್ಚರವಹಿಸಿ. ಹಣಕಾಸಿನ ನಷ್ಟದ ಸಾಧ್ಯತೆಗಳಿವೆ. ಕಠಿಣ ಪರಿಶ್ರಮವು ಕಡಿಮೆ ಫಲಿತಾಂಶವನ್ನು ನೀಡುವುದು ಆದ್ದರಿಂದ ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡಿ. ಅಲ್ಲದೆ ಈ ಅವಧಿಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.

ಪರಿಹಾರ: ಪ್ರತಿದಿನ ಶನಿ ಹಾಗೂ ಹನುಮಂತನ ಮಂತ್ರಗಳನ್ನು ಪಠಿಸಿ.

ಧನು ರಾಶಿ

ಧನು ರಾಶಿ

ಶನಿದೇವನ ಅಸ್ತಂಗತವಾಗಿರುವಾಗ ಧನು ರಾಶಿಯ ಜನರಿಗೆ ಪ್ರತಿಕೂಲವಾಗಿದೆ. ಏಕೆಂದರೆ ಶನಿದೇವನು ನಿಮ್ಮ ರಾಶಿಯ ಎರಡನೇ ಮತ್ತು ಮೂರನೇ ಮನೆಯ ಅಧಿಪತಿ. ಶನಿಯು ಅಸ್ತಂಗತವಾಗಿರುವ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಸಮಸ್ಯೆಗಳಿರಬಹುದು. ಗಂಟಲು ಮತ್ತು ಬಾಯಿಯಲ್ಲಿ ಕೆಲವು ಸಮಸ್ಯೆಗಳಿರಬಹುದು. ಆರೋಗ್ಯ ಹದಗೆಡಬಹುದು. ಅದೇ ಸಮಯದಲ್ಲಿ ಕೆಲಸದಲ್ಲಿ ಹಲವು ಅಡೆತಡೆಗಳು ಉಂಟಾಗಬಹುದು. ಅಲ್ಲದೆ, ಈ ಸಮಯದಲ್ಲಿ ಯಾರಿಗೂ ಹಣವನ್ನು ಸಾಲ ನೀಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಕೊಟ್ಟ ಹಣ ವಾಪಾಸ್ಸು ಬರಲ್ಲ. ಹಣ ನಷ್ಟವಾಗುವ ಸಾಧ್ಯತೆಗಳಿವೆ, ಜಾಗ್ರತೆವಹಿಸಿ.

ಪರಿಹಾರ: ಹನುಮಾನ್ ಚಾಲೀಸ ಪಠಿಸಿ

ಕುಂಭ ರಾಶಿ

ಕುಂಭ ರಾಶಿ

ಶನಿ ಅಸ್ತ ಸಮಯದಲ್ಲಿ ಕುಂಭ ರಾಶಿಯವರು ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು. ಅಲ್ಲದೆ ಕುಂಭ ರಾಶಿಯವರಿಗೆ ಶನಿ ಸಾಡೇಸಾತಿ ಕೂಡ ಇದೆ, ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಕುಟುಂಬ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು, ಈ ಅವಧಿಯಲ್ಲಿ ಮಾತು ಹಿಡಿತದಲ್ಲಿದ್ದರೆ ಒಳ್ಳೆಯದು.

ಪರಿಹಾರ: ಪ್ರತಿದಿನ ಹನುಮಾನ್ ಮಂತ್ರ ಪಠಿಸಿ

ಮೀನ ರಾಶಿ

ಮೀನ ರಾಶಿ

ಶನಿದೇವ ಅಸ್ತಂಗತವಾಗಿರುವಾಗ ನಿಮಗೆ ಆರ್ಥಿಕ ತೊಂದರೆ ಉಂಟಾಗಬಹುದು. ಏಕೆಂದರೆ ನಿಮ್ಮ ಮೇಲೆ ಶನಿಯ ಸಾಡೇ ಸತಿಯೂ ಶುರುವಾಗಿದೆ. ಇದರೊಂದಿಗೆ ಶನಿದೇವನು ನಿಮ್ಮ 12ನೇ ಮನೆಯಲ್ಲಿ ಕುಳಿತಿದ್ದಾನೆ. ಅದಕ್ಕಾಗಿಯೇ ನಿಮ್ಮ ಮೇಲೆ ಸುಳ್ಳು ಆರೋಪ ಹೊರಿಸಬಹುದು. ಅಲ್ಲದೆ ವೆಚ್ಚಗಳು ಅಧಿಕವಾಗಬಹುದು. ಇದರಿಂದಾಗಿ ನಿಮ್ಮ ಬಜೆಟ್ ಹಾಳಾಗಬಹುದು. ಮತ್ತೊಂದೆಡೆ, ನೀವು ಉದ್ಯಮಿಯಾಗಿದ್ದರೆ ಈ ಅವಧಿಯಲ್ಲಿ ನಷ್ಟದ ಸಾಧ್ಯತೆ ಇದೆ, ನಿಮ್ಮ ಯೋಜನೆ ವಿಫಲವಾಗಬಹುದು.

ಪರಿಹಾರ: ಶನಿದೇವನನ್ನು ಮೆಚ್ಚಿಸಲು ಬಡವರಿಗೆ ದಾನ ಮಾಡಿ

ಶನಿವಾರ ಶನಿದೇವನ ದೇವಾಲಯಕ್ಕೆ ಭೇಟಿ ನೀಡಿ.

English summary

Shani Asta 2023: These Zodiac Signs Should Be Careful these Times

Shani Asta 2023: These zodiac signs must be careful during this time, read on..
Story first published: Monday, January 30, 2023, 22:33 [IST]
X
Desktop Bottom Promotion