Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ1, ಕಾರ್ಮಿಕರ ದಿನ: ಕೊರೊನಾ ಹಾವಳಿಯಿಂದ ಕಾರ್ಮಿಕರ ರಕ್ಷಣೆಯಾಗಬೇಕಾಗಿದೆ
ಮೇ 1ನ್ನು ಕಾರ್ಮಿಕರ ದಿನಾಚರಣೆಯಾಗಿ ಭಾರತ ಸೇರಿ ಎಲ್ಲಾ ದೇಶಗಳಲ್ಲಿ ಆಚರಿಸಲಾಗುವುದು. ದುಡಿಯುವ ವರ್ಗದವರ ಮೇಲಿನ ದಬ್ಬಾಳಿಕೆ ತಡೆಗಟ್ಟಿ ಅವರ ಏಳಿಗೆಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಪ್ರಪಂಚದ ಬಹುತೇಕ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಆ ದಿನ ಕಾರ್ಮಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಜಗತ್ತಿನ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ದೊಡ್ಡದು. ಪ್ರತಿಯೊಂದು ಕ್ಷೇತ್ರದಲ್ಲಿ ಇವರ ಬೆವರಿನ ಶ್ರಮ ಮಹತ್ವವಾದದ್ದು. ಕಾರ್ಮಿಕರು ತಮ್ಮ ದುಡಿಮೆಯಿಂದ ತಮ್ಮ ಕುಟುಂಬವನ್ನು ಪೋಷಿಸುವ ಜತೆಗೆ ತಮ್ಮ ಸಂಸ್ಥೆಯ ಅಭಿವೃದ್ಧಿಗೂ ಕಾರಣರಾಗುತ್ತಾರೆ. ಈ ಮೂಲಕ ಒಂದು ದೇಶದ ಪ್ರಗತಿಗೂ ನೆರವಾಗುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸೇವೆಸಲ್ಲಿಸುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಕಾರ್ಮಿಕ ದಿನಾಚರಣೆಯ ಆರಂಭ
ಮೊಟ್ಟ ಮೊದಲಿಗೆ 1886ರ ಮೇ1ರಂದು ಅಮೆರಿಕದಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಇಂದು ಒಬ್ಬ ಕಾರ್ಮಿಕನ ಕೆಲಸದ ಅವಧಿ 8 ಗಂಟೆ ಅಂತ ಇದೆ. ಈ ನಿಯಮ ಅಂದು ನಡೆದ ಸಭೆಯಲ್ಲಿ ನಿರ್ಧರಿಸಿ ತೆಗೆದುಕೊಂಡ ಕಾರ್ಮಿಕ ನಿಯಮವಾಗಿದೆ.
ಇಂದು ಕಾರ್ಮಿಕ ವರ್ಗದ ರಕ್ಷಣೆಗೆ ಹಲವಾರು ಕಾರ್ಮಿಕ ಸಂಘಟನೆಗಳಿವೆ. ಆದರೆ ಕಾರ್ಮಿಕ ಸಂಘಟನೆಯೊಂದು ಶಕ್ತವಾಗಿ ರೂಪುಗೊಳ್ಳುವ ಮುಂಚೆ ಕಾರ್ಮಿಕರನ್ನು 12-16 ಗಂಟೆ ದುಡಿಸಿಕೊಳ್ಳುತ್ತಿದ್ದರು. ಯಾವುದೇ ಸೌಲಭ್ಯಗಳಿಲ್ಲದೆ ಕಡಿಮೆ ವೇತನಕ್ಕೆ ಜನರು ಹೆಚ್ಚು ಕಾಲ ದುಡಿಯಬೇಕಿತ್ತು. ಕಂಪನಿಗಳು ಕಾರ್ಮಿಕರನ್ನು ಗುಲಾಮರ ರೀತಿ ದುಡಿಸಿಕೊಳ್ಳುತ್ತಿತ್ತು.
ಇದನ್ನು ವಿರೋಧಿಸಿ ಅನೇಕ ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಅಮೆರಿಕದ ಚಿಕಾಗೊನ ಮಾರುಕಟ್ಟೆಯಲ್ಲಿ ಬಾಂಬ್ನ್ನು ಸ್ಪೋಟಿಸಲಾಯಿತು. ಇದರಿಂದ ಕಾರ್ಮಿಕರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿತು. ಈ ಸಂಘರ್ಷದಲ್ಲಿ ಅನೇಕ ಮಂದಿ ಸಾವನ್ನಪಿದ್ದರಲ್ಲದೆ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಕಾರ್ಮಿಕರ ಬಲಿದಾನ
ಈ ಹತ್ಯಾಕಾಂಡವನ್ನು ವಿಶ್ವದ ಇತರ ಕಾರ್ಮಿಕ ಸಂಘಟನೆಗಳು ವಿರೋಧಿಸಿದೆವು. ಕಾರ್ಮಿಕರ ಮೇಲಾದ ದೌರ್ಜನ್ಯ ವಿರೋಧಿಸಿ 1889ರಲ್ಲಿ ಪ್ಯಾರಿಸಿನಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ಮಾಡಲಾಯಿತು. ಮಾರುಕಟ್ಟೆಯ ಗೋಲಿಬಾರ್ನಲ್ಲಿ ಮೃತರಾದ ಕಾರ್ಮಿಕರ ನೆನಪಿಗಾಗಿ ಮೇ ಒಂದನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಸಮ್ಮೇಳನದಲ್ಲಿ ನಿರ್ಧರಿಸಲಾಯಿತು.

ಭಾರತದಲ್ಲಿ ಕಾರ್ಮಿಕ ದಿನಾಚರಣೆ
ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು ಮೊದಲಿಗೆ ಆಚರಿಸಿದ್ದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್. 1923ರ ಮೇ1ರಂದು ಚೆನ್ನೈನಲ್ಲಿ 'ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್' ಅಡಿಯಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಆ ಸಮಯದಲ್ಲಿ ಇದನ್ನು 'ಮದ್ರಾಸ್ ಡೆ' ಎಂದು ಕರೆಯಲಾಗುತ್ತಿತು.
ಭಾರತದಲ್ಲಿ 1949ರಲ್ಲಿ ಕಾರ್ಮಿಕ ಬದುಕಿನ ಸುಧಾರಣೆಗಾಗಿ ಕನಿಷ್ಠ ಕೂಲಿ ಕಾಯ್ದೆ ಜಾರಿಗೆ ತರಲಾಯಿತು. ಆದರೆ ಅದು ಪರಿಪೂರ್ಣವಾಗಿ ಜಾರಿಗೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ.

ಕಾರ್ಮಿಕರಿಗೆ ಸಿಗಬೇಕಾಗಿದೆ ಭದ್ರತೆ
ಕಾರ್ಮಿಕರನ್ನು 13-15 ತಾಸು ದುಡಿಸಿಕೊಳ್ಳುವ ಕಂಪನಿಗಳಿವೆ. ಅವರಿಗೆ ಸಿಗಬೇಕಾಗಿದ್ದ ಎಷ್ಟೋ ಸೌಲಭ್ಯಗಳು ಇನ್ನೂ ಸಿಗುತ್ತಿಲ್ಲ. ಇಂತಹ ಶೋಷಣೆ ವಿರುದ್ಧ ಕಾರ್ಮಿಕರು ಒಟ್ಟಾಗಿ ಹೋರಾಡಬೇಕು. ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆ ಕಾಪಾಡಿಕೊಂಡು ಹೋರಾಟ ಮಾಡಲು ಸದಾ ಶ್ರಮಿಸಬೇಕು. ಆಗ ಮಾತ್ರ ಶೋಷಣೆ ನಿಲ್ಲಲು ಸಾಧ್ಯ. ಕಾರ್ಮಿಕರಿಗೆ ನ್ಯಾಯ ದೊರೆಯುತ್ತದೆ. ಇದು ಕಾರ್ಮಿಕರು ಒಟ್ಟಾಗಿ ಇದ್ದರೆ ಮಾತ್ರ ಸಾಧ್ಯ.
ಇದೀಗ ಕೋವಿಡ್ 19 ಎಂಬ ಸಾಮಾಜಿಕ ಪಿಡುಗು ಇಡೀ ವಿಶ್ವದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಎಷ್ಟೋ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಕಾರ್ಮಿಕರಿಗೆ ಭದ್ರತೆ ಒದಗಿಸುವಂತಾಗಲಿ.
ದೇಶದ ಅಭಿವೃದ್ಧಿಗೆ ಬೆವರು ಹರಿಸುತ್ತಿರುವ ಪ್ರತಿಯೊಬ್ಬ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು...



Click it and Unblock the Notifications