Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜ.14-ಫೆ.13ರವರೆಗೆ ಮಕರ ರಾಶಿಯಲ್ಲಿ ಶತ್ರುಗಳಾದ ಸೂರ್ಯ-ಶನಿ ಯುತಿ: ಈ 3 ರಾಶಿಯವರು ತುಂಬಾ ಜಾಗ್ರತೆವಹಿಸಬೇಕು, 4 ರಾಶಿಯವರಿಗೆ ಒಳ
ಮಕರ ರಾಶಿಯಲ್ಲಿ ಶನಿ ಈಗಾಗಲೇ ಇದೆ, ಇದೀಗ ಜನವರಿ 14ಕ್ಕೆ ಸೂರ್ಯ ಕೂಡ ಮಕರ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಮಕರ ರಾಶಿಯಲ್ಲಿ ಸೂರ್ಯ-ಶನಿ ಸಂಯೋಗ ಉಂಟಾಗಲಿದೆ. ಸೂರ್ಯ ಹಾಗೂ ಶನಿ ಒಂದೇ ರಾಶಿಯಲ್ಲಿ ಫೆಬ್ರವರಿ 13ರವರೆಗೆ ಈ ರಾಶಿಯಲ್ಲಿ ಇರಲಿದೆ.

ಸೂರ್ಯ ಹಾಗೂ ಶನಿಯನ್ನು ಶತ್ರು ಗ್ರಹಗಳು ಎಂದು ಹೇಳಲಾಗುವುದು. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿದ್ದಾಗ ಕೆಲವೊಂದು ರಾಶಿಗಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ 3 ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ. 4 ರಾಶಿಯವರಿಗೆ ಒಳ್ಳೆಯದಿದೆ, ಉಳಿದ 5 ರಾಶಿಯವರಿಗೆ ಈ ಅವಧಿ ಸರಾಸರಿಯಾಗಿರಲಿದೆ.

ಈ ರಾಶಿಯವರು ಈ ಅವಧಿಯಲ್ಲಿ ಜಾಗ್ರತೆವಹಿಸಬೇಕಾಗಿದೆ
ಕರ್ಕ ರಾಶಿ
ಸೂರ್ಯ ಮತ್ತು ಶನಿಯ ಸಂಯೋಗದಿಂದ ಕರ್ಕ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತ ಹೊಂದಿರುವುದು ಬಹಳ ಮುಖ್ಯ, ಇಲ್ಲದಿದ್ದರೆ ಮಾಡುವ ಕೆಲಸವೂ ಹಾಳಾಗಬಹುದು ಮತ್ತು ಸಂಬಂಧಗಳು ಹಳಸಬಹುದು. ಇದರೊಂದಿಗೆ ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ವಹಿಸುವುದು ಬಹಳ ಮುಖ್ಯ.
ವೃಶ್ಚಿಕ ರಾಶಿ
ಈ ರಾಶಿಯವರು ಈ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ನೀವು ಸ್ವಲ್ಪ ಯೋಚಿಸಿ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಉತ್ತಮವಾಗಿರುತ್ತದೆ. ಇದರೊಂದಿಗೆ, ಸೂರ್ಯ ಮತ್ತು ಶನಿಯ ಸಂಯೋಜನೆಯಿಂದಾಗಿ ನೀವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಎಚ್ಚರದಿಂದಿರಿ
ಕುಂಭ ರಾಶಿ
ಕುಂಭ ರಾಶಿಯವರಿಗೆ ಸೂರ್ಯ ಮತ್ತು ಶನಿಯ ಸಂಯೋಗವೂ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಏಕೆಂದರೆ ಎರಡೂ ಗ್ರಹಗಳು ಈ ರಾಶಿಯಲ್ಲಿ ಸಂಧಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯವರ ಜೀವನದಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಂದು ಕೆಲಸವನ್ನು ಸ್ವಲ್ಪ ಯೋಚಿಸಿ ಮಾಡಿದರೆ ಒಳ್ಳೆಯದು.

ಈ ರಾಶಿಯವರಿಗೆ ಒಳ್ಳೆಯದಿದೆ
ಮೇಷ ರಾಶಿ
ಶನಿ-ಸೂರ್ಯ ಸಂಯೋಗ ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ, ಕೆಲವರು ಉದ್ಯೋಗದಲ್ಲಿ ಬಡ್ತಿ ಹೊಂದಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ, ನೀವು ಮಾಡುವ ಕೆಲಸವನ್ನು ಗುರುತಿಸಲಾಗುವುದು, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುವುದು, ಈ ಅವಧಿಯಲ್ಲಿ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ.
ಸೂರ್ಯ-ಶನಿಯ ಸಂಯೋಗದ ಅವಧಿ ನಿಮಗೆ ತುಂಬಾನೇ ಮಂಗಳಕರವಾಗಿದೆ.

ಸಿಂಹ ರಾಶಿ
ನೀವು ಯಾವುದಾದರೂ ಯೋಜನೆಯಲ್ಲಿ ಮುಂದುವರೆಯಬೇಕೆಂದಿದ್ದರೆ ಈ ಅವಧಿ ತುಂಬಾ ಅನುಕೂಲಕರವಾಗಿದೆ. ಏನಾದರೂ ಹೊಸ ವೃತ್ತಿ ಅಥವಾ ಉದ್ಯಮ ಮಾಡುವುದಾದರೆ ಅದರಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಈ ಅವಧಿ ಸರಕಾರಿ ಕೆಲಸದಲ್ಲಿರುವವರಿಗೂ ತುಂಬಾ ಒಳ್ಳೆಯದಿದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು ಈ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರುತ್ತದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ತುಂಬಾ ಲಾಭ ಗಳಿಸುತ್ತಾರೆ. ಈ ಸಮಯದಲ್ಲಿ ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ಇನ್ನು ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ.

ತುಲಾ ರಾಶಿ
ತುಲಾ ರಾಶಿಯವರಿಗೆ ಶನಿ-ಸೂರ್ಯ ಅವಧಿ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ಈ ಅಧಿಯಲ್ಲಿ ನಿಮಗೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಏನಾದರೂ ಸಾಲವಿದ್ದರೆ ಅದನ್ನು ಮರಳಿಸಲೂ ಸಾಧ್ಯವಾಗುವುದು. ಈ ಅವಧಿಯಲ್ಲಿ ಕೆಲವರು ಆಸ್ತಿಯನ್ನು ಖರೀದಿಸಬಹುದು. ವೃತ್ತಿ ಜೀವನದಲ್ಲಿ ನೀವು ಬಯಸಿದ ಫಲಿತಾಂಶ ಸಿಗಲಿದೆ.

ಧನು ರಾಶಿ:
ಧನು ರಾಶಿಯವರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದರೆ ಈ ಅವಧಿಯಲ್ಲಿ ಪರಿಹಾರ ಕಾಣುವಿರಿ. ಈ ಅವಧಿಯಲ್ಲಿ ನೀವು ನಿಮ್ಮ ತಂದೆಯಿಂದ ಆರ್ಥಿಕ ಸಹಾಯವನ್ನು ಪಡೆಯುವ ಸಾಧ್ಯತೆಯಿದೆ. ಅಲ್ಲದೆ ಆರ್ಥಿಕವಾಗಿ ಹಣ ಗಳಿಸಲು ಅನೇಕ ಅವಕಾಶಗಳನ್ನು ಕೂಡ ಪಡೆಯುತ್ತೀರಿ. ನಿಮ್ಮ ಆದಾಯ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸುವವರಿಗೆ ಈ ಸಮಯ ಅನುಕೂಲಕರವಾಗಿದೆ.

ಶನಿ+ಶುಕ್ರ ಸಂಯೋಗದ ಅವಧಿಯಲ್ಲಿ ಈ ಪರಿಹಾರಗಳನ್ನು ಮಾಡಿದರೆ ಒಳ್ಳೆಯದು:
* ಬಡವರಿಗೆ ಕಣ್ಣಿನ ಚಿಕಿತ್ಸೆಗೆ ಹಣ ದಾನ ಮಾಡಿ.
* ವಿಷ್ಣು ಸಹಸ್ರನಾಮ ಪಠಿಸುವುದು, ಕೇಳುವುದು ಮಾಡಿ.
* ಆದಿತ್ಯ ಮಂತ್ರ ಪಠಿಸಿ
* ಶಿವನಿಗೆ ಅಭಿಷೇಕ ಮಾಡಿಸಿ
* ಸಮೀಪದ ಕಾಳಿ ದೇವಾಲಯಕ್ಕೆ ಹೋಗಿ ದಾನ ಮಾಡಿ.



Click it and Unblock the Notifications
