Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನಾಗರ ಪಂಚಮಿ 2021: ಮನೆಯಲ್ಲೇ ನಾಗರ ಪಂಚಮಿ ಪೂಜೆ ಮಾಡುವುದು ಹೇಗೆ?
ನಾಡಿನ ದೊಡ್ಡ ಹಬ್ಬ, ಸಡಗರ-ಸಂಭ್ರಮದ ಹಬ್ಬ ನಾಗರ ಪಂಚಮಿ ಈ ವರ್ಷ ಆಗಸ್ಟ್ 13ಕ್ಕೆ ಬಂದಿದೆ. ಪ್ರತೀ ವರ್ಷ ಶ್ರಾವಣ ಮಾಸದ 5ನೇ ದಿನಕ್ಕೆ ಈ ಹಬ್ಬವನ್ನು ಆಚರಿಸಲಾಗುವುದು.
ದೇಶದ ವಿವಿಧ ಭಾಗಗಳಲ್ಲಿ ನಾಗರ ಪಂಚಮಿ ಆಚರಿಸಲಾಗುವುದು. ಈ ದಿನ ಹಸುವಿನ ಹಾಲಿನಿಂದ ಹುತ್ತಕ್ಕೆ ಅಥವಾ ನಾಗರ ಕಲ್ಲುಗಳಿಗೆ ಹಾಲೆರೆಯುತ್ತಾರೆ. ಇನ್ನು ಕೆಲವರು ಜೇಡಿ ಮಣ್ಣಿನಿಂದ ನಾಗರ ಪ್ರತಿಮೆ ಮಾಡಿ ಮನೆಯಲ್ಲೇ ಹಾಲೆರೆಯುತ್ತಾರೆ. ನಾಗರ ಪಂಚಮಿಯೆಂದು ನಾಗಗಳಿಗೆ ಹಾಲೆರೆಯುವುದರಿಂದ ನಾಗ ದೇವತೆಗಳು ಆಶೀರ್ವಾದ ನಮ್ಮ ಮೇಲೆರುವುದು ಎಂಬ ನಂಬಿಕೆ.
ಈ ದಿನ ಭೂಮಿ ಅಗೆಯಬಾರದು, ಹೆಚ್ಚಿನವರು ದೇವಾಲಯಕ್ಕೆ ಹೋಗಿ ಹಾಲೆರೆದು ಬಂದರೆ ಇನ್ನು ಕೆಲವರು ಮನೆಯಲ್ಲೇ ನಾಗನಿಗೆ ಪೂಜೆ ಸಲ್ಲಿಸುತ್ತಾರೆ.
ಮನೆಯಲ್ಲಿ ನಾಗನಿಗೆ ಪೂಜೆ ಸಲ್ಲಿಸಿ, ಹಾಲೆರೆಯುವುದಾದರೆ ನೀವು ಅನುಸರಿಸಬೇಕಾದ ಪೂಜೆಯ ವಿಧಿ- ವಿಧಾನಗಳ ಬಗ್ಗೆ ಹೇಳಲಾಗಿದೆ ನೋಡಿ:

ನಾಗ ಪಂಚಮಿ ಪೂಜಾ ವಿಧಿ
* ಮೊದಲಿಗೆ ಕೋಣೆಯನ್ನು ಗಂಗಾಜಲ ಅಥವಾ ಶುದ್ಧ ನೀರಿನಿಂದ ತೊಳೆದು ಶುದ್ದ ಮಾಡಿ.
* ಒಂದು ಮಣೆ ಇಟ್ಟು ಅದರ ಮೇಲೆ ಹೊಸ ಬಟ್ಟೆ ಹಾಸಿ.
* ಅದರ ಮೇಲೆ ಮಣ್ಣಿನಿಂದ ಮಾಡಿದ ಅಥವಾ ಲೋಹದ ಹಾವಿನ ಪ್ರತಿಮೆಯನ್ನು ಇಡಿ.
* ದೀಪವನ್ನು ಬೆಳಗಿ
* ಸಂಕಲ್ಪ ತೆಗೆದುಕೊಳ್ಳಿ (ಪೂಜೆಯನ್ನು ತುಂಬಾ ಶ್ರದ್ಧೆಯಿಂದ ಮಾಡಿ)
ನಂತರ ಈ ಮಂತ್ರ ಪಠಿಸಿ
ಓಂ ಭುಜಂಗೇಶಾಯ ವಿದ್ಮಹೇ ಸರ್ಪರಾಜಾಯ ಧೀಮಹಿ
ತನ್ನೋ ನಾಗಃ ಪ್ರಚೋದಯಾತ್
* ನಾಗರ ಪ್ರತಿಮೆಗೆ ಸ್ವಲ್ಪ ನೀರನ್ನು ಚಿಮುಕಿಸಿ ನಂತರ ಹಾಲೆರೆಯಿರಿ. ಅರಿಶಿಣ, ಶ್ರೀಗಂಧ, ಅಕ್ಷತೆ ಹೂಗಳನ್ನು ಅರ್ಪಿಸಿ. ಈ ಸಂದರ್ಭದಲ್ಲಿ ಈ ಮಂತ್ರಗಳನ್ನು ಪಠಿಸಿ
ನಮೋ ಅಸ್ತು ಸರ್ಪೇಭ್ಯೋ ಯೇಕೇಚ ಪೃಥಿವೀ ಮನು
ಯೇ ಅಂತರಿಕ್ಷಂ ಯೇ ದಿವಿ ತೇಭ್ಯ ಸರ್ಪೇಭ್ಯೋ ನಮಃ
ಯೇ ದೋ ರೋಚನೇ ದಿವೋ ಯೇ ವಾ ಸೂರ್ಯಸ್ಯ ರಶ್ಮಿಷು
ಯೇಷಾಮಪ್ಸುಸದಃ ಕೃತಂ ತೇಭ್ಯಃ ಸರ್ಪೇಭ್ಯೋ ನಮಃ
* ನಂತರ ದೇವರಿಗೆ ಧೂಪ ಹಾಗೂ ನೈವೇದ್ಯ ಅರ್ಪಿಸಿ, ಹೀಗೆ ನಾಗನಿಗೆ ಪೂಜೆ ಸಲ್ಲಿಸುತ್ತಿರುವ ನಾಗ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ

ನಾಗ ಅಷ್ಟೋತ್ತರ ಶತನಾಮಾವಳಿ
ಓಂ ಅನಂತಾಯ ನಮಃ
ಓಂ ವಾಸುದೇವಾಯ ನಮಃ
ಓಂ ತಕ್ಷಕಾಯ ನಮಃ
ಓಂ ವಿಶ್ವತೋಮುಖಾಯ ನಮಃ
ಓಂ ಕರ್ಕೋಟಕಾಯ ನಮಃ
ಓಂ ಮಹಾಪದ್ಮಾಯ ನಮಃ
ಓಂ ಪದ್ಮಾಯ ನಮಃ
ಓಂ ಶಂಖಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಧೃತರಾಷ್ಟಾ್ರಯ ನಮಃ
ಓಂ ಶಂಖಪಾಲಾಯ ನಮಃ
ಓಂ ಕುಳಿಕಾಯ ನಮಃ
ಓಂ ಸರ್ಪನಾಥಾಯ ನಮಃ
ಓಂ ಇಷ್ಟದಾಯಿನೇ ನಮಃ
ಓಂ ನಾಗರಾಜಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷಾಯ ನಮಃ
ಓಂ ಅನಘಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ಮಹೀಧಾರಿಣೇ ನಮಃ
ಓಂ ಕಾಮದಾಯಿನೇ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಕುಂಡಪ್ರಭಾಯ ನಮಃ
ಓಂ ಬಹುಶಿರಸೇ ನಮಃ
ಓಂ ದಕ್ಷಾಯ ನಮಃ
ಓಂ ದಾಮೋದರಾಯ ನಮಃ
ಓಂ ಅಕ್ಷರಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಮಹಾಸೇನಾಯ ನಮಃ
ಓಂ ಪುಣ್ಯಮೂರ್ತಯೇ ನಮಃ
ಓಂ ಗಣಪ್ರಿಯಾಯ ನಮಃ
ಓಂ ವರಪ್ರದಾಯ ನಮಃ
ಓಂ ವಾಯುಭಕ್ಷಕಾಯ ನಮಃ
ಓಂ ವಿಶ್ವಧಾರಿಣೇ ನಮಃ
ಓಂ ವಿಹಂಗಮಾಯ ನಮಃ
ಓಂ ಪುತ್ರಪ್ರದಾಯ ನಮಃ
ಓಂ ಪುಣ್ಯರೂಪಾಯ ನಮಃ
ಓಂ ಬಿಲೇಶಾಯ ನಮಃ
ಓಂ ಪರಮೇಷ್ಟಿನೇ ನಮಃ
ಓಂ ಪಶುಪತಯೇ ನಮಃ
ಓಂ ಪವನಾಶಿನೇ ನಮಃ
ಓಂ ಬಲಪ್ರದಾಯ ನಮಃ
ಓಂ ದಾಮೋದರಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಯಾರೂಪಾಯ ನಮಃ
ಓಂ ಧನಪ್ರದಾಯ ನಮಃ
ಓಂ ಮತಿದಾಯಿನೇ ನಮಃ
ಓಂ ಮಹಾಮಾಯಿನೇ ನಮಃ
ಓಂ ಮಧುವೈರಿಣೇ ನಮಃ
ಓಂ ಮಹೋರಗಾಯ ನಮಃ
ಓಂ ಭುಜಂಗೇಶಾಯ ನಮಃ
ಓಂ ಭೂಮರೂಪಾಯ ನಮಃ
ಓಂ ಭೀಮಕಾಮಾಯ ನಮಃ
ಓಂ ಭಯಾಪಹತೇ ನಮಃ
ಓಂ ಸಕಲರೂಪಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶುಭಪ್ರದಾಯ ನಮಃ
ಓಂ ಸಂತಾನದಾಯಿನೇ ನಮಃ
ಓಂ ಸರ್ಪೇಶಾಯ ನಮಃ
ಓಂ ಸವದಾಯನೇ ನಮಃ
ಓಂ ಸರೀಸೃಪಾಯ ನಮಃ
ಓಂ ಲಕ್ಷ್ಮೀಕರಾಯ ನಮಃ
ಓಂ ಲಾಭದಾಯಿನೇ ನಮಃ
ಓಂ ಲಲಿತಾಯ ನಮಃ
ಓಂ ಲಕ್ಷಣಾಕೃತಯೇ ನಮಃ
ಓಂ ದಯಾರಾಶಯೇ ನಮಃ
ಓಂ ದಾಶರಥಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಮಾಶ್ರಮಾಯ ನಮಃ
ಓಂ ರಮ್ಯರೂಪಾಯ ನಮಃ
ಓಂ ರಾಮಭಕ್ತಾಯ ನಮಃ
ಓಂ ರಾಮಭಕ್ತಾಯ ನಮಃ
ಓಂ ರಣಧೀರಾಯ ನಮಃ
ಓಂ ರತಿಪ್ರದಾಯ ನಮಃ
ಓಂ ಸೌಮಿತ್ರಿಯೇ ನಮಃ
ಓಂ ಸೋಮಸಂಕಾಶಾಯ ನಮಃ
ಓಂ ಸರ್ಪರಾಜಾಯ ನಮಃ
ಓಂ ಸತಾಂಪ್ರಿಯಾಯ ನಮಃ
ಓಂ ಕರ್ಬುರಾಯ ನಮಃ
ಓಂ ಕಾಮಫಲಪ್ರದಾಯ ನಮಃ
ಓಂ ಕಿರೀಟಿನೇ ನಮಃ
ಓಂ ಕಿನ್ನರಾರ್ಚಿತಾಯ ನಮಃ
ಓಂ ಪಾತಾಳವಾಸಿನೇ ನಮಃ
ಓಂ ಪರಾಯ ನಮಃ
ಓಂ ಫಣಿಮಂಡಲಮಂಡಿತಾಯ ನಮಃ
ಓಂ ಆಶೀವಿಷಾಯ ನಮಃ
ಓಂ ವಿಷಧರಾಯ ನಮಃ
ಓಂ ಭಕ್ತನಿಧಯೇ ನಮಃ
ಓಂ ಭೂಮಿಧಾರಿಣೇ ನಮಃ
ಓಂ ಭವಪ್ರಿಯಾಯ ನಮಃ
ಓಂ ನಾಗರಾಜಾಯ ನಮಃ
ಓಂ ನಾನಾರೂಪಾಯ ನಮಃ
ಓಂ ಜನಪ್ರಿಯಾಯ ನಮಃ
ಓಂ ಕಾಕೋದರಾಯ ನಮಃ
ಓಂ ಕಾವ್ಯರೂಪಾಯ ನಮಃ
ಓಂ ಕಲ್ಯಾಣಾಯ ನಮಃ
ಓಂ ಕಾಮಿತಾರ್ಥದಾಯಿನೇ ನಮಃ
ಓಂ ಹತಾಸುರಾಯ ನಮಃ
ಓಂ ಹಲ್ಯಹೀನಾಯ ನಮಃ
ಓಂ ಹರ್ಷದಾಯನೇ ನಮಃ
ಓಂ ಹರಭೂಷಣಾಯ ನಮಃ
ಓಂ ಜಗದಾಧಾರಯೇ ನಮಃ
ಓಂ ಜರಾಹೀನಾಯ ನಮಃ
ಓಂ ಜಗನ್ಮಯಾಯ ನಮಃ
ಓಂ ವಂಧ್ಯಾತ್ವದೋಷ ಶಮನಾಯ ನಮಃ
ಓಂ ವರಪುತ್ರಫಲಪ್ರದಾಯ ನಮಃ
ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ
ಇತಿ ನಾಗರಾಜ ಅಷ್ಟೋತ್ತರಶತನಾಮ ಪೂಜಾಂ ಸಮರ್ಪಯಾಮಿ

ಈ ಮಂತ್ರಗಳನ್ನು ಪಠಿಸಿ
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಏತಾನಿ ನವ ನಾಮಾನಿ ನಾಗಾನಾಂ ಯಃ ಪಠೇನ್ನರಃ
ತಸ್ಯ ನಾಗಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್

ಭಕ್ತಿಯಿಂದ ಪ್ರಾರ್ಥಿಸಿ
* ಬಳಿಕ ಕ್ಷಮಾಯಾಚನೆ ಅಂದ್ರೆ ಒಂದು ವೇಳೆ ಅರಿಯದೆ ಏನಾದರೂ ತಪ್ಪಾಗಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸಿ.
* ನಂತರ ಭಕ್ತಿಯಿಂದ ಕೈ ಮುಗಿದು, ಪ್ರಸಾದ ಹಂಚಿ.



Click it and Unblock the Notifications