Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ನಾಟಕ ಆಡೋದು ಈ ರಾಶಿಯವರಿಗೆ ಕಷ್ಟ ಅಲ್ಲವಂತೆ!
ನಾಟಕ ಅನ್ನುವುದು ವಿವಿಧ ರೀತಿಯಲ್ಲಿ ಕಾಣುತ್ತದೆ. ನಿಮ್ಮದೇ ಶೈಲಿಯಲ್ಲಿ, ನಿಮ್ಮದೇ ಆಲೋಚನೆಯಲ್ಲಿ ಯಾವುದೋ ನಡೆಯುತ್ತಿಲ್ಲವೆಂದಾಗ ಕೆಲವರು ನಾಟಕೀಯವಾಗಿ ವರ್ತಿಸುವುದುಂಟು. ಕೆಲವು ಸಂದರ್ಬದಲ್ಲಿ ಪರಿಸ್ಥಿತಿಯ ಕೇಂದ್ರಬಿಂದು ನೀವೇ ಆಗುವುದಕ್ಕಾಗಿ ಅಥವಾ ಇನ್ಯಾವುದೇ ಕಾರಣಕ್ಕೆ ನೀವು ಡ್ರಾಮ ಮಾಡಿದಾಗ ನಿಮಗೆ ಡ್ರಾಮಾ ಕ್ವೀನ್ ಅನ್ನೋ ಪದವಿಯೂ ಸಿಗಬಹುದು.

ನಾಟಕೀಯವಾಗಿ ಇರುವುದು ಕೆಲವು ಸಂದರ್ಬಕ್ಕೆ ಒಳ್ಳೆಯದೇ ಆಗಿರಬಹುದು. ಒಂದು ವೇಳೆ ನಿಮ್ಮ ಕೆಲಸವೇ ಡ್ರಾಮ ಮಾಡುವುದಾದರೆ ಖಂಡಿತ ಉತ್ತಮ. ಆದರೆ ಅದೇ ನಾಟಕೀಯ ಬುದ್ಧಿಯನ್ನು ನೀವು ನಿಮ್ಮ ವಯಕ್ತಿಕ ಬದುಕಿಗೆ ಅಳವಡಿಸಿದರೆ ನಿಮ್ಮ ವಯಕ್ತಿಕ ಬದುಕಿನಲ್ಲೂ ನಿಮ್ಮ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ.
ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಬಹಳ ಡ್ರಾಮ್ಯಾಟಿಕ್ ಆಗಿ ಬದುಕುತ್ತಾರೆ! ಬಹುಪಾಲು ರಾಶಿಚಕ್ರಗಳು ಎರಡು ವಿಭಾಗಗಳಲ್ಲಿ ಇರುತ್ತದೆ. ನಾಟಕೀವಾಗಿ ಇರುವುದು ಮತ್ತು ನಾಟಕೀಯವಾಗಿ ಇಲ್ಲದೆ ಇರುವುದು ಎಂದು ಈ ವಿಚಾರದಲ್ಲಿ ಪರಿಗಣಿಸಬಹುದು. ನಾವಿಲ್ಲಿ ತಿಳಿಸಿರುವ 5 ರಾಶಿಯವರು ನಾಟಕೀಯವಾಗಿ ವರ್ತಿಸುವುದಕ್ಕೆ ವಿಭಿನ್ನ ಪ್ರಚೋದಕ ಅಂಶಗಳು ಅಡಕವಾಗಿರುತ್ತದೆ. ಆ ಪ್ರಚೋದಕ ಅಂಶಗಳು ವಿಭಿನ್ನವಾಗಿದ್ದರೂ ಕೂಡ ವರ್ತನೆಗೆ ನಾವು ನಾಟಕೀಯ ರೂಪವೆಂದು ಹೇಳಬಹುದು. ಹಾಗಾಗಿ ಯಾವೆಲ್ಲಾ ರಾಶಿಯವರು ನಾಟಕೀಯವಾಗಿ ವರ್ತಿಸುತ್ತಾರೆ ತಿಳಿಯೋಣ.

1. ಕರ್ಕ ರಾಶಿ
ಕರ್ಕಾಟಕ ರಾಶಿಯವಳು ಯಾವುದೇ ಸಂದರ್ಬವೇ ಆಗಿರಲಿ ತನ್ನ ಭಾವನೆಗಳೊಂದಿಗೆ ಸಂಪರ್ಕದಲ್ಲಿರಲು ಹೆದರುವುದಿಲ್ಲ. ಆಕೆಯ ದೃಢವಾದ ವ್ಯಕ್ತಿತ್ವವು ಹೆಚ್ಚಿನ ಸಂದರ್ಬದಲ್ಲಿ ಉತ್ತಮವೇ ಆಗಿದ್ದರೂ ಕೂಡ ಕೆಲವೊಮ್ಮೆ ಅದು ಸ್ಪರ್ಧಾತ್ಮಕ ವಾಗಿ ಬದಲಾಗಿ ಬಿಡುತ್ತದೆ.
ಯಾವಾಗ ಆಕೆ ತನ್ನ ಮೂಡಿ ಸ್ಥಿತಿಗೆ ತಲುಪುತ್ತಾಳೋ ಅಂದರೆ ಆಕೆಯ ದಾರಿ ಸುಗಮವಿಲ್ಲದ ಕಾರಣದಿಂದ ಅಥವಾ ಆಕೆಯ ಭಾವನೆಗಳು ತುಂಬಿ ತುಳುಕುತ್ತಿರುವುದರಿಂದಾಗಿ ಆಕೆ ನಾಟಕೀಯ ವಾಗಿ ವರ್ತಿಸಬಹುದು. ಈ ಸಂದರ್ಬದಲ್ಲಿ ತಾನೇ ರಾಣಿಯಂತೆ ವರ್ತಿಸುವ ಸಾಧ್ಯತೆ ಇದೆ. ಈ ಸಂದರ್ಬದಲ್ಲಿ ಆಕೆಯನ್ನು ವಾಸ್ತವಕ್ಕೆ ತರುವುದು ಬಹಳ ಮುಖ್ಯ.

2. ಸಿಂಹ ರಾಶಿ
ಸಿಂಹ ರಾಶಿಯವರು ಡ್ರಾಮಾ ಕ್ವೀನ್ ಗಳ ಕ್ವೀನ್ ಎಂದು ಹೇಳಬಹುದು. ಇವರಷ್ಟು ನಾಟಕೀಯವಾಗಿ ವರ್ತಿಸುವವರು ಯಾರೂ ಇಲ್ಲ. ಈಕೆ ಯಾವುದೇ ಸಂದರ್ಬದ ಕೇಂದ್ರಬಿಂದುವಾಗಿರಲು ಬಯಸುತ್ತಾಳೆ.ಜೀವನದಲ್ಲಿ ಉನ್ನತ ಗುಣಮಟ್ಟವನ್ನು ಹೊಂದಿರುತ್ತಾಳೆ ಮತ್ತು ಇದರ ಅರ್ಥ ಆಕೆ ಅತ್ಯುತ್ತಮಳು ಎಂದು ಆಕೆ ತಿಳಿದಿರುತ್ತಾಳೆ. ಆದರೆ ಭಾವೋದ್ರಿಕ್ತವಾಗುವುದಕ್ಕೂ, ನಾಟಕೀಯವಾಗಿರುವುದಕ್ಕೂ ಬಹಳ ವ್ಯತ್ಯಾಸವಿದೆ.ಆದರೆ ಸಿಂಹ ರಾಶಿಯವರು ಇದನ್ನು ಇನ್ನೂ ಗುರುತಿಸಿಲ್ಲ.
ಒಂದು ವೇಳೆ ಸಿಂಹ ರಾಶಿಯವರು ತಾವಂದುಕೊಂಡಿರುವುದು ನಡೆಯುತ್ತಿಲ್ಲವೆಂದಾದರೆ ಏನು ಮಾಡುತ್ತಾರೆ ಎಂದು ಗಮನಿಸಬೇಕು ಎಂಬ ಬಯಕೆ ನಿಮಗಿದ್ದರೆ ಅಂಬೆಗಾಲಿಡುವ ಸಿಂಹ ರಾಶಿಯ ಮಗುವನ್ನು ಗಮನಿಸಿ ನೋಡಿ. ಆಕೆಯ ಬಗ್ಗೆ ಸ್ವತಃ ಆಕೆ ಸೊಕ್ಕು ಮತ್ತು ಅಹಂಕಾರ ಹೊಂದಿರಬಹುದು. ಒಂದು ವೇಳೆ ಎಲ್ಲಾ ಪ್ರಯತ್ನದ ನಂತರ ಆಕಡ ಅಂದುಕೊಂಡದ್ದು ಆಕೆಗೆ ದೊರೆಯದೆ ಇದ್ದರೆ ಅವಳು ನಿಧಾನವಾಗಿ ಶಾಂತವಾಗುತ್ತಾಳೆ.

3. ವೃಶ್ಚಿಕ ರಾಶಿ
ಪ್ಯಾಷನ್ ಅನ್ನುವುದು ವೃಶ್ಚಿಕ ರಾಶಿಯವರ ಮಧ್ಯದ ಹೆಸರು. ಈ ಪ್ಯಾಷನ್ ಬೇರೆಬೇರೆ ರೂಪದಲ್ಲಿ ಕಾಣಿಸಬಹುದು. ಜೀವನ, ಲೈಂಗಿಕತೆಯ ಬಗ್ಗೆ ಇವರು ಹೆಚ್ಚು ಆಸಕ್ತಿ ಹೊಂದಿದವರಾಗಿ ಇರುತ್ತಾರೆ. ಇವರ ಈ ಉತ್ಸಾಹವು ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರು ಅಸಮಾಧಾನ ಗೊಂಡಾಗ ಅಥವಾ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದಾಗ ಹೆಚ್ಚಿನವರು ಆಸ್ಚರ್ಯ ಪಡಬೇಕಾದ ಅಗತ್ಯವಿಲ್ಲ.
ಅವಳು ನಿಜವಾಗಿಯೂ ಅಸಮಾಧಾನಗೊಂಡಾಗ ಅವಳೊಂದಿಗೆ ತುಂಬಾ ಹತ್ತಿರವಿರುವ ಯಾರಾದರೂ ಆಕೆಯ ಬಳಿ ಓಡಬೇಕು. ಇವರು ಅಸಮಾಧಾನಗೊಂಡಾಗ ಇವರ ಭಾವನೆ ಅಥವಾ ಸಿಟ್ಟು ನಾಟಕೀಯವಾಗಿ ಬದಲಾಗುತ್ತದೆ. ಅದೇ ಕಾರಣದಿಂದಾಗಿ ಆಕೆ ಹಿಂಸಾತ್ಮಕವಾಗಲೂಬಹುದು. ಹಾಗಾಗಿ ಆಕೆಯ ಚಂಡಮಾರುತ ಬಂದು ಹೋಗುವವರೆಗೆ ತಾಳ್ಮೆಯಿಂದ ಇರುವುದು ಒಳಿತು.

4. ಧನು ರಾಶಿ
ಧನು ರಾಶಿಯವರು ಉತ್ಸಾಹಭರಿತ ಜೀವನಶೈಲಿಯನ್ನು ಹೊಂದಿದ್ದಾರೆ. ಹಾಗಾಗಿ ಆಕೆ ಯಾವುದರೆ ನಾಟಕೀಯ ವರ್ತನೆ ಪ್ರಾರಂಭಿಸಿದರೂ ಕೂಡ ಅದ್ರಲ್ಲಿ ಋಣಾತ್ಮಕ ದೃಷ್ಟಿಕೋನ ಇರುವುದಿಲ್ಲ. ಆಕೆಯಲ್ಲಿ ಅಸಮಾಧಾನವಿಲ್ಲವೆಂದ ಮಾತ್ರಕ್ಕೆ ಆಕೆ ನಿಮಗೆ ನೋವುಂಟು ಮಾಡುವುದಿಲ್ಲ ಎಂದರ್ಥವಲ್ಲ. ಧನು ರಾಶಿಯವರು ಮೊಂಡು ಸ್ವಭಾವದವರಾಗಿರಬಹುದು ಮತ್ತು ಭಯಾನಕ ಮಾತುಗಾರರಾಗಿರುವುದರಿಂದಾಗಿ ಅನೇಕ ಬಾರಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.
ತನ್ನದೆ ಮಾರ್ಗದಲ್ಲಿ ವಿಷಯ ಸಾಗಬೇಕು ಅಂದು ಆಕೆ ಬಯಸಿದಾಗ ಇನ್ನೊಬ್ಬ ವ್ಯಕ್ತಿಯನ್ನು ಸಂತೋಷ ಪಡಿಸುವುದಕ್ಕೆ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನು ಆಕೆ ಮಾಡುತ್ತಾಳೆ. ಅದು ಯಾವುದೇ ಆಗಿರಬಹುದು ಮತ್ತು ಹೇಗೇ ಆಗಿರಬಹುದು. ಅತಿಯಾದ ನಾಟಕೀಯ ವರ್ತನೆ ಎಂದು ಖುದ್ದು ಆಕೆಗೆ ಗೊತ್ತಿದ್ದರೂ ಕೂಡ ಅದನ್ನು ಆಕೆ ತನ್ನ ಮಾರ್ಗಕ್ಕಾಗಿ ಮುಂದುವರಿಸುತ್ತಾಳೆ. ಧನು ರಾಶಿಯವರು ನಿಮ್ಮ ಸುತ್ತಲಿರುವುದು ಬಹಳ ಕಷ್ಟ. ಆದರೆ ಅವರು ವಿಷಯಗಳನ್ನು ನಾಟಕೀಯವಾಗಿ ಮುಂದುವರಿಸುತ್ತಿರುವಾಗ ಅವರ ಎದುರು ಪ್ರಜ್ಞೆ ಯಿಂದ ಮಾತನಾಡುವುದು ಬಹಳ ಮುಖ್ಯ.

5. ಕುಂಭ ರಾಶಿ
ಕುಂಭ ರಾಶಿಯವರು ಯಾವುದೇ ವಿಚಾರದ ಬಗ್ಗೆ ನಾಟಕೀಯವಾಗಿ ಇರುವ ವ್ಯಕ್ತಿಗಳಂತೆ ತೋರುವುದಿಲ್ಲ.ಅವರ ಎದುರು ತಣ್ಣಗಿರುವುದು ಒಳ್ಳೆಯದು ಮತ್ತು ಕಾಳಜಿಯ ವರ್ತನೆ ಬಹಳ ಮುಖ್ಯ. ಇದೇ ಅವರನ್ನು ಡ್ರಾಮಾ ಕ್ವೀನ್ ಆಗಿ ಮಾಡುವುದು. ಬೇರ್ಪಟ್ಟಂತೆ ಇರುವುದು ಮತ್ತು ಅವಳು ಕಾಳಜಿಯಿಲ್ಲದಂತೆ ನಟಿಸಲು ಅವಳ ದಾರಿಯಿಂದ ಹೊರಟು ಹೋಗುವುದರಿಂದ ಅವಳು ಯಾವುದೋ ವಿಷಯದಿಂದ ಓಡಿಹೋಗುತ್ತಿದ್ದಾಳೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ.
ಅವಳು ತನ್ನ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸುವುದಿಲ್ಲ, ಆದರೆ ಅವಳ ಭಾವನೆಗಳು ಆಗಾಗ್ಗೆ ಮನೋಧರ್ಮವನ್ನು ಹೊಂದಿರುತ್ತವೆ, ಅವಳ ಮನಸ್ಸು ಯಾವಾಗ ಬಿರುಕು ಬೀಳಲಿದೆ ಎಂದು ತಿಳಿಯಲು ಅಸಾಧ್ಯವಾಗುತ್ತದೆ.ಇವರ ನಾಟಕೀಯ ವರ್ತನೆ ಸುಮಧುರ ವೇಗವನ್ನು ಪಡೆಯಬಹುದು. ಖುದ್ದು ತಾನೆ ಅಸಮಾಧಾನ ಹೊಂದಿಲ್ಲ ಎಂಬುದನ್ನು ಆಕೆ ಅರ್ಥೈಸಿಕೊಂಡಾಗ ಆಕೆಯೇ ಸಮಾಧಾನವಾಗುತ್ತಾಳೆ.ಹಾಗಾಗಿ ಆಕೆ ಹೇಳುವುದನ್ನು ಕೇಳುವುದಕ್ಕೆ ಸಮಯವಿಡಿ.ಆಗ ಆಕೆ ನಾಟಕೀಯವಾಗಿ ವರ್ತಿಸುವುದಿಲ್ಲ.



Click it and Unblock the Notifications











