Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
Coronavirus Predictions in Kannada : ಕೊರೊನಾವೈರಸ್ ಬಗ್ಗೆ ಜ್ಯೋತಿಷ್ಯ ಹೇಳಿರುವ ಭವಿಷ್ಯವಾಣಿಗಳು
ಕೊರೊನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಯಾವಾಗಪ್ಪಾ ಮುಕ್ತಿ ಎಂದು ಎಲ್ಲರೂ ಆಶಯದಿಂದ ಎದುರು ನೋಡುತ್ತಿದ್ದೇವೆ. ಕೊರೊನಾವೈರಸ್ ಹೇಗೆ ಹುಟ್ಟಿಕೊಂಡಿತು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.
ಚೀನಾದ ಮೀನು ಮಾರುಕಟ್ಟೆಯಲ್ಲಿ ಹುಟ್ಟಿತು ಎಂದು ಚೀನಾ ಹೇಳಿದರೆ, ಇತರ ದೇಶದವರು ಎಲ್ಲಾ ಚೀನಾದ ವುಹಾನ್‌ನ ಲ್ಯಾಬ್‌ನಲ್ಲಿ ಇದು ಹುಟ್ಟಿಕೊಂಡಿದೆ. ಜೈವಿಕ ಯುದ್ಧಕ್ಕಾಗಿ ಚೀನಾ ತಯಾರಿಸಿದ ಅಸ್ತ್ರ ಇದಾಗಿತ್ತು ಎಂದು ಚೀನಾವನ್ನು ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾರೆ.

ಕೊರೊನಾವೈರಸ್ ಹುಟ್ಟಲು ಕಾರಣವೇನು, ಇದನ್ನು ತಡೆಗಟ್ಟುವುದು ಹೇಗೆ, ಈ ಕಾಯಿಲೆಯಿಂದ ಮುಕ್ತಿ ಪಡೆಯಲು ಯಾವ ಔಷಧಿ ಒಳ್ಳೆಯದು ಎಂಬುವುದರ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲಾ ವೈಜ್ಞಾನಿಕ ದೃಷ್ಟಿಕೋನದ ಅಡಿಯಲ್ಲಿ ನಡೆಯುವ ಸಂಶೋಧನೆಗಳಾಗಿದ್ದು, ಇವಗಳಿಗೆ ವೈಜ್ಞಾನಿಕ ಪುರಾವೆಗಳು ಅವಶ್ಯಕ.
ಆದರೆ ವೈಜ್ಞಾನದ ಹೊರತಾಗಿ ಕೊರೊನಾವೈರಸ್ ಕುರಿತು ಹಲವಾರು ಭವಿಷ್ಯ ಬಂದಿವೆ. ಇವುಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದಿದ್ದರೂ ಗ್ರಹಗತಿಗಳನ್ನು ಆಧಾರವಾಗಿಟ್ಟುಕೊಂಡು ಇವುಗಳ ಕುರಿತು ಜ್ಯೋತಿಷ್ಯರು ಭವಿಷ್ಯ ಹೇಳಿದ್ದಾರೆ.

ಭವಿಷ್ಯ ನುಡಿದಿತ್ತಾ ಆ ಪುಸ್ತಕ
ಇಂಥದ್ದೊಂದು ವೈರಸ್ ಹುಟ್ಟುತ್ತದೆಯೆಂದೂ, ಇದರಿಂದ ಇಡೀ ವಿಶ್ವವೇ ಕಂಗೆಡುತ್ತದೆ ಹಲವರು ಭವಿಷ್ಯ ನುಡಿದಿದ್ದರು. ಕಾಕತಾಳೀಯವೆಂಬಂತೆ ಅದು ನಿಜವಾಗಿದೆ. 'ದಿ ಎಂಡ್ ಆಫ್ ಡೇ' ಪುಸ್ತಕದಲ್ಲಿ ಇಂಥದ್ದೊಂದು ವೈರಸ್ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದಕ್ಕೆ ಪರಿಹಾರವೇನು ಎಂಬುವುದನ್ನು ಅದರಲ್ಲಿ ಹೇಳಿಲ್ಲವಾದರೂ ಈ ವೈರಸ್ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ ಎಂದು ಹೇಳಲಾಗಿತ್ತು.

ಕೊರೊನಾವೈರಸ್ ಯಾವಾಗಮುಕ್ತಿಯಾಗುತ್ತದೆ?
ಮುಂಬೈ ಮೂಲದ ವಾಸ್ತುತಜ್ಞ ಹಾಗೂ ಜ್ಯೋತಿಷಿಯಾಗಿರುವ ಆಶಿಸ್ ಮೆಹ್ತಾ ಅವರು ಕೊರೊನಾವೈರಸ್ ಬಗ್ಗೆ ಭವಿಷ್ಯ ನುಡಿದಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಅವರು ಸೆಪ್ಟೆಂಬರ್‌ನಲ್ಲಿಯೇ ಮುಂದೆ ನಡೆಯಲಿರುವ ವಿಪತ್ತಿನ ಬಗ್ಗೆ ಹೇಳಿದ್ದೆ. ಜಗತ್ತಿಗೆ ಕೊರೊನಾವೈರಸ್ ಕಂಟಕ ಡಿಸೆಂಬರ್ 30ರಿಂದ ಶುರುವಾಯಿತು.
ಈ ವರ್ಷದ ಜನವರಿ 24ರ ನಂತರ ಶನಿಗ್ರಹ ಮಕರರಾಶಿ ಪ್ರವೇಶಿಸಿತು. ಅಲ್ಲಿಂದ ವಿಶ್ವದಲ್ಲಿ ತಲ್ಲಣ ಶುರುವಾಯಿತು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು, ಕೇತುವಿನ ಸ್ಥಾನದ ಆಧಾರದ ಮೇಲೆ ವೈರಸ್ ಹುಟ್ಟುತ್ತದೆ. ಗುರು ಮತ್ತು ಕೇತುವಿನ ಹೊಂದಾಣಿಕೆಯಿಂದ ಇದು ಮತ್ತಷ್ಟು ಪ್ರಬಲವಾಗಿದೆ.
ರಾಹು ಈಗ ಆದ್ರಾ ನಕ್ಷತ್ರದಲ್ಲಿದ್ದಾರೆ, ಕೇತು ಈಗ ಧನುರಾಶಿಯಲ್ಲಿದ್ದಾನೆ. ಹದಿನೆಮಟು ವರ್ಷಗಳ ಹಿಂದೆ ರಾಶಿ ಪದ್ಧತಿ ಹೀಗೆ ಇತ್ತು ಆಗ ಅಮೆರಿಕದ ಮೇಲೆ ಉಗ್ರರ ದಾಳಿ ನಡೆಯಿತು. ಗುರು ಮತ್ತು ಕೇತು ರಾಶಿಯ ಹೊಂದಾಣಿಕೆ ಇರುವವರಿಗೆ ಈ ವೈರಸ್ ಪ್ರಬಲವಾಗಿರುತ್ತದೆ. ಮಾರ್ಚ್ 30ಕ್ಕೆ ಗುರು ಮಕರ ರಾಶಿ ಪ್ರವೇಶ ಮಾಡುತ್ತಿದ್ದಾನೆ, ಹಾಗಾಗಿ ಈ ವೈರಸ್‌ನಿಂದ ಮೆಲ್ಲ-ಮೆಲ್ಲನೆ ಮುಕ್ತಿ ಸಿಗುವುದು ಎಂದಿದ್ದಾರೆ.

ವಿಜ್ಞಾನಿ ನುಡಿದ ಭವಿಷ್ಯ
2013ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮೈಕೆಲ್ ಲೆವಿಟ್ ವೈರಸ್ ದಾಳಿಯಾಗುವ ಮುನ್ನವೇ ಎಚ್ಚರಿಕೆ ನೀಡಿದ್ದರು. ಇದೀಗ ಜಗತ್ತು ಭಯ ಪಡಬೇಕಾಗಿಲ್ಲ, ಕರೊನಾ ವೈರಸ್ ಹರಡುವುದು ಈ ವಾರದಿಂದ ಕಡಿಮೆಯಾಗಲಿದೆ ಎಂದಿದ್ದಾರೆ.
ಗಣೇಶ ಸ್ಪೀಕ್ಸ್ .ಕಾಮ್‌ನಲ್ಲಿ ಧರ್ಮೇಶ್ ಜೋಶಿ ಎಂ ಜ್ಯೋತಿಷ್ಯರು ಕೊರೊನಾವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದರಲ್ಲಿ ನಮ್ಮಲ್ಲಿರುವ 3 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕೊರೊನಾವೈರಸ್ ಆಕ್ರಮಣ ಯಾವಾಗ ಕಡಿಮೆಯಾಗುತ್ತದೆ? 2. ಈ ಪಿಡುಗು ಯಾವಾಗ ಕೊನೆಯಾಗುತ್ತದೆ? 3. ಎಷ್ಟು ದಿನಗಳವರೆಗೆ ಈ ವೈರಸ್ ಅಟ್ಟಹಾಸವಿರುತ್ತದೆ?
ಧರ್ಮೇಶಿಯವರು ಮಾರ್ಚ್ 30ರಿಂದ ಕೋವಿಡ್ 19 ಕಡಿಮೆಯಾಗುತ್ತಾ ಹೋಗುತ್ತದೆ ಎಂದಿದ್ದಾರೆ. ಏಪ್ರಿಲ್ 16ರಿಂದ ಇದನ್ನು ಹತ್ತಿಕ್ಕಲು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಏಪ್ರಿಲ್ 21ರಿಂದ ಮೇ 21ರವರೆಗೆ ಈ ಪಿಡುಗು ಮುಂದುವರೆಯುತ್ತದೆ. ಮಾರ್ಚ್ 25ರಿಂದ ಈ ಪಿಡುಗು ಕಣ್ಮರೆಯಾಗುವುದು.

ಏಳು ವರ್ಷದ ಹಿಂದೆ ಭವಿಷ್ಯ ಹೇಳಿದ್ದ ವೆಬ್ ಸಿರೀಸ್
ಏಳು ವರ್ಷದ ಹಿಂದೆ ಪ್ರಕಟವಾದ ಒಂದು ಕೊರಿಯನ್ ವೆಬ್ ಸೀರಿಯಸ್‌ನಲ್ಲಿ ಈ ರೀತಿಯ ಒಂದು ಕಾಯಿಲೆ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಸಂಗಾತಿಗೆ ಮನೆಯಿಂದ ಹೊರಗಡೆ ಹೋಗಬೇಡ, ಮನೆಯಲ್ಲಿರುವಂತೆ ಸಲಹೆ ನೀಡುತ್ತಾನೆ. ನಂತರ ಸೀನ್‌ನಲ್ಲಿ ಆಸ್ಪತ್ರೆ ತೋರಿಸಲಾಗುತ್ತದೆ ಅದರಲ್ಲಿ ವೈದ್ಯರು ಈ ವೈರಸ್ ಸಾರ್ಸ್, MERS ಕುಟುಂಬಕ್ಕೆ ಸೇರಿದ್ದು, ಈ ವೈರಸ್‌ನ ಲಕ್ಷಣ ಗೋಚರಿಸುವ ಸಮಯ 2-14 ದಿನ, ಇದು ಮನುಷ್ಯ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಆ ಊಹೆಯಂತೆಯೇ ನಡೆಯುತ್ತಿರುವುದು ಕಾಕತಾಳಿಯೇ ಸರಿ.

ಜ್ಯೋತಿಷ್ಯ ಪ್ರಕಾರ ಕೊರೊನಾವೈರಸ್ ಭವಿಷ್ಯ
"ಸೂರ್ಯ ಉಚ್ಚ ರಾಶಿಯಾದ ಮೇಷ ರಾಶಿಗೆ ಏಪ್ರಿಲ್ 2020ಕ್ಕೆ ಪ್ರವೇಶಿಸಲಿದ್ದಾನೆ. ಸೂರ್ಯ ಉಚ್ಚರಾಶಿಗೆ ಹೋಗುತ್ತಿದ್ದಂತೆಯೇ ಕೊರೊನಾ ಉಚ್ಚಾಟನೆಯಾಗಲಿದೆ. ಏಪ್ರಿಲ್ ಹತ್ತೊಂಬತ್ತರಿಂದ ಗ್ರೀಷ್ಮ ಖುತು ಆರಂಭವಾಗಲಿದೆ. ಈ ವೇಳೆಯ ನಂತರ ಕೊರೊನಾ ವೈರಸ್ ನ ಎಲ್ಲಾ ಗೊಂದಲಗಳು ಸಂಪೂರ್ಣವಾಗಿ ದೂರವಾಗಲಿದೆ" ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಸೂಚನೆ: ಪ್ರಸಿದ್ಧ ಜ್ಯೋತಿಷ್ಯರು ನೀಡಿರುವ ಕೊರೊನಾ ಭವಿಷ್ಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಈ ಭವಿಷ್ಯವನ್ನು ನಂಬುವುದು, ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು.



Click it and Unblock the Notifications