Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಸಾಲಿಗ್ರಾಮ ಮನೆಯಲ್ಲಿ ಪೂಜಿಸುವಾಗ ಈ ತಪ್ಪುಗಳನ್ನು ಮಾಡಲೇಬಾರದು
ಸಾಲಿಗ್ರಾಮವನ್ನು ಬಹಳ ಶಕ್ತಿವಂತ ಕಲ್ಲು ಎಂದು ಹೇಳಲಾಗುವುದು. ಇದು ಶ್ರೀ ವಿಷ್ಣುವಿನ ಸ್ವರೂಪ, ಇದರಲ್ಲಿ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಕಪ್ಪಾದ, ದುಂಡಗಿನ, ನಯವಾಗಿರುವ ಕಲ್ಲು ಇದಾಗಿದ್ದು ಈ ಕಲ್ಲನ್ನು ಪೂಜಿಸಲಾಗುವುದು. ಈ ಕಲ್ಲನ್ನು ಮನೆಗೆ ತಂದು ಕೆಲವರು ಪೂಜಿಸುತ್ತಾರೆ.

ಸಾಲಿಗ್ರಾಮವನ್ನು ಪೂಜಿಸುವುದರಿಂದ ಶ್ರೀ ವಿಷ್ಣುವಿನ ವಿಶೇಷ ಅನುಗ್ರಹ ಸಿಗುವುದು, ಇಷ್ಟು ಇರುವ ಮನೆಯಲ್ಲಿ ಸಂತಸ, ಸಮೃದ್ದಿ ಇರುತ್ತದೆ. ಆದರೆ ಇದನ್ನು ಮನೆಯಲ್ಲಿಟ್ಟು ಪೂಜಿಸುವುದಾದರೆ ತುಂಬಾನೇ ಎಚ್ಚರಿಕೆವಹಿಸಬೇಕು. ಏಕೆಂದರೆ ಸಾಲಿಗ್ರಾಮ ಪೂಜೆಯಲ್ಲಿ ಚಿಕ್ಕ ದೋಷ ಉಂಟಾದರೂ ದೊಡ್ಡ ತೊಂದರೆಯೇ ಉಂಟಾಗುವುದು.
ಆದ್ದರಿಂದ ಸಾಲಿಗ್ರಾಮ ಪೂಜಿಸುವವರು ಅದರ ಪೂಜಾ ವಿಧಿಗಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ದೋಷ ಉಂಟಾಗಿ ತುಂಬಾನೇ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ನೀವು ಸಾಲಿಗ್ರಾಮವನ್ನು ಮನೆಯಲ್ಲಿ ತಂದಿಟ್ಟು ಈ ತಪ್ಪುಗಳನ್ನು ಮಾಡದಿರಿ:

ಸಾಲಿಗ್ರಾಮವನ್ನು ನೀವು ದುಡಿದ ಹಣದಿಂದಲೇ ಖರೀದಿಸಬೇಕು
ಸಾಲಿಗ್ರಾಮವನ್ನು ನೀವು ಮನೆಯಲ್ಲಿ ಇಟ್ಟು ಪೂಜಿಸುವುದಾದರೆ ನೀವೇ ದುಡಿದ ಹಣದಿಂದ ಖರೀದಿಸಬೇಕು ಅಥವಾ ಸಂತ, ಸ್ವಾಮೀಜಿ ಕೊಟ್ಟಿರುವುದು ಆಗಿರಬೇಕು. ಇದನ್ನು ವಿವಾಹಿತ ವ್ಯಕ್ತಿ ಕೈಯಿಂದ ಪಡೆಯಬಾರದು ಅಲ್ಲದೆ ವಿವಾಹಿತನಿಗೆ ನೀಡಬಾರದು.

ಸಾಲಿಗ್ರಾಮ ಪವಿತ್ರವಾಗಿಡಬೇಕು
ಮನೆಯಲ್ಲಿ ಸಾಲಿಗ್ರಾಮವಿದ್ದರೆ ಅದನ್ನು ಪೂಜಾಸ್ಥಳದಲ್ಲಿ ಪವಿತ್ರವಾಗಿಡಬೇಕು, ಆ ರೀತಿ ಇಡಲು ಕಷ್ಟವಾದರೆ ಅದನ್ನು ದೇವಾಲಯಕ್ಕೆ ನೀಡಿ, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು. ಆದ್ದರಿಂದ ಸಾಲಿಗ್ರಾಮ ಮನೆಗೆ ತರುವಾಗ ಈ ಬಗ್ಗೆ ಎಚ್ಚರಿಕೆವಹಿಸಿ ನಂತರ ತರುವುದು ಒಳ್ಳೆಯದು.

ಸಾಲಿಗ್ರಾಮ ಮೇಲೆ ಅಕ್ಷತೆ ಹಾಕಬಾರದು
ನಾವು ಪೂಜೆ ಮಾಡಿ ಅಕ್ಷತೆ ಹಾಕುತ್ತೇವೆ ಆದರೆ ಸಾಲಿಗ್ರಾಮದ ಮೇಲೆ ಅಕ್ಷತೆ ಹಾಕಬಾರದು, ಕೆಲವೊಂದು ವಿಶೇಷ ಸಂದರ್ಭದಲ್ಲಿ ಅರಿಶಿಣ ಹಚ್ಚಿ ನಂತರ ಅಕ್ಷತೆ ಹಾಕಲಾಗುವುದು.

ಸಾಲಿಗ್ರಾಮ ಪೂಜೆಯಲ್ಲಿ ತುಳಸಿ ಕಡ್ಡಾಯ
ಸಾಲಿಗ್ರಾಮ ತುಳಸಿಯ ಪ್ರತಿರೂಪ, ಆದ್ದರಿಂದ ದೇವರ ಪೂಜೆಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಅರ್ಪಿಸಬೇಕು, ಪೂಜೆಯನ್ನು ಅರ್ಧದಲ್ಲಿ ನಿಲ್ಲಿಸಬಾರದು, ಹೀಗೆ ಮಾಡಿದರೆ ದೋಷ ಉಂಟಾಗುವುದು. ಸಾಲಿಗ್ರಾಮವನ್ನು ದಿನಾ ಪೂಜಿಸಬೇಕು.

ಸಾಲಿಗ್ರಾಮ ಎಲ್ಲಿಂದ ತರಲಾಗುವುದು
ಸಾಲಿಗ್ರಾಮವನ್ನು ನೇಪಾಳದ ಮುಕ್ತಿನಾಥ, ಕಾಳಿ ಗಂಡಕಿ ನದಿಯಿಂದ ಸಂಗ್ರಹಿಸಿ ತರಲಾಗುವುದು. ಈ ಸಾಲಿಗ್ರಾಮ ಶಿವಲಿಂಗದಷ್ಟೇ ಶಕ್ತಿಯುತವಾದದ್ದು, ಇದೀಗ ಅಯೋಧ್ಯೆಗೆ ಎರಡು ಸಾಲಿಗ್ರಾಮ ತರಲಾಗಿದ್ದು ಅದನ್ನು ನೇಪಾಳದಿಂದ ತರಲಾಗಿದೆ.



Click it and Unblock the Notifications
