Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Rahu Ketu Transit 2022 : ರಾಹು-ಕೇತು ಗೋಚಾರ ಫಲ : ಯಾವ ರಾಶಿಗೆ ಶುಭ? ಯಾರಿಗೆ ಅಶುಭ...?
ಏಪ್ರಿಲ್ 12ಕ್ಕೆ 2 ಪ್ರಮುಖ ಗ್ರಹಗಳ ಸಂಚಾರವಾಗುತ್ತಿದೆ. ಅಂದರೆ ರಾಹು ಮತ್ತು ಕೇತು ರಾಶಿ ಬದಲಾಯಿಸಲಿದೆ. ರಾಹು ಮೇಷ ರಾಶಿಗೆ 18 ವರ್ಷದ ಬಳಿಕ ಪ್ರವೇಶಿಸುತ್ತಿದೆ, ಕೇತು ತುಲಾ ರಾಶಿಗೆ ಪ್ರವೇಶಿಸುತ್ತಿದೆ.
ಈ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಒಂದೂವರೆ ವರ್ಷ ತೆಗೆದುಕೊಳ್ಳುವುದು. ಆದ್ದರಿಂದ ಇರ ಪ್ರಭಾವ ಕೂಡ ದೀರ್ಘವಾಗಿರುತ್ತೆ. ಇವುಗಳನ್ನು ನೆರಳು ಗ್ರಹಗಳೆಂದು ಕರೆಯಲಾಗುವುದು. ಇವುಗಳು ಹಿಮ್ಮುಖವಾಗಿ ಚಲಿಸುತ್ತದೆ. ಇದೀಗ ರಾಹು-ಕೇತು ನಿಮ್ಮ ರಾಶಿಯಲ್ಲಿ ಇನ್ನು ಒಂದೂವರೆ ವರ್ಷ ಯಾವ ರೀತಿಯ ಪ್ರಬಾವ ಬೀರಿದೆ ಎಂದು ವೈದಿಕ ಶಾಸ್ತ್ರ ಪ್ರಕಾರ ಹೇಳಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಗೆ ರಾಹು 18 ವರ್ಷಗಳ ಬಳಿಕ ಮರಳುತ್ತಿದೆ. ಏಪ್ರಿಲ್ 12ಕ್ಕೆ ರಾಹು ಮೇಷ ರಾಶಿಯನ್ನು ಪ್ರವೇಶಿಸಿದಾಗ ಕೇತು ತುಲಾ ರಾಶಿಯನ್ನು ಪ್ರವೇಶಿಸುತ್ತಿದೆ. ರಾಹು ಮೇಷ ರಾಶಿಯ ಲಗ್ನ ಮನೆಯಲ್ಲಿ ಇರುವಾಗ ಕೇತು 7ನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ಸಮಸ್ಯೆ ಹೆಚ್ಚಾಗುವುದು ಆದರೆ ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಅನಾರೋಗ್ಯ ಸಮಸ್ಯೆ ಕಾಡಬಹುದು.

ವೃಷಭ ರಾಶಿ
ವೃಷಭ ರಾಶಿಯ 12ನೇ ಮನೆಯಲ್ಲಿ ರಾಹು ಇರುವಾಗ ಕೇತು 6ನೇ ಮನೆಯಲ್ಲಿ ಇರಲಿದೆ. ನಿಮ್ಮ ಮನೆ ಹಾಗೂ ಮನಸ್ಸಿನಲ್ಲಿ ತುಂಬಿ ಇರುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ, ಮಕ್ಕಳಿಂದಲೂ ಸಂತೋಷ ಹೆಚ್ಚುವುದು. ತುಂಬಾ ಸಮಯದಿಂದ ಕಾಡುತ್ತಿದ್ದ ಸಮಸ್ಯೆ ಕೊನೆಯಾಗಲಿದೆ. ಹೊಸ ಕಾರ್ಯಕ್ಕೆ ಪ್ಲ್ಯಾನ್ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ರಾಹು 11ನೇ ಮನೆಯಲ್ಲಿ ಇರುತ್ತದೆ, ಕೇತು 5ನೇ ಮನೆಯಲ್ಲಿ ಇರುತ್ತದೆ. ಈ ಸಂಚಾರ ನಿಮ್ಮ ಜೀವನದಲ್ಲಿ ದೊಡ್ಡ ವ್ಯತ್ಯಾಸವೇನೂ ಬರಲ್ಲ. ಜೀವನದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರಲ್ಲ. ಗಾಡಿ ಚಲಾಯಿಸುವಾಗ ಜಾಗ್ರತೆವಹಿಸಿ. ಎಲ್ಲಾ ಸರಿಯಿದ್ದರೂ ನಿಮಗೆ ಯಾವುದೋ ಅವ್ಯಕ್ತ ಭಯ ಕಾಡುವುದು. ಎಲ್ಲಾ ಸವಾಲುಗಳಲ್ಲಿ ರಾಹು ಜಯ ತಂದರೆ ಕೇತುವಿನ ಸ್ಥಾನದಿಂದಾಗಿ ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗುವುದು.
ಮನೆ ಕಟ್ಟಲು ಹಣ ವ್ಯಯ ಮಾಡಬಹುದು.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ರಾಹು 10ನೇ ಮನೆಯಲ್ಲಿ ಇರುತ್ತದೆ, ಕೇತು 4ನೇ ಮನೆಯಲ್ಲಿ ಇರುತ್ತದೆ. ಇದರ ಪ್ರಭಾವದಿಂದಾಗಿ ಅಗ್ಯತವಿಲ್ಲದ ಕೆಲಸ ಸ್ವಲ್ಪ ಅಧಿಕವೇ ಮಾಡುತ್ತೀರಾ, ಅಂದ್ರೆ ನಿಮಗೆ ಸಂಬಂಧವಿಲ್ಲದ ವಿಷಯನ್ನು ಮೈ ಮೇಲೆ ಎಳೆದುಹಾಕಿಕೊಳ್ಳುವಿರಿ. ತುಂಬಾ ಹತ್ತಿರದ ವ್ಯಕ್ತಿ ಜೊತೆ ಮನಸ್ತಾಪ ಉಂಟಾಗಬಹುದು. ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ, ಆದ್ದರಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ರಾಹು 9ನೇ ಮನೆಯಲ್ಲಿ ಕೇತು 3ನೇ ಮನೆಯಲ್ಲಿ ಇರಲಿದೆ. ಈ ಸ್ಥಾನಗಳು ನಿಮಗೆ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗಲಿದೆ. ಕೆಲಸದಲ್ಲಿ ಅಭಿವೃದ್ಧಿ ಕಾಣುವಿರಿ. ಆಸ್ತಿಯಿಂದಲೂ ಲಾಭ ಉಂಟಾಗಬಹುದು.

ಕನ್ಯಾ ರಾಶಿ
ಕನ್ಯಾರಾಶಿಯರಲ್ಲಿ ರಾಹು 8ನೇ ಮನೆಯಲ್ಲಿ ಕೇತು 2ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಅಸಮದಾನ ಹೆಚ್ಚಾಗುವುದು. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಮುಗಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಯಾವುದೇ ರೀತಿಯ ವಿವಾದಗಳಿಂದ ದೂರವಿರಿ. ಕೌಟಂಬಿಕ ಸಮಸ್ಯೆ ಇರಬಹುದು. ಅಪಾಯಕಾರಿ ಚಟುವಟಿಕೆಗಳಿಂದ ದೂರವಿರಿ.

ತುಲಾ ರಾಶಿ
ತುಲಾ ರಾಶಿಯಲ್ಲಿ ರಾಹು 7ನೇ ಮನೆಯಲ್ಲಿ ಇದ್ದರೆ ಕೇತು ಮೊದಲ ಮನೆ ಅಂದರೆ ಲಗ್ನ ಮನೆಯಲ್ಲಿ ಇರಲಿದೆ. ನಿಮ್ಮ ಪ್ಲ್ಯಾನ್‌ಗಳೆಲ್ಲಾ ಸಕ್ಸಸ್ ಆಗುತ್ತೆ. ನಿಮ್ಮಜವಾಬ್ದಾರಿಗಳು ಹೆಚ್ಚಾಗಲಿದೆ. ಮಕ್ಕಳಿಂದಲೂ ಖುಷಿ ಸಿಗುವುದು. ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ರಾಹು 6ನೇ ಮನೆಯಲ್ಲಿ ಇರಲಿದೆ. ಕೇತು 12ನೇ ಮನೆಯಲ್ಲಿ ಇರಲಿದೆ, ಈ ಸಮಯ ನಿಮಗೆ ಅನುಕೂಲಕರವಾಗಿರುತ್ತೆ. ಶತ್ರುಗಳು ನಿಮಗೆ ಹಾನಿಯುಂಟು ಮಾಡಲು ಪ್ರಯತ್ನಿಸಿದರೂ ಅವರು ವಿಫಲರಾಗುತ್ತಾರೆ. ನಿಮ್ಮ ಚಿಂತೆಗಳು ದೂರಾಗುವುದು. ಪ್ರಯಾಣ ಮಾಡುವ ಸಾಧ್ಯತೆ ಇದೆ. ಹೊಸ ಮನೆ ಖರೀದಿಸಬಹುದು.

ಧನು ರಾಶಿ
ಧನು ರಾಶಿಯಲ್ಲಿ ರಾಹು 5ನೇ ಮನೆಯಲ್ಲಿ , ಕೇತು 11ನೇ ಮನೆಯಲ್ಲಿ ಇರುತ್ತದೆ. ಈ ಸಂಚಾರ ನಿಮಗೆ ಅದೃಷ್ಟಕರವಾಗಿದೆ, ಎಲ್ಲವೂ ನಿಮ್ಮ ಪರವಾಗಿ ಇರುತ್ತದೆ. ಸ್ವಲ್ಪ ಮಾನಸಿಕ ಒತ್ತಡ ಇರಬಹುದು. ಮಂಡಿ ನೋವು ಕಾಡಬಹುದು. ಆರ್ಥಿಕವಾಗಿ ಪರಿಸ್ಥಿತಿ ಚೆನ್ನಾಗಿರುತ್ತದೆ. ಜಾಗ ಖರೀದಿಸಲು ಪ್ಲ್ಯಾನ್ ಮಾಡಬಹುದು.

ಮಕರ ರಾಶಿ
ಮಕರ ರಾಶಿಯಲ್ಲಿ ರಾಹು 4ನೇ ಸ್ಥಾನದಲ್ಲಿ ಕೇತು 10ನೇ ಸ್ಥಾನದಲ್ಲಿ ಇರಲಿದೆ. ಇದರಿಂದಾಗಿ ಕೆಲವೊಂದು ಆರ್ಥಿಕ ಸಮಸ್ಯೆ ಎದುರಾಗಬಹುದು, ಕೆಲವು ಆರೋಗ್ಯ ಸಮಸ್ಯೆ ಕಾಡುವುದು, ಕುಟುಂಬದವರ ಬೆಂಬಲ ಕೂಡ ಅಷ್ಟಾಗಿ ಇರುವುದಿಲ್ಲ, ಕೆಲಸದಲ್ಲಿ ಕೆಲವು ಅಡೆತಡೆ ಉಂಟಾಗಬಹುದು. ರಾಹು -ಕೇತುಗೆ ಶಾಂತಿ ಮಾಡಿಸಿ.

ಕುಂಭ ರಾಶಿ
ಕುಂಭ ರಾಶಿಯಲ್ಲಿ ರಾಹು 3ನೇ ಮನೆಯಲ್ಲಿ ಕೇತು 9ನೇ ಮನೆಯಲ್ಲಿ ಇರುತ್ತದೆ. ಇದರಿಂದ ನಿಮಗೆ ಲಾಭವಾಗಿದೆ. ಈ ಸಮಯದಲ್ಲಿ ತುಂಬಾ ಪ್ರಯಾಣ ಮಾಡುವಿರಿ.ಕೆಲಸದ ಜಾಗದಲ್ಲಿ ಬಯಸಿದ ವರ್ಗಾವಣೆ ಮಾಡುವಿರಿ. ಖರ್ಚು ಕಡಿಮೆ ಇರುತ್ತದೆ, ಆದ್ದರಿಂದ ಉಳಿಸಬಹುದು. ಕುಟುಂಬದಲ್ಲಿ ಮನಸ್ತಾಪ ಇರುತ್ತದೆ.

ಮೀನ ರಾಶಿ
ಮೀನ ರಾಶಿಯಲ್ಲಿ ರಾಹು 2ನೇ ಮನೆಯಲ್ಲಿ ಕೇತು 8ನೇ ಮನೆಯಲ್ಲಿ ಇರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಕೆಲವೊಂದು ತ್ವಚೆ ಸಮಸ್ಯೆ ಕಾಡಬಹುದು. ನೀವು ಕೈ ಹಾಕಿದ ಕೆಲಸವನ್ನು ಪೂರ್ಣಗೊಳಿಸುವಿರಿ, ವೃತ್ತಿಯಲ್ಲಿ ಪ್ರಮೋಷನ್ ಸಿಗುವುದು.



Click it and Unblock the Notifications











