Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
Budh Gochar March 2023 Effects : ಮಾ.16ಕ್ಕೆ ತನ್ನ ದುರ್ಬಲ ರಾಶಿಗೆ ಬುಧನ ಸಂಚಾರ ಈ 9 ರಾಶಿಗಳಿಗೆ ಅನುಕೂಲಕರವಲ್ಲ

ಬುಧವು ತನ್ನ ದುರ್ಬಲ ರಾಶಿಯಾದ ಮೀನ ರಾಶಿಗೆ ಮಾರ್ಚ್ 16ಕ್ಕೆ ಪ್ರವೇಶಿಸಿದೆ. ಬುಧ ತನ್ನ ದುರ್ಬಲ ರಾಶಿಯಲ್ಲಿ ಇರುವುದರಿಂದ ಬುಧನ ಪ್ರಭಾವ ಅಷ್ಟೇನು ಅನುಕೂಲಕರವಾಗಿರುವುದಿಲ್ಲ. ನಿಮ್ಮ ರಾಶಿಯಲ್ಲಿ ಬುಧ ಬೀರುವ ಸ್ಥಾನಕ್ಕೆ ಅನುಸಾರ ಬುಧದ ಪ್ರಭಾವ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಭಿನ್ನವಾಗಿರುತ್ತದೆ. ಇದೀಗ ಬುಧ ಮೀನ ರಾಶಿಯಲ್ಲಿ ಇರುವಾಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಲ್ಲಿ ಬುಧ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಮಾತುಗಳ ಕಡೆ ಗಮನಹರಿಸಿ. ಈ ಸಮಯದಲ್ಲಿ ನೀವು ಕೋಪವನ್ನು ನಿಯಂತ್ರಿಸಿಕೊಳ್ಳಿ.
ಈ ದಿನ ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ. ಈ ಅವಧಿ ಉದ್ಯೋಗಿಗಳಿಗೆ ಅನುಕೂಲಕರವಾಗಿದೆ.
ಪರಿಹಾರ: ಗಣಪತಿಗೆ ಗರಿಕೆಯನ್ನು ಅರ್ಪಿಸಿ.

ವೃಷಭ ರಾಶಿ
ವೃಷಭ ರಾಶಿ 11ನೇ ಮನೆಯಲ್ಲಿ ಇರಲಿದೆ. ಬುಧ ಮೀನ ರಾಶಿಯಲ್ಲಿ ದುರ್ಬಲವಾಗಿರುವುದು ನಿಮಗೆ ಆರ್ಥಿಕವಾಗಿ ಒಳ್ಳೆಯದು ಉಂಟು ಮಾಡಲಿದೆ. ಈ ಅವಧಿಯಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ನೀವು ಯಾವುದೇ ಹೊಸ ಹೂಡಿಕೆ ಮಾಡಲು ಹೋಗಬೇಡಿ. ಮಗುವಿನ ಅಪೇಕ್ಷಿತ ದಂಪತಿ ಈ ಅವಧಿಯಲ್ಲಿ ಸಿಹಿ ಸುದ್ದಿಯನ್ನು ಪಡೆಯುವಿರಿ. ಒಟ್ಟಿನಲ್ಲಿ ಮೀನ ರಾಶಿಗೆ ಬುಧನ ಸಂಚಾರ ನಮಗೆ ಅನುಕೂಲಕರವಾಗಿದೆ.
ಪರಿಹಾರ: ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಹಸಿರು ಬಟ್ಟೆ ಇರಿಸಿ.

ಮಿಥುನ ರಾಶಿ
ಮಿಥುನ ರಾಶಿಯಲ್ಲಿ 10ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಸಂಗಾತಿ ಬಗ್ಗೆ ಪೊಸೆಸಿವ್ ಆಗಬೇಡಿ. ಕೆಲಸದಲ್ಲಿ ನಿರತರಾಗಿರುವ ಕಾರಣ ನಿಮ್ಮ ಕುಟುಂಬವನ್ನು ನಿರ್ಲಕ್ಷ್ಯ ಮಾಡಬೇಡಿ. ವೃತ್ತಿಪರ ಜೀವನದಲ್ಲಿ ನೀವು ಯಾವುದೇ ಪ್ರಯತ್ನಗಳನ್ನು ಮಾಡಿದರೂ, ನೀವು ಬಯಸಿದ ಫಲಿತಾಂಶಗಳನ್ನು ಪಡೆಯದಿರಬಹುದು. ಈ ಅವಧಿಯಲ್ಲಿ ಕುಟುಂಬದವರ ಬೆಂಬಲ ಸಿಗಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ.
ಪರಿಹಾರ: ಮನೆ ಮತ್ತು ಕೆಲಸದ ಸ್ಥಳದಲ್ಲಿ ಬುದ್ಧ ಯಂತ್ರವನ್ನು ಸ್ಥಾಪಿಸಿ.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಬುಧ 9ನೇ ಮನೆಯಲ್ಲಿ ಇರಲಿದೆ. ಈ ಅವಧಿ ಅಷ್ಟು ಅನುಕೂಲಕರವಲ್ಲ. ಈ ಅವಧಯಲ್ಲಿ ವೃತ್ತಿ ಜೀವನ ಹಾಗೂ ಆರೋಗ್ಯದಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಪ್ರಯತ್ನಗಳಲ್ಲಿ ಅಷ್ಟೊಂದು ಫಲ ಸಿಗುವುದಿಲ್ಲ. ನಿಮ್ಮ ಕೆಲಸದ ಕಡೆ ಅತ್ಯಂತ ಗಮನಹರಿಸಿ. ಮುಂದೆಕ್ಕೆ ನಿಮಗೆ ಫಲ ಸಿಗಲಿದೆ.
ಪರಿಹಾರ: ನಿಮ್ಮ ತಂದೆಗೆ ಹಸಿರು ಬಣ್ಣದ ವಸ್ತುವನ್ನು ಉಡುಗೊರೆ ನೀಡಿ.

ಸಿಂಹ ರಾಶಿ
ಬುಧನು ಸಿಂಹ ರಾಶಿಯವರಲ್ಲಿ 8ನೇ ಮನೆಯಲ್ಲಿ ಇರಲಿದೆ. ಈ ಸ್ಥಾನ ಸಿಂಹ ರಾಶಿಯವರಿಗೆ ಅಷ್ಟೊಂದು ಅನುಕೂಲಕರವಲ್ಲ. ಈ ಅವಧಿಯಲ್ಲಿ ಆರ್ಥಿಕ ತೊಂದರೆ ಉಂಟಾಗಬಹುದು. ಈ ಹಿಂದೆ ಮಾಡಿದ ಹೂಡಿಕೆಯಿಂದ ಮೋಸ ಆಗಬಹುದು. ಈ ಅವಧಿಯಲ್ಲಿ ಯಾವುದೇ ಹೂಡಿಕೆ ಅಥವಾ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡದಂತೆ ಸೂಚಿಸಲಾಗಿದೆ.
ಈ ಸಮಯದಲ್ಲಿ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಈ ಅವಧಿಯಲ್ಲಿ ನೀವು ಹಣದ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.
ಪರಿಹಾರ: ಮಂಗಳಮುಖಿಯರಿಗೆ ಹಸಿರು ಬಣ್ಣದ ಬಟ್ಟೆಗಳನ್ನು ನೀಡಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಬುಧ 7ನೇ ಮನೆಯಲ್ಲಿ ಇರಲಿದೆ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಈ ಅವಧಿಯಲ್ಲಿ ತುಂಬಾನೇ ಎಚ್ಚರವಹಿಸಬೇಕು. ಇಲ್ಲದಿದ್ದರೆ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ವರ್ತಸಿಬೇಕಾಗಿದೆ.
ಪರಿಹಾರ: ಬುಧ ಬೀಜ ಮಂತ್ರ ಪಠಿಸಿ.

ತುಲಾ ರಾಶಿ
ತುಲಾ ರಾಶಿಯವರಲ್ಲಿ 6ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು . ಆರ್ಥಿಕವಾಗಿಯೂ, ಈ ಸಮಯವು ತುಂಬಾ ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಸಾಲ ಹೆಚ್ಚಾಗಬಹುದು. ಮಿತಿಯಲ್ಲಿ ಖರ್ಚು ಮಾಡುವುದು ಒಳ್ಳೆಯದು.
ಪರಿಹಾರ: ಹಸುವಿಗೆ ಹಸಿರು ಮೇವು ದಾನ ಮಾಡಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ 5ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ಹಣದ ಬಗ್ಗೆ ತುಂಬಾನೇ ಎಚ್ಚರವಹಿಸಬೇಕಾಗಿದೆ. ಈ ಅವಧಿಯಲ್ಲಿ ಎಲ್ಲಯೂ ಹೂಡಿಕೆ ಮಾಡಲು ಹೋಗಬೇಡಿ. ವಿದ್ಯಾರ್ಥಿಗಳು ಈ ಸಮಯದಲ್ಲಿ ಸ್ವಲ್ಪ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೀರಿ. ಹನ್ನೊಂದನೇ ಮನೆಯ ಮೇಲೆ ಬುಧದ ಅಂಶವು ನಿಮ್ಮನ್ನು ಸಾಮಾಜಿಕವಾಗಿ ಜನಪ್ರಿಯಗೊಳಿಸುತ್ತದೆ.
ಪರಿಹಾರ: ಅಗತ್ಯವಿರುವ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ದಾನ ಮಾಡಿ.

ಧನು ರಾಶಿ
ಧನು ರಾಶಿಯವರಲ್ಲಿ 4ನೇ ಮನೆಯಲ್ಲಿ ಇರಲಿದೆ. ನಾಲ್ಕನೇ ಮನೆಯಲ್ಲಿ ಬುಧ ಸಂಚಾರವು ನಿಮ್ಮ ವೈವಾಹಿಕ ಜೀವನಕ್ಕೆ ಉತ್ತಮವಲ್ಲ. ಈ ಅವಧಿಯಲ್ಲಿ ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ. ವೃತ್ತಿಪರ ಜೀವನದ ಬಗ್ಗೆ ಹೇಳುವುದಾದರೆ ನೀವು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಈ ಅವಧಿಯಲ್ಲಿ ಕೆಲಸದಲ್ಲಿ ಅಭದ್ರತೆ ಕಾಡಬಹುದು.

ಮಕರ ರಾಶಿ
ಮಕರ ರಾಶಿಯವರಲ್ಲಿ ಬುಧ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವಾಡುವ ಮಾತುಗಳನ್ನು ತಪ್ಪು ತಿಳಿದುಕೊಳ್ಲುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಕುಟುಂಬದಲ್ಲಿ ಸಮಸ್ಯೆಗಳಿರಬಹುದು. ಆದರೆ ಈ ಅವಧಿಯಲ್ಲಿ ನಿಮ್ಮ ಪೋಷಕರು ಹಾಗೂ ಗುರುಗಳ ಬೆಂಬಲ ನಿಮಗಿರಲಿದೆ.
ಪರಿಹಾರ: ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಅಥವಾ ಸೋದರಸಂಬಂಧಿಗಳಿಗೆ ಉಡುಗೊರೆ ನೀಡಿ.

ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಬುಧ 2ನೇ ಮನೆಯಲ್ಲಿದೆ. ಈ ಅವಧಿಯಲ್ಲಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾನೇ ಎಚ್ಚರವಹಿಸಬೇಕು, ಇಲ್ಲದಿದ್ದರೆ ಹಣ ನಷ್ಟವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸಬಹುದು. ಹಣವನ್ನು ಮಿತಿಯಲ್ಲಿ ಖರ್ಚು ಮಾಡಿ.
ಪರಿಹಾರ: ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೂಜಿಸಿ.

ಮೀನ ರಾಶಿ
ಬುಧ ಮೀನ ರಾಶಿಯಲ್ಲಿ ಲಗ್ನ ಮನೆಯಲ್ಲಿ ಇರಲಿದೆ. ಬುಧ ತನ್ನ ದುರ್ಬಲ ರಾಶಿಯಲ್ಲಿ ಇರುವುದರಿಂದ ಈ ಅವಧಿಯಲ್ಲಿ ಗೊಂದಲಗಳು ಅಧಿಕ. ವೈವಾಹಿಕ ಜೀವನದಲ್ಲಿ ಕೆಲಸ ಸಮಸ್ಯೆಗಳು ಬರಬಹುದು. ವ್ಯಾಪಾರದ ಮೇಲೂ ಪರಿಣಾಮ ಬೀರಲಿದೆ. ಆರ್ಥಿಕ ಸಮಸ್ಯೆ ಇರಲಿದೆ. ಒಟ್ಟಿನಲ್ಲಿ ಬುಧದ ಈ ಸಂಚಾರ ಮೀನ ರಾಶಿಯವರಿಗೆ ಅನುಕೂಲಕರವಲ್ಲ.
ಪರಿಹಾರ: ಪ್ರತಿದಿನ ಬುಧ ಬೀಜ ಮಂತ್ರ ಪಠಿಸಿ.



Click it and Unblock the Notifications











