Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶನಿಯ ಹಿಮ್ಮುಖ ಚಲನೆ: ನಿಮ್ಮ ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾದಂತೆ ಅವುಗಳ ಪ್ರಭಾವ ಹನ್ನೆರಡು ರಾಶಿಗಳ ಮೇಲೆ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇದೀಗ ಮೇ 11ರಿಂದ ಶನಿ ಹಿಮ್ಮುಖ ಚಲನೆ ಪ್ರಾರಂಭಿಸಿದ್ದಾನೆ. ಸೂರ್ಯ ಪುತ್ರ ಶನಿ ಮಕರ ರಾಶಿಗೆ ಹಿಂತಿರುಗುತ್ತಿದ್ದಾನೆ. ಶನಿ ಹಿಮ್ಮುಖವಾಗಿ ಚಲಿಸುವುದನ್ನು ವಕ್ರ ಶನಿ ಎಂದು ಕರೆಯುತ್ತಾರೆ.

ಶನಿಯ ಹಿಮ್ಮುಖ ಚಲನೆ ಮೇ 11ರಿಂದ ಸೆಪ್ಟೆಂಬರ್ 29ರವರೆಗೆ ಇರುತ್ತದೆ. ಶನಿಯ ಹಿಮ್ಮುಖ ಚನೆಯೊಂದಿಗೆ ಗುರು ಗ್ರಹ ಕೂಡ ಮೇ 14ರಿಂದ ಸೆಪ್ಟೆಂಬರ್ 13ರವರೆಗೆ ಹಿಮ್ಮುಖವಾಗಿ ಚಲಿಸಲಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೊಡ್ಡ ಕೃಷಿ, ಕೈಗಾರಿಕೆ, ದೊಡ್ಡ-ದೊಡ್ಡ ಉದ್ಯಮಗಳು ಇವುಗಳ ಮೇಲೆ ಪರಿಣಾ, ಬೀರುತ್ತದೆ ಹಾಗೂ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮೇಲಿಯೂ ಪ್ರಭಾವ ಬೀರುತ್ತದೆ. ಗುರುವನ್ನು ಆರ್ಥಿಕತೆ ಹಾಗೂ ಸಂಪತ್ತು ಮೇಲೆ ಪ್ರಭಾವ ಬೀರುವ ಗ್ರಹವೆಂದು ಗುರುತಿಸಲಾಗಿದೆ.
ಇದೀಗ ಶನಿ ಹಾಗೂ ಗುರು ಗ್ರಹದ ಹಿಮ್ಮುಖ ಚಲನೆಯಿಂದ ಯಾವ ರಾಶಿಗೆ ಒಳ್ಳೆಯದು, ಯಾವ ರಾಶಿಗೆ ಒಳ್ಳೆಯದಲ್ಲಿ ಎಂದು ಜ್ಯೋತಿಷ್ಯಶಾಸ್ತ್ರ ಏನು ಹೇಳಿದೆ ಎಂಬುವುದನ್ನು ಇಲ್ಲಿ ನೀಡಲಾಗಿದೆ ನೋಡಿ:

ಮೇಷ ರಾಶಿ:
ಶನಿ ಹಿಮ್ಮುಖ ಚಲನೆಯಿಂದ ಮೇಷರಾಶಿಯವರಿಗೇನು ತೊಂದರೆ ಉಂಟಾಗುವುದಿಲ್ಲ. ಇವರಿಗೆ ಆರ್ಥಿಕ ಲಾಭವಾಗಲಿದೆ. ಆದರೆ ಖರ್ಚು ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಖರ್ಚು ಕಡೆ ಸ್ವಲ್ಪ ನಿಗಾವಹಿಸಿ. ಮೇ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಸ್ವಲ್ಪ ಹುಷಾರಾಗಿರಿ, ಯಾರ ಜೊತೆಗೂ ಅನಗ್ಯತ ಸಂಘರ್ಷಕ್ಕೆ ಹೋಗಬೇಡಿ. ಎಚ್ಚರಿಕೆಯಿಂದ ಹಣ ಖರ್ಚು ಮಾಡಿ, ಕುಟುಂಬಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ ರಾಶಿ:
ಶನಿಯ ವಕ್ರ ನಡೆ ವೃಷಭ ರಾಶಿಯವರಿಗೆ ಒಳ್ಳೆಯದೇ ಉಂಟು ಮಾಡಲಿದೆ. ಹಿರಿಯರ ಮಾತಿಗೆ ಬೆಲೆ ನೀಡಿ. ಆರ್ಥಿಕ ಲಾಭ ಉಂಟಾಗಲಿದೆ. ಮನೆಯಲ್ಲಿ ಸ್ವಲ್ಪ ಅಧಿಕ ಖರ್ಚು ಬರುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಉಂಟಾಗಲಿದೆ.

ಮಿಥುನ ರಾಶಿ:
ಶನಿಯ ವಕ್ರನಡೆ ಮಿಥುನ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಆರ್ಥಿಕ ಸಂಕಷ್ಟ ಬರುವ ಸಾಧ್ಯತೆ ಇದೆ. ಹಳೆ ಸಾಲ ಹಾಗೂ ಕಾಯಿಲೆ ಮತ್ತಷ್ಟು ಕಾಡಬಹುದು. ಯಾವುದೇ ಹೂಡಿಕೆಯಿಂದ ದೂರವಿರುವುದು ಒಳ್ಳೆಯದು.

ಕರ್ಕ ರಾಶಿ:
ಕರ್ಕರಾಶಿಯವರ ನೌಕರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನೌಕರಿ ಜಾಗದಲ್ಲಿ ಸವಾಲುಗಳು ಎದುರಾಗಬಹುದು. ಆದರೆ ಮತ್ತೊಂದು ಕೆಲಸ ಸಿಗುವವರೆಗೆ ಇರುವ ಕೆಲಸ ಬಿಡಲು ಹೋಗಬೇಡಿ. ಇನ್ನು ಆರ್ಥಿಕವಾಗಿ ಯಾವುದೇ ತೊಂದರೆ ಇರಲ್ಲ. ಈ ಅವಧಿಯಲ್ಲಿ ಮಾಡಲಾಗುವ ಹೂಡಿಕೆಯಿಂದ ಮುಂದೆ ಲಾಭ ಬರುವುದು.

ಸಿಂಹ ರಾಶಿ:
ಶನಿಯ ವಕ್ರನಡೆ ಸಿಂಹರಾಶಿಯವರ ಮೇಲೆ ಅಷ್ಟೇನು ಪ್ರಭಾವ ಬೀರುವುದಿಲ್ಲ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಹೆಚ್ಚೇನು ಲಾಭ ಬರಲ್ಲ, ಆದರೆ ನಷ್ಟ ಉಂಟಾಗುವುದಿಲ್ಲ. ಖರ್ಚು ಕೂಡ ಮೊದಲಿನಂತಿಯೇ ಇರುತ್ತದೆ. ಹಳೆಯ ಸಾಲ ವ್ಯವಹಾರ ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು.

ಕನ್ಯಾ ರಾಶಿ:
ಕನ್ಯಾರಾಶಿಯವರಿಗೆ ಶನಿಯ ವಕ್ರನಡೆಯಿಂದ ಆರ್ಥಿಕ ತೊಂದರೆ ಎದುರಾಗಲಿದೆ. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಹಿರಿಯರ ಆಸ್ತಿಯಿಂದ ಲಾಭ ಉಂಟಾಗಲಿದೆ. ಆಪ್ತರ ಮಾತಿಗೆ ಕಿವಿಗೊಡುವುದು ಒಳ್ಳೆಯದು.

ತುಲಾ ರಾಶಿ:
ಗೃಹ ನಿರ್ಮಾಣದ ಕಾರ್ಯ ಸ್ಥಗಿತಗೊಂಡಿದ್ದರೆ, ಅದು ನಿಧಾನವಾಗಿ ಆರಂಭಗೊಳ್ಳಲಿದೆ. ನೌಕರಿ ಬದಲಾವಣೆ ಅಥವಾ ನೌಕರಿಯಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ನೌಕರಿಗೆ ಸಂಬಂಧಿಸಿದ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ಮಾತುಗಳು ಹಾಗೂ ಕೋಪದ ಮೇಲೆ ನಿಯಂತ್ರಣ ಅಗತ್ಯ.

ವೃಶ್ಚಿಕ ರಾಶಿ:
ಶನಿಯ ವಕ್ರನಡೆ ವೃಶ್ಚಿಕ ರಾಶಿಯವರಿಗೆ ಶುಭ ಉಂಟು ಮಾಡಲಿದೆ. ಈ ಅವಧಿಯಲ್ಲಿ ಉತ್ತಮ ಲಾಭವನ್ನು ನಿರೀಕ್ಷೆ ಮಾಡಬಹುದು. ಹೂಡಿಕೆಗೆ ಸೂಕ್ತ ಸಮಯ. ಇದುವರೆಗೆ ಅನುಭವಿಸಿದ ಕಷ್ಟಗಳು ದೂರವಾಗುವುದು. ಸ್ವಲ್ಪ ಹೆಚ್ಚಿನ ಖರ್ಚು ಬರಬಹುದು ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಧ್ಯಾನ ಮಾಡಿ ಒಳಿತಾಗುವುದು.

ಧನು ರಾಶಿ:
ಧನು ರಾಶಿಯವರಿಗೆ ಇದು ಶುಕ್ರ ಸಮಯ. ಶನಿಯು ನಿಮ್ಮ ರಾಶಿಯ ಧನ ಸ್ಥಾನದಲ್ಲಿ ವಿರಾಜಮಾನವಾಗಿರುವುದರಿಂದ ಆರ್ಥಿಕ ಲಾಭ ಬರಲಿದೆ. ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಇದು ಉತ್ತಮ ಸಮಯ . ದೀರ್ಘಾವಧಿಯ ಹೂಡಿಕೆ ಒಳ್ಳೆಯದು, ಇದರಿಂದ ಲಾಭ ಉಂಟಾಗುವುದು. ಇನ್ನು ಸಣ್ಣ-ಪುಟ್ಟ ಹೂಡಿಕೆಯಲ್ಲಿ ತೊಡಗಿಸಲು ಇದು ಸಕಾಲ.

ಮಕರ ರಾಶಿ:
ಮಕರ ರಾಶಿಯಲ್ಲಿ ಶನಿಯ ವಕ್ರ ನಡೆಯಿಂದಾಗಿ ಈ ರಾಶಿಯವರಿಗೆ ಆರ್ಥಿಕ ಲಾಭ ಉಂಟಾಗಲಿದೆ. ನೀವು ಬಯಸಿದ್ದು ನೆರವೇರಲಿದೆ. ಇದರಿಂದ ಆತ್ಮವಿಶ್ವಾಸದಲ್ಲಿ ವೃದ್ಧಿಯಾಗಲಿದೆ. ನೌಕರಿಯಲ್ಲೂ ಶುಭ ಸುದ್ದಿ ದೊರೆಯುವುದು. ಮನೆಯಲ್ಲಿ ಎದುರಾಗುವ ಒಂದು ಸಂಗತಿಯೊಂದು ನಿಮ್ಮ ಚಿಂತೆ ಹೆಚ್ಚಿಸುವ ಸಾಧ್ಯತೆ ಇದೆ.

ಕುಂಭ ರಾಶಿ:
ಶನಿಯ ವಕ್ರನಡೆ ಕುಂಭರಾಶಿಯವರ ಮೇಲೆ ವಕ್ರ ಪ್ರಭಾವ ಬೀರಲಿದೆ. ಈ ರಾಶಿಯವರಿಗೆ ಸಾಡೆಸಾತಿ ಆರಂಭ. ಇದರಿಂದಾಗಿ ಕಷ್ಟಗಳು ಹೆಚ್ಚುವುದು. ಆರ್ಥಿಕ ತೊಂದರೆ ಎದುರಾಗುವುದು. ಈ ಸಮಯದಲ್ಲಿ ತಾಳ್ಮೆ ತುಂಬಾ ಮುಖ್ಯ, ಮುಂದೆ ಒಳ್ಳೆಯ ಸಮಯ ಬರಲಿದೆ, ಅಲ್ಲಿಯವರೆಗೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.

ಮೀನ ರಾಶಿ:
ಮೀನರಾಶಿಯವರಿಗೆ ಲಾಭ ಉಂಟಾಗಲಿದೆ. ದೀರ್ಘಕಾಲದ ಆರ್ಥಿಕ ತೊಂದರೆ ಕೊನೆಯಾಗಲಿದೆ. ನಿಮ್ಮಿಂದ ಒಡಹುಟ್ಟಿದವರಿಗೆ ಒಳಿತಾಗುವುದು, ಅವರಿಂದಲೂ ನಿಮಗೆ ಲಾಭ ಉಂಟಾಗುವುದು. ಆರ್ಥಿಕ ಯೋಗ ಚೆನ್ನಾಗಿರುವುದರಿಂದ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು.



Click it and Unblock the Notifications
