Latest Updates
-
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ?
ಕರ್ಕ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲಾಗುವ ಪರಿಣಾಮಗಳು
ಆಗಸ್ಟ್ 2ರಂದು ಬುಧ ಕರ್ಕ ರಾಶಿಗೆ ಸಂಚಾರಮಾಡುತ್ತಿದ್ದಾನೆ. ಬುಧ ಗ್ರಹವನ್ನು ಬುದ್ಧಿ, ಚರ್ಮ, ವ್ಯಾಪಾರ ಇತ್ಯಾದಿಯ ಅಂಶವೆಂದು ಹೇಳಲಾಗುತ್ತದೆ. ಬುಧ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಒಳಿತಾಗುತ್ತದೆ. ಬುಧನು ಆಗಸ್ಟ್ 3ಕ್ಕೆ ಕರ್ಕ ರಾಶಿಗೆ ಸಂಚಾರ ಮಾಡಲಿದ್ದಯ ಆಗಸ್ಟ್ 17ರವರೆಗೆ ಅದೇ ರಾಶಿಯಲ್ಲಿರುತ್ತಾನೆ.
ಕರ್ಕ ರಾಶಿಗೆ ಬುಧ ಸಂಚಾರವಾಗುತ್ತಿದ್ದಂತೆ ರಾಶಿಗಳ ಮೇಲೂ ಪರಿಣಾಮ ಬೀರುವುದು. ಬುಧನ ಈ ಸಂಚಾರದಿಂದ ರಾಶಿಗಳ ಮೇಲಾಗುವ ಪರಿಣಾಮಗಳೇನು ಎಂದು ನೋಡೋಣ:

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

ಮೇಷ ರಾಶಿ
ಬುಧ ಸಂಚಾರವು ಮೇಷ ರಾಶಿಯ ನಾಲ್ಕನೇ ಮನೆಯಲ್ಲಿರುತ್ತದೆ. ನಾಲ್ಕನೇ ಮನೆಯನ್ನು ತಾಯಿ, ಸಂತೋಷದ ಮನೆಯೆಂದು ಹೇಳಲಾಗುವುದು. ಇದರಿಂದಾಗಿ ಹಿಡಿದ ಕೆಲಸದಲ್ಲಿ ಯಶಸ್ಸು ಉಂಟಾಗುವುದು. ಶಿಕ್ಷಣ ಹಾಗೂ ವೃತ್ತಿಪರ ಕ್ಷೇತ್ರದಲ್ಲಿ ಪ್ರಗತಿ ಉಂಟಾಗುತ್ತದೆ.
ಆದರೆ ಈ ಸಮಯದಲ್ಲಿ ಮನಸ್ಸಿಗೆ ಸ್ವಲ್ಪ ತೊಂದರೆ ಉಂಟಾಗಬಹುದು. ತಾಯಿ ಹಾಗೂ ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.
ಪರಿಹಾರ: ಬುಧವಾರ ಅಗ್ಯತವಿರುವವರಿಗೆ ಆಹಾರ-ಧಾನ್ಯಗಳನ್ನು ದಾನ ಮಾಡಿದರೆ ಒಳಿತಾಗುವುದು.

ವೃಷಭ ರಾಶಿ
ವೃಷಭ ರಾಶಿಯ ಮೂರನೇಯ ಮನೆಯಲ್ಲಿ ಬುಧನ ಸಂಚಾರವಾಗುತ್ತದೆ. ಮೂರನೇಯ ಮನೆ ಧೈರ್ಯ, ಪರಾಕ್ರಮದ ಮನೆಯೆಂದು ಹೇಳಲಾಗುವುದು. ನೀವು ಆದಾಯದ ಹೊಸ ಮೂಲಗಳನ್ನು ಕಂಡುಕೊಳ್ಳುತ್ತೀರಿ, ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದು. ಬುಧ ಗ್ರಹವು ಅಂಶವಾಗಿದೆ ಆದ್ದರಿಂದ ಇಂಟರ್‌ನೆಟ್, ಸಾಮಾಜಿಕ ಮಾಧ್ಯಮದ ಮೂಲಕ ಲಾಭವಾಗುತ್ತದೆ.
ಏನು ಮಾಡಿದರೆ ಒಳಿತಾಗುವುದು: ಬುಧವಾರದ ದಿನದಂದು ಬ್ರಾಹ್ಮಣರಿಗೆ ಹಣ್ಣುಗಳ ದಾನ ಮಾಡಿದರೆ ಒಳಿತಾಗುವುದು.

ಮಿಥುನರಾಶಿ
ಬುಧಗ್ರಹದ ಸಂಚಾರವು ಮಿಥುನ ರಾಶಿಚಕ್ರದಿಂದ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯನ್ನು ಕುಟುಂಬ, ಕಲ್ಪನಾ ಶಕ್ತಿ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಇನ್ನು ಉದ್ಯೋಗ, ವ್ಯಾಪಾರದಲ್ಲಿ ಒಳಿತಾಗುವುದು. ಮನೆಗೆ ಹೊಸ ಅತಿಥಿ ಬರಲಿದ್ದಾರೆ. ಈ ರಾಶಿ ಚಕ್ರದ ಪ್ರೇಮಿಗಳಿಗೂ ಒಳಿತಾಗಲಿದೆ.

ಕರ್ಕ ರಾಶಿ
ಬುಧನು ಕರ್ಕ ರಾಶಿಗೆ ಪ್ರವೇಶಿಸಲಿದ್ದು ಈ ಸಂಚಾರದಿಂದಾಗಿ ಸ್ವಲ್ಪ ಸವಾಲುಗಳು ಎದುರಾಗಲಿವೆ. ನಿಮ್ಮ ಕೆಲಸದ ವೈಖರಿ ಬದಲಾಯಿಸುವ ಅಗ್ಯತವಿದೆ. ಯಾವುದೇ ಕೆಲಸ ಮುಂದೂಡಬೇಡಿ, ಇದರಿಂದ ಮುಂದೆ ತೊಂದರೆಗಳು ಬರಬಹುದು.
ಇನ್ನು ಆರ್ಥಿಕ ತೊಂದರೆ ಉಂಟಾಗದಿರಲು ಮಿತ ಖರ್ಚು ಮಾಡುವುದು ಒಳ್ಳೆಯದು. ಆರೋಗ್ಯದ ಕಡೆ ಗಮನ ನೀಡಿ. ಅತಿಯಾದ ಶೀತದ ವಸ್ತುಗಳನ್ನು ಸೇವಿಸಬೇಡಿ.
ಪರಿಹಾರ: ಗೋ ಮಾತೆಗೆ ಹುಲ್ಲು, ಆಹಾರ ನೀಡಿ.

ಸಿಂಹರಾಶಿ
ಸಿಂಹ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಬುಧ ಗ್ರಹವು ಸಂಚರಿಸುತ್ತಿದೆ. ಈ ಮನೆಯನ್ನು ಹಾನಿ, ವೆಚ್ಚ, ಶಿಕ್ಷೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ, ನಿಮ್ಮ ಆಲೋಚನೆಗಳು ತಪ್ಪಾದ ಹಾದಿಯಲ್ಲಿ ಹೋಗದಂತೆ ಎಚ್ಚರವಹಿಸಿ. ಕೆಲವೊಂದು ಕೌಟಂಬಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇನ್ನು ಆರೋಗ್ಯದ ವಿಷಯದಲ್ಲಿ ತುಂಬಾನೇ ಎಚ್ಚರವಹಿಸಬೇಕಾಗುತ್ತದೆ. ವಿದೇಶದಲ್ಲಿ ಕಂಪನಿಯಲ್ಲಿದ್ದವರಿಗೆ ಒಳಿತಾಗಲಿದೆ.
ಪರಿಹಾರ: ವಿಷ್ಣು ಸಹಸ್ರನಾಮ ಪಠಿಸುವುದು ಒಳ್ಳೆಯದು.

ಕನ್ಯಾರಾಶಿ
ಈ ರಾಶಿಯವರಿಗೆ ಬುಧನ ಸಂಚಾರವು ಹನ್ನೊಂದನೇ ಮನೆಯಲ್ಲಾಗುತ್ತದೆ. ಇದನ್ನು ಲಾಭದ ಮನೆಯೆಂದು ಕರೆಯಲಾಗುತ್ತದೆ, ಇದರಿಂದಾಗಿ ಒಳಿತಾಗಲಿದೆ. ವ್ಯಾಪಾರಸ್ಥರಿಗೆ ಲಾಭ ಉಂಟಾಗಲಿದೆ, ಇನ್ನು ಉದ್ಯೋಗದಲ್ಲಿರುವವರಿಗೂ ಒಳಿತಾಗಲಿದೆ. ನೀವು ಸಾಲ ಕೊಟ್ಟವರು ಮರಳಿ ನೀಡಲಿದ್ದಾರೆ. ಇನ್ನು ಆರೋಗ್ಯ ಸ್ಥಿತಿಯೂ ಕೂಡ ಉತ್ತಮವಾಗಿರಲಿದೆ. ಆದ್ದರಿಂದ ಈ ರಾಶಿಯವರು ಯಾವುದೇ ಚಿಂತೆಯಿಲ್ಲದೆ ಆರಾಮವಾಗಿ ಇರಬಹುದು.

ತುಲಾರಾಶಿ
ತುಲಾರಾಶಿಯವರಿಗೆ ಬುಧ ಸಂಚಾರವು ಹತ್ತನೇ ಮನೆಯಲ್ಲಾಗಲಿದೆ. ಈ ಮನೆಯಿಂದ ನಿಮ್ಮ ಕರ್ಮ, ಕೆಲಸ, ವ್ಯಾಪಾರ, ನಾಯಕತ್ವ ಇತ್ಯಾದಿಗಳ ಪರಿಗಣಿಸಲಾಗುವುದು.
ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವೆಂಬಂತೆ ಅದೃಷ್ಟ ಉಂಟಾಗಲಿದೆ, ನಾಯಕತ್ವ ಸಾಮಾರ್ಥ್ಯ ಕೂಡ ಹೆಚ್ಚಾಗುವುದು. ಹೊಸ ವ್ಯಾಪಾರಕ್ಕೆ ಇದು ಸೂಕ್ತ ಸಮಯ. ಇನ್ನು ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡವರು ಕೂಡ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಕುಟುಂಬ ಜೀವನ ಸುಖಕರವಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ವೃಶ್ಚಿಕರಾಶಿ
ಈ ರಾಶಿಯ ಒಂಭತ್ತನೇ ಮನೆಗೆ ಬುಧ ಸಂಚಾರವಾಗುತ್ತಾನೆ. ಈ ಮನೆಯ ಮೂಲಕ ಅದೃಷ್ಟ, ಧರ್ಮ, ದೂರ ಪ್ರಯಾಣ ಇತ್ಯಾದಿಗಳನ್ನು ಪರಿಗಣಿಸಲಾಗುವುದು. ಈ ರಾಶಿಯವರು ಯಶಸ್ವಿಗೆ ಕಠಿಣ ಪರಿಶ್ರಮ ಹಾಕಬೇಕು. ವಿದ್ಯಾರ್ಥಿಗಳು ಯಾವುದೇ ಪರಿಸ್ಥಿತಿಯಲ್ಲಿ ಗುರುವನ್ನು ಅವಮಾನಿಸಬಾರದು. ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಈ ಸಮಯದಲ್ಲಿ ಯಾವುದೇ ದೂರ ಪ್ರಯಾಣ ಮಾಡದಿರುವುದು ಒಳ್ಳೆಯದು.
ಪರಿಹಾರ: ಬುಧವಾರ ಜೋಡಿ ಹಕ್ಕಿಗಳನ್ನು ಬಂದನ ಮುಕ್ತಗೊಳಿಸಿ

ಧನುರಾಶಿ
ಈ ರಾಶಿಯವರ ಎಂಟನೇ ಮನೆಗೆ ಬುಧ ಸಂಚಾರವಾಗಲಿದೆ. . ಎಂಟನೇ ಮನೆಯನ್ನು ವಯಸ್ಸು, ಜೀವನದಲಿ ಬರಲಾಗುವ ಸಮಸ್ಯೆಗಳು, ಅಡೆತಡೆಗಳು, ಪೂರ್ವಜರ ಆಸ್ತಿ ಇತ್ಯಾದಿಗಳ ಬಗ್ಗೆ ಪರಿಗಣಿಯಲಾಗುತ್ತದೆ. ಬುಧ ಸಂಚಾರವು ಧನು ರಾಶಿಯವರಿಗೆ ಒಳಿತು ಮಾಡಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವುದು, ಕಾಳಜಿ ವಹಿಸಿದರೆ ಎಲ್ಲವೂ ಸರಿಹೋಗುವುದು.

ಮಕರರಾಶಿ
ಬುಧ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರ ಏಳನೇ ಮನೆಯಲ್ಲಾಗುತ್ತದೆ. ಇದು ಪಾಲುದಾರಿಕೆ, ಜೀವನ ಸಂಗಾತಿ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಬುಧ ಸಂಚಾರದಿಂದ ಧನು ರಾಶಿಯವರಿಗೆ ಒಳಿತಾಗಲಿದೆ. ಆದರೆ ಯಾರ ಜೊತೆ ನಿಷ್ಠೂರವಾಗಿ ಮಾತನಾಡಲು ಹೋಗಬೇಡಿ, ತಾಳ್ಮೆವಹಿಸಿ. ಈ ರಾಶಿಯವರು ಸ್ವಲ್ಪ ಜಾಗೂರೂಕತೆಯಿಂದ ಇದ್ದರೆ ಒಳಿತಾಗುವುದು.

ಕುಂಭರಾಶಿ
ಕುಂಭ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿ ಬುಧ ಗ್ರಹದ ಸಂಚಾರವಾಗುತ್ತದೆ. ಈ ಮನೆಯ ಮೂಲಕ ಋಣ, ರೋಗ, ವಿವಾದ,ಅತ್ತೆ ಮಾವ, ಶತ್ರು ಇತ್ಯಾದಿಗಳ ಬಗ್ಗೆ ಹೇಳಲಾಗುವುದು. ಈ ರಾಶಿಯವರಿಗೂ ಕೂಡ ಒಳಿತಾಗಲಿದೆ. ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳವೂ ನಿಮಗೆ ಪೂರಕವಾಗಿರುತ್ತದೆ. ಮಕ್ಕಳ ಆರೋಗ್ಯದ ಕಡೆಗೆ ಸ್ವಲ್ಪ ಜಾಗ್ರತೆ.

ಮೀನ ರಾಶಿ
ಈ ರಾಶಿಯವರಿಗೆ ಬುಧ ಸಂಚಾರವು ಐದನೇ ಮನೆಯಲ್ಲಿ ಉಂಟಾಗಲಿದೆ. ಐದನೇ ಮನೆಯನ್ನು ಮಕ್ಕಳು, ಶಿಕ್ಷಣ, ಪ್ರಿತಿ ಸಂಬಂಧ, ಪ್ರತಿಷ್ಠೆ ಇತ್ಯಾದಿಗಳಿಗೆ ಪರಿಗಣಿಸಲಾಗಿದೆ. ಈ ರಾಶಿಯವರಿಗೆ ಸ್ವಲ್ಪ ಸವಾಲುಗಳು ಎದುರಾಗಲಿದೆ, ಸ್ವಲ್ಪ ಮಾನಸಿಕ ಗೊಂದಲ ಉಂಟಾಗಬಹುದು, ಕುಟುಂಬದಲ್ಲಿ ಆರೋಗ್ಯ ಸಮಸ್ಯೆಯೂ ಎದುರಾಗಬಹುದು. ಈ ರಾಶಿಯವರು ತುಂಬಾ ಜಾಗ್ರತೆಯಿಂದ ಇರಿ
ಪರಿಹಾರ: ಶುದ್ಧ ತುಪ್ಪ ದಾನ ಮಾಡಿ.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications











