Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಕಾಳ ಸರ್ಪ ದೋಷ ಪರಿಹಾರಕ್ಕೆ ಮಹಾಶಿವರಾತ್ರಿಯಂದು ಹೀಗೆ ಮಾಡಿ
ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 18, 2023 ರಂದುಆಚರಿಸಲಾಗುವುದು. ಹಾವನ್ನೇ ಹಾರವನ್ನಾಗಿ ಧರಿಸಿರುವವನು ಶಿವ, ಆದ್ದರಿಂದ ಸರ್ಪ ದೋಷವಿದ್ದರೆ ಅದರ ನಿವಾರಣೆಗೆ ಮಹಾಶಿವರಾತ್ರಿ ತುಂಬಾ ಮುಖ್ಯವಾದ ದಿನವಾಗಿದೆ.

ಕೆಲವರಿಗೆ ಸರ್ಪ ದೋಷವಿರುತ್ತದೆ, ಸರ್ಪ ದೋಷವಿದ್ದರೆ ಬದುಕಿನಲ್ಲಿ ಅನೇಕ ಸವಾಲಗಳು ಉಂಟಾಗುವುದು, ಆರೋಗ್ಯ ಸಮಸ್ಯೆ ಉಂಟಾಗುವುದು, ತಮ್ಮ ಕೆಲಸ -ಕಾರ್ಯಗಳಲ್ಲಿ ಯಶಸ್ಸು ಸಿಗುವುದಿಲ್ಲ. ಕೆಲವರಿಗೆ ಮದುವೆ ವಿಳಂಬವಾದರೆ, ಇನ್ನು ಕೆಲವರಿಗೆ ಸಂತಾನಭಾಗ್ಯ ಇರುವುದಿಲ್ಲ. ಶಾಸ್ತ್ರದ ಪ್ರಕಾರ ಕಾಳ ಸರ್ಪ ದೋಷಕ್ಕೆ ಪರಿಹಾರ ಮಾಡಿದರೆ ಎಲ್ಲಾ ಕಷ್ಟಗಳು ದೂರಾಗುವುದು.
ಕಾಳ ಸರ್ಪದೋಷ ಎಂದರೇನು? ಇದರಿಂದಾಗುವ ತೊಂದರೆಗಳೇನು, ಮಹಾಶಿವರಾತ್ರಿಯಂದು ಏನು ಪರಿಹಾರ ಮಾಡಿದರೆ ಸರ್ಪ ದೋಷದಿಂದ ಮುಕ್ತಿ ಪಡೆಯಬಹುದು ನೋಡೋಣ ಬನ್ನಿ:
ಕಾಳ ಸರ್ಪ ದೋಷ ಯಾವಾಗ ಉಂಟಾಗುತ್ತದೆ?
ಜಾತಕದಲ್ಲಿ ರಾಹು ಮತ್ತು ಕೇತುಗಳ ನಡುವೆ ಗ್ರಹ ಬಂದರೆ ಈ ದೋಷವನ್ನು ಕಾಲಸರ್ಪ ದೋಷ ಎನ್ನುತ್ತಾರೆ. ಅನಂತ ಕಾಳಸರ್ಪ ದೋಷ, ಕುಳಿಕ ಕಾಳಸರ್ಪ ದೋಷ, ವಾಸುಕಿ ಕಾಳಸರ್ಪ ದೋಷ, ಶಂಖಪಾಲ ಕಾಳಸರ್ಪ ದೋಷ, ಪದ್ಮ ಕಾಳಸರ್ಪ ದೋಷ, ಮಹಾಪದ್ಮ ಕಾಳಸರ್ಪ ದೋಷ, ಹೀಗೆ ಹಲವು ವಿಧದ ಕಾಳಸರ್ಪ ದೋಷಗಳಿವೆ. ಕುಂಡಲಿ ರಾಹು ಕೇತು ಪ್ರಭಾವವಿದ್ದರೆ ಕಾಳ ಸರ್ಪ ದೋಷ ಉಂಟಾಗುವುದು.
ಕಾಳ ಸರ್ಪ ದೋಷವಿದ್ದಾಗ ನೀಡುವ ಸೂಚನೆಗಳೇನು?
ನಿದ್ದೆಯಲ್ಲಿ ಹಾವುಗಳ ಕನಸು ಬೀಳುವುದು, ಮನೆ ಸಂಪೂರ್ಣ ನೀರಿನಲ್ಲಿ ಮುಳುಗಿದಂತೆ, ಯಾರೋ ತೊಂದರೆ ಕೊಡುತ್ತಿರುವಂತೆ, ಆಪ್ತರ ಸಾವು, ಆಸ್ತಿ ಕಳೆದುಕೊಂಡಂತೆ ಹೀಗೆ ಅಶುಭ ಕನಸುಗಳು ಬೀಳುವುದು, ಈ ರೀತಿಯ ಕನಸುಗಳು ಆಗಾಗ ಬೀಳುತ್ತಿರುತ್ತದೆ. ಆಗ ಕಾಳ ಸರ್ಪದೋಷವಿದೆಯೆಂದು ಹೇಳಬಹುದು.
ಮದುವೆಯ ಮೇಲೆ ಕಾಲ್ ಸರ್ಪ್ ದೋಷದ ಪರಿಣಾಮಗಳು
7 ನೇ ಮನೆಯಲ್ಲಿ ಕೇತು ಮತ್ತು 1 ನೇ ಮನೆಯಲ್ಲಿ ರಾಹುವಿದ್ದರೆ ಸರ್ಪ ದೋಷ ಉಂಟಾಗಿ ಮದುವೆ ವಿಳಮಭವಾಗುವುದು. ಕಾಳ ಸರ್ಪ್ ದೋಷವು ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ವೈವಾಹಿಕ ಜೀವನವನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನೀಡುತ್ತದೆ.
ಅನಂತ ಕಾಳ ಸರ್ಪವಿದ್ದರೆ
ಇದು 27 ವರ್ಷಗಳ ಕಾಲ ಬಾಧಿಸುವುದು. ರಾಹು 1ನೇ ಮನೆಯಲ್ಲಿ ಕೇತು 7ನೇ ಮನೆಯಲ್ಲಿದ್ದರೆ ಅನಂಥ ಕಾಳ ಸರ್ಪ ಯೋಗ ಎಂದು ಹೇಳಲಾಗುವುದು. ಈ ಸರ್ಪದೋಷ ಹೊಂದಿದ್ದರೆ ದೀರ್ಘ ಸಮಯ ಕಷ್ಟ, ನಷ್ಟ ಅನುಭವಿಸಬೇಕಾಗುವುದು.
ವಾಸುಕಿ ಕಾಳ ಸರ್ಪ ದೋಷ
ಕುಂಡಲಿಯಲ್ಲಿ 3ನೇ ಮನೆಯಲ್ಲಿ ರಾಹುವಿದ್ದು, 9ನೇ ಮನೆಯಲ್ಲಿ ಕೇತು ಕುಳಿತುಕೊಂಡಿದ್ದರೆ ಆಗ ವಾಸುಕಿ ಸರ್ಪ ದೋಷ ಉಂಟಾಗುವುದು. ಈ ದೋಷವಿದ್ದರೆ ಅಕಾಲಿಕ ಮರಣ ಸಂಭವಿಸಬಹುದು, ಜೀವನದಲ್ಲಿ ತುಂಬಾ ಕಷ್ಟಗಳು ಎದುರಾಗುವುದು.
ಪದ್ಮನಾಭ ಕಾಳ ಸರ್ಪ ದೋಷ
ಈ ದೋಷ 48 ವರ್ಷಗಳವರೆಗೆ ಇರಲಿದೆ. ಜನ್ಮ ಕುಂಡಲಿಯ 5ನೇ ಮನೆಯಲ್ಲಿ ರಾಹು ಮತ್ತು 11ನೇ ಮನೆಯಲ್ಲಿ ಕೇತುವಿದ್ದಾಗ ಈ ದೋಷ ಉಂಟಾಗುವುದು. ಇವರಿಗೆ ಸಂತಾನ ಹೀನತೆ ಉಂಟಾಗುವುದು.
ಶಂಕಪಾಲ ಕಾಳ ಸರ್ಪದೋಷ
ರಾಹು 4ನೇ ಮನೆಯಲ್ಲಿ ಹಾಗೂ ಕೇತು 10ನೇ ಮನೆಯಲ್ಲಿ ಇದ್ದಾಗ ಶಂಕಪಾಲ ಕಾಳ ಸರ್ಪ ದೋಷವು ಉಂಟಾಗುವುದು. ಇದು 42 ವರ್ಷಗಳ ಕಾಲ ಕಾಡುತ್ತದೆ.
ಮಹಾಪದ್ಮ ಕಾಳ ಸರ್ಪ ದೋಷ
ಕುಂಡಲಿಯಲ್ಲಿ 6ನೇ ಮನೆಯಲ್ಲಿ ರಾಹು ಮತ್ತು 12ನೇ ಮನೆಯಲ್ಲಿ ಕೇತುವಿದ್ದಾಗ ಈ ದೋಷವ ಉಂಟಾಗುವುದು. ಇದು ಇದ್ದರೆ 54 ವರ್ಷಗಳ ಕಾಲ ಕಾಡುವುದು. ತುಂಬಾನೇ ಆರೋಗ್ಯ ಸಮಸ್ಯೆ ಉಂಟಾಗುವುದು.
ಮಹಾಶಿವರಾತ್ರಿಗೆ ಕಾಳ ಸರ್ಪ ದೋಷಕ್ಕೆ ಪರಿಹಾರ
* ಮಹಾಶಿವರಾತ್ರಿಯಂದು ಶಿವನಿಗೆ ರುದ್ರಾಭಿಷೇಕ ಮಾಡಿ, ಇದು ಜನ್ಮ ಕುಂಡಲಿಯಲ್ಲಿನ ದೋಷ ನಿವಾರಣೆ ಮಾಡುತ್ತದೆ.
* ಈ ದಿನ ಕಾಳಸರ್ಪ ದೋಷವನ್ನು ತಪ್ಪಿಸಲು, ಮಹಾಶಿವರಾತ್ರಿಯಂದು ಶಿವನಿಗೆ ಒಂದು ಜೋಡಿ ಬೆಳ್ಳಿ ಹಾವುಗಳನ್ನು ಅರ್ಪಿಸಿ.
* ಮಹಾಶಿವರಾತ್ರಿಯ ದಿನದಿಂದ ದಿನಕ್ಕೆ ಎರಡು ಬಾರಿ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸಬೇಕು.
ಮಹಾಶಿವರಾತ್ರಿಯ ದಿನದಂದು "ಓಂ ನಾಗಕುಲಾಯ ವಿದ್ಮಹೇ ವಿಶ್ದಂತಾಯ ಧೀಮಹಿ ತನ್ನೋ ಸರ್ಪ್: ಪ್ರಚೋದಯಾತ್" ಎಂದು ಜಪಿಸಿ.



Click it and Unblock the Notifications


