ಈ ರಾಶಿಯವರ ಕೋಪ ಎದುರಿಸುವುದು ಸುಲಭವಲ್ಲ!

ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ರಾಶಿಚಕ್ರದ ಆಡಳಿತ ಗ್ರಹದ ಪ್ರಭಾವವು ಜನರ ವ್ಯಕ್ತಿತ್ವ ಮತ್ತು ಘಟನೆಗಳ ಮೇಲೆ ಇರುತ್ತದೆ. ಅಂದರೆ, ವ್ಯಕ್ತಿಯ ರಾಶಿಚಕ್ರ ಮತ್ತು ಗ್ರಹಗಳ ಸ್ಥಿತಿಯನ್ನು ಆಧರಿಸಿ, ಅವನ ಇಷ್ಟ-ಅನಿಷ್ಟಗಳು, ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಅದೇ ರೀತಿ ಇಂದು ನಾವು ಕೆಲವೊಂದು ರಾಶಿಗಳ ಬಗ್ಗೆ ಮಾತನಾಡಲಿದ್ದೇವೆ. ಈ ರಾಶಿಯವರ ಕೋಪ ಜ್ವಾಲಾಮುಖಿಯಂತೆ. ಪ್ರತಿ ಸಣ್ಣ ವಿಷಯಕ್ಕೂ ಸ್ಫೋಟಗೊಳ್ಳುತ್ತಾರೆ. ಅವರನ್ನು ಶಾಂತಗೊಳಿಸುವುದು ಸುಲಭವಲ್ಲ. ಏಕೆಂದರೆ ಅವರು ಮಂಗಳ ಹಾಗೂ ಶನಿ ಗ್ರಹದ ಪ್ರಭಾವಕ್ಕೆ ಒಳಗಾಗಿರುವಂತವರು. ಹಾಗಾದರೆ ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಹೆಚ್ಚು ಕೋಪ ಮಾಡಿಕೊಳ್ಳುವ ರಾಶಿಚಕ್ರಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ :

ಮೇಷ ರಾಶಿ :

ಮೇಷ ರಾಶಿ :

ಶೌರ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾದ ಮಂಗಳ ಗ್ರಹವು ಮೇಷ ರಾಶಿಯ ಆಡಳಿತ ಗ್ರಹವಾಗಿದೆ. ಈ ಮಂಗಳನ ಪ್ರಭಾವದಿಂದಾಗಿ ಮೇಷ ರಾಶಿಯ ಜನರ ಕೋಪವು ತುಂಬಾ ಪ್ರಬಲವಾಗಿರುತ್ತದೆ. ಅದನ್ನು ಎದುರಿಸುವ ಶಕ್ತಿ ಬಹಳ ಕಡಿಮೆ ಜನರಿಗಿದೆ. ಮೇಷ ರಾಶಿಯವರು ಎದುರಿನವರ ಸಣ್ಣ ಮಾತುಗಳಿಂದ ಸುಲಭವಾಗಿ ಕೆರಳುತ್ತಾರೆ. ಇದರಿಂದ ತಾಳ್ಮೆ ಕಳೆದುಕೊಂಡು ಕೋಪದಿಂದ ವರ್ತಿಸುತ್ತಾರೆ. ಅಷ್ಟೇ ಅಲ್ಲ, ಮೇಷ ರಾಶಿಯವರ ಕೋಪವೂ ಶಾಂತವಾಗಲು ಬಹಳ ಸಮಯ ಹಿಡಿಯುತ್ತದೆ.

ವೃಷಭ ರಾಶಿ :

ವೃಷಭ ರಾಶಿ :

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ

ರಾಶಿಯವರು ಕೋಪ, ತಾಳ್ಮೆ ಹಾಗೂ ಹಠಮಾರಿ ಸ್ವಭಾವದವರು ಎಂದು ಹೇಳಲಾಗುತ್ತದೆ. ಎಲ್ಲವನ್ನೂ ನನ್ನದೇ ಆದ ರೀತಿಯಲ್ಲಿ ಮಾಡುವವರು. ಅವರು ಯಾವುದೇ ಕೆಲಸದಲ್ಲಿ ಇತರರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಇದಲ್ಲದೆ, ವೃಷಭ ರಾಶಿಯವರು ಕೋಪಗೊಂಡಾಗ ತುಂಬಾ ಆಕ್ರಮಣಕಾರಿಯಾಗಿ ಬೈಯಲು ಪ್ರಾರಂಭಿಸುತ್ತಾರೆ. ಈ ಜನರು ತಮ್ಮ ಕೋಪ ಕಡಿಮೆಯಾದಾಗ ನಿಮ್ಮಲ್ಲಿ ಕ್ಷಮೆ ಕೇಳದಿದ್ದರೂ, ಪರಿಸ್ಥಿತಿಯನ್ನು ನಿಭಾಯಿಸಲು ಅವರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ.

ಸಿಂಹ ರಾಶಿ:

ಸಿಂಹ ರಾಶಿ:

ಸಿಂಹ ರಾಶಿಯವರು

ತುಂಬಾ ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಈ ಜನರು ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಳ್ಳಲು ಎಲ್ಲದರ ಬಗ್ಗೆಯೂ ವಾದಿಸುತ್ತಾರೆ. ಜೊತೆಗೆ ಅದರಲ್ಲಿ ಗೆಲ್ಲುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿಯ ಯಾವುದಾದರೂ ವಿಷಯದ ಬಗ್ಗೆ ಚಿಂತಿಸದದೇ ಮಾತನಾಡಿ ತಮ್ಮ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಾರೆಎಂದು ನಂಬಲಾಗಿದೆ. ಅಲ್ಲದೆ, ಈ ಜನರು ತಮ್ಮ ತಪ್ಪನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯ ಜನರ ಕೋಪವು ಅವರ ಮಾತು ನಡೆಯುವವರೆಗೂ ಮುಂದುವರಿಸುತ್ತಾರೆ. ಈ ರಾಶಿಚಕ್ರದ ಜನರು ತಮ್ಮ ಗೌರವ ಮತ್ತು ಪ್ರತಿಷ್ಟೆಯನ್ನು ಪ್ರೀತಿಸುತ್ತಾರೆ ಮತ್ತು ಯಾವುದೇ ವ್ಯಕ್ತಿ ಅದಕ್ಕೆ ಸ್ವಲ್ಪ ಹಾನಿ ಮಾಡಿದರೂ, ಇವರು ಅದನ್ನು ಸಹಿಸಲಾರರು. ಇದಲ್ಲದೆ, ಈ ರಾಶಿಯ ಜನರು ಕೋಪದಲ್ಲಿ ತಮ್ಮನ್ನು ತಾವು ಹಾನಿ ಮಾಡಿಕೊಳ್ಳುತ್ತಾರೆ ಜೊತೆಗೆ ಎದುರಿಗಿರುವ ವ್ಯಕ್ತಿಯನ್ನು ಸುಲಭವಾಗಿ ಬಿಡುವುದಿಲ್ಲ. ಕೋಪದ ವಿಚಾರಕ್ಕೆ ಬಂದಾಗ ಈ ರಾಶಿಯವರು ಬಹಳ ಅಪಾಯಕಾರಿ.

English summary

People of these Zodiac Signs get Angry Too Much

Here we talking about People of these zodiac signs get angry too much, read on
Story first published: Sunday, April 10, 2022, 21:41 [IST]
X
Desktop Bottom Promotion