Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಕುಂಭ ರಾಶಿಗೆ ಬುಧ ಪ್ರವೇಶ, ಅಸ್ತಂಗತ : ಈ 4 ರಾಶಿಗಳಿಗೆ ಆರ್ಥಿಕವಾಗಿ ಒಳ್ಳೆಯದು
ಒಂಬತ್ತು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲ್ಪಟ್ಟ ಬುಧ, ಶನಿಯು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

ಫೆಬ್ರವರಿ 27ಕ್ಕೆ ಕುಂಭ ರಾಶಿಗೆ ಬುಧ ಪ್ರವೇಶಿಸುತ್ತದೆ, ಮಾರನೇಯ ದಿನವೇ ಅಸ್ತಂಗತವಾಗಲಿದೆ. ಬುಧ ಕುಂಭ ರಾಶಿಯಲ್ಲಿರುವ ಈ ಅವಧಿ ಈ ಕೆಳಗಿನ ರಾಶಿಯವರಿಗೆ ಧನಾತ್ಮಕವಾಗಿ ತುಂಬಾನೇ ಉತ್ತಮವಾಗಿದೆ:

ಮೇಷ ರಾಶಿ
ಬುಧದ ಕುಂಭ ಸಂಕ್ರಮಣವು ಮೇಷ ರಾಶಿಯವರಿಗೆ ಒಳ್ಳೆಯದು. ಈ ಅವಧಿಯು ದುಡಿಯುವ ಜನರಿಗೆ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮ ಪ್ರತಿಫಲ ಕೊಡುತ್ತದೆ. ಭಗವಾನ್ ವಿಷ್ಣುವಿನ ಶ್ರೀ ವಾಮನ ರೂಪವನ್ನು ಪೂಜಿಸುವುದರಿಂದ ತುಂಬಾ ಪ್ರಯೋಜನ ಸಿಗಲಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಕುಂಭ ರಾಶಿಯವರಿಗೆ ಬುಧದ ಪ್ರವೇಶವು ಅನುಕೂಲಕರವಾಗಿದೆ. ಉದ್ಯೋಗದಲ್ಲಿ ಸ್ಥಿರತೆ ಉಂಟಾಗಬಹುದು. ಹಿರಿಯರ ಸಂಪೂರ್ಣ ಸಹಕಾರ ಸಿಗಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುವುದು. ಸಾಧ್ಯವಾದರೆ ನಿತ್ಯವೂ ಹಸುವಿಗೆ ಮೇವು ತಿನ್ನಿಸಿ. ಇದರಿಂದ ಮತ್ತಷ್ಟು ಉತ್ತಮ ಫಲ ಸಿಗಲಿದೆ.

ಸಿಂಹ ರಾಶಿ
ಕುಂಭ ರಾಶಿಗೆ ಬುಧದ ಪ್ರವೇಶವು ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯವು ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಈ ಅವಧಿ ತುಂಬಾನೇ ಒಳ್ಳೆಯದಿದೆ. ಜೀವನದಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಬುಧವಾರದಂದು ನಿಯಮಿತವಾಗಿ ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಿ.

ತುಲಾ ರಾಶಿ
ಬುಧದ ಕುಂಭ ಸಂಕ್ರಮಣವು ತುಲಾ ರಾಶಿಯವರಿಗೆ ಧನಾತ್ಮಕವಾಗಿರಬಹುದು. ನಿಮ್ಮ ದಕ್ಷತೆಯನ್ನು ಹೆಚ್ಚಿಸಬಹುದು. ಈ ಅವಧಿಯಲ್ಲಿ ಹಣವನ್ನು ಪಡೆಯುವ ಉತ್ತಮ ಅವಕಾಶಗಳಿವೆ. ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ನಿಮಗೆ ಅವಕಾಶ ಸಿಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಲಿದೆ. ಸಾಧ್ಯವಾದರೆ, ಬುಧವಾರದಂದು ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡಿ.



Click it and Unblock the Notifications
