Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಏಪ್ರಿಲ್ 8ಕ್ಕೆ ಮೇಷ ರಾಶಿಗೆ ಬುಧ ಸಂಚಾರ: ಈ 4 ರಾಶಿಗಳಿಗೆ ತರಲಿದೆ ಅದೃಷ್ಟ
ಬುಧ ಗ್ರಹವನ್ನು ಸಂವಹನ ಮತ್ತು ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಲಾಗಿದೆ. ಈ ಗ್ರಹವು ಅತ್ಯಂತ ವೇಗವಾಗಿ ಸಾಗುವ ಗ್ರಹವಾಗಿದ್ದು, ಯಾರ ಜಾತಕದಲ್ಲಿ ಈ ಗ್ರಹವು ಪ್ರಬಲ ಸ್ಥಾನದಲ್ಲಿದೆಯೋ, ಆ ವ್ಯಕ್ತಿಯು ಬೌದ್ಧಿಕವಾಗಿ ಶಕ್ತಿಯುತನಾಗಿರುತ್ತಾನೆ ಮತ್ತು ಅವನ ಮುಖದಲ್ಲಿ ವಿಭಿನ್ನ ಹೊಳಪು ಕಂಡುಬರುತ್ತದೆ. ಈ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಬುಧ ಗ್ರಹದಿಂದಾಗಿ, ಈ ಎರಡೂ ರಾಶಿಚಕ್ರ ಚಿಹ್ನೆಗಳು ತಾರ್ಕಿಕ ವಿಧಾನವನ್ನು ಹೊಂದಿವೆ. ಏಪ್ರಿಲ್ 8 ರಂದು ಬುಧವು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಏಪ್ರಿಲ್ 25 ರವರೆಗೆ ಇಲ್ಲಿಯೇ ಇರುತ್ತದೆ. ಈ ಸಂಚಾರದಿಂದ ಯಾವ ರಾಶಿಚಕ್ರದ ಚಿಹ್ನೆಯು ಮಹತ್ತರವಾಗಿ ಪ್ರಯೋಜನ ಪಡೆಯುತ್ತದೆ ಎಂಬುದನ್ನು ನೋಡೋಣ.
ಬುಧ ಗ್ರಹವು ಮೇಷ ರಾಶಿಗೆ ಸಂಚಾರ ಮಾಡುವುದರಿಂದ ಯಾವ ರಾಶಿಗಳಿಗೆ ಶುಭ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ ರಾಶಿ:
ಬುಧ ಸಂಚಾರವು ಈ ರಾಶಿಚಕ್ರದ ಜನರಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಜೊತೆಗೆ ಕೆಲವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ. ಈ ಸಂಚಾರವುಯ ಹೂಡಿಕೆಗಳನ್ನು ಮಾಡಲು ಮತ್ತು ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಲು ಅನುಕೂಲಕರವಾಗಿರುತ್ತದೆ. ಹಣದ ಭಾಗವು ಬಲವಾಗಿರುತ್ತದೆ. ಒಟ್ಟಾರೆಯಾಗಿ ಬುಧ ಗ್ರಹದ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಫಲಪ್ರದವಾಗಿದೆ.

ವೃಷಭ ರಾಶಿ:
ಈ ಅವಧಿಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕವಾಗಿ, ಈ ಅವಧಿಯು ನಿಮಗೆ ಮಂಗಳಕರವಾಗಿರುತ್ತದೆ. ನೀವು ಪ್ರಯಾಣದಿಂದಲೂ ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮ್ಮ ವ್ಯಾಪಾರಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆಯು ಇರಬಹುದು. ಇದರಿಂದ ಆರ್ಥಿಕ ಮೂಲಗಳು ತೆರೆದುಕೊಳ್ಳಬಹುದು.

ಕರ್ಕಾಟಕ ರಾಶಿ:
ಈ ಸಮಯದಲ್ಲಿ ನಿಮ್ಮ ಎಲ್ಲಾ ಅಡೆತಡೆಗಳು ಅಂತ್ಯಗೊಳ್ಳಲಿವೆ. ಉದ್ಯೋಗದಲ್ಲಿರುವವರು ವರ್ಗಾವಣೆಯ ಸುದ್ದಿಯನ್ನು ಸಹ ಪಡೆಯಬಹುದು. ಶ್ರಮಕ್ಕೆ ಸಂಪೂರ್ಣ ಫಲ ಸಿಗಲಿದೆಯಂತೆ. ಅದೇ ಸಮಯದಲ್ಲಿ, ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವ ಜನರಿಗೆ, ಈ ಅವಧಿಯು ಲಾಭದಾಯಕ ವ್ಯವಹಾರಗಳನ್ನು ಮಾಡಲು ಅನುಕೂಲಕರವಾಗಿರುತ್ತದೆ. ಆದ್ದರಿಂದ ಆರ್ಥಿಕ ವಿಚಾರದಲ್ಲಿ ಉತ್ತಮವಾಗಿರುತ್ತದೆ.

ಸಿಂಹ ರಾಶಿ:
ಈ ರಾಶಿಯವರಿಗೆ ಬುಧ ಸಂಚಾರವು ಶುಭಕರವಾಗಿರುತ್ತದೆ. ಈ ಸಾಗಣೆಯು ನಿಮ್ಮ ಆರ್ಥಿಕ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ನೀವು ಆರ್ಥಿಕ ಶಕ್ತಿ ಮತ್ತು ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಗಳಿವೆ. ಹಣವನ್ನು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಪ್ರೇಮ ಸಂಬಂಧಗಳ ವಿಷಯದಲ್ಲಿಯೂ ಈ ಸಮಯವು ಅನುಕೂಲಕರವಾಗಿರುತ್ತದೆ. ಈ ರಾಶಿಯವರು ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.



Click it and Unblock the Notifications
